للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: المائدة   آية:
لُعِنَ الَّذِیْنَ كَفَرُوْا مِنْ بَنِیْۤ اِسْرَآءِیْلَ عَلٰی لِسَانِ دَاوٗدَ وَعِیْسَی ابْنِ مَرْیَمَ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟
ಇಸ್ರಾಯೀಲ್ ಸಂತತಿಗಳಲ್ಲಿ ಸತ್ಯನಿಷೇಧಿಸಿದವರು. ದಾವೂದ್ ಮತ್ತು ಮರ್ಯಮರ ಮಗನಾದ ಈಸಾರ ನಾಲಗೆಯಿಂದ ಶಪಿಸಲ್ಪಟ್ಟರು. ಇದು ಅವರು ಧಿಕ್ಕಾರವನ್ನು ತೋರಿದ್ದರಿಂದಲು ಅತಿಕ್ರಮವನ್ನು ಕೈಗೊಂಡದ್ದರಿAದಲೂ ಆಗಿದೆ.
التفاسير العربية:
كَانُوْا لَا یَتَنَاهَوْنَ عَنْ مُّنْكَرٍ فَعَلُوْهُ ؕ— لَبِئْسَ مَا كَانُوْا یَفْعَلُوْنَ ۟
ಅವರು ಮಾಡುತ್ತಿದ್ದ ದುಷ್ಕೃತ್ಯಗಳಿಂದ ಅವರು ಪರಸ್ಪರ ತಡೆಯುತ್ತಿರಲಿಲ್ಲ. ಅವರು ಮಾಡುತ್ತಿದ್ದುದ್ದೆಲ್ಲವೂ ಅತೀ ನಿಕೃಷ್ಟವಾಗಿತ್ತು.
التفاسير العربية:
تَرٰی كَثِیْرًا مِّنْهُمْ یَتَوَلَّوْنَ الَّذِیْنَ كَفَرُوْا ؕ— لَبِئْسَ مَا قَدَّمَتْ لَهُمْ اَنْفُسُهُمْ اَنْ سَخِطَ اللّٰهُ عَلَیْهِمْ وَفِی الْعَذَابِ هُمْ خٰلِدُوْنَ ۟
ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವುದನ್ನು ನೀವು ಕಾಣುವಿರಿ. ಅವರು ಸ್ವತಃ ತಮಗಾಗಿ ಮೊದಲೇ ಕಳುಹಿಸಿರುವಂತಹದು ಅತ್ಯಂತ ನಿಕೃಷ್ಟವಾಗಿದೆ. ಆದುದರಿಂದ ಅಲ್ಲಾಹನು ಅವರ ಮೇಲೆ ಕೋಪಗೊಂಡಿರುವನು. ಮತ್ತು ಶಿಕ್ಷೆಯಲ್ಲಿ ಅವರು ಶಾಶ್ವತವಾಗಿರುವರು.
التفاسير العربية:
وَلَوْ كَانُوْا یُؤْمِنُوْنَ بِاللّٰهِ وَالنَّبِیِّ وَمَاۤ اُنْزِلَ اِلَیْهِ مَا اتَّخَذُوْهُمْ اَوْلِیَآءَ وَلٰكِنَّ كَثِیْرًا مِّنْهُمْ فٰسِقُوْنَ ۟
ಅವರು ಅಲ್ಲ್ಲಾಹನಲ್ಲೂ ಪೈಗಂಬರರಲ್ಲೂ, ಪೈಗಂಬರರ ಮೆಲೆ ಅವತೀರ್ಣಗೊಂಡಿರುವುದರಲ್ಲೂ ವಿಶ್ವಾಸವಿರಿಸುತ್ತಿದ್ದರೆ ಅವರು ಸತ್ಯನಿಷೇಧಿಗಳನ್ನು ಅಪ್ತ ಮಿತ್ರರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವರ ಪೈಕಿ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
التفاسير العربية:
لَتَجِدَنَّ اَشَدَّ النَّاسِ عَدَاوَةً لِّلَّذِیْنَ اٰمَنُوا الْیَهُوْدَ وَالَّذِیْنَ اَشْرَكُوْا ۚ— وَلَتَجِدَنَّ اَقْرَبَهُمْ مَّوَدَّةً لِّلَّذِیْنَ اٰمَنُوا الَّذِیْنَ قَالُوْۤا اِنَّا نَصٰرٰی ؕ— ذٰلِكَ بِاَنَّ مِنْهُمْ قِسِّیْسِیْنَ وَرُهْبَانًا وَّاَنَّهُمْ لَا یَسْتَكْبِرُوْنَ ۟
ಖಂಡಿತವಾಗಿಯು ನೀವು ಸತ್ಯವಿಶ್ವಾಸಿಗಳ ಪರಮ ಶತ್ರುಗಳನ್ನಾಗಿ ಯಹೂದರನ್ನೂ, ಬಹುದೇವಾರಾಧಕರನ್ನೂ ಕಾಣುವಿರಿ. ಮತ್ತು ತಮ್ಮನ್ನು ಕ್ರೆöÊಸ್ತರೆಂದು ಹೇಳುವವರನ್ನು ಸತ್ಯವಿಶ್ವಾಸಿಗಳೊಂದಿಗೆ ಎಲ್ಲರಿಗಿಂತ ಹೆಚ್ಚು ಮಿತ್ರತ್ವಕ್ಕೆ ಹತ್ತಿರವಿರುವುದಾಗಿ ಕಾಣುವಿರಿ. ಇದು ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿರುವರು ಹಾಗೂ ಅವರು ಅಹಂಭಾವ ತೋರುವುದಿಲ್ಲವೆಂಬುದೇ ಇದಕ್ಕೆ ಕಾರಣವಾಗಿದೆ.
التفاسير العربية:
وَاِذَا سَمِعُوْا مَاۤ اُنْزِلَ اِلَی الرَّسُوْلِ تَرٰۤی اَعْیُنَهُمْ تَفِیْضُ مِنَ الدَّمْعِ مِمَّا عَرَفُوْا مِنَ الْحَقِّ ۚ— یَقُوْلُوْنَ رَبَّنَاۤ اٰمَنَّا فَاكْتُبْنَا مَعَ الشّٰهِدِیْنَ ۟
ಮತ್ತು ಅವರು (ಭಕ್ತಿಯುಳ್ಳ ಕ್ರೆöÊಸ್ತರು) ಸಂದೇಶವಾಹಕರಿಗೆ ಅವತೀರ್ಣಗೊಳಿಸಲಾದುದನ್ನು ಆಲಿಸಿಕೊಂಡರೆ ಸತ್ಯವನ್ನು ಗ್ರಹಿಸಿದುದರ ಕಾರಣ ಅವರು ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: ಓ ನಮ್ಮ ಪ್ರಭೂ, ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷö್ಯ ನೀಡುವವರೊಂದಿಗೆ ನಮ್ಮನ್ನೂ ದಾಖಲಿಸು.
التفاسير العربية:
 
ترجمة معاني سورة: المائدة
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق