ಮನುಷ್ಯನಿಗೆ ಯಾವುದಾದರೂ ವಿಪತ್ತು ಬಾಧಿಸಿದಾಗ ಅವನು ತನ್ನ ಪ್ರಭುವಿನೆಡೆಗೆ ಮರಳಿ ವಿನಮ್ರತೆಯಿಂದ ಅವನನ್ನು ಕರೆದುಬೇಡುತ್ತಾನೆ. ತರುವಾಯ ಅಲ್ಲಾಹನು ತನ್ನ ವತಿಯಿಂದ ಯಾವುದಾದರೂ ಅನುಗ್ರಹವನ್ನು ಅವನಿಗೆ ದಯಪಾಲಿಸಿದರೆ. ಅವನು ಇದಕ್ಕೆ ಮೊದಲು ತಾನು ಅವನೆಡೆಗೆ ಮೊರೆಯಿಟ್ಟಿರುವುದನ್ನು (ಸಂಪೂರ್ಣವಾಗಿ) ಮರೆತು ಬಿಡುತ್ತಾನೆ ಮತ್ತು ಇತರರನ್ನು ಅವನ ಮಾರ್ಗದಿಂದ ಭ್ರಷ್ಟಗೊಳಿಸಲು ಅಲ್ಲಾಹನಿಗೆ ಸರಿಸಮಾನರನ್ನು ನಿಶ್ಚಯಿಸುತ್ತಾನೆ. ಓ ಪೈಗಂಬರರೇ, ಹೇಳಿರಿ ಈ ಸತ್ಯನಿಷೇಧದ ಲಾಭವನ್ನು ಅಲ್ಪ ಕಾಲ ಭೋಗಿಸು. ಖಂಡಿತವಾಗಿಯು ನೀನು ನರಕವಾಸಿಗಳಲ್ಲಿ ಸೇರಲಿರುವೆ.