ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.