ನಂತರ ನಾವು ವೀರ್ಯವನ್ನು ರಕ್ತ ಪಿಂಡವನ್ನಾಗಿ ಮಾಡಿದೆವು. ಅನಂತರ ನಾವು ರಕ್ತಪಿಂಡವನ್ನು ಮಾಂಸ ಪಿಂಡವನ್ನಾಗಿ ಮಾಡಿದೆವು ಮತ್ತು ಮಾಂಸ ಪಿಂಡವನ್ನು ಎಲುಬನ್ನಾಗಿ ಮಾಡಿದೆವು. ಬಳಿಕ ಎಲುಬುಗಳನ್ನು ಮಾಂಸದಿAದ ಹೊದಿಸಿದೆವು. ತರುವಾಯ ನಾವು ಅವನನ್ನು ಬೇರೊಂದು ಸೃಷ್ಟಿಯನ್ನಾಗಿ ಸೃಷ್ಟಿಸಿದೆವು. ಹಾಗೆಯೇ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಮಹಾ ಮಂಗಳಮಯನು.