ಕಪಟ ವಿಶ್ವಾಸಿಗಳು ನಿಮ್ಮ ಬಳಿ ಬಂದಾಗ ಹೇಳುತ್ತಾರೆ. ನಿಸ್ಸಂದೇಹವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರೆಂದು ನಾವು ಸಾಕ್ಷö್ಯವಹಿಸುತ್ತೇವೆ. ಖಂಡಿತವಾಗಿಯೂ ನೀವು ಅವನ ಸಂದೇಶ ವಾಹಕರೆಂದು ಅಲ್ಲಾಹನಿಗೆ ತಿಳಿದಿದೆ. ಕಪಟ ವಿಶ್ವಾಸಿಗಳು ನಿಶ್ಚಯವಾಗಿಯೂ ಸುಳ್ಳುಗಾರರಾಗಿದ್ದಾರೆ ಎಂದು ಅಲ್ಲಾಹನು ಸಾಕ್ಷ್ಯವಹಿಸುತ್ತಾನೆ.
ಅವರು ತಮ್ಮ ಶಪಥಗಳನ್ನು ಒಂದು ಗುರಾಣಿಯನ್ನಾಗಿ ಮಾಡಿ ಕೊಂಡಿದ್ದಾರೆ. ಅವರುಅಲ್ಲಾಹನ ಮರ‍್ಗದಿಂದ ಜನರನ್ನು ತಡೆಯುತ್ತಾರೆ. ನಿಸ್ಸಂದೇಹವಾಗಿಯೂ ಅವರು ಮಾಡುತ್ತಿರುವ ರ‍್ಮಗಳು ನಿಕೃಷ್ಟವಾಗಿವೆ.
ನೀವು ಅವರನ್ನು ಕಂಡರೆ ಅವರ ಶರೀರಗಳು ನಿಮ್ಮನ್ನು ಆರ‍್ಷಕ ವಾಗಿತೋರುತ್ತವೆ. ಅವರು ಮಾತನಾಡತೊಡಗಿದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುವಿರಿ. ಅವರು ಗೋಡೆಗೆ ವರಗಿಸಲ್ಪಟ್ಟ ಮರದ ದಿಂಡು ಗಳಂತಿದ್ದಾರೆ. ಅವರು ಪ್ರತಿಯೊಂದು ಉಚ್ಛಸ್ವರವನ್ನು ತಮಗೆ ವಿರುದ್ಧವೆಂದು ಭಾವಿಸುತ್ತಾರೆ. ಇವರೇ ವೈರಿಗಳಾಗಿದ್ದಾರೆ. ಇವರಿಂದ ಜಾಗ್ರತೆ ವಹಿಸಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರೆತ್ತ ಅಲೆದಾಡಿಸಲ್ಪಡುತ್ತಾರೆ..