ಹಾಗಿದ್ದರೆ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು, ಮತ್ತು ನಿಶ್ಚಿತ ಅವಧಿಯವರೆಗೆ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದು ಮುಂದೂಡಲಾಗದು, ನೀವು ಅರಿಯುತ್ತಿದ್ದರೆ!
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.
التفاسير:
|
8:71
ثُمَّ اِنِّیْ دَعَوْتُهُمْ جِهَارًا ۟ۙ
ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.