ಗ್ರಂಥದವರ ಪೈಕಿ ಸತ್ಯನಿಷೇಧಿಗಳನ್ನು ಪ್ರಥಮ ಗಡಿಪಾರಿನ ಸಂದರ್ಭದಲ್ಲಿ ಅವರ ಮನೆಗಳಿಂದ ಹೊರಹಾಕಿದವನು ಅವನೇ ಆಗಿದ್ದಾನೆ. ಅವರು ಹೊರಬರುವರೆಂದು ನೀವು ಊಹಿಸಿಯೇ ಇರಲಿಲ್ಲ ಮತ್ತು ಸ್ವತಃ ಅವರು ತಮ್ಮನ್ನು ತಮ್ಮ ಕೋಟೆಗಳು ಅಲ್ಲಾಹನಿಂದ ರಕ್ಷಿಸಿಕೊಳ್ಳಬಲ್ಲವೆಂದು ಭಾವಿಸಿಕೊಂಡಿದ್ದರು. ಆದರೆ ಅವರು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವರ ಕಡೆಗೆ ಬಂದನು ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸಿದನು.. ಅವರು ಸ್ವತಃ ತಮ್ಮ ಕೈಗಳಿಂದ ಹಾಗೂ ಸತ್ಯ ವಿಶ್ವಾಸಿಗಳ ಕೈಗಳಿಂದ ತಮ್ಮ ಮನೆಗಳನ್ನು ಕೆಡವಿ ನಾಶ ಮಾಡುತ್ತಿದ್ದರು. ಆದ್ದರಿಂದ ಓ ದೃಷ್ಟಿಯುಳ್ಳವರೇ ನೀವು ಪಾಠ ಕಲಿಯಿರಿ.