ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು, ಮುಹಮ್ಮದ್‌ರವರ ಮೇಲೆ ಅವತೀರ್ಣಗೊಳಿಸಲಾದುದರಲ್ಲಿ ವಿಶ್ವಾಸವಿರಿಸಿದರೋ ವಸ್ತುತಃ ಅದು ಅವರ ಪ್ರಭುವಿನಿಂದ ಇರುವ ಸತ್ಯಧರ್ಮವಾಗಿದೆ. ಅಲ್ಲಾಹನು ಅವರ ಪಾಪಗಳನ್ನು ಅವರಿಂದ ದೂರಮಾಡಿದನು ಮತ್ತು ಅವರ ಸ್ಥಿತಿಯನ್ನು ಉತ್ತಮಗೊಳಿಸಿದನು.
ಇದೇಕೆಂದರೆ ಸತ್ಯನಿಷೇಧಿಸಿದವರು ಮಿಥ್ಯವನ್ನು ಅನುಸರಿಸಿದರು ಹಾಗು ಸತ್ಯವಿಶ್ವಾಸಿಗಳು ತಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವನ್ನು ಅನುಸರಿಸಿದರು, ಇದೇ ರೀತಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ನೀಡುತ್ತಾನೆ.
ಆದುದರಿಂದ ನೀವು ರಣರಂಗದಲ್ಲಿ ಸತ್ಯನಿಷೇಧಿಗಳನ್ನು ಎದುರಾದರೆ (ಕದನ ಸಂದರ್ಭದಲ್ಲಿ) ಅವರ ಕತ್ತುಗಳನ್ನು ಕಡಿಯಿರಿ. ನೀವು ಅವರನ್ನು ಚೆನ್ನಾಗಿ ಸದೆಬಡಿದಾಗ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಅನಂತರ ಒಂದೋ ಸೌಜನ್ಯದಿಂದ ಅವರನ್ನು ಬಿಡುಗಡೆಗೊಳಿಸಿರಿ. ಇಲ್ಲವೇ ವಿಮೋಚನಾ ಧನ ಪಡೆಯಿರಿ. ಯುದ್ಧವು ಆಯುಧವನ್ನು ಕೆಳಗಿಳಿಸುವವರೆಗೆ, ಇದುವೇ ಆದೇಶವಾಗಿದೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಸ್ವತಃ ಅವನೇ ಅವರಿಂದ ಪ್ರತಿಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೂಲಕ ಪರೀಕ್ಷಿಸಲೆಂದಾಗಿದೆ. ಅಲ್ಲಾಹನು ತನ್ನ ಮಾರ್ಗದಲ್ಲಿ ಕೊಲ್ಲಲ್ಪಟ್ಟವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.
التفاسير:
|
5:47
سَیَهْدِیْهِمْ وَیُصْلِحُ بَالَهُمْ ۟ۚ
ಅವನು ಸಧ್ಯದಲ್ಲೇ ಅವರಿಗೆ ಮಾರ್ಗದರ್ಶನ ಮಾಡುವನು. ಹಾಗು ಅವರ ಸ್ಥಿತಿಯನ್ನು ಸುಧಾರಿಸುವನು.
التفاسير:
|
6:47
وَیُدْخِلُهُمُ الْجَنَّةَ عَرَّفَهَا لَهُمْ ۟
ಮತ್ತು ಅವರಿಗೆ ಪರಿಚಯಿಸಲಾದ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.
ಅವರು ತಮಗಿಂತ ಮುಂಚಿನವರ ಪರಿಣಾಮವು ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಸರ್ವನಾಶ ಮಾಡಿದನು ಮತ್ತು ಸತ್ಯನಿಷೇಧಿಗಳಿಗೆ ಇದೇ ರೀತಿಯ ಶಿಕ್ಷೆಗಳಿರುವುವು