ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು.
ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ ಕೈಗಳನ್ನು ಹಾಗೂ ನಾಲಗೆಗಳನ್ನೂ ಕೆಟ್ಟ ಉದ್ದೇಶದಿಂದ ನಿಮ್ಮೆಡೆಗೆ ಚಾಚುವರು ನೀವೂ ಸಹ ಸತ್ಯನಿಷೇಧಿಗಳಾಗಲೆಂದು ಅವರು ಬಯಸುತ್ತಾರೆ.
ಪುನರುತ್ಥಾನ ದಿನದಂದು ನಿಮ್ಮ ಕುಟುಂಬ ಸಂಬAಧವಾಗಲಿ ನಿಮ್ಮ ಸಂತಾನಗಳಾಗಲಿ ನಿಮಗೆ ಯಾವ ಪ್ರಯೋಜನಕ್ಕೂ ಬಾರದು, ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ನೋಡುವವನಾಗಿದ್ದಾನೆ.
ನಿಮಗೆ ಪೈಗಂಬರ್ ಇಬ್ರಾಹೀಮರಲ್ಲೂ ಅವರ ಸಂಗಡಿಗರಲ್ಲೂ ಉತ್ತಮ ಮಾದರಿಯಿದೆ. ಅವರು ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭ; ಖಂಡಿತ ನಾವು ನಿಮ್ಮಿಂದ ಮತ್ತು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತುಗಳಿಂದ ಸಂಬAಧ ಮುಕ್ತರಾಗಿದ್ದೇವೆ. ನೀವು ಏಕೈಕನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವ ತನಕ ನಮ್ಮ ಮತ್ತು ನಿಮ್ಮ ನಡುವೆ ಹಗೆತನ, ದ್ವೇಷ ಸದಾ ಕಾಲಕ್ಕೆ ಪ್ರಕಟಗೊಂಡಿದೆ. ಆದರೆ ಇಬ್ರಾಹೀಮರು ತಮ್ಮ ತಂದೆಯೊAದಿಗೆ ನಾನು ಖಂಡಿತಾ ನಿಮಗಾಗಿ ಕ್ಷಮೆ ಬೇಡುವೆನು ಮತ್ತು ಅಲ್ಲಾಹನ ಮುಂದೆ ನನಗೆ ನಿಮಗೋಸ್ಕರ ಯಾವುದೇ ವಸ್ತುವಿನ ಅಧಿಕಾರವಿಲ್ಲ ಎಂದು ಹೇಳಿದ ಮಾತಿನ ಹೊರತು. ಓ ನಮ್ಮ ಪ್ರಭು, ನಾವು ನಿನ್ನ ಮೇಲೆ ಭರವಸೆಯನ್ನಿರಿಸಿದ್ದೇವೆ ಮತ್ತೂ ನಿನ್ನೆಡೆಗೆ ಪಶ್ಚಾತ್ತಾಪದಿಂದ ಮರಳುತ್ತೇವೆ ಮತ್ತು ನಿನ್ನೆಡೆಗೇ ಮರಳಲಿಕ್ಕಿರುವುದು.
ಓ ನಮ್ಮ ಪ್ರಭೂ, ನೀನು ನಮ್ಮನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು, ಮತ್ತು ಓ ನಮ್ಮ ಪ್ರಭು. ನೀನು ನಮ್ಮ ಪಾಪಗಳನ್ನು ಕ್ಷಮಿಸಿಬಿಡು. ನಿಸ್ಸಂಶಯವಾಗಿಯೂ ನೀನು ಪ್ರಬಲನೂ ಸುಜ್ಞಾನಿಯೂ ಆಗಿರುವೆ.