ಅವನು ನಿಮ್ಮೆಲ್ಲರನ್ನು ಒಂದೇ ಜೀವದಿಂದ ಸೃಷ್ಟಿಸಿರುವನು. ತರುವಾಯ ಅದರಿಂದ ಅದರ ಜೋಡಿಯನ್ನು ಉಂಟು ಮಾಡಿದನು ಹಾಗೂ ನಿಮಗಾಗಿ ಜಾನುವಾರುಗಳಿಂದ ಎಂಟು ವರ್ಗ ಗಂಡು ಹೆಣ್ಣುಗಳನ್ನು ಇಳಿಸಿರುವನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಲ್ಲಿ ಒಂದು ಸೃಷ್ಟಿ ಹಂತದ ಬಳಿಕ ಮತ್ತೊಂದು ಸೃಷ್ಟಿ ಹಂತವನ್ನಾಗಿ ಮೂರು ಅಂಧಕಾರಗಳಲ್ಲಿ ಸೃಷ್ಟಿಸುವನು. ಅವನೇ ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಅಧಿಪತ್ಯವು ಅವನದೇ ಆಗಿರುವುದು. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಹಾಗಿದ್ದೂ ನೀವೆತ್ತ ಅಲೆದಾಡುತ್ತಿರುವಿರಿ?