Check out the new design

የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር * - የትርጉሞች ማዉጫ

PDF XML CSV Excel API
Please review the Terms and Policies

የይዘት ትርጉም ምዕራፍ: አል ከህፍ   አንቀጽ:
وَلَقَدْ صَرَّفْنَا فِیْ هٰذَا الْقُرْاٰنِ لِلنَّاسِ مِنْ كُلِّ مَثَلٍ ؕ— وَكَانَ الْاِنْسَانُ اَكْثَرَ شَیْءٍ جَدَلًا ۟
ನಿಶ್ಚಯವಾಗಿಯೂ ನಾವು ಈ ಕುರ್‌ಆನಿನಲ್ಲಿ ಮನುಷ್ಯರಿಗೆ ಎಲ್ಲಾ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ವಾಸ್ತವವಾಗಿ, ಮನುಷ್ಯನು ಅತಿ ಹೆಚ್ಚು ತರ್ಕಿಸುವವನಾಗಿದ್ದಾನೆ.
የአረብኛ ቁርኣን ማብራሪያ:
وَمَا مَنَعَ النَّاسَ اَنْ یُّؤْمِنُوْۤا اِذْ جَآءَهُمُ الْهُدٰی وَیَسْتَغْفِرُوْا رَبَّهُمْ اِلَّاۤ اَنْ تَاْتِیَهُمْ سُنَّةُ الْاَوَّلِیْنَ اَوْ یَاْتِیَهُمُ الْعَذَابُ قُبُلًا ۟
ಜನರ ಬಳಿಗೆ ಸನ್ಮಾರ್ಗವು ಬಂದಾಗ ಅವರು ಅದರಲ್ಲಿ ವಿಶ್ವಾಸವಿಡದಿರಲು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸದಿರಲು ಅವರಿಗೆ ತಡೆಯಾಗಿರುವುದು, ಪೂರ್ವಿಕರ ವಿಷಯದಲ್ಲಿ ಕೈಗೊಳ್ಳಲಾದ ಅದೇ ಕ್ರಮವು ನಮಗೂ ಬರಬೇಕು ಅಥವಾ ಶಿಕ್ಷೆಯನ್ನು ನಮ್ಮ ಕಣ್ಣ ಮುಂದೆ ತರಬೇಕು ಎಂಬುದು ಮಾತ್ರವಾಗಿತ್ತು.
የአረብኛ ቁርኣን ማብራሪያ:
وَمَا نُرْسِلُ الْمُرْسَلِیْنَ اِلَّا مُبَشِّرِیْنَ وَمُنْذِرِیْنَ ۚ— وَیُجَادِلُ الَّذِیْنَ كَفَرُوْا بِالْبَاطِلِ لِیُدْحِضُوْا بِهِ الْحَقَّ وَاتَّخَذُوْۤا اٰیٰتِیْ وَمَاۤ اُنْذِرُوْا هُزُوًا ۟
ನಾವು ಸಂದೇಶವಾಹಕರುಗಳನ್ನು ಕಳುಹಿಸುವುದು ಸುವಾರ್ತೆ ತಿಳಿಸಲು ಮತ್ತು ಎಚ್ಚರಿಕೆ ನೀಡಲು ಮಾತ್ರ. ಸತ್ಯನಿಷೇಧಿಗಳು ಅಸತ್ಯದ ಆಧಾರದಲ್ಲಿ ತರ್ಕಿಸುತ್ತಾರೆ ಮತ್ತು ಅದರ ಮೂಲಕ ಸತ್ಯವನ್ನು ನಾಶ ಮಾಡಬಹುದೆಂದು ಭಾವಿಸುತ್ತಾರೆ. ಅವರು ನನ್ನ ವಚನಗಳನ್ನು ಮತ್ತು ಅವರಿಗೆ ನೀಡಲಾದ ಎಚ್ಚರಿಕೆಗಳನ್ನು ತಮಾಷೆಯಾಗಿ ಸ್ವೀಕರಿಸುತ್ತಾರೆ.
የአረብኛ ቁርኣን ማብራሪያ:
وَمَنْ اَظْلَمُ مِمَّنْ ذُكِّرَ بِاٰیٰتِ رَبِّهٖ فَاَعْرَضَ عَنْهَا وَنَسِیَ مَا قَدَّمَتْ یَدٰهُ ؕ— اِنَّا جَعَلْنَا عَلٰی قُلُوْبِهِمْ اَكِنَّةً اَنْ یَّفْقَهُوْهُ وَفِیْۤ اٰذَانِهِمْ وَقْرًا ؕ— وَاِنْ تَدْعُهُمْ اِلَی الْهُدٰی فَلَنْ یَّهْتَدُوْۤا اِذًا اَبَدًا ۟
ತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅದನ್ನು ಲೆಕ್ಕಿಸದವನು ಮತ್ತು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳನ್ನು ಮರೆತವನಿಗಿಂತಲೂ ದೊಡ್ಡ ಅಕ್ರಮಿ ಯಾರು? ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳಿಗೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಿಗೆ ಕಿವುಡುತನವಿದೆ. ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೂ ಅವರು ಎಂದಿಗೂ ಸನ್ಮಾರ್ಗವನ್ನು ಸ್ವೀಕರಿಸುವುದಿಲ್ಲ.
የአረብኛ ቁርኣን ማብራሪያ:
وَرَبُّكَ الْغَفُوْرُ ذُو الرَّحْمَةِ ؕ— لَوْ یُؤَاخِذُهُمْ بِمَا كَسَبُوْا لَعَجَّلَ لَهُمُ الْعَذَابَ ؕ— بَلْ لَّهُمْ مَّوْعِدٌ لَّنْ یَّجِدُوْا مِنْ دُوْنِهٖ مَوْىِٕلًا ۟
ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಾಶೀಲನು ಮತ್ತು ಪರಮ ದಯಾಳುವಾಗಿದ್ದಾನೆ. ಅವರು ಮಾಡಿದ ದುಷ್ಕರ್ಮಗಳಿಗಾಗಿ ಅವನು ಅವರನ್ನು ಹಿಡಿಯುತ್ತಿದ್ದರೆ, ಅವನು ಅವರಿಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು. ಆದರೆ ಅವರಿಗೆ ಒಂದು ನಿಶ್ಚಿತ ಅವಧಿಯಿದೆ. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಸ್ಥಳವನ್ನೂ ಅವರು ಕಾಣಲಾರರು.
የአረብኛ ቁርኣን ማብራሪያ:
وَتِلْكَ الْقُرٰۤی اَهْلَكْنٰهُمْ لَمَّا ظَلَمُوْا وَجَعَلْنَا لِمَهْلِكِهِمْ مَّوْعِدًا ۟۠
ಆ ಊರುಗಳ ಜನರು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ನಾವು ಅವರ ನಾಶಕ್ಕೆ ಒಂದು ನಿಶ್ಚಿತ ಅವಧಿಯನ್ನೂ ಇಟ್ಟಿದ್ದೆವು.
የአረብኛ ቁርኣን ማብራሪያ:
وَاِذْ قَالَ مُوْسٰی لِفَتٰىهُ لَاۤ اَبْرَحُ حَتّٰۤی اَبْلُغَ مَجْمَعَ الْبَحْرَیْنِ اَوْ اَمْضِیَ حُقُبًا ۟
ಮೂಸಾ ತನ್ನ ಸೇವಕನೊಡನೆ ಹೇಳಿದ ಸಂದರ್ಭ: “ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪುವ ತನಕ ನಾನು ನಡೆಯುತ್ತಲೇ ಇರುವೆನು. ಅದಕ್ಕಾಗಿ ದೀರ್ಘ ಸಮಯ ಪ್ರಯಾಣ ಮಾಡಬೇಕಾಗಿ ಬಂದರೂ ಸಹ.”[1]
[1] ಒಮ್ಮೆ ಮೂಸಾರೊಡನೆ (ಅವರ ಮೇಲೆ ಶಾಂತಿಯಿರಲಿ) ಒಬ್ಬ ವ್ಯಕ್ತಿ ಪ್ರಶ್ನೆ ಕೇಳಿದಾಗ ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೇಳಿದರು: “ಈಗ ಜಗತ್ತಿನಲ್ಲಿ ನನಗಿಂತಲೂ ಹೆಚ್ಚು ಜ್ಞಾನವಿರುವವರು ಯಾರೂ ಇಲ್ಲ.” ಅವರ ಈ ಮಾತು ಅಲ್ಲಾಹನಿಗೆ ಇಷ್ಟವಾಗಲಿಲ್ಲ. ಅಲ್ಲಾಹು ದೇವವಾಣಿಯ ಮೂಲಕ ಮೂಸಾರೊಡನೆ (ಅವರ ಮೇಲೆ ಶಾಂತಿಯಿರಲಿ) ಹೇಳಿದನು: “ನಿಮಗಿಂತ ಹೆಚ್ಚು ಜ್ಞಾನವಿರುವ ವ್ಯಕ್ತಿಯಿದ್ದಾರೆ.” ಮೂಸಾ ಹೇಳಿದರು: “ಅವರನ್ನು ನನಗೆ ತೋರಿಸು. ನಾನು ಅವರನ್ನು ಭೇಟಿಯಾಗಬೇಕು.” ಅಲ್ಲಾಹು ಹೇಳಿದನು: “ಅವರು ಎರಡು ಕಡಲುಗಳ ಸಂಗಮ ಸ್ಥಳದಲ್ಲಿದ್ದಾರೆ.” ಅಲ್ಲಾಹು ತಿಳಿಸಿದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ಒಂದು ಮೀನನ್ನು ತೆಗೆದುಕೊಂಡು ಹೋದರು. ಅದು ಬುಟ್ಟಿಯಿಂದ ನೆಗೆದು ಅಪ್ರತ್ಯಕ್ಷವಾಗುವ ಸ್ಥಳದಲ್ಲಿ ಆ ವ್ಯಕ್ತಿ ಸಿಗುತ್ತಾರೆಂದು ಅಲ್ಲಾಹು ದೇವವಾಣಿಯ ಮೂಲಕ ತಿಳಿಸಿದ್ದನು.
የአረብኛ ቁርኣን ማብራሪያ:
فَلَمَّا بَلَغَا مَجْمَعَ بَیْنِهِمَا نَسِیَا حُوْتَهُمَا فَاتَّخَذَ سَبِیْلَهٗ فِی الْبَحْرِ سَرَبًا ۟
ನಂತರ ಅವರು ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪಿದಾಗ ತಮ್ಮಲ್ಲಿದ್ದ ಮೀನನ್ನು ಮರೆತುಬಿಟ್ಟರು. ಅದು ಸಮುದ್ರಕ್ಕೆ ನೆಗೆದು ತಾನು ಸಾಗಿದ ಹಾದಿಯನ್ನು ಒಂದು ಸುರಂಗದಂತೆ ಮಾಡಿತು.
የአረብኛ ቁርኣን ማብራሪያ:
 
የይዘት ትርጉም ምዕራፍ: አል ከህፍ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር - የትርጉሞች ማዉጫ

ትርጉሙ በሙሀመድ ሀምዛ በቱር የተደረገ ሲሆን ዝግጅቱ የተጠናቀቀው በረዋድ የትርጉም ማእከል ቁጥጥር ስር ነው።

መዝጋት