ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದ್ದನ್ನು ನೀವು ನೋಡುವುದಿಲ್ಲವೇ? ಮತ್ತು ಅದನ್ನು ಭೂಮಿಯ ಚಿಲುಮೆಗಳಿಗೆ ತಲುಪಿಸುತ್ತಾನೆ. ತರುವಾಯ ಅದರ ಮೂಲಕ ವಿಭಿನ್ನ ಬಣ್ಣಗಳ ಕೃಷಿಗಳನ್ನು ಹೊರತರುತ್ತಾನೆ. ಅನಂತರ ಅವು ಒಣಗಿ ಹಳದಿ ಬಣ್ಣಕÉ್ಕತಿರುಗಿರುವುದಾಗಿ ನೀವು ಕಾಣುವಿರಿ. ಆ ಬಳಿಕ ಅವನು ಅವುಗಳನ್ನು ಹೊಟ್ಟಾಗಿ ಮಾಡಿಬಿಡುವನು. ಇದರಲ್ಲಿ ಬುದ್ಧಿವಂತರಿಗೆ ಅನೇಕ ಉದ್ಭೋಧೆಗಳಿವೆ.