Қуръони Карим маъноларининг таржимаси - الترجمة الكنادية - بشير ميسوري * - Таржималар мундарижаси


Маънолар таржимаси Сура: Нуҳ сураси   Оят:

ಸೂರ ನೂಹ್

اِنَّاۤ اَرْسَلْنَا نُوْحًا اِلٰی قَوْمِهٖۤ اَنْ اَنْذِرْ قَوْمَكَ مِنْ قَبْلِ اَنْ یَّاْتِیَهُمْ عَذَابٌ اَلِیْمٌ ۟
ಖಂಡಿತವಾಗಿಯೂ ನಾವು ನೂಹ್ರನ್ನು ಅವರ ಜನಾಂಗದೆಡೆಗೆ ನೀವು ತಮ್ಮ ಜನತೆಗೆ ವೇದನಾಜನಕ ಶಿಕ್ಷೆಯು ಅವರ ಬಳಿ ಬರುವ ಮೊದಲು ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ ಕಳುಹಿಸಿದೆವು.
Арабча тафсирлар:
قَالَ یٰقَوْمِ اِنِّیْ لَكُمْ نَذِیْرٌ مُّبِیْنٌ ۟ۙ
ನೂಹ್ರವರು ಹೇಳಿದರು; ಓ ನನ್ನ ಜನಾಂಗದವರೇ ನಾನು ನಿಮಗೆ ಸುಸ್ಪಷ್ಟ ಮುನ್ನೆಚ್ಚರಿಕೆ ಕೊಡುವವನಾಗಿದ್ದೇನೆ.
Арабча тафсирлар:
اَنِ اعْبُدُوا اللّٰهَ وَاتَّقُوْهُ وَاَطِیْعُوْنِ ۟ۙ
ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನೇ ಭಯಪಡಿರಿ ಹಾಗು ನನ್ನನ್ನು ಅನುಸರಿಸಿರಿ.
Арабча тафсирлар:
یَغْفِرْ لَكُمْ مِّنْ ذُنُوْبِكُمْ وَیُؤَخِّرْكُمْ اِلٰۤی اَجَلٍ مُّسَمًّی ؕ— اِنَّ اَجَلَ اللّٰهِ اِذَا جَآءَ لَا یُؤَخَّرُ ۘ— لَوْ كُنْتُمْ تَعْلَمُوْنَ ۟
ಹಾಗಿದ್ದರೆ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು, ಮತ್ತು ನಿಶ್ಚಿತ ಅವಧಿಯವರೆಗೆ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದು ಮುಂದೂಡಲಾಗದು, ನೀವು ಅರಿಯುತ್ತಿದ್ದರೆ!
Арабча тафсирлар:
قَالَ رَبِّ اِنِّیْ دَعَوْتُ قَوْمِیْ لَیْلًا وَّنَهَارًا ۟ۙ
ನೂಹ್ರರು ಹೇಳಿದರು; ಖಂಡಿತವಾಗಿಯೂ ನನ್ನ ಪ್ರಭೂ, ನಾನು ನನ್ನ ಜನತೆಯನ್ನು ರಾತ್ರಿ ಹಗಲೆನ್ನದೆ ಕರೆದೆನು.
Арабча тафсирлар:
فَلَمْ یَزِدْهُمْ دُعَآءِیْۤ اِلَّا فِرَارًا ۟
ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು,
Арабча тафсирлар:
وَاِنِّیْ كُلَّمَا دَعَوْتُهُمْ لِتَغْفِرَ لَهُمْ جَعَلُوْۤا اَصَابِعَهُمْ فِیْۤ اٰذَانِهِمْ وَاسْتَغْشَوْا ثِیَابَهُمْ وَاَصَرُّوْا وَاسْتَكْبَرُوا اسْتِكْبَارًا ۟ۚ
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.
Арабча тафсирлар:
ثُمَّ اِنِّیْ دَعَوْتُهُمْ جِهَارًا ۟ۙ
ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.
Арабча тафсирлар:
ثُمَّ اِنِّیْۤ اَعْلَنْتُ لَهُمْ وَاَسْرَرْتُ لَهُمْ اِسْرَارًا ۟ۙ
ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.
Арабча тафсирлар:
فَقُلْتُ اسْتَغْفِرُوْا رَبَّكُمْ ۫— اِنَّهٗ كَانَ غَفَّارًا ۟ۙ
ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.
Арабча тафсирлар:
یُّرْسِلِ السَّمَآءَ عَلَیْكُمْ مِّدْرَارًا ۟ۙ
ಹಾಗಾದರೆ ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು.
Арабча тафсирлар:
وَّیُمْدِدْكُمْ بِاَمْوَالٍ وَّبَنِیْنَ وَیَجْعَلْ لَّكُمْ جَنّٰتٍ وَّیَجْعَلْ لَّكُمْ اَنْهٰرًا ۟ؕ
ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು.
Арабча тафсирлар:
مَا لَكُمْ لَا تَرْجُوْنَ لِلّٰهِ وَقَارًا ۟ۚ
ನಿಮಗೇನಾಗಿಬಿಟ್ಟಿದೆ ? ನೀವು ಅಲ್ಲಾಹನ ಮಹಿಮೆಯಲ್ಲಿ ವಿಶ್ವಾಸವಿರಿಸುವುದಿಲ್ಲವೇಕೆ ?
Арабча тафсирлар:
وَقَدْ خَلَقَكُمْ اَطْوَارًا ۟
ವಸ್ತುತಃ ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.
Арабча тафсирлар:
اَلَمْ تَرَوْا كَیْفَ خَلَقَ اللّٰهُ سَبْعَ سَمٰوٰتٍ طِبَاقًا ۟ۙ
ಅಲ್ಲಾಹನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂಬುದನ್ನು ನೀವು ನೋಡುವುದಿಲ್ಲವೇ ?
Арабча тафсирлар:
وَّجَعَلَ الْقَمَرَ فِیْهِنَّ نُوْرًا وَّجَعَلَ الشَّمْسَ سِرَاجًا ۟
ಅವುಗಳಲ್ಲಿ ಅವನು ಚಂದ್ರನನ್ನು ಹೊಳೆಯುವುದನ್ನಾಗಿಯು, ಸರ‍್ಯನನ್ನು ಒಂದು ಪ್ರಕಾಶಮಯ ದೀಪವನ್ನಾಗಿ ಉಂಟು ಮಾಡಿದನು.
Арабча тафсирлар:
وَاللّٰهُ اَنْۢبَتَكُمْ مِّنَ الْاَرْضِ نَبَاتًا ۟ۙ
ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಸಸ್ಯಗಳಂತೆ (ವಿಶೇಷರೀತಿಯಲ್ಲಿ) ಬೆಳೆಸಿದನು
Арабча тафсирлар:
ثُمَّ یُعِیْدُكُمْ فِیْهَا وَیُخْرِجُكُمْ اِخْرَاجًا ۟
ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.
Арабча тафсирлар:
وَاللّٰهُ جَعَلَ لَكُمُ الْاَرْضَ بِسَاطًا ۟ۙ
ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿರುವನು,
Арабча тафсирлар:
لِّتَسْلُكُوْا مِنْهَا سُبُلًا فِجَاجًا ۟۠
ಏಕೆಂದರೆ, ನೀವು ಅದರ ವಿಶಾಲವಾಗಿರುವ ಮರ‍್ಗಗಳಲ್ಲಿ ಸಂಚರಿಸಲೆಂದಾಗಿದೆ.
Арабча тафсирлар:
قَالَ نُوْحٌ رَّبِّ اِنَّهُمْ عَصَوْنِیْ وَاتَّبَعُوْا مَنْ لَّمْ یَزِدْهُ مَالُهٗ وَوَلَدُهٗۤ اِلَّا خَسَارًا ۟ۚ
ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು.
Арабча тафсирлар:
وَمَكَرُوْا مَكْرًا كُبَّارًا ۟ۚ
ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದ್ದಾರೆ.
Арабча тафсирлар:
وَقَالُوْا لَا تَذَرُنَّ اٰلِهَتَكُمْ وَلَا تَذَرُنَّ وَدًّا وَّلَا سُوَاعًا ۙ۬— وَّلَا یَغُوْثَ وَیَعُوْقَ وَنَسْرًا ۟ۚ
ಅವರು ಹೇಳಿದರು; ನೀವು ಎಂದಿಗೂ ನಿಮ್ಮ ಆರಾಧ್ಯರನ್ನು ಬಿಡಬೇಡಿರಿ, ವದ್ದ್ನನ್ನಾಗಲಿ, ಸುವಾಅï, ಯಗೂಸ್, ಯಊಕ್, ನಸ್ರ‍್ರÀನ್ನಾಗಲಿ (ಬಿಡದಿರಿ).
Арабча тафсирлар:
وَقَدْ اَضَلُّوْا كَثِیْرًا ۚ۬— وَلَا تَزِدِ الظّٰلِمِیْنَ اِلَّا ضَلٰلًا ۟
ಅವರು (ಆ ವಿಗ್ರಹಗಳು) ಅನೇಕ ಜನರನ್ನು ದಾರಿಗೆಡಿಸಿದ್ದಾರೆ, ನೀನು ಆ ಅಕ್ರಮಿಗಳಿಗೆ ಮರ‍್ಗಭ್ರಷ್ಟತೆಯನ್ನಲ್ಲದೇ ಇನ್ನೇನನ್ನೂ ಹೆಚ್ಚಿಸಬೇಡ.
Арабча тафсирлар:
مِمَّا خَطِیْٓـٰٔتِهِمْ اُغْرِقُوْا فَاُدْخِلُوْا نَارًا ۙ۬— فَلَمْ یَجِدُوْا لَهُمْ مِّنْ دُوْنِ اللّٰهِ اَنْصَارًا ۟
ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು ಅವರಿಗೆ ತಮ್ಮ ಸಹಾಯಕರಾಗಿ ಯಾರೂ ಸಿಗಲಿಲ್ಲ.
Арабча тафсирлар:
وَقَالَ نُوْحٌ رَّبِّ لَا تَذَرْ عَلَی الْاَرْضِ مِنَ الْكٰفِرِیْنَ دَیَّارًا ۟
ನೂಹ್ರವರು ಹೇಳಿದರು; ನನ್ನ ಪ್ರಭು, ಭೂಮುಖದ ಮೇಲೆ ಯಾವೊಬ್ಬ ಸತ್ಯನಿಷೇಧಿಯನ್ನೂ ಬಿಡಬೇಡ.
Арабча тафсирлар:
اِنَّكَ اِنْ تَذَرْهُمْ یُضِلُّوْا عِبَادَكَ وَلَا یَلِدُوْۤا اِلَّا فَاجِرًا كَفَّارًا ۟
ಖಂಡಿತ ನೀನು ಅವರನ್ನು ಹಾಗೇ ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮುಂದೆ ಅವರು ಸತ್ಯನಿಷೇಧಿಗಳಾದ ದುರಾಚಾರಿಗಳನ್ನೇ ಜನ್ಮನೀಡುವರು.
Арабча тафсирлар:
رَبِّ اغْفِرْ لِیْ وَلِوَالِدَیَّ وَلِمَنْ دَخَلَ بَیْتِیَ مُؤْمِنًا وَّلِلْمُؤْمِنِیْنَ وَالْمُؤْمِنٰتِ ؕ— وَلَا تَزِدِ الظّٰلِمِیْنَ اِلَّا تَبَارًا ۟۠
ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು.
Арабча тафсирлар:
 
Маънолар таржимаси Сура: Нуҳ сураси
Суралар мундарижаси Бет рақами
 
Қуръони Карим маъноларининг таржимаси - الترجمة الكنادية - بشير ميسوري - Таржималар мундарижаси

ترجمة معاني القرآن الكريم إلى اللغة الكنادية ترجمها بشير ميسوري.

Ёпиш