ಅವನು ಪಾಪವನ್ನು ಕ್ಷಮಿಸುವವನೂ, ಪಶ್ಚಾತ್ತಾಪವನ್ನು ಸ್ವೀಕರಿಸುವವನೂ, ಅತ್ಯುಗ್ರ ಯಾತನೆಯನ್ನು ನೀಡುವವನೂ ಅನುಗ್ರಹದಾತನೂ ಆಗಿರುವವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಸರ್ವರಿಗೂ ಅವನೆಡೆಗೇ ಮರಳಬೇಕಾಗಿದೆ.
ಇದಕ್ಕೆ ಮೊದಲು ನೂಹರ ಜನಾಂಗ ಮತ್ತು ಅವರ ನಂತರದ ಹಲವು ಪಂಗಡಗಳು ಸಹ ಸುಳ್ಳಾಗಿಸಿದ್ದವು ಮತ್ತು ಪ್ರತಿಯೊಂದು ಸಮುದಾಯವೂ ತಮ್ಮ ಸಂದೇಶವಾಹಕನನ್ನು ಸೆರೆಹಿಡಿಯಲು ಮತ್ತು ಮಿಥ್ಯದ ಮೂಲಕ ಸತ್ಯವನ್ನು ಕೀಳಾಗಿಸಲು ಉದ್ದೇಶಿಸಿತು. ಆಗ ನಾನು ಅವರನ್ನು ಹಿಡಿದುಬಿಟ್ಟೆನು. ಆದ್ದರಿಂದ ನನ್ನ ಶಿಕ್ಷೆಯು ಹೇಗಿತ್ತೆಂಬುದನ್ನು ನೋಡಿರಿ
‘ಅರ್ಶ್'(ಸಿಂಹಾಸನ)ಅನ್ನು ಹೊತ್ತ ಮಲಕ್‌ಗಳು ಮತ್ತು ಅದರ ಸುತ್ತಲಿರುವವರು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಾ ಅವನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳಿಗಾಗಿ ಹೀಗೆ ಕ್ಷಮೆಯನ್ನು ಬೇಡುತ್ತಾರೆ. ಓ ನಮ್ಮ ಪ್ರಭು, ನಿನ್ನ ಕೃಪೆ ಮತ್ತು ಜ್ಞಾನವು ಸಕಲ ವಸ್ತುಗಳನ್ನು ಆವರಿಸಿಕೊಂಡಿದೆ. ಆದ್ದರಿಂದ ಪಶ್ಚಾತ್ತಾಪಪಟ್ಟು ಮರಳುವವರಿಗೆ, ಮತ್ತು ನಿನ್ನ ಮಾರ್ಗವನ್ನು ಅನುಸರಿಸುವವರಿಗೆ ನೀನು ಕ್ಷಮಿಸಿಬಿಡು ಮತ್ತು ಅವರನ್ನು ನರಕದಿಂದ ಪಾರು ಮಾಡು.