ನೀವು ಕೃತಘ್ನತೆ ತೋರುವುದಾದರೆ ಅಲ್ಲಾಹನು ನಿಮ್ಮಿಂದ ನಿರಪೇಕ್ಷನಾಗಿದ್ದಾನೆ ಹಾಗೂ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯನ್ನು ಮೆಚ್ಚುವುದಿಲ್ಲ ಮತ್ತು ನೀವು ಕೃತಜ್ಞತೆ ತೋರುವುದಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ ಮತ್ತು ಪಾಪ ಭಾರ ಹೊರುವವನು ಮತ್ತೊಬ್ಬನ ಭಾರವನ್ನು ಹೊರಲಾರನು. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನಿಮ್ಮ ಪ್ರಭುವಿನೆಡೆಗೇ ಆಗಿದೆ. ನೀವು ಮಾಡುತ್ತಿದ್ದಿದ್ದನ್ನು ಅವನು ನಿಮಗೆ ತಿಳಿಸಿಕೊಡುವನು. ಖಂಡಿತವಾಗಿಯು ಅವನು ಮನಸ್ಸಿನಲ್ಲಿರುವ ಸಂಗತಿಗಳನ್ನು ಚೆನ್ನಾಗಿಬಲ್ಲನು.