Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আন-নিছা   আয়াত:
وَمَا كَانَ لِمُؤْمِنٍ اَنْ یَّقْتُلَ مُؤْمِنًا اِلَّا خَطَأً ۚ— وَمَنْ قَتَلَ مُؤْمِنًا خَطَأً فَتَحْرِیْرُ رَقَبَةٍ مُّؤْمِنَةٍ وَّدِیَةٌ مُّسَلَّمَةٌ اِلٰۤی اَهْلِهٖۤ اِلَّاۤ اَنْ یَّصَّدَّقُوْا ؕ— فَاِنْ كَانَ مِنْ قَوْمٍ عَدُوٍّ لَّكُمْ وَهُوَ مُؤْمِنٌ فَتَحْرِیْرُ رَقَبَةٍ مُّؤْمِنَةٍ ؕ— وَاِنْ كَانَ مِنْ قَوْمٍ بَیْنَكُمْ وَبَیْنَهُمْ مِّیْثَاقٌ فَدِیَةٌ مُّسَلَّمَةٌ اِلٰۤی اَهْلِهٖ وَتَحْرِیْرُ رَقَبَةٍ مُّؤْمِنَةٍ ۚ— فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ ؗ— تَوْبَةً مِّنَ اللّٰهِ ؕ— وَكَانَ اللّٰهُ عَلِیْمًا حَكِیْمًا ۟
ಒಬ್ಬ ಸತ್ಯವಿಶ್ವಾಸಿಯನ್ನು ವಧಿಸುವುದು ಪ್ರಮಾದದ ಹೊರತು ಭೂಷಣವಲ್ಲ. ಪ್ರಮಾದವಶಾತ್ ಯಾರಾದರೂ ಒಬ್ಬ ಸತ್ಯವಿಶ್ವಾಸಿಯನ್ನು ವಧಿಸಿಬಿಟ್ಟರೆ ಪ್ರಾಯಶ್ಚಿತವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಬಿಡುಗಡೆಗೊಳಿಸಬೇಕು. ಮತ್ತು ಅವನ (ಹತನಾದವನ) ಕುಟುಂಬದವರಿಗೆ ಪರಿಹಾರ ಧನವನ್ನು ನೀಡಬೇಕು. ಆದರೆ ಅವರು ಕುಟುಂಬದವರು ಅದನ್ನು ದಾನವಾಗಿ ಬಿಟ್ಟುಕೊಡುವುದಾದರೆ ಬೇರೆ ವಿಚಾರ ಮತ್ತು ಕೊಲೆಗೀಡಾದವನು ನಿಮ್ಮ ಶತ್ರು ಸಮೂಹದವನಾಗಿದ್ದು, ಅವನು ವಿಶ್ವಾಸಿಯಾಗಿದ್ದರೆ ಕೇವಲ ಸತ್ಯವಿಶ್ವಾಸಿಯಾದ ಓರ್ವ ಗುಲಾಮನನ್ನು ಬಿಡುಗಡೆ ಗೊಳಿಸುವುದು ಕಡ್ಡಾಯವಾಗಿದೆ. ಇನ್ನು ಅವನು (ಕೊಲೆಗೀಡಾದವನು) ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಸಮೂಹದವನಾಗಿದ್ದರೆ ಪರಿಹಾರಧನ ಕಡ್ಡಾಯವಾಗಿದೆ. ಮತ್ತು ಅವನ ವಾರೀಸುದಾರರಿಗೆ ಅದನ್ನು ನೀಡಬೇಕು. ಮತ್ತು ಒಬ್ಬ ವಿಶ್ವಾಸಿಯಾದ ಗುಲಾಮನನ್ನು ಬಿಡುಗಡೆಗೊಳಿಸಬೇಕಾಗಿದೆ. ಇನ್ನು ಯಾರಿಗಾದರು ಅದರ ಸಾಮರ್ಥ್ಯವಿಲ್ಲದಿದ್ದರೆ ಅವನ ಮೇಲೆ ನಿರಂತರ ಎರಡು ತಿಂಗಳು ಉಪವಾಸ ಆಚರಿಸುವ ಹೊಣೆಯಿದೆ. ಇದು ಅಲ್ಲಾಹನಿಂದ ಕ್ಷಮೆ ಸಿಗಲೆಂದಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
আৰবী তাফছীৰসমূহ:
وَمَنْ یَّقْتُلْ مُؤْمِنًا مُّتَعَمِّدًا فَجَزَآؤُهٗ جَهَنَّمُ خَلِدًا فِیْهَا وَغَضِبَ اللّٰهُ عَلَیْهِ وَلَعَنَهٗ وَاَعَدَّ لَهٗ عَذَابًا عَظِیْمًا ۟
ಯಾರಾದರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ಕೊಂದರೆ ಅವನಿಗಿರುವ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಶಾಶ್ವತವಾಗಿರುವನು. ಅವನ ಮೆಲೆ ಅಲ್ಲಾಹನ ಕ್ರೋಧ ಹಾಗೂ ಶಾಪವಿದೆ. ಅವನನ್ನು ಅಲ್ಲಾಹನು ಶಪಿಸುವನು ಮತ್ತು ಅವನಿಗೋಸ್ಕರ ಅಲ್ಲಾಹನು ಮಹಾಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْۤا اِذَا ضَرَبْتُمْ فِیْ سَبِیْلِ اللّٰهِ فَتَبَیَّنُوْا وَلَا تَقُوْلُوْا لِمَنْ اَلْقٰۤی اِلَیْكُمُ السَّلٰمَ لَسْتَ مُؤْمِنًا ۚ— تَبْتَغُوْنَ عَرَضَ الْحَیٰوةِ الدُّنْیَا ؗ— فَعِنْدَ اللّٰهِ مَغَانِمُ كَثِیْرَةٌ ؕ— كَذٰلِكَ كُنْتُمْ مِّنْ قَبْلُ فَمَنَّ اللّٰهُ عَلَیْكُمْ فَتَبَیَّنُوْا ؕ— اِنَّ اللّٰهَ كَانَ بِمَا تَعْمَلُوْنَ خَبِیْرًا ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನ ಮಾರ್ಗದಲ್ಲಿ ಪ್ರಯಾಣಕ್ಕೆ ಹೊರಟರೆ ಮತ್ತು ಯಾರಾದರೂ ನಿಮಗೆ ಸಲಾಮ್ ಹೇಳಿದರೆ ಅವನೊಂದಿಗೆ ನೀನು ವಿಶ್ವಾಸಿಯಲ್ಲ ಎಂದು ಹೇಳಬೇಡಿರಿ. ನೀವು ಐಹಿಕ ಜೀವನೋಪಾಯಗಳನ್ನು ಬಯಸುತ್ತಿದ್ದರೆ ಅಲ್ಲಾಹನ ಬಳಿ ಧಾರಾಳ ಸಂಪತ್ತುಗಳಿವೆ. ಈ ಮುಂಚೆ ನೀವು ಸಹ ಅವಿಶ್ವಾಸಿಗಳಾಗಿದ್ದೀರಿ. ಅನಂತರ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದನು. ಆದ್ದರಿಂದ ನೀವು ತನಿಖೆ ಮಾಡಿ ತಿಳಿದುಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಸೂಕ್ಷö್ಮ ಅರಿವುಳ್ಳನಾಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আন-নিছা
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ