Check out the new design

የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር * - የትርጉሞች ማዉጫ

PDF XML CSV Excel API
Please review the Terms and Policies

የይዘት ትርጉም ምዕራፍ: አል ሑጅራት   አንቀጽ:
وَلَوْ اَنَّهُمْ صَبَرُوْا حَتّٰی تَخْرُجَ اِلَیْهِمْ لَكَانَ خَیْرًا لَّهُمْ ؕ— وَاللّٰهُ غَفُوْرٌ رَّحِیْمٌ ۟
ನೀವು ಅವರ ಬಳಿಗೆ ಹೊರಡುವ ತನಕ ಅವರು ತಾಳ್ಮೆಯಿಂದಿರುತ್ತಿದ್ದರೆ ಅದು ಅವರಿಗೆ ಶ್ರೇಷ್ಠವಾಗಿರುತ್ತಿತ್ತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
የአረብኛ ቁርኣን ማብራሪያ:
یٰۤاَیُّهَا الَّذِیْنَ اٰمَنُوْۤا اِنْ جَآءَكُمْ فَاسِقٌ بِنَبَاٍ فَتَبَیَّنُوْۤا اَنْ تُصِیْبُوْا قَوْمًا بِجَهَالَةٍ فَتُصْبِحُوْا عَلٰی مَا فَعَلْتُمْ نٰدِمِیْنَ ۟
ಸತ್ಯವಿಶ್ವಾಸಿಗಳೇ! ಒಬ್ಬ ದುಷ್ಕರ್ಮಿ ಒಂದು ಮಾಹಿತಿಯೊಂದಿಗೆ ನಿಮ್ಮ ಬಳಿಗೆ ಬಂದರೆ ನೀವು ಅದರ ಬಗ್ಗೆ ಸರಿಯಾಗಿ ತನಿಖೆ ಮಾಡಿರಿ. ನೀವು ಅಜ್ಞಾನದಿಂದ ಯಾರಿಗಾದರೂ ತೊಂದರೆ ಮಾಡಿ ನಂತರ ಅದರ ಕಾರಣದಿಂದ ನೀವು ವಿಷಾದ ಪಡದಿರುವುದಕ್ಕಾಗಿ.
የአረብኛ ቁርኣን ማብራሪያ:
وَاعْلَمُوْۤا اَنَّ فِیْكُمْ رَسُوْلَ اللّٰهِ ؕ— لَوْ یُطِیْعُكُمْ فِیْ كَثِیْرٍ مِّنَ الْاَمْرِ لَعَنِتُّمْ وَلٰكِنَّ اللّٰهَ حَبَّبَ اِلَیْكُمُ الْاِیْمَانَ وَزَیَّنَهٗ فِیْ قُلُوْبِكُمْ وَكَرَّهَ اِلَیْكُمُ الْكُفْرَ وَالْفُسُوْقَ وَالْعِصْیَانَ ؕ— اُولٰٓىِٕكَ هُمُ الرّٰشِدُوْنَ ۟ۙ
ತಿಳಿಯಿರಿ! ನಿಮ್ಮೊಡನೆ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಮಾತನ್ನು ಕೇಳುತ್ತಿದ್ದರೆ ನೀವು ಕಷ್ಟಪಡುತ್ತಿದ್ದಿರಿ. ಆದರೆ ಅಲ್ಲಾಹು ನಿಮಗೆ ಸತ್ಯವಿಶ್ವಾಸವನ್ನು ಇಷ್ಟವಾಗುವಂತೆ ಮಾಡಿದನು ಮತ್ತು ನಿಮ್ಮ ಹೃದಯಗಳಲ್ಲಿ ಅದನ್ನು ಅಂದಗೊಳಿಸಿಕೊಟ್ಟನು. ನಿಮಗೆ ಸತ್ಯನಿಷೇಧ, ದುಷ್ಕರ್ಮ ಮತ್ತು ಆಜ್ಞೆೋಲ್ಲಂಘನೆಯನ್ನು ಅಸಹ್ಯವಾಗುವಂತೆ ಮಾಡಿದನು. ಅವರೇ ಸನ್ಮಾರ್ಗ ಪಡೆದವರು.
የአረብኛ ቁርኣን ማብራሪያ:
فَضْلًا مِّنَ اللّٰهِ وَنِعْمَةً ؕ— وَاللّٰهُ عَلِیْمٌ حَكِیْمٌ ۟
ಅದು ಅಲ್ಲಾಹನ ಕಡೆಯ ಔದಾರ್ಯ ಮತ್ತು ಅನುಗ್ರಹವಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
የአረብኛ ቁርኣን ማብራሪያ:
وَاِنْ طَآىِٕفَتٰنِ مِنَ الْمُؤْمِنِیْنَ اقْتَتَلُوْا فَاَصْلِحُوْا بَیْنَهُمَا ۚ— فَاِنْ بَغَتْ اِحْدٰىهُمَا عَلَی الْاُخْرٰی فَقَاتِلُوا الَّتِیْ تَبْغِیْ حَتّٰی تَفِیْٓءَ اِلٰۤی اَمْرِ اللّٰهِ ۚ— فَاِنْ فَآءَتْ فَاَصْلِحُوْا بَیْنَهُمَا بِالْعَدْلِ وَاَقْسِطُوْا ؕ— اِنَّ اللّٰهَ یُحِبُّ الْمُقْسِطِیْنَ ۟
ಸತ್ಯವಿಶ್ವಾಸಿಗಳ ಎರಡು ಗುಂಪುಗಳು ಪರಸ್ಪರ ಹೋರಾಟಕ್ಕಿಳಿದರೆ ಅವರ ನಡುವೆ ಸಂಧಾನ ಮಾಡಿರಿ. ನಂತರ ಆ ಎರಡು ಗುಂಪುಗಳಲ್ಲಿ ಒಂದು ಗುಂಪು ಇನ್ನೊಂದು ಗುಂಪಿನ ವಿರುದ್ಧ ಅತಿರೇಕವೆಸಗಿದರೆ ಅತಿರೇಕವೆಸಗಿದ ಗುಂಪಿನ ವಿರುದ್ಧ—ಅವರು ಅಲ್ಲಾಹನ ಆಜ್ಞೆಗೆ ಮರಳುವ ತನಕ ನೀವೆಲ್ಲರೂ ಹೋರಾಡಿರಿ. ಅವರು ಮರಳಿದರೆ ಆ ಎರಡು ಗುಂಪುಗಳ ನಡುವೆ ನ್ಯಾಯಯುತವಾಗಿ ಸಂಧಾನ ಮಾಡಿರಿ. ನ್ಯಾಯದಿಂದ ವರ್ತಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ನ್ಯಾಯಯುತವಾಗಿ ವರ್ತಿಸುವವರನ್ನು ಪ್ರೀತಿಸುತ್ತಾನೆ.
የአረብኛ ቁርኣን ማብራሪያ:
اِنَّمَا الْمُؤْمِنُوْنَ اِخْوَةٌ فَاَصْلِحُوْا بَیْنَ اَخَوَیْكُمْ وَاتَّقُوا اللّٰهَ لَعَلَّكُمْ تُرْحَمُوْنَ ۟۠
ಸತ್ಯವಿಶ್ವಾಸಿಗಳು ಸಹೋದರರು. ಆದ್ದರಿಂದ ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ಮಾಡಿರಿ. ಅಲ್ಲಾಹನನ್ನು ಭಯಪಡಿರಿ. ನಿಮ್ಮ ಮೇಲೆ ದಯೆ ತೋರಲಾಗುವುದಕ್ಕಾಗಿ.
የአረብኛ ቁርኣን ማብራሪያ:
یٰۤاَیُّهَا الَّذِیْنَ اٰمَنُوْا لَا یَسْخَرْ قَوْمٌ مِّنْ قَوْمٍ عَسٰۤی اَنْ یَّكُوْنُوْا خَیْرًا مِّنْهُمْ وَلَا نِسَآءٌ مِّنْ نِّسَآءٍ عَسٰۤی اَنْ یَّكُنَّ خَیْرًا مِّنْهُنَّ ۚ— وَلَا تَلْمِزُوْۤا اَنْفُسَكُمْ وَلَا تَنَابَزُوْا بِالْاَلْقَابِ ؕ— بِئْسَ الِاسْمُ الْفُسُوْقُ بَعْدَ الْاِیْمَانِ ۚ— وَمَنْ لَّمْ یَتُبْ فَاُولٰٓىِٕكَ هُمُ الظّٰلِمُوْنَ ۟
ಸತ್ಯವಿಶ್ವಾಸಿಗಳೇ! ಪುರುಷರು ಇತರ ಪುರುಷರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ಮಹಿಳೆಯರು ಇತರ ಮಹಿಳೆಯರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ನೀವು ಒಬ್ಬರು ಇನ್ನೊಬ್ಬರ ಕೊರತೆಯನ್ನು ಹೇಳಬೇಡಿ. ಯಾರನ್ನೂ ಅಡ್ಡಹೆಸರಿನಿಂದ ಕರೆಯಬೇಡಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ದುಷ್ಕರ್ಮವು ಬಹಳ ಕೆಟ್ಟ ಹೆಸರಾಗಿದೆ! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರೇ ಅಕ್ರಮಿಗಳು.
የአረብኛ ቁርኣን ማብራሪያ:
 
የይዘት ትርጉም ምዕራፍ: አል ሑጅራት
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር - የትርጉሞች ማዉጫ

ትርጉሙ በሙሀመድ ሀምዛ በቱር የተደረገ ሲሆን ዝግጅቱ የተጠናቀቀው በረዋድ የትርጉም ማእከል ቁጥጥር ስር ነው።

መዝጋት