ಅನಕ್ಷರಿಗಳ ನಡುವೆ ಅವರಿಂದಲೇ ಆದ ಒಬ್ಬ ಸಂದೇಶವಾಹಕನನ್ನು ಕಳುಹಿಸಿದವನು ಅವನೇ. ಅವರು ಅವನ ಸೂಕ್ತಿಗಳನ್ನು ಅವರಿಗೆ ಓದಿ ಹೇಳುತ್ತಾರೆ. ಅವರನ್ನು ಸಂಸ್ಕರಿಸುತ್ತಾರೆ ಅವರಿಗೆ ಗ್ರಂಥ ಹಾಗೂ ಸುಜ್ಞಾನವನ್ನು ಕಲಿಸಿಕೊಡುತ್ತಾರೆ. ಖಂಡಿತವಾಗಿಯೂ ಅವರು (ಅರಬರು) ಇದಕ್ಕಿಂತ ಮುಂಚೆ ಸ್ಪಷ್ಟವಾದ ಪಥ ಭ್ರಷ್ಟತೆಯಲ್ಲಿದ್ದರು.
ಹೇಳಿರಿ; ಯಾವ ಮರಣದಿಂದ ನೀವು ಓಡಿ ಹೋಗುತ್ತಿರುವಿರೋ ಅದು ನಿಮಗೆ ಬಂದೇತೀರುವುದು. ಆ ಬಳಿಕ ನೀವು ಸಕಲ ರಹಸ್ಯ ಮತ್ತು ಬಹಿರಂಗವನ್ನು ಅರಿಯುವವನ ಕಡೆಗೆ ಮರಳಿಸಲಾಗುವಿರಿ, ಆಗ ನೀವು ಮಾಡುತ್ತಿದ್ದ ಸಕಲ ರ‍್ಮಗಳನ್ನು ಅವನು ನಿಮಗೆ ತಿಳಿಸಿಕೊಡುವನು.