ಎಚ್ಚರಿಕೆ ಧರ್ಮವು ನಿಷ್ಕಳಂಕವಾಗಿ ಕೇವಲ ಅಲ್ಲಾಹನಿಗೇ ಮೀಸಲಾಗಿದೆ ಮತ್ತು ಯಾರು ಅವನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುತ್ತಾರೋ ಅವರು ನಮ್ಮನ್ನು 'ಅಲ್ಲಾಹನ ಬಳಿ ನಿಕಟಗೊಳಿಸಲೆಂದು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ (ಎಂದು ಹೇಳುತ್ತಾರೆ). ಅವರು ಭಿನ್ನತೆ ತೋರುತ್ತಿದ್ದ ವಿಚಾರಗಳ ತೀರ್ಮಾನವನ್ನು ಅಲ್ಲಾಹನು ಮಾಡಲಿದ್ದಾನೆ. ನಿಶ್ಚಯವಾಗಿಯು ಸುಳ್ಳರೂ, ಕೃತಘ್ನರೂ ಆದವರನ್ನು ಅಲ್ಲಾಹನು ಸನ್ಮಾರ್ಗಕ್ಕೆ ಮುನ್ನಡೆಸುವುದಿಲ್ಲ.
ಅಲ್ಲಾಹನು ಯಾರನ್ನಾದರೂ ಪುತ್ರನನ್ನಾಗಿ ಮಾಡಿಕೊಳ್ಳಲು ಇಚ್ಛಿಸಿರುತ್ತಿದ್ದರೆ ಅವನು ಸೃಷ್ಟಿಸಿದವುಗಳಲ್ಲಿಂದ ತಾನಿಚ್ಛಿಸಿದ್ದನ್ನು ಆರಿಸಿಕೊಳ್ಳುತ್ತಿದ್ದನು. (ಆದರೆ) ಅವನು ಪರಮಪಾನನನು. ಅವನು ಏಕÉÊಕನೂ, ಸರ್ವರ ಮೇಲೆ ಪ್ರಾಬಲ್ಯವುಳ್ಳವನಾಗಿದ್ದಾನೆ.
ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುತ್ತಾನೆ. ಅವನು ರಾತ್ರಿಯನ್ನು ಹಗಲಿನ ಮೇಲೆ ಹಾಗೂ ಹಗಲನ್ನುರಾತ್ರಿಯ ಮೇಲೆ ಸುತ್ತುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರರನ್ನು ನಿಯಂತ್ರಿಸುತ್ತಾನೆ. ಪ್ರತಿಯೊಂದೂ ಸಹ ಒಂದು ನಿಶ್ಚಿತ ಅವಧಿಯವರೆಗೆ ಸಂಚರಿಸುತ್ತಿರುತ್ತವೆ. ತಿಳಿಯಿರಿ! ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿದ್ದಾನೆ.