ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೆ ತಂಡೋಪತAಡವಾಗಿ ಅಟ್ಟಲಾಗುವುದು. ಅವರು ಅಲ್ಲಿಗೆ ತಲುಪಿದಾಗ ಅದರ ದ್ವಾರಗಳು ತೆರೆಯಲಾಗುವುವು ಮತ್ತು ಅವರೊಂದಿಗೆ ಅದರ ಕಾವಲುಗಾರರು ಕೇಳುವರು: ನಿಮ್ಮ ಮುಂದೆ ನಿಮ್ಮ ಪ್ರಭುವಿನ ಸೂಕ್ತಿಗಳನ್ನು ಓದುವ ಮತ್ತು ನಿಮ್ಮನ್ನು ಈ ದಿನದ ಭೇಟಿಯ ಬಗ್ಗೆ ಎಚ್ಚರಿಸುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿ ಬಂದಿರಲಿಲ್ಲವೇ ? ಆಗ ಅವರು ಹೇಳುವರು: ಹೌದು ಬಂದಿದ್ದರು. ಆದರೆ ಸತ್ಯನಿಷೇಧಿಗಳ ಮೇಲೆ ಯಾತನೆಯ ವಚನವು ಸಾಬೀತುಗೊಂಡಿದೆ.