للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الأعراف   آية:
وَلَقَدْ ذَرَاْنَا لِجَهَنَّمَ كَثِیْرًا مِّنَ الْجِنِّ وَالْاِنْسِ ۖؗ— لَهُمْ قُلُوْبٌ لَّا یَفْقَهُوْنَ بِهَا ؗ— وَلَهُمْ اَعْیُنٌ لَّا یُبْصِرُوْنَ بِهَا ؗ— وَلَهُمْ اٰذَانٌ لَّا یَسْمَعُوْنَ بِهَا ؕ— اُولٰٓىِٕكَ كَالْاَنْعَامِ بَلْ هُمْ اَضَلُّ ؕ— اُولٰٓىِٕكَ هُمُ الْغٰفِلُوْنَ ۟
ಯಕ್ಷ ಮತ್ತು ಮನುಷ್ಯರ ಪೈಕಿಯ ಅನೇಕ ಜನರನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ ಆದರೆ ಅವುಗಳಿಂದ ಅವರು (ಸತ್ಯವನ್ನು) ಗ್ರಹಿಸಿಕೊಳ್ಳಲಾರರು. ಅವರಿಗೆ ಕಣ್ಣುಗಳಿವೆ ಆದರೆ ಅವುಗಳಿಂದ ಅವರು ನೋಡಲಾರರು ಮತ್ತು ಅವರಿಗೆ ಕಿವಿಗಳಿವೆ, ಆದರೆ ಅವುಗಳಿಂದ ಅವರು ಆಲಿಸಲಾರರು. ಅವರು ಜಾನುವಾರುಗಳಂತಿರುವರು, ಹಾಗಲ್ಲ, ಅವುಗಳಿಗಿಂತಲೂ ಹೆಚ್ಚು ದಾರಿಗೆಟ್ಟವರಾಗಿರುತ್ತಾರೆ. ಅವರೇ ಅಲಕ್ಷö್ಯರಾಗಿರುವವರಾಗಿದ್ದಾರೆ.
التفاسير العربية:
وَلِلّٰهِ الْاَسْمَآءُ الْحُسْنٰی فَادْعُوْهُ بِهَا ۪— وَذَرُوا الَّذِیْنَ یُلْحِدُوْنَ فِیْۤ اَسْمَآىِٕهٖ ؕ— سَیُجْزَوْنَ مَا كَانُوْا یَعْمَلُوْنَ ۟
ಅತ್ಯುತ್ತಮ ನಾಮಗಳು ಅಲ್ಲಾಹನಿಗೆ ಮಾತ್ರ ಇವೆ. ಆದ್ದರಿಂದ ಅವುಗಳ ಮೂಲಕ ಅಲ್ಲಾಹನನ್ನು ಕರೆದು ಪ್ರಾರ್ಥಿಸಿರಿ ಮತ್ತು ಅವನ ನಾಮಗಳಲ್ಲಿ ವಕ್ರತೆಯನ್ನು ತೋರುವವರನ್ನು ಬಿಟ್ಟು ಬಿಡಿರಿ. ಅವರಿಗೆ ಸಧ್ಯದಲ್ಲೇ ಅವರ ದುಷ್ಕೃತ್ಯಗಳ ಶಿಕ್ಷೆಯು ನೀಡಲಾಗುವುದು.
التفاسير العربية:
وَمِمَّنْ خَلَقْنَاۤ اُمَّةٌ یَّهْدُوْنَ بِالْحَقِّ وَبِهٖ یَعْدِلُوْنَ ۟۠
ನಮ್ಮ ಸೃಷ್ಟಿಗಳ ಪೈಕಿ ಸತ್ಯಕ್ಕನುಗುಣವಾಗಿ ಮಾರ್ಗದರ್ಶನವನ್ನೂ ಮಾಡುವ ಮತ್ತು ಅದಕ್ಕನುಗುಣವಾಗಿ ನ್ಯಾಯವನ್ನೂ ಪಾಲಿಸುವ ಒಂದು ಸಮುದಾಯವಿದೆ.
التفاسير العربية:
وَالَّذِیْنَ كَذَّبُوْا بِاٰیٰتِنَا سَنَسْتَدْرِجُهُمْ مِّنْ حَیْثُ لَا یَعْلَمُوْنَ ۟ۚ
ನಮ್ಮ ದೃಷ್ಟಾಂತಗಳನ್ನು ನಿರಾಕರಿಸುವವರನ್ನು ಅವರಿಗೆ ಅರಿವಾಗದಂತೆ ನಾವು ಹಂತ ಹಂತವಾಗಿ ವಿನಾಶದೆಡೆಗೆ ಕೊಂಡುಯ್ಯುತ್ತಿರುವೆವು.
التفاسير العربية:
وَاُمْلِیْ لَهُمْ ؕ— اِنَّ كَیْدِیْ مَتِیْنٌ ۟
ನಾವು ಅವರಿಗೆ ಕಾಲಾವಕಾಶ ನೀಡುತ್ತೇವೆ. ನಿಸ್ಸಂಶಯವಾಗಿಯು ನನ್ನ ತಂತ್ರವು ಅತ್ಯಂತಪ್ರಬಲವಾಗಿದೆ.
التفاسير العربية:
اَوَلَمْ یَتَفَكَّرُوْا ٚ— مَا بِصَاحِبِهِمْ مِّنْ جِنَّةٍ ؕ— اِنْ هُوَ اِلَّا نَذِیْرٌ مُّبِیْنٌ ۟
ಅವರು ತಮ್ಮ ಸಂಗಾತಿಗೆ(ಮುಹಮ್ಮದ್‌ರವರಿಗೆ) ಯಾವುದೇ ಮತಿ ಭ್ರಾಂತಿಯಿಲ್ಲ ಎಂಬ ವಿಚಾರದ ಬಗ್ಗೆ ಚಿಂತಿಸಲಿಲ್ಲವೇ? ಅವರಂತು ಒಬ್ಬ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿದ್ದಾರೆ.
التفاسير العربية:
اَوَلَمْ یَنْظُرُوْا فِیْ مَلَكُوْتِ السَّمٰوٰتِ وَالْاَرْضِ وَمَا خَلَقَ اللّٰهُ مِنْ شَیْءٍ ۙ— وَّاَنْ عَسٰۤی اَنْ یَّكُوْنَ قَدِ اقْتَرَبَ اَجَلُهُمْ ۚ— فَبِاَیِّ حَدِیْثٍ بَعْدَهٗ یُؤْمِنُوْنَ ۟
ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯದ ಕುರಿತು ಮತ್ತು ಅಲ್ಲಾಹನು ಸೃಷ್ಟಿಸಿದ ಎಲ್ಲಾ ವಸ್ತುಗಳ ಕುರಿತು ಮತ್ತು ಅವರ ಮರಣಾವಧಿಯು ಸಮೀಪ ಬಂದಿರುವುದರ ಕುರಿತು ಅವರು ಚಿಂತಿಸಲಿಲ್ಲವೇ? ಇನ್ನು ಕುರ್‌ಆನ್‌ನ ನಂತರ ಯಾವ ಗ್ರಂಥದಲ್ಲಿ ಅವರು ವಿಶ್ವಾಸವಿಡುವರು?
التفاسير العربية:
مَنْ یُّضْلِلِ اللّٰهُ فَلَا هَادِیَ لَهٗ ؕ— وَیَذَرُهُمْ فِیْ طُغْیَانِهِمْ یَعْمَهُوْنَ ۟
ಅಲ್ಲಾಹನು ಯಾರನ್ನು ದಾರಿಗೆಡಸುತ್ತಾನೋ ಅವನನ್ನು ಸನ್ಮಾರ್ಗಕ್ಕೆ ತರುವವನು ಯಾರೂ ಇಲ್ಲ ಮತ್ತು ಅಲ್ಲಾಹನು ಅವರನ್ನು ಪಥಭ್ರಷ್ಟತೆಯಲ್ಲಿ ಅಲೆದಾಡುತ್ತಿರಲು ಬಿಟ್ಟುಬಿಡುತ್ತಾನೆ.
التفاسير العربية:
یَسْـَٔلُوْنَكَ عَنِ السَّاعَةِ اَیَّانَ مُرْسٰىهَا ؕ— قُلْ اِنَّمَا عِلْمُهَا عِنْدَ رَبِّیْ ۚ— لَا یُجَلِّیْهَا لِوَقْتِهَاۤ اِلَّا هُوَ ؔؕۘ— ثَقُلَتْ فِی السَّمٰوٰتِ وَالْاَرْضِ ؕ— لَا تَاْتِیْكُمْ اِلَّا بَغْتَةً ؕ— یَسْـَٔلُوْنَكَ كَاَنَّكَ حَفِیٌّ عَنْهَا ؕ— قُلْ اِنَّمَا عِلْمُهَا عِنْدَ اللّٰهِ وَلٰكِنَّ اَكْثَرَ النَّاسِ لَا یَعْلَمُوْنَ ۟
ಅವರು ಅಂತ್ಯಘಳಿಗೆಯ ಕುರಿತು ಅದು ಯಾವಾಗ ಸಂಭವಿಸುತ್ತದೆಯೆAದು ನಿಮ್ಮೊಂದಿಗೆ ಕೇಳುತ್ತಾರೆ ಹೇಳಿರಿ: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಮಾತ್ರವಿದೆ. ಅದರ ಸಮಯವನ್ನು ಅಲ್ಲಾಹನ ಹೊರತು ಇನ್ನಾರೂ ಪ್ರಕಟಗೊಳಿಸಲಾರರು. ಅದು ಆಕಾಶಗಳಲ್ಲೂ, ಭೂಮಿಯಲ್ಲೂ ಭಯಂಕರ ಸಂಭವವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬಂದೆರಗುವುದು ಅದರ ಬಗ್ಗೆ ನಿಮಗೆ ಸದೃಢ ಜ್ಞಾನವಿದೆ ಎಂಬ ಮಟ್ಟಿನಲ್ಲಿ ನಿಮ್ಮೊಂದಿಗೆ ಅವರು ಕೇಳುತ್ತಿದ್ದಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರವಿದೆ. ಆದರೆ ಹೆಚ್ಚಿನ ಜನರು ಅರಿತುಕೊಳ್ಳುವುದಿಲ್ಲ.
التفاسير العربية:
 
ترجمة معاني سورة: الأعراف
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق