Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: مؤمنون   آیت:

ಅಲ್ -ಮುಅ್ ಮಿನೂನ್

قَدْ اَفْلَحَ الْمُؤْمِنُوْنَ ۟ۙ
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಯಶಸ್ಸು ಹೊಂದಿದರು.
عربي تفسیرونه:
الَّذِیْنَ هُمْ فِیْ صَلَاتِهِمْ خٰشِعُوْنَ ۟ۙ
ಅವರು ತಮ್ಮ ನಮಾಜ಼್ನಲ್ಲಿ ಭಯಭಕ್ತಿಯನ್ನಿರಿಸಿಕೊಳ್ಳುತ್ತಾರೆ.
عربي تفسیرونه:
وَالَّذِیْنَ هُمْ عَنِ اللَّغْوِ مُعْرِضُوْنَ ۟ۙ
ಅವರು ವ್ಯರ್ಥ ಕಾರ್ಯದಿಂದ ವಿಮುಖರಾಗುತ್ತಾರೆ.
عربي تفسیرونه:
وَالَّذِیْنَ هُمْ لِلزَّكٰوةِ فٰعِلُوْنَ ۟ۙ
ಮತ್ತು ಅವರು ಝಕಾತ್ (ಕಡ್ಡಾಯ ದಾನವನ್ನು) ಪಾವತಿಸುವವರಾಗಿದ್ದಾರೆ.
عربي تفسیرونه:
وَالَّذِیْنَ هُمْ لِفُرُوْجِهِمْ حٰفِظُوْنَ ۟ۙ
ಮತ್ತು ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸುವವರಾಗಿದ್ದಾರೆ.
عربي تفسیرونه:
اِلَّا عَلٰۤی اَزْوَاجِهِمْ اَوْ مَا مَلَكَتْ اَیْمَانُهُمْ فَاِنَّهُمْ غَیْرُ مَلُوْمِیْنَ ۟ۚ
ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ಅಧೀನದಲ್ಲಿರುವ ದಾಸಿಯ ಹೊರತು. ಖಂಡಿತವಾಗಿಯು ಅವರು ಆಕ್ಷೆಪರ್ಹರಲ್ಲ.
عربي تفسیرونه:
فَمَنِ ابْتَغٰی وَرَآءَ ذٰلِكَ فَاُولٰٓىِٕكَ هُمُ الْعٰدُوْنَ ۟ۚ
ಆದರೆ ಯಾರಾದರೂ ಇದರಾಚೆಗೆ ದಾಟಲು ಬಯಸಿದರೆ ಅವರೇ ಮಿತಿ ಮೀರಿದವರಾಗಿದ್ದಾರೆ.
عربي تفسیرونه:
وَالَّذِیْنَ هُمْ لِاَمٰنٰتِهِمْ وَعَهْدِهِمْ رٰعُوْنَ ۟ۙ
ಮತ್ತು ಅವರು ತಮ್ಮ ಅಮಾನತ್ತು ಹಾಗೂ ವಾಗ್ದಾನಗಳನ್ನು ಕಾಪಾಡುವವರಾಗಿದ್ದಾರೆ.
عربي تفسیرونه:
وَالَّذِیْنَ هُمْ عَلٰی صَلَوٰتِهِمْ یُحَافِظُوْنَ ۟ۘ
ಮತ್ತು ಅವರು ತಮ್ಮ ನಮಾಜ಼್ಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವವರಾಗಿದ್ದಾರೆ.
عربي تفسیرونه:
اُولٰٓىِٕكَ هُمُ الْوٰرِثُوْنَ ۟ۙ
ಇವರೇ ವಾರೀಸುದಾರರು.
عربي تفسیرونه:
الَّذِیْنَ یَرِثُوْنَ الْفِرْدَوْسَ ؕ— هُمْ فِیْهَا خٰلِدُوْنَ ۟
ಅವರು ಫಿರ್‌ದೌಸ್ (ಮಹೋನ್ನತ ಸ್ವರ್ಗ) ಅನ್ನು ವಾರೀಸು ಪಡೆಯುವರು. ಅದರಲ್ಲಿ ಅವರು ಶಾಶ್ವತವಾಗಿರುವರು.
عربي تفسیرونه:
وَلَقَدْ خَلَقْنَا الْاِنْسَانَ مِنْ سُلٰلَةٍ مِّنْ طِیْنٍ ۟ۚ
ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಆವೆಮಣ್ಣಿನ ಸತ್ವದಿಂದ ಸೃಷ್ಟಿಸಿರುತ್ತೇವೆ.
عربي تفسیرونه:
ثُمَّ جَعَلْنٰهُ نُطْفَةً فِیْ قَرَارٍ مَّكِیْنٍ ۪۟
ನಂತರ ನಾವು ಅವನನ್ನು ವೀರ್ಯಾಣುವನ್ನಾಗಿ ಮಾಡಿ, ಸುಭದ್ರವಾದ ನೆಲೆಯಲ್ಲಿರಿಸಿದೆವು.
عربي تفسیرونه:
ثُمَّ خَلَقْنَا النُّطْفَةَ عَلَقَةً فَخَلَقْنَا الْعَلَقَةَ مُضْغَةً فَخَلَقْنَا الْمُضْغَةَ عِظٰمًا فَكَسَوْنَا الْعِظٰمَ لَحْمًا ۗ— ثُمَّ اَنْشَاْنٰهُ خَلْقًا اٰخَرَ ؕ— فَتَبٰرَكَ اللّٰهُ اَحْسَنُ الْخٰلِقِیْنَ ۟ؕ
ನಂತರ ನಾವು ವೀರ್ಯವನ್ನು ರಕ್ತ ಪಿಂಡವನ್ನಾಗಿ ಮಾಡಿದೆವು. ಅನಂತರ ನಾವು ರಕ್ತಪಿಂಡವನ್ನು ಮಾಂಸ ಪಿಂಡವನ್ನಾಗಿ ಮಾಡಿದೆವು ಮತ್ತು ಮಾಂಸ ಪಿಂಡವನ್ನು ಎಲುಬನ್ನಾಗಿ ಮಾಡಿದೆವು. ಬಳಿಕ ಎಲುಬುಗಳನ್ನು ಮಾಂಸದಿAದ ಹೊದಿಸಿದೆವು. ತರುವಾಯ ನಾವು ಅವನನ್ನು ಬೇರೊಂದು ಸೃಷ್ಟಿಯನ್ನಾಗಿ ಸೃಷ್ಟಿಸಿದೆವು. ಹಾಗೆಯೇ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಮಹಾ ಮಂಗಳಮಯನು.
عربي تفسیرونه:
ثُمَّ اِنَّكُمْ بَعْدَ ذٰلِكَ لَمَیِّتُوْنَ ۟ؕ
ಇದರ ಬಳಿಕ ನೀವು ಖಂಡಿತ ಮರಣ ಹೊಂದುವಿರಿ.
عربي تفسیرونه:
ثُمَّ اِنَّكُمْ یَوْمَ الْقِیٰمَةِ تُبْعَثُوْنَ ۟
ನಂತರ ಪುನರುತ್ಥಾನದ ದಿನದಂದು ಖಂಡಿತ ನೀವು ಎಬ್ಬಿಸಲಾಗುವಿರಿ.
عربي تفسیرونه:
وَلَقَدْ خَلَقْنَا فَوْقَكُمْ سَبْعَ طَرَآىِٕقَ ۖۗ— وَمَا كُنَّا عَنِ الْخَلْقِ غٰفِلِیْنَ ۟
ನಾವು ನಿಮ್ಮ ಮೇಲೆ ಹಂತ ಹಂತವಾಗಿ ಏಳು ಆಕಾಶ ಪಥಗಳನ್ನು ಸೃಷ್ಟಿಸಿದ್ದೇವೆ ಹಾಗೂ ನಾವು ಸೃಷ್ಟಿಗಳ ಕುರಿತು ಅಲಕ್ಷö್ಯರಾಗಿಲ್ಲ.
عربي تفسیرونه:
وَاَنْزَلْنَا مِنَ السَّمَآءِ مَآءً بِقَدَرٍ فَاَسْكَنّٰهُ فِی الْاَرْضِ ۖۗ— وَاِنَّا عَلٰی ذَهَابٍ بِهٖ لَقٰدِرُوْنَ ۟ۚ
ನಾವು ಆಕಾಶದಿಂದ ನೀರನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸುರಿಸಿದೆವು. ಮತ್ತು ಅದನ್ನು ಭೂಮಿಯಲ್ಲಿ ತಂಗಿಸಿದೆವು ಖಂಡಿತ ನಾವು ಅದನ್ನು ಬತ್ತಿಸಲು ಶಕ್ತರು.
عربي تفسیرونه:
فَاَنْشَاْنَا لَكُمْ بِهٖ جَنّٰتٍ مِّنْ نَّخِیْلٍ وَّاَعْنَابٍ ۘ— لَكُمْ فِیْهَا فَوَاكِهُ كَثِیْرَةٌ وَّمِنْهَا تَاْكُلُوْنَ ۟ۙ
ಆ ನೀರಿನ ಮೂಲಕ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷೆಗಳ ತೋಟಗಳನ್ನು ಉಂಟು ಮಾಡಿದೆವು. ಹಾಗೂ ನಿಮಗೋಸ್ಕರ ಅದರಲ್ಲಿ ಅನೇಕ ಹಣ್ಣು ಹಂಪಲುಗಳಿವೆ. ಮತ್ತು ಅವುಗಳಿಂದ ನೀವು ತಿನ್ನುತ್ತೀರಿ.
عربي تفسیرونه:
وَشَجَرَةً تَخْرُجُ مِنْ طُوْرِ سَیْنَآءَ تَنْۢبُتُ بِالدُّهْنِ وَصِبْغٍ لِّلْاٰكِلِیْنَ ۟
ತೂರೆಸೀನಾ ಪರ್ವತದಿಂದ ಒಂದು ಮರ ಬೆಳೆಯುತ್ತದೆ. ಅದು ಎಣ್ಣೆಯನ್ನು ಮತ್ತು ತಿನ್ನುವವರಿಗೆ ಪದಾರ್ಥವನ್ನು ಉತ್ಪಾದಿಸುತ್ತದೆ.
عربي تفسیرونه:
وَاِنَّ لَكُمْ فِی الْاَنْعَامِ لَعِبْرَةً ؕ— نُسْقِیْكُمْ مِّمَّا فِیْ بُطُوْنِهَا وَلَكُمْ فِیْهَا مَنَافِعُ كَثِیْرَةٌ وَّمِنْهَا تَاْكُلُوْنَ ۟ۙ
ಖಂಡಿತವಾಗಿಯು ಜಾನುವಾರುಗಳಲ್ಲಿ ನಿಮಗೊಂದು ಪಾಠವಿದೆ. ನಾವು ಅವುಗಳ ಹೊಟ್ಟೆಗಳಿಂದ ನಿಮಗೆ ಹಾಲನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಹಾಗೂ ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ.
عربي تفسیرونه:
وَعَلَیْهَا وَعَلَی الْفُلْكِ تُحْمَلُوْنَ ۟۠
ಮತ್ತು ಅವುಗಳ ಮೇಲೂ, ಹಡಗಿನ ಮೇಲೂ ನೀವು ಸವಾರಿ ಮಾಡುತ್ತೀರಿ.
عربي تفسیرونه:
وَلَقَدْ اَرْسَلْنَا نُوْحًا اِلٰی قَوْمِهٖ فَقَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اَفَلَا تَتَّقُوْنَ ۟
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮ್ಮ ಯಾವ ಆರಾಧ್ಯನಿಲ್ಲ ನೀವು (ಅವನನ್ನು) ಭಯಪಡುವುದಿಲ್ಲವೇ?
عربي تفسیرونه:
فَقَالَ الْمَلَؤُا الَّذِیْنَ كَفَرُوْا مِنْ قَوْمِهٖ مَا هٰذَاۤ اِلَّا بَشَرٌ مِّثْلُكُمْ ۙ— یُرِیْدُ اَنْ یَّتَفَضَّلَ عَلَیْكُمْ ؕ— وَلَوْ شَآءَ اللّٰهُ لَاَنْزَلَ مَلٰٓىِٕكَةً ۖۚ— مَّا سَمِعْنَا بِهٰذَا فِیْۤ اٰبَآىِٕنَا الْاَوَّلِیْنَ ۟ۚۖ
ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
عربي تفسیرونه:
اِنْ هُوَ اِلَّا رَجُلٌۢ بِهٖ جِنَّةٌ فَتَرَبَّصُوْا بِهٖ حَتّٰی حِیْنٍ ۟
ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
عربي تفسیرونه:
قَالَ رَبِّ انْصُرْنِیْ بِمَا كَذَّبُوْنِ ۟
ನೂಹರು ಪ್ರಾರ್ಥಿಸಿದರು: ನನ್ನ ಪ್ರಭು, ಇವರು ನನ್ನನು ಸುಳ್ಳಾಗಿಸಿರುವುದರಿಂದ ನೀನು ನನಗೆ ಸಹಾಯ ಮಾಡು.
عربي تفسیرونه:
فَاَوْحَیْنَاۤ اِلَیْهِ اَنِ اصْنَعِ الْفُلْكَ بِاَعْیُنِنَا وَوَحْیِنَا فَاِذَا جَآءَ اَمْرُنَا وَفَارَ التَّنُّوْرُ ۙ— فَاسْلُكْ فِیْهَا مِنْ كُلٍّ زَوْجَیْنِ اثْنَیْنِ وَاَهْلَكَ اِلَّا مَنْ سَبَقَ عَلَیْهِ الْقَوْلُ مِنْهُمْ ۚ— وَلَا تُخَاطِبْنِیْ فِی الَّذِیْنَ ظَلَمُوْا ۚ— اِنَّهُمْ مُّغْرَقُوْنَ ۟
ನಾವು ಅವರೆಡೆಗೆ ದಿವ್ಯ ಸಂದೇಶ ಮಾಡಿದೆವು: “ನೀವು ನಮ್ಮ ಮೇಲ್ನೋಟದಲ್ಲಿ, ನಮ್ಮ ನಿರ್ದೇಶನದ ಪ್ರಕಾರ ಹಡಗೊಂದನ್ನು ನಿರ್ಮಿಸಿರಿ. ನಮ್ಮ ಆಜ್ಞೆಯು ಬಂದಾಗ ಹಾಗೂ ತಂದೂರಿ ಓಲೆಯು ಉಕ್ಕಿ ಹರಿದರೆ ನೀವು ಪ್ರತಿಯೊಂದು ಜಾತಿಯ ಒಂದೊAದು ಜೋಡಿಯನ್ನು (ಗಂಡು-ಹೆಣ್ಣನ್ನು) ಅದರಲ್ಲಿ ಹತ್ತಿಸಿರಿ. ಮತ್ತು ನಿಮ್ಮ ಕುಟುಂಬದವರನ್ನು ಸಹ. ಆದರೆ ಅವರ ಪೈಕಿ ಯಾರ ಮೇಲೆ ನಮ್ಮ ಶಿಕ್ಷೆಯು ನಿಶ್ಚಿತವಾಗಿದೆಯೋ ಅವರ ಹೊರತು. ಮತ್ತು ಅಕ್ರಮವೆಸಗಿದವರ ವಿಚಾರದಲ್ಲಿ ನೀವು ನನ್ನೊಂದಿಗೆ ಚಕಾರವೆತ್ತಬೇಡಿರಿ. ಏಕೆಂದರೆ, ಅವರು ಮುಳುಗಿ ಹೋಗುವವರಿದ್ದಾರೆ”.
عربي تفسیرونه:
فَاِذَا اسْتَوَیْتَ اَنْتَ وَمَنْ مَّعَكَ عَلَی الْفُلْكِ فَقُلِ الْحَمْدُ لِلّٰهِ الَّذِیْ نَجّٰىنَا مِنَ الْقَوْمِ الظّٰلِمِیْنَ ۟
ನೀವು, ನಿಮ್ಮ ಸಂಗಡಿಗರು ನೌಕೆಯಲ್ಲಿ ಕುಳಿತುಕೊಂಡಾಗ “ನಮ್ಮನ್ನು ಅಕ್ರಮಿಗಳಾದ ಜನರಿಂದ ರಕ್ಷಿಸಿದಂತಹ ಅಲ್ಲಾಹನಿಗೆ ಸರ್ವಸ್ತುತಿ ಎಂದು ಹೇಳಿ”.
عربي تفسیرونه:
وَقُلْ رَّبِّ اَنْزِلْنِیْ مُنْزَلًا مُّبٰرَكًا وَّاَنْتَ خَیْرُ الْمُنْزِلِیْنَ ۟
ನೀವು, ನಿಮ್ಮ ಸಂಗಡಿಗರು ನೌಕೆಯಲ್ಲಿ ಕುಳಿತುಕೊಂಡಾಗ “ನಮ್ಮನ್ನು ಅಕ್ರಮಿಗಳಾದ ಜನರಿಂದ ರಕ್ಷಿಸಿದಂತಹ ಅಲ್ಲಾಹನಿಗೆ ಸರ್ವಸ್ತುತಿ ಎಂದು ಹೇಳಿ”.
عربي تفسیرونه:
اِنَّ فِیْ ذٰلِكَ لَاٰیٰتٍ وَّاِنْ كُنَّا لَمُبْتَلِیْنَ ۟
ಖಂಡಿತವಾಗಿಯು ಇದರಲ್ಲಿ (ಘಟನೆಯಲ್ಲಿ) ಅನೇಕ ದೃಷ್ಟಾಂತಗಳಿವೆ ಮತ್ತು ನಿಸ್ಸಂದೇಹವಾಗಿಯು ನಾವು ಜನರನ್ನು ಪರೀಕ್ಷಿಸುತ್ತೇವೆ.
عربي تفسیرونه:
ثُمَّ اَنْشَاْنَا مِنْ بَعْدِهِمْ قَرْنًا اٰخَرِیْنَ ۟ۚ
ತರುವಾಯ ನಾವು ಅವರ ನಂತರ ಬೇರೊಂದು ಜನಾಂಗವನ್ನು ಸೃಷ್ಟಿಸಿದೆವು
عربي تفسیرونه:
فَاَرْسَلْنَا فِیْهِمْ رَسُوْلًا مِّنْهُمْ اَنِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اَفَلَا تَتَّقُوْنَ ۟۠
. “ನೀವು ಅಲ್ಲಾಹನನ್ನು ಆರಾಧಿಸಿರಿ, ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ” ಎಂಬ ಸಂದೇಶದೊAದಿಗೆ ನಾವು ಅವರಿಂದಲೇ ಒಬ್ಬ ಸಂದೇಶವಾಹಕನನ್ನು ಕಳುಹಿಸಿದೆವು. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವು ದಿಲ್ಲವೇ?
عربي تفسیرونه:
وَقَالَ الْمَلَاُ مِنْ قَوْمِهِ الَّذِیْنَ كَفَرُوْا وَكَذَّبُوْا بِلِقَآءِ الْاٰخِرَةِ وَاَتْرَفْنٰهُمْ فِی الْحَیٰوةِ الدُّنْیَا ۙ— مَا هٰذَاۤ اِلَّا بَشَرٌ مِّثْلُكُمْ ۙ— یَاْكُلُ مِمَّا تَاْكُلُوْنَ مِنْهُ وَیَشْرَبُ مِمَّا تَشْرَبُوْنَ ۟ۙ
ಸತ್ಯನಿಷೇಧಿಸಿ, ಪರಲೋಕದ ಭೇಟಿಯನ್ನು ಸುಳ್ಳಾಗಿಸಿದ ಮತ್ತು ಐಹಿಕ ಜೀವನದಲ್ಲಿ ನಮ್ಮ ಸುಖಾನುಕೂಲತೆಗಳನ್ನು ಅನುಭವಿಸಿದ ಅವರ ಜನಾಂಗದ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ನೀವು ತಿನ್ನುವುದನ್ನೇ ಇವನು ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.
عربي تفسیرونه:
وَلَىِٕنْ اَطَعْتُمْ بَشَرًا مِّثْلَكُمْ ۙ— اِنَّكُمْ اِذًا لَّخٰسِرُوْنَ ۟ۙ
ಇನ್ನು ನೀವು ನಿಮ್ಮಂತೆಯೇ ಇರುವ ಮನುಷ್ಯನನ್ನು ಅನುಸರಿಸಿದರೆ ನಿಸ್ಸಂದೇಹವಾಗಿಯು ನೀವು ಅಪಾರ ನಷ್ಟ ಹೊಂದಿದವರಾಗಿರುವಿರಿ.
عربي تفسیرونه:
اَیَعِدُكُمْ اَنَّكُمْ اِذَا مِتُّمْ وَكُنْتُمْ تُرَابًا وَّعِظَامًا اَنَّكُمْ مُّخْرَجُوْنَ ۟
ನೀವು ಸತ್ತು ಮಣ್ಣಾಗಿ, ಮತ್ತು ಎಲುಬಾಗಿ ಬಿಟ್ಟರೂ ಪುನಃ ನಿಮ್ಮನ್ನು ಜೀವಂತಗೊಳಿಸಿ ಹೊರತರಲಾಗುವುದೆಂದು ಅವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?
عربي تفسیرونه:
هَیْهَاتَ هَیْهَاتَ لِمَا تُوْعَدُوْنَ ۟
ನಿಮ್ಮೊಂದಿಗೆ ಮಾಡಲಾಗುತ್ತಿರುವ ಈ ವಾಗ್ದಾನ ದೂರ, ಅತಿ ದೂರ!
عربي تفسیرونه:
اِنْ هِیَ اِلَّا حَیَاتُنَا الدُّنْیَا نَمُوْتُ وَنَحْیَا وَمَا نَحْنُ بِمَبْعُوْثِیْنَ ۟
(ಜೀವನವೆಂದರೆ) ಕೇವಲ ಲೌಕಿಕ ಜೀವನವಾಗಿದೆ. ಇಲ್ಲೇ ನಾವು ಸಾಯುತ್ತೇವೆ, ಬದುಕುತ್ತೇವೆ ಮತ್ತು ನಾವು ಪುನಃ ಜೀವಂತಗೊಳಿಸಲಾರೆವು.
عربي تفسیرونه:
اِنْ هُوَ اِلَّا رَجُلُ ١فْتَرٰی عَلَی اللّٰهِ كَذِبًا وَّمَا نَحْنُ لَهٗ بِمُؤْمِنِیْنَ ۟
ಇವನು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದಾನೆ ಮತ್ತು ನಾವು ಇವನನ್ನು ನಂಬುವುದಿಲ್ಲ.
عربي تفسیرونه:
قَالَ رَبِّ انْصُرْنِیْ بِمَا كَذَّبُوْنِ ۟
ಪೈಗಂಬರರು ಪ್ರಾರ್ಥಿಸಿದರು: ಓ ನನ್ನ ಪ್ರಭು, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನೇ ನನಗೆ ಸಹಾಯ ಮಾಡು.
عربي تفسیرونه:
قَالَ عَمَّا قَلِیْلٍ لَّیُصْبِحُنَّ نٰدِمِیْنَ ۟ۚ
ಅಲ್ಲಾಹನು ಹೇಳಿದನು: ಇವರು ಬಹು ಬೇಗನೇ ಪಶ್ಚಾತ್ತಾಪ ಪಡಲಿದ್ದಾರೆ.
عربي تفسیرونه:
فَاَخَذَتْهُمُ الصَّیْحَةُ بِالْحَقِّ فَجَعَلْنٰهُمْ غُثَآءً ۚ— فَبُعْدًا لِّلْقَوْمِ الظّٰلِمِیْنَ ۟
ಕೊನೆಗೆ ನ್ಯಾಯ ಪ್ರಕಾರ ಅವರನ್ನು ಘೋರ ಗರ್ಜನೆಯು ಹಿಡಿದು ಬಿಟ್ಟಿತು ಮತ್ತು ನಾವು ಅವರನ್ನು ಒಣಗಿದ ಕಸಕಡ್ಡಿಯಂತೆ ಮಾಡಿ ಬಿಟ್ಟೆವು. ಹಾಗೆಯೇ ಅಕ್ರಮಿ ಜನರಿಗೆ ಶಾಪವಿರಲಿ.
عربي تفسیرونه:
ثُمَّ اَنْشَاْنَا مِنْ بَعْدِهِمْ قُرُوْنًا اٰخَرِیْنَ ۟ؕ
ಅವರ ನಂತರ ನಾವು ಇತರ ಅನೇಕ ಜನಾಂಗಗಳನ್ನು ಉಂಟುಮಾಡಿದೆವು.
عربي تفسیرونه:
مَا تَسْبِقُ مِنْ اُمَّةٍ اَجَلَهَا وَمَا یَسْتَاْخِرُوْنَ ۟ؕ
ಯಾವೊಂದು ಸಮುದಾಯವು ತನ್ನ ನಿಶ್ಚಿತ ಅವಧಿಯನ್ನು ದಾಟಿ ಮುಂದೆ ಸಾಗುವುದೂ ಇಲ್ಲ, ಹಿಂದುಳಿಯುವುದೂ ಇಲ್ಲ.
عربي تفسیرونه:
ثُمَّ اَرْسَلْنَا رُسُلَنَا تَتْرَا ؕ— كُلَّ مَا جَآءَ اُمَّةً رَّسُوْلُهَا كَذَّبُوْهُ فَاَتْبَعْنَا بَعْضَهُمْ بَعْضًا وَّجَعَلْنٰهُمْ اَحَادِیْثَ ۚ— فَبُعْدًا لِّقَوْمٍ لَّا یُؤْمِنُوْنَ ۟
ತರುವಾಯ ನಾವು ನಮ್ಮ ಸಂದೇಶವಾಹಕರನ್ನು ನಿರಂತರವಾಗಿ ಕಳಿಹಿಸಿದೆವು. ಪ್ರತಿಯೊಂದು ಸಮುದಾಯಕ್ಕೆ ಅವರ ಸಂದೇಶವಾಹಕನು ಬಂದಾಗಲೆಲ್ಲಾ ಅವರು ಅವನನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಂದರ ಹಿಂದೆ ಒಂದರAತೆ ನಾಶ ಮಾಡಿದೆವು ಮತ್ತು ನಾವು ಅವರನ್ನು ಕಥೆಗಳನ್ನಾಗಿ ಮಾಡಿಬಟ್ಟೆವು. ಸತ್ಯವಿಶ್ವಾಸವನ್ನು ಸ್ವೀಕರಿಸದ ಜನರಿಗೆ ಶಾಪವಿರಲಿ.
عربي تفسیرونه:
ثُمَّ اَرْسَلْنَا مُوْسٰی وَاَخَاهُ هٰرُوْنَ ۙ۬— بِاٰیٰتِنَا وَسُلْطٰنٍ مُّبِیْنٍ ۟ۙ
ಅನಂತರ ನಾವು ಮೂಸ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊAದಿಗೆ ಹಾಗೂ ಸುಸ್ಪಷ್ಟ ಪುರಾವೆಯೊಂದಿಗೆ ಕಳುಹಿಸಿದೆವು.
عربي تفسیرونه:
اِلٰی فِرْعَوْنَ وَمَلَاۡىِٕهٖ فَاسْتَكْبَرُوْا وَكَانُوْا قَوْمًا عَالِیْنَ ۟ۚ
ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ, (ಕಳುಹಿಸಿದೆವು) ಆದರೆ ಅವರು ದುರಹಂಕಾರ ತೋರಿದರು ಮತ್ತು ಅವರು ದರ್ಪವುಳ್ಳ ಜನರಾಗಿದ್ದರು.
عربي تفسیرونه:
فَقَالُوْۤا اَنُؤْمِنُ لِبَشَرَیْنِ مِثْلِنَا وَقَوْمُهُمَا لَنَا عٰبِدُوْنَ ۟ۚ
ಅವರು ಹೇಳಿದರು: ನಮ್ಮಂತೆಯೇ ಇರುವ ಇಬ್ಬರು ಮನುಷ್ಯರ ಮೇಲೆ ನಾವು ವಿಶ್ವಾಸವಿಡುವುದೇ? ವಸ್ತುತಃ ಅವರ ಜನಾಂಗದವರು ನಮ್ಮ ದಾಸರಾಗಿದ್ದಾರೆ!
عربي تفسیرونه:
فَكَذَّبُوْهُمَا فَكَانُوْا مِنَ الْمُهْلَكِیْنَ ۟
ಹಾಗೆಯೇ ಅವರು ಅವರಿಬ್ಬರನ್ನೂ ಸುಳ್ಳಾಗಿಸಿದರು. ಕೊನೆಗೆ ಅವರು ನಾಶ ಹೊಂದುವವರೊAದಿಗೆ ಸೇರಿಬಿಟ್ಟರು.
عربي تفسیرونه:
وَلَقَدْ اٰتَیْنَا مُوْسَی الْكِتٰبَ لَعَلَّهُمْ یَهْتَدُوْنَ ۟
ಅವರು ಸನ್ಮಾರ್ಗ ಪಡೆಯಲೆಂದು ನಾವು ಮೂಸಾರವರಿಗೆ ಗ್ರಂಥವನ್ನು ದಯಪಾಲಿಸಿದೆವು.
عربي تفسیرونه:
وَجَعَلْنَا ابْنَ مَرْیَمَ وَاُمَّهٗۤ اٰیَةً وَّاٰوَیْنٰهُمَاۤ اِلٰی رَبْوَةٍ ذَاتِ قَرَارٍ وَّمَعِیْنٍ ۟۠
ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
عربي تفسیرونه:
یٰۤاَیُّهَا الرُّسُلُ كُلُوْا مِنَ الطَّیِّبٰتِ وَاعْمَلُوْا صَالِحًا ؕ— اِنِّیْ بِمَا تَعْمَلُوْنَ عَلِیْمٌ ۟ؕ
ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
عربي تفسیرونه:
وَاِنَّ هٰذِهٖۤ اُمَّتُكُمْ اُمَّةً وَّاحِدَةً وَّاَنَا رَبُّكُمْ فَاتَّقُوْنِ ۟
ನಿಶ್ಚಯವಾಗಿಯೂ ನಿಮ್ಮ ಈ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮೆಲ್ಲರ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.
عربي تفسیرونه:
فَتَقَطَّعُوْۤا اَمْرَهُمْ بَیْنَهُمْ زُبُرًا ؕ— كُلُّ حِزْبٍۭ بِمَا لَدَیْهِمْ فَرِحُوْنَ ۟
ಅನಂತರ ಅವರು ತಮ್ಮ ಧರ್ಮವನ್ನು ಪರಸ್ಪರ ಭಿನ್ನವಿಭಿನ್ನಗೊಳಿಸಿದರು. ಪ್ರತಿಯೊಂದು ಗುಂಪು ತಮ್ಮ ಬಳಿಯಿರುವುದರ ಕುರಿತು ಹೆಮ್ಮೆಪಡುತ್ತಿದೆ.
عربي تفسیرونه:
فَذَرْهُمْ فِیْ غَمْرَتِهِمْ حَتّٰی حِیْنٍ ۟
ಆದ್ದರಿಂದ ನೀವು ಅವರನ್ನು ಅವರ ಅಲಕ್ಷö್ಯತೆಯಲ್ಲಿ ಸ್ವಲ್ಪ ಕಾಲದವರೆಗೆ ಬಿಟ್ಟು ಬಿಡಿರಿ.
عربي تفسیرونه:
اَیَحْسَبُوْنَ اَنَّمَا نُمِدُّهُمْ بِهٖ مِنْ مَّالٍ وَّبَنِیْنَ ۟ۙ
ನಾವು ಅವರ ಸಂಪತ್ತು ಹಾಗೂ ಸಂತಾನಗಳನ್ನು ಹೆಚ್ಚಿಸುತ್ತಿದ್ದೇವೆಂದು
عربي تفسیرونه:
نُسَارِعُ لَهُمْ فِی الْخَیْرٰتِ ؕ— بَلْ لَّا یَشْعُرُوْنَ ۟
ಅವರಿಗೆ ಒಳಿತುಗಳಲ್ಲಿ ಶೀಘ್ರಗೊಳಿಸುತ್ತೇವೆಂದು ಅವರು ಭಾವಿಸುತ್ತಿದ್ದಾರೆಯೇ? ಹಾಗಲ್ಲ! ಆದರೆ ಅವರು ಗ್ರಹಿಸಿಕೊಳ್ಳುವುದಿಲ್ಲ.
عربي تفسیرونه:
اِنَّ الَّذِیْنَ هُمْ مِّنْ خَشْیَةِ رَبِّهِمْ مُّشْفِقُوْنَ ۟ۙ
ನಿಶ್ಚಯವಾಗಿಯು ಯಾರು ತಮ್ಮ ಪ್ರಭುವಿನ ಭಯದಿಂದ ನಡುಗುತ್ತಾರೋ,
عربي تفسیرونه:
وَالَّذِیْنَ هُمْ بِاٰیٰتِ رَبِّهِمْ یُؤْمِنُوْنَ ۟ۙ
ಯಾರು ತಮ್ಮ ಪ್ರಭುವಿನ ಸೂಕ್ತಿಗಳಲ್ಲಿ ವಿಶ್ವಾಸವಿಡುತ್ತಾರೋ!
عربي تفسیرونه:
وَالَّذِیْنَ هُمْ بِرَبِّهِمْ لَا یُشْرِكُوْنَ ۟ۙ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
عربي تفسیرونه:
وَالَّذِیْنَ یُؤْتُوْنَ مَاۤ اٰتَوْا وَّقُلُوْبُهُمْ وَجِلَةٌ اَنَّهُمْ اِلٰی رَبِّهِمْ رٰجِعُوْنَ ۟ۙ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
عربي تفسیرونه:
اُولٰٓىِٕكَ یُسٰرِعُوْنَ فِی الْخَیْرٰتِ وَهُمْ لَهَا سٰبِقُوْنَ ۟
ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.
عربي تفسیرونه:
وَلَا نُكَلِّفُ نَفْسًا اِلَّا وُسْعَهَا وَلَدَیْنَا كِتٰبٌ یَّنْطِقُ بِالْحَقِّ وَهُمْ لَا یُظْلَمُوْنَ ۟
ನಾವು ಯಾವೊಬ್ಬ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ಹೊರೆಯನ್ನು ಹೇರುವುದಿಲ್ಲ. ನಮ್ಮ ಬಳಿ ಸತ್ಯದೊಂದಿಗೆ ಮಾತನಾಡುವ ಗ್ರಂಥವಿದೆ ಮತ್ತು ಜನರ ಮೇಲೆ ಅನ್ಯಾಯವೆಸಗಲಾಗದು.
عربي تفسیرونه:
بَلْ قُلُوْبُهُمْ فِیْ غَمْرَةٍ مِّنْ هٰذَا وَلَهُمْ اَعْمَالٌ مِّنْ دُوْنِ ذٰلِكَ هُمْ لَهَا عٰمِلُوْنَ ۟
ಆದರೆ! ಸತ್ಯನಿಷೇಧಿಗಳ ಹೃದಯಗಳು ಈ ವಿಷಯದ (ಕುರ್‌ಆನ್) ಬಗ್ಗೆ ಅಲಕ್ಷö್ಯತೆಯಲ್ಲಿವೆ ಮತ್ತು ಅವರಿಗೆ ಅದರ ಹೊರತು ಬೇರೆ (ಅನೇಕ ಕೆಟ್ಟ) ಕೆಲಸಗಳಿವೆ. ಅವುಗಳನ್ನು ಅವರು ಮಾಡಲಿರುವರು.
عربي تفسیرونه:
حَتّٰۤی اِذَاۤ اَخَذْنَا مُتْرَفِیْهِمْ بِالْعَذَابِ اِذَا هُمْ یَجْـَٔرُوْنَ ۟ؕ
ಕೊನೆಗೆ ಅವರ ಪೈಕಿ ಸುಖಲೋಲುಪರನ್ನು ನಾವು ಶಿಕ್ಷೆಗೆ ಗುರಿಪಡಿಸಿದಾಗ ಅವರು ಗೋಗರೆಯತೊಡಗುತ್ತಾರೆ.
عربي تفسیرونه:
لَا تَجْـَٔرُوا الْیَوْمَ ۫— اِنَّكُمْ مِّنَّا لَا تُنْصَرُوْنَ ۟
ನೀವಿಂದು ಗೋಗರೆಯ ಬೇಡಿರಿ. ಖಂಡಿತವಾಗಿಯು ನಮ್ಮಿಂದ ನಿಮಗೆ ಯಾವ ಸಹಾಯ ನೀಡಲಾಗದು.
عربي تفسیرونه:
قَدْ كَانَتْ اٰیٰتِیْ تُتْلٰی عَلَیْكُمْ فَكُنْتُمْ عَلٰۤی اَعْقَابِكُمْ تَنْكِصُوْنَ ۟ۙ
ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾದಾಗ. ನೀವು ಹಿಂದೆ ತಿರುಗಿ ಓಡುತ್ತಿದ್ದೀರಿ!
عربي تفسیرونه:
مُسْتَكْبِرِیْنَ ۖۚۗ— بِهٖ سٰمِرًا تَهْجُرُوْنَ ۟
ಅಹಂಕಾರ ತೋರುತ್ತಾ ಮತ್ತು ಕಾಲ್ಪನಿಕ ಕಥೆ ಎಂದು ಹೇಳುತ್ತಾ ಅದನ್ನು ತೊರೆದು ಬಿಡುತ್ತಿದ್ದಿರಿ.
عربي تفسیرونه:
اَفَلَمْ یَدَّبَّرُوا الْقَوْلَ اَمْ جَآءَهُمْ مَّا لَمْ یَاْتِ اٰبَآءَهُمُ الْاَوَّلِیْنَ ۟ؗ
ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
عربي تفسیرونه:
اَمْ لَمْ یَعْرِفُوْا رَسُوْلَهُمْ فَهُمْ لَهٗ مُنْكِرُوْنَ ۟ؗ
ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
عربي تفسیرونه:
اَمْ یَقُوْلُوْنَ بِهٖ جِنَّةٌ ؕ— بَلْ جَآءَهُمْ بِالْحَقِّ وَاَكْثَرُهُمْ لِلْحَقِّ كٰرِهُوْنَ ۟
ಅಥವಾ ಅವರು ಅವರಿಗೆ ಹುಚ್ಚು ಹಿಡಿದಿದೆಯೆಂದು ಹೇಳುತ್ತಿದ್ದಾರೆಯೇ? ಹಾಗಲ್ಲ ಅವರಂತು ಅವರ ಬಳಿ ಸತ್ಯವನ್ನು ತಂದಿದ್ದಾರೆ ಮತ್ತು ಅವರ ಪೈಕಿ ಅಧಿಕ ಜನರು ಸತ್ಯವನ್ನು ಅಸಹ್ಯಪಡುವವರಾಗಿದ್ದಾರೆ.
عربي تفسیرونه:
وَلَوِ اتَّبَعَ الْحَقُّ اَهْوَآءَهُمْ لَفَسَدَتِ السَّمٰوٰتُ وَالْاَرْضُ وَمَنْ فِیْهِنَّ ؕ— بَلْ اَتَیْنٰهُمْ بِذِكْرِهِمْ فَهُمْ عَنْ ذِكْرِهِمْ مُّعْرِضُوْنَ ۟ؕ
ಮತ್ತು ಸತ್ಯವೇ ಅವರ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದರೆ ಭೂಮಿ, ಆಕಾಶಗಳು ಮತ್ತು ಅವುಗಳಲ್ಲಿರುವುದೆಲ್ಲವೂ ಹದಗೆಡುತ್ತಿತ್ತು. ಹಾಗಲ್ಲ! ನಾವು ಅವರಿಗಾಗಿ ಅವರದೇ ಉದ್ಭೋಧೆಯನ್ನು ತಂದಿದ್ದೇವೆ ಆದರೆ ಅವರು ತಮ್ಮ ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ.
عربي تفسیرونه:
اَمْ تَسْـَٔلُهُمْ خَرْجًا فَخَرَاجُ رَبِّكَ خَیْرٌ ۖۗ— وَّهُوَ خَیْرُ الرّٰزِقِیْنَ ۟
ಏನು, ನೀವು ಅವರೊಡನೆ ಪ್ರತಿಫಲವನ್ನೇನಾದರು ಕೇಳುತ್ತಿರುವಿರಾ? ನಿಮಗೆ ನಿಮ್ಮ ಪ್ರಭುವಿನ ಪ್ರತಿಫಲವು ಅತ್ಯುತ್ತಮವಾಗಿದೆ ಮತ್ತು ಜೀವನಾಧಾರ ನೀಡುವವರಲ್ಲಿ ಅವನೇ ಅತ್ಯುತ್ತಮನಾಗಿದ್ದಾನೆ.
عربي تفسیرونه:
وَاِنَّكَ لَتَدْعُوْهُمْ اِلٰی صِرَاطٍ مُّسْتَقِیْمٍ ۟
ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.
عربي تفسیرونه:
وَاِنَّ الَّذِیْنَ لَا یُؤْمِنُوْنَ بِالْاٰخِرَةِ عَنِ الصِّرَاطِ لَنٰكِبُوْنَ ۟
ನಿಸ್ಸಂಶಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ.
عربي تفسیرونه:
وَلَوْ رَحِمْنٰهُمْ وَكَشَفْنَا مَا بِهِمْ مِّنْ ضُرٍّ لَّلَجُّوْا فِیْ طُغْیَانِهِمْ یَعْمَهُوْنَ ۟
ಮತ್ತು ನಾವು ಅವರ ಮೇಲೆ ಕರುಣೆ ತೋರಿದರೆ ಹಾಗೂ ಅವರಿಗೆ ಬಾಧಿಸಿದ ಸಂಕಷ್ಟವನ್ನು ನೀಗಿಸಿದರೆ ಖಂಡಿತ ಅವರು ತಮ್ಮ ಅತಿಕ್ರಮದಲ್ಲಿ ಅಂಧರಾಗಿ ದಾರಿಗೆಡುವರು.
عربي تفسیرونه:
وَلَقَدْ اَخَذْنٰهُمْ بِالْعَذَابِ فَمَا اسْتَكَانُوْا لِرَبِّهِمْ وَمَا یَتَضَرَّعُوْنَ ۟
ನಿಶ್ಚಯವಾಗಿಯೂ ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದು ಬಿಟ್ಟೆವು. ಆದರೂ ಅವರು ತಮ್ಮ ಪ್ರಭುವಿಗೆ ವಿಧೇಯರಾಗಲಿಲ್ಲ ಮತ್ತು ದೈನ್ಯತೆ ತೋರಲಿಲ್ಲ.
عربي تفسیرونه:
حَتّٰۤی اِذَا فَتَحْنَا عَلَیْهِمْ بَابًا ذَا عَذَابٍ شَدِیْدٍ اِذَا هُمْ فِیْهِ مُبْلِسُوْنَ ۟۠
ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು ಅದರಲ್ಲಿ ಹತಾಶರಾಗಿ ಬಿಡುತ್ತಾರೆ.
عربي تفسیرونه:
وَهُوَ الَّذِیْۤ اَنْشَاَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟
ಅವನೇ ನಿಮಗೆ ಕಿವಿಯನ್ನು, ಕಣ್ಣುಗಳನ್ನು, ಹೃದಯಗಳನ್ನು ಸೃಷ್ಟಿಸಿದನು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ.
عربي تفسیرونه:
وَهُوَ الَّذِیْ ذَرَاَكُمْ فِی الْاَرْضِ وَاِلَیْهِ تُحْشَرُوْنَ ۟
ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಹಬ್ಬಿಸಿದನು ಮತ್ತು ಅವನೆಡೆಗೇ ನೀವು ಒಟ್ಟು ಗೂಡಿಸಲಾಗುವಿರಿ.
عربي تفسیرونه:
وَهُوَ الَّذِیْ یُحْیٖ وَیُمِیْتُ وَلَهُ اخْتِلَافُ الَّیْلِ وَالنَّهَارِ ؕ— اَفَلَا تَعْقِلُوْنَ ۟
ಅವನೇ ಜೀವನ ನೀಡುತ್ತಾನೆ ಮತ್ತು ಮರಣ ಕೊಡುತ್ತಾನೆ. ಮತ್ತು ರಾತ್ರಿ ಹಗಲಿನ ಬದಲಾವಣೆಯ ನಿಯಂತ್ರಣ ಅವನ ಅಧೀನದಲ್ಲಿದೆ. ನೀವು ವಿವೇಚಿಸುವುದಿಲ್ಲವೆ?
عربي تفسیرونه:
بَلْ قَالُوْا مِثْلَ مَا قَالَ الْاَوَّلُوْنَ ۟
ಆದರೆ, ಅವರ ಪೂರ್ವಜರು ಹೇಳಿದಂತೆಯೇ ಹೇಳುತ್ತಾರೆ.
عربي تفسیرونه:
قَالُوْۤا ءَاِذَا مِتْنَا وَكُنَّا تُرَابًا وَّعِظَامًا ءَاِنَّا لَمَبْعُوْثُوْنَ ۟
ನಾವು ಸತ್ತು ಮಣ್ಣಾಗಿ ಮತ್ತು ಎಲುಬುಗಳಾದ ಬಳಿಕವೂ ನಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾಗವುದೇ? ಎನ್ನತ್ತಾರೆ.
عربي تفسیرونه:
لَقَدْ وُعِدْنَا نَحْنُ وَاٰبَآؤُنَا هٰذَا مِنْ قَبْلُ اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟
ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಬೇರೇನೂ ಅಲ್ಲ.
عربي تفسیرونه:
قُلْ لِّمَنِ الْاَرْضُ وَمَنْ فِیْهَاۤ اِنْ كُنْتُمْ تَعْلَمُوْنَ ۟
(ಪೈಗಂಬರರೇ) ಕೇಳಿರಿ, ನೀವು ಬಲ್ಲವರಾಗಿದ್ದರೆ: ಭೂಮಿ ಮತ್ತು ಅದರಲ್ಲಿರುವವರ ಒಡೆಯನಾರು?
عربي تفسیرونه:
سَیَقُوْلُوْنَ لِلّٰهِ ؕ— قُلْ اَفَلَا تَذَكَّرُوْنَ ۟
ಅವರು ಉತ್ತರಿಸುವರು: ಅಲ್ಲಾಹನಾಗಿದ್ದಾನೆ. ಹೇಳಿರಿ: ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
عربي تفسیرونه:
قُلْ مَنْ رَّبُّ السَّمٰوٰتِ السَّبْعِ وَرَبُّ الْعَرْشِ الْعَظِیْمِ ۟
ಕೇಳಿರಿ: ಏಳು ಆಕಾಶಗಳ ಮತ್ತು ಸಿಂಹಾಸನದ ಪ್ರಭು ಯಾರು?
عربي تفسیرونه:
سَیَقُوْلُوْنَ لِلّٰهِ ؕ— قُلْ اَفَلَا تَتَّقُوْنَ ۟
ಅವರು ಉತ್ತರಿಸುವರು: ಅಲ್ಲಾಹನು. ಹೇಳಿರಿ: ಹಾಗಿದ್ದೂ ನೀವು ಭಯ ಪಡುವುದಿಲ್ಲವೇ?
عربي تفسیرونه:
قُلْ مَنْ بِیَدِهٖ مَلَكُوْتُ كُلِّ شَیْءٍ وَّهُوَ یُجِیْرُ وَلَا یُجَارُ عَلَیْهِ اِنْ كُنْتُمْ تَعْلَمُوْنَ ۟
ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ.
عربي تفسیرونه:
سَیَقُوْلُوْنَ لِلّٰهِ ؕ— قُلْ فَاَنّٰی تُسْحَرُوْنَ ۟
ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ.
عربي تفسیرونه:
بَلْ اَتَیْنٰهُمْ بِالْحَقِّ وَاِنَّهُمْ لَكٰذِبُوْنَ ۟
ಹಾಗಲ್ಲ! ನಾವು ಅವರ ಬಳಿಗೆ ಸತ್ಯವನ್ನು ತಂದಿದ್ದೇವೆ ಮತ್ತು ನಿಸ್ಸಂದೇಹವಾಗಿಯೂ ಅವರು ಸುಳ್ಳರಾಗಿದ್ದಾರೆ.
عربي تفسیرونه:
مَا اتَّخَذَ اللّٰهُ مِنْ وَّلَدٍ وَّمَا كَانَ مَعَهٗ مِنْ اِلٰهٍ اِذًا لَّذَهَبَ كُلُّ اِلٰهٍ بِمَا خَلَقَ وَلَعَلَا بَعْضُهُمْ عَلٰی بَعْضٍ ؕ— سُبْحٰنَ اللّٰهِ عَمَّا یَصِفُوْنَ ۟ۙ
ಅಲ್ಲಾಹನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ, ಅವನೊಂದಿಗೆ ಬೇರೆ ದೇವನೂ ಇಲ್ಲ. ಅನ್ಯಥಾ ಪ್ರತಿಯೊಬ್ಬ ದೇವನೂ ತನ್ನ ಸೃಷ್ಟಿಯನ್ನು ತೆಗೆದುಕೊಂಡು ಬೇರ್ಪಡುತ್ತಿದ್ದನು. ಮತ್ತು ಪ್ರತಿಯೊಬ್ಬನೂ ಇನ್ನೊಬ್ಬನ ಮೇಲೆ ದಂಡೆತ್ತಿ ಹೋಗುತ್ತಿದ್ದನು. ಅವರು ಹೇಳುತ್ತಿರುವ ಮಾತುಗಳಿಂದ ಅಲ್ಲಾಹನು ಪರಮಪಾವನನು.
عربي تفسیرونه:
عٰلِمِ الْغَیْبِ وَالشَّهَادَةِ فَتَعٰلٰی عَمَّا یُشْرِكُوْنَ ۟۠
ಗೋಚರ ಹಾಗೂ ಅಗೋಚರಗಳ ಜ್ಞಾನಿಯವನು ಮತ್ತು ಅವರು ಕಲ್ಪಿಸುತ್ತಿರುವ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
عربي تفسیرونه:
قُلْ رَّبِّ اِمَّا تُرِیَنِّیْ مَا یُوْعَدُوْنَ ۟ۙ
(ಓ ಪೈಗಂಬರರೇ) ಹೀಗೆ ಪ್ರಾರ್ಥಿಸಿರಿ: ಓ ನನ್ನ ಪ್ರಭುವೇ, ಅವರಿಗೆ ಎಚ್ಚರಿಕೆ ನೀಡಲಾಗುತ್ತಿರುವುದನ್ನು ನೀನು ನನ್ನ ಉಪಸ್ಥಿತಿಯಲ್ಲಿ ತರುವುದಾದರೆ.
عربي تفسیرونه:
رَبِّ فَلَا تَجْعَلْنِیْ فِی الْقَوْمِ الظّٰلِمِیْنَ ۟
ನೀನು ನನ್ನನ್ನು ಅಕ್ರಮಿ ಜನರಲ್ಲಿ ಸೇರಿಸದಿರು. ಪ್ರಭುವೇ.
عربي تفسیرونه:
وَاِنَّا عَلٰۤی اَنْ نُّرِیَكَ مَا نَعِدُهُمْ لَقٰدِرُوْنَ ۟
ಖಂಡಿತ ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ನಿಮಗೆ ತೋರಿಸಿ ಕೊಡಲು ಶಕ್ತರಿದ್ದೇವೆ.
عربي تفسیرونه:
اِدْفَعْ بِالَّتِیْ هِیَ اَحْسَنُ السَّیِّئَةَ ؕ— نَحْنُ اَعْلَمُ بِمَا یَصِفُوْنَ ۟
(ಓ ಪೈಗಂಬರರೇ) ಕೆಡುಕನ್ನು ಅತ್ಯುತ್ತಮ ರೀತಿಯಲ್ಲಿ ನೀಗಿಸಿರಿ. ಅವರು ವರ್ಣಿಸಿ ಹೇಳುತ್ತಿರುವುದನ್ನು ನಾವು ಚೆನ್ನಾಗಿ ಬಲ್ಲೆವು.
عربي تفسیرونه:
وَقُلْ رَّبِّ اَعُوْذُ بِكَ مِنْ هَمَزٰتِ الشَّیٰطِیْنِ ۟ۙ
ಮತ್ತು ಹೀಗೆ ಪ್ರಾರ್ಥಿಸಿರಿ: ನನ್ನ ಪ್ರಭುವೇ, ನಾನು ಶೈತಾನರ ದುಷ್ಪೆçÃರಣೆಗಳಿಂದ ನಿನ್ನ ಅಭಯ ಯಾಚಿಸುತ್ತೇನೆ.
عربي تفسیرونه:
وَاَعُوْذُ بِكَ رَبِّ اَنْ یَّحْضُرُوْنِ ۟
ನನ್ನ ಪ್ರಭುವೇ, ಅವರು ನನ್ನ ಬಳಿಗೆ ಹಾಜರಾಗುವುದರಿಂದಲೂ ನಿನ್ನ ಅಭಯ ಯಾಚಿಸುತ್ತೇನೆ.
عربي تفسیرونه:
حَتّٰۤی اِذَا جَآءَ اَحَدَهُمُ الْمَوْتُ قَالَ رَبِّ ارْجِعُوْنِ ۟ۙ
ಕೊನೆಗೆ ಅವರಲ್ಲಿ ಯಾರಿಗಾದರೂ ಮರಣವು ಬಂದು ಬಿಟ್ಟರೆ ಹೇಳುತ್ತಾನೆ: ನನ್ನ ಪ್ರಭುವೇ, ನನ್ನನ್ನು ಮರಳಿಸಿ ಬಿಡು.
عربي تفسیرونه:
لَعَلِّیْۤ اَعْمَلُ صَالِحًا فِیْمَا تَرَكْتُ كَلَّا ؕ— اِنَّهَا كَلِمَةٌ هُوَ قَآىِٕلُهَا ؕ— وَمِنْ وَّرَآىِٕهِمْ بَرْزَخٌ اِلٰی یَوْمِ یُبْعَثُوْنَ ۟
ನಾನು ತೊರೆದಿರುವ ಸತ್ಕರ್ಮಗಳನ್ನು ಮಾಡಬಹುದಲ್ಲ, ಖಂಡಿತ ಇಲ್ಲ, ಇದು ಕೇವಲ ಅವನಾಡುವ ಮಾತು ಮಾತ್ರ. ಅವರು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವ ದಿನದವರೆಗೆ ಅವರ ಹಿಂದೆ ಒಂದು ತಡೆಯಿದೆ.
عربي تفسیرونه:
فَاِذَا نُفِخَ فِی الصُّوْرِ فَلَاۤ اَنْسَابَ بَیْنَهُمْ یَوْمَىِٕذٍ وَّلَا یَتَسَآءَلُوْنَ ۟
ಹಾಗೆಯೇ ಕಹಳೆಯು ಊದಲಾಗುವ ದಿನ ಅವರ ನಡುವೆ ಯಾವುದೇ ಸಂಬAಧವಿರದು. ಅವರು ಪರಸ್ಪರ ವಿಚಾರಿಸಿಕೊಳ್ಳುವುದೂ ಇಲ್ಲ.
عربي تفسیرونه:
فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟
ಇನ್ನು ಯಾರ ತುಲ ಭಾರವಾಗಿರುವುದೋ ಅವರು ವಿಜಯಶಾಲಿಗಳಾಗುವರು.
عربي تفسیرونه:
وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ فِیْ جَهَنَّمَ خٰلِدُوْنَ ۟ۚ
ಮತ್ತು ಯಾರ ತುಲ ಹಗುರವಾಗಿರುವುದೋ ಅವರೇ ತಮ್ಮನ್ನು ತಾವೇ ನಷ್ಟ ಮಾಡಿಕೊಂಡವರು. ಅವರು ನರಕದಲ್ಲಿ ಶಾಶ್ವತವಾಗಿರುವವರು.
عربي تفسیرونه:
تَلْفَحُ وُجُوْهَهُمُ النَّارُ وَهُمْ فِیْهَا كٰلِحُوْنَ ۟
ಅವರ ಮುಖಗಳನ್ನು ಅಗ್ನಿಯು ಸುಡುತ್ತಿರುವುದು ಮತ್ತು ಅವರು ಅದರಲ್ಲಿ ವಿಕಾರ ರೂಪಿಗಳಾಗಿರುವರು.
عربي تفسیرونه:
اَلَمْ تَكُنْ اٰیٰتِیْ تُتْلٰی عَلَیْكُمْ فَكُنْتُمْ بِهَا تُكَذِّبُوْنَ ۟
ಅಲ್ಲಾಹನು ಅವರೊಡನೆ (ನರಕವಾಸಿಗಳಿಂದ) ಕೇಳುವನು: ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ಅದನ್ನು ಸುಳ್ಳಾಗಿಸುತ್ತಿದ್ದಿರಿ.
عربي تفسیرونه:
قَالُوْا رَبَّنَا غَلَبَتْ عَلَیْنَا شِقْوَتُنَا وَكُنَّا قَوْمًا ضَآلِّیْنَ ۟
ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು ಮತ್ತು ನಾವು ಮಾರ್ಗಭ್ರಷ್ಟ ಜನರಾಗಿದ್ದೆವು.
عربي تفسیرونه:
رَبَّنَاۤ اَخْرِجْنَا مِنْهَا فَاِنْ عُدْنَا فَاِنَّا ظٰلِمُوْنَ ۟
ನಮ್ಮ ಪ್ರಭುವೇ, ನೀನು ನಮ್ಮನ್ನು ಇಲ್ಲಿಂದ ಹೊರ ಹಾಕು. ಪುನಃ ನಾವು ಹಾಗೆ ಮಾಡಿದರೆ ಖಂಡಿತ ನಾವು ಅಕ್ರಮಿಗಳಾಗುವೆವು.
عربي تفسیرونه:
قَالَ اخْسَـُٔوْا فِیْهَا وَلَا تُكَلِّمُوْنِ ۟
ಅಲ್ಲಾಹನು ಹೇಳುವನು: ನೀವು ನಿಂದ್ಯರಾಗಿ ಇಲ್ಲೇ (ನರಕದಲ್ಲೇ) ಬಿದ್ದಿರಿ ಮತ್ತು ನನ್ನೊಂದಿಗೆ ಮಾತನಾಡಬೇಡಿರಿ.
عربي تفسیرونه:
اِنَّهٗ كَانَ فَرِیْقٌ مِّنْ عِبَادِیْ یَقُوْلُوْنَ رَبَّنَاۤ اٰمَنَّا فَاغْفِرْ لَنَا وَارْحَمْنَا وَاَنْتَ خَیْرُ الرّٰحِمِیْنَ ۟ۚۖ
ನನ್ನ ದಾಸರ ಪೈಕಿ ಒಂದು ಸಮೂಹ: ಓ ನಮ್ಮ ಪ್ರಭುವೇ, ನಾವು ವಿಶ್ವಾಸವಿರಿಸಿದೆವು. ಆದ್ದರಿಂದ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕರುಣೆ ತೋರು. ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ ಎಂದು ಪ್ರಾರ್ಥಿಸುತ್ತಿತ್ತು.
عربي تفسیرونه:
فَاتَّخَذْتُمُوْهُمْ سِخْرِیًّا حَتّٰۤی اَنْسَوْكُمْ ذِكْرِیْ وَكُنْتُمْ مِّنْهُمْ تَضْحَكُوْنَ ۟
ಆಗ ನೀವು ಅವರನ್ನು ಪರಿಹಾಸ್ಯ ಮಾಡಿದಿರಿ. ಕೊನೆಗೆ ಅದು ನಿಮಗೆ ನನ್ನ ಸ್ಮರಣೆಯನ್ನೇ ಮರೆಯುವಂತೆ ಮಾಡಿತು ಮತ್ತು ನೀವು ಅವರನ್ನು ಕಂಡು ನಗುತ್ತಿದ್ದಿರಿ.
عربي تفسیرونه:
اِنِّیْ جَزَیْتُهُمُ الْیَوْمَ بِمَا صَبَرُوْۤا ۙ— اَنَّهُمْ هُمُ الْفَآىِٕزُوْنَ ۟
ನಾನಿಂದು ಅವರಿಗೆ ಅವರ ಸಹನೆಯ ಪ್ರತಿಫಲವನ್ನು ನೀಡಿರುವೆನು. ನಿಜವಾಗಿಯೂ ಅವರೇ ಜಯಶಾಲಿಗಳು.
عربي تفسیرونه:
قٰلَ كَمْ لَبِثْتُمْ فِی الْاَرْضِ عَدَدَ سِنِیْنَ ۟
ಅಲ್ಲಾಹನು ಕೇಳುವನು: ನೀವು ಭೂಮಿಯಲ್ಲಿ ವರ್ಷಗಳ ಗಣನೆಯ ಪ್ರಕಾರ ಎಷ್ಟು ಕಾಲ ತಂಗಿದ್ದೀರಿ?
عربي تفسیرونه:
قَالُوْا لَبِثْنَا یَوْمًا اَوْ بَعْضَ یَوْمٍ فَسْـَٔلِ الْعَآدِّیْنَ ۟
ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ ಮಾಡುವ ಮಲಕ್‌ಗಳೊಂದಿಗೆ ಕೇಳಿ ನೋಡು.
عربي تفسیرونه:
قٰلَ اِنْ لَّبِثْتُمْ اِلَّا قَلِیْلًا لَّوْ اَنَّكُمْ كُنْتُمْ تَعْلَمُوْنَ ۟
ಅಲ್ಲಾಹನು ಹೇಳುವನು: ನಿಜವಾಗಿಯೂ ನೀವು ಅತ್ಯಲ್ಪ ಕಾಲವೆ ತಂಗಿದ್ದೀರಿ. ನೀವು ಮೊದಲೇ ತಿಳಿದಿರುತ್ತಿದ್ದರೆ!.
عربي تفسیرونه:
اَفَحَسِبْتُمْ اَنَّمَا خَلَقْنٰكُمْ عَبَثًا وَّاَنَّكُمْ اِلَیْنَا لَا تُرْجَعُوْنَ ۟
ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇವೆಂದೂ ಮತ್ತು ನೀವು ನಮ್ಮೆಡೆಗೆ ಮರಳಿಸಲಾಗುವುದಿಲ್ಲವೆಂದೂ ಭಾವಿಸಿ ಕೊಂಡಿದ್ದೀರಾ
عربي تفسیرونه:
فَتَعٰلَی اللّٰهُ الْمَلِكُ الْحَقُّ ۚ— لَاۤ اِلٰهَ اِلَّا هُوَ ۚ— رَبُّ الْعَرْشِ الْكَرِیْمِ ۟
ಅಲ್ಲಾಹನು ಮಹೋನ್ನತನು, ನೈಜ ಅಧಿಪತಿಯಾಗಿರುವನು. ಅವನ ಹೊರತು ಬೇರೆ ದೇವನಿಲ್ಲ. ಅವನೇ ಸಿಂಹಾಸನದ ಒಡೆಯನಾಗಿದ್ದಾನೆ.
عربي تفسیرونه:
وَمَنْ یَّدْعُ مَعَ اللّٰهِ اِلٰهًا اٰخَرَ ۙ— لَا بُرْهَانَ لَهٗ بِهٖ ۙ— فَاِنَّمَا حِسَابُهٗ عِنْدَ رَبِّهٖ ؕ— اِنَّهٗ لَا یُفْلِحُ الْكٰفِرُوْنَ ۟
ಯಾರು ಅಲ್ಲಾಹನ ಜೊತೆ ಬೇರೊಬ್ಬ ಆರಾಧ್ಯ ದೇವನನ್ನು ಕರೆದು ಬೇಡುತ್ತಾನೋ ವಸ್ತುತಃ ಅವನ ಬಳಿ ಅದರ ಕುರಿತು ಯಾವ ಆಧಾರವು ಇಲ್ಲ. ಅವನ ಲೆಕ್ಕಾಚಾರವು ಅವನ ಪ್ರಭುವಿನ ಬಳಿಯಿದೆ. ಸತ್ಯನಿಷೇಧಿಗಳು ಖಂಡಿತ ಯಶಸ್ಸು ಪಡೆಯಲಾರರು.
عربي تفسیرونه:
وَقُلْ رَّبِّ اغْفِرْ وَارْحَمْ وَاَنْتَ خَیْرُ الرّٰحِمِیْنَ ۟۠
ಓ ಪೈಗಂಬರರೇ ಹೇಳಿರಿ: ನನ್ನ ಪ್ರಭುವೇ, ನನ್ನನ್ನು ಕ್ಷಮಿಸು ಹಾಗೂ ನನ್ನ ಮೇಲೆ ಕರುಣೆ ತೋರು ಮತ್ತು ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ.
عربي تفسیرونه:
 
د معناګانو ژباړه سورت: مؤمنون
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول