ಮೂಸಾ ತಮ್ಮ ಜನರಿಗೆ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ನನ್ನಜನಾಂಗದವರೇ ನಾನು ನಿಮ್ಮಕಡೆಗೆ ಕಳುಹಿಸಲ್ಪಟ್ಟ ಸಂದೇಶವಾಹಕನೆಂದು ನಿಮಗೆ ಚೆನ್ನಾಗಿ ತಿಳಿದಿದ್ದರೂ ನೀವು ನನ್ನನ್ನೇಕೆ ಪೀಡಿಸುತ್ತೀರಿ ಅವರು ವಕ್ರ ಮರ‍್ಗವನ್ನು ಹಿಡಿದಾಗ ಅಲ್ಲಾಹನು ಅವರ ಹೃದಯಗಳನ್ನು ವಕ್ರಗೊಳಿಸಿಬಿಟ್ಟನು ಮತ್ತು ಅಲ್ಲಾಹನು ಧಿಕ್ಕಾರಿಗಳಾದ ಜನರಿಗೆ ಸನ್ಮರ‍್ಗ ನೀಡುವುದಿಲ್ಲ.