ಇದನ್ನು ಪ್ರವಾದಿಯವರು ಸ್ವತಃ ರಚಿಸಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ಇದು ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಯಾರು ಮುನ್ನೆಚ್ಚರಿಕೆಗಾರರು ಬಂದಿರದAತಹ ಒಂದು ಸಮೂಹಕ್ಕೆ ನೀವು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರು ಸನ್ಮಾರ್ಗ ಪಡೆಯಲೂಬಹುದು.
ಅಲ್ಲಾಹನೆಂದರೆ ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ಮಧ್ಯಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾಗಿದ್ದಾನೆ. ತರುವಾಯ ಸಿಂಹಾಸನದ ಮೇಲೆ ಆರೋಢನಾದನು. ಅವನ ಹೊರತು ನಿಮಗೆ ಯಾವ ರಕ್ಷಕನಾಗಲೀ, ಶಿಫಾರಸ್ಸುಗಾರನಾಗಲೀ ಇಲ್ಲ. ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
ಅವನು ಆಕಾಶದಿಂದ ಭೂಮಿಯವರೆಗೆ ಸಕಲ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ತರುವಾಯ ಆ ಕಾರ್ಯವು ಅವನೆಡೆಗೆ ಏರಿಹೋಗುವುದು ಇಂತಹಾ ಒಂದು ದಿನದಲ್ಲಿ ಅದರÀ ವಿಸ್ತಾರವು ನೀವು ಗಣಿಸುವ ಸಾವಿರ ವರ್ಷಗಳಾಗಿರುವುದು.
ತರುವಾಯ ಅವನು ಅವನಿಗೆ ಉತ್ತಮ ಸ್ವರೂಪವನ್ನು ನೀಡಿ ತನ್ನವತಿಯ ಆತ್ಮವನ್ನು ಅವನಲ್ಲಿ ಊದಿದನು. ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನು, ಹೃದಯಗಳನ್ನೂ ಉಂಟುಮಾಡಿದವನು. ನೀವು ಸ್ವಲ್ಪ ಮಾತ್ರವೇ ಕೃತಜ್ಞತೆ ಸಲ್ಲಿಸುತ್ತೀರಿ.