ಮತ್ತು ಕೆಲವು ಜನರು ಅಲ್ಲಾಹನಿಂದ ಅಲಕ್ಷö್ಯಗೊಳಿಸುವ ವಸ್ತುಗಳನ್ನು ಖರೀದಿಸುತ್ತಾರೆ. ಜನರನ್ನು ಅಜ್ಞಾನದೊಂದಿಗೆ ಅಲ್ಲಾಹನ ಮಾರ್ಗದಿಂದ ತಡೆಯಲಿಕ್ಕಾಗಿ, ಅದನ್ನು (ಧರ್ಮವನ್ನು) ಪರಿಹಾಸ್ಯವನ್ನಾಗಿ ಮಾಡಿಕೊಳ್ಳಲಿಕ್ಕಾಗಿ, ಅವರಿಗೆ ಅಪಮಾನಕರ ಶಿಕ್ಷೆಯಿರುವುದು.
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಪಠಿಸಲಾದರೆ ಅವನು ಅಹಂಕಾರ ತೋರುತ್ತಾ ಕೇಳಲೇ ಇಲ್ಲವೆಂಬAತೆ ಅಥವಾ ಅವನ ಕಿವಿಗಳೆರಡರಲ್ಲು ಕಿವುಡು ಇರುವಂತೆ ವಿಮುಖನಾಗಿಬಿಡುತ್ತಾನೆ. ನೀವು ಅವನಿಗೆ ವೇದನಾಜನಕ ಯಾತನೆಯ ಸುವಾರ್ತೆಯನ್ನೀಡಿರಿ.
ಅವನೇ ನೀವು ನೋಡುವಂತಹ ಯಾವುದೇ ಸ್ಥಂಭಗಳಿಲ್ಲದೆ ಆಕಾಶಗಳನ್ನು ಸೃಷ್ಟಿಸಿದನು ಮತ್ತು ಅವನು ಭೂಮಿಯಲ್ಲಿ ಸದೃಢ ಪರ್ವತಗಳನ್ನು ಅವು ನಿಮ್ಮನ್ನು ವಾಲಿಸದಿರಲೆಂದು ನಾಟಿಬಿಟ್ಟನು ಮತ್ತು ಎಲ್ಲಾ ವಿಧದ ಜೀವಿಗಳನ್ನು ಭೂಮಿಯಲ್ಲಿ ಹಬ್ಬಿಸಿಬಿಟ್ಟನು ಮತ್ತು ಆಕಾಶದಿಂದ ನೀರನ್ನು ಸುರಿಸಿ ನಾವು ಭೂಮಿಯಲ್ಲಿ ಎಲ್ಲಾ ರೀತಿಯ ಉತ್ತಮ ಜೋಡಿಗಳನ್ನು ಬೆಳೆಸಿದೆವು.