Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-আনআম   আয়াত:
اِنَّمَا یَسْتَجِیْبُ الَّذِیْنَ یَسْمَعُوْنَ ؔؕ— وَالْمَوْتٰی یَبْعَثُهُمُ اللّٰهُ ثُمَّ اِلَیْهِ یُرْجَعُوْنَ ۟
ಮನಃ ಪೂರ್ವಕವಾಗಿ ಆಲಿಸುವವರು ಮಾತ್ರ ಓಗೊಡುತ್ತಾರೆ ಮತ್ತು ಮೃತರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವನು. ನಂತರ ಎಲ್ಲರೂ ಅವನೆಡೆಗೇ ಮರಳಿಸಲಾಗುವರು.
আৰবী তাফছীৰসমূহ:
وَقَالُوْا لَوْلَا نُزِّلَ عَلَیْهِ اٰیَةٌ مِّنْ رَّبِّهٖ ؕ— قُلْ اِنَّ اللّٰهَ قَادِرٌ عَلٰۤی اَنْ یُّنَزِّلَ اٰیَةً وَّلٰكِنَّ اَكْثَرَهُمْ لَا یَعْلَمُوْنَ ۟
ಇವರ ಮೇಲೆ ಇವರ ಪ್ರಭುವಿನ ವತಿಯಿಂದ ಯಾವುದಾದರೂ ದೃಷ್ಟಾಂತವೇಕೆ ಇಳಿಸಲಾಗುವುದಿಲ್ಲ ಎಂದು ಅವರು ಕೇಳುತ್ತಾರೆ. ನೀವು ಹೇಳಿರಿ: ನಿಸ್ಸಂಶಯವಾಗಿಯು ದೃಷ್ಟಾಂತವನ್ನು (ಕುರುಹು) ಇಳಿಸಲು ಅಲ್ಲಾಹನು ಸರ್ವ ಸಮರ್ಥನಿದ್ದಾನೆ. ಆದರೆ ಅವರ ಪೈಕಿ ಹೆಚ್ಚಿನವರು ಅರಿತುಕೊಳ್ಳುವುದಿಲ್ಲ.
আৰবী তাফছীৰসমূহ:
وَمَا مِنْ دَآبَّةٍ فِی الْاَرْضِ وَلَا طٰٓىِٕرٍ یَّطِیْرُ بِجَنَاحَیْهِ اِلَّاۤ اُمَمٌ اَمْثَالُكُمْ ؕ— مَا فَرَّطْنَا فِی الْكِتٰبِ مِنْ شَیْءٍ ثُمَّ اِلٰی رَبِّهِمْ یُحْشَرُوْنَ ۟
ಭೂಮಿಯಲ್ಲಿ ಚಲಿಸುತ್ತಿರುವ ಜೀವಿಗಳು, ಎರಡು ರೆಕ್ಕೆಗಳಿಂದ ಹಾರಾಡುತ್ತಿರುವ ಹಕ್ಕಿಗಳು ನಿಮ್ಮಂತಹ ವರ್ಗಗಳಾಗಿವೆ. ಗ್ರಂಥದಲ್ಲಿ ನಾವು ಯಾವುದನ್ನೂ ದಾಖಲಿಸದೇ ಬಿಟ್ಟಿಲ್ಲ. ನಂತರ ಅವರೆಲ್ಲರೂ ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲಾಗುವರು.
আৰবী তাফছীৰসমূহ:
وَالَّذِیْنَ كَذَّبُوْا بِاٰیٰتِنَا صُمٌّ وَّبُكْمٌ فِی الظُّلُمٰتِ ؕ— مَنْ یَّشَاِ اللّٰهُ یُضْلِلْهُ ؕ— وَمَنْ یَّشَاْ یَجْعَلْهُ عَلٰی صِرَاطٍ مُّسْتَقِیْمٍ ۟
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವರೋ ಅವರು ಕಿವುಡರೂ, ಮೂಕರೂ ಮತ್ತು ಅಂಧಕಾರಗಳಲ್ಲಿ ಅಲೆದಾಡುತ್ತಿದ್ದಾರೆ. ಅಲ್ಲಾಹನು ತಾನು ಇಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ.
আৰবী তাফছীৰসমূহ:
قُلْ اَرَءَیْتَكُمْ اِنْ اَتٰىكُمْ عَذَابُ اللّٰهِ اَوْ اَتَتْكُمُ السَّاعَةُ اَغَیْرَ اللّٰهِ تَدْعُوْنَ ۚ— اِنْ كُنْتُمْ صٰدِقِیْنَ ۟
ಹೇಳಿರಿ: ಒಂದಿಷ್ಟು ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಕೊನೆ ಘಳಿಗೆ (ಪ್ರಳಯ) ನಿಮ್ಮ ಮೇಲೆ ಬಂದೆರಗಿದರೆ ಅಲ್ಲಾಹನ ಹೊರತು ಇತರರನ್ನೇ ನೀವು ಕರೆದು ಪ್ರಾರ್ಥಿಸುವಿರಾ? ನೀವು ಸತ್ಯಸಂಧರಾಗಿದ್ದರೆ ಹೇಳಿರಿ.
আৰবী তাফছীৰসমূহ:
بَلْ اِیَّاهُ تَدْعُوْنَ فَیَكْشِفُ مَا تَدْعُوْنَ اِلَیْهِ اِنْ شَآءَ وَتَنْسَوْنَ مَا تُشْرِكُوْنَ ۟۠
ಇಲ್ಲ, ನೀವು ಅವನನ್ನು ಮಾತ್ರ ಕರೆದು ಪ್ರಾರ್ಥಿಸುವಿರಿ. ನಂತರ ನೀವು ಯಾವುದಕ್ಕಾಗಿ ಪ್ರಾರ್ಥಿಸುವಿರೋ ಅವನಿಚ್ಛಿಸಿದರೆ ಅದನ್ನು ನೀಗಿಸಬಹುದು ಮತ್ತು ಆಗ ನೀವು ಅಲ್ಲಾಹನ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದವರನ್ನೆಲ್ಲಾ ಮರೆತುಬಿಡುವಿರಿ.
আৰবী তাফছীৰসমূহ:
وَلَقَدْ اَرْسَلْنَاۤ اِلٰۤی اُمَمٍ مِّنْ قَبْلِكَ فَاَخَذْنٰهُمْ بِالْبَاْسَآءِ وَالضَّرَّآءِ لَعَلَّهُمْ یَتَضَرَّعُوْنَ ۟
ನಿಮಗಿಂತ ಮುಂಚೆ ಗತಸಮುದಾಯಗಳೆಡೆಗೂ ನಾವು ಸಂದೇಶವಾಹಕರನ್ನು ನಿಯೋಗಿಸಿದ್ದೇವೆ. ಅವರು ದೈನ್ಯತೆಯನ್ನು ತೋರಲೆಂದು ನಾವು (ಅವರ ಪಾಪಗಳ ನಿಮಿತ್ತ) ಅವರನ್ನು ಸಂಕಷ್ಟ ಮತ್ತು ರೋಗರುಜಿನಗಳಿಗೆ ಸಿಲುಕಿಸಿದೆವು.
আৰবী তাফছীৰসমূহ:
فَلَوْلَاۤ اِذْ جَآءَهُمْ بَاْسُنَا تَضَرَّعُوْا وَلٰكِنْ قَسَتْ قُلُوْبُهُمْ وَزَیَّنَ لَهُمُ الشَّیْطٰنُ مَا كَانُوْا یَعْمَلُوْنَ ۟
ಹಾಗೆಯೇ ಅವರಿಗೆ ನಮ್ಮ ಶಿಕ್ಷೆಯು ಬಂದಾಗ ಅವರೇಕೆ ದೈನ್ಯತೆ ತೋರಿಸಲಿಲ್ಲ? ಆದರೆ ಅವರ ಹೃದಯಗಳು ಕಠೋರಗೊಂಡವು ಮತ್ತು ಶೈತಾನನು ಅವರ ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಿದನು.
আৰবী তাফছীৰসমূহ:
فَلَمَّا نَسُوْا مَا ذُكِّرُوْا بِهٖ فَتَحْنَا عَلَیْهِمْ اَبْوَابَ كُلِّ شَیْءٍ ؕ— حَتّٰۤی اِذَا فَرِحُوْا بِمَاۤ اُوْتُوْۤا اَخَذْنٰهُمْ بَغْتَةً فَاِذَا هُمْ مُّبْلِسُوْنَ ۟
ಅನಂತರ ಅವರು ತಮಗೆ ಉಪದೇಶ ನೀಡಲಾಗುತ್ತಿದ್ದಂತಹ ವಿಚಾರಗಳನ್ನು ಮರೆತು ಬಿಟ್ಟಾಗ ನಾವು ಅವರಿಗೆ ಸರ್ವ ಶ್ರೇಯಸ್ಸಿನ ದ್ವಾರಗಳನ್ನು ತೆರೆದು ಕೊಟ್ಟೆವು. ಅವರು ತಮಗೆ ನೀಡಲಾದುದರಲ್ಲಿ ಆನಂದ ತುಂದಿಲರಾಗಿ ಮೆರೆಯುತ್ತಿರುವಾಗ ಹಠಾತ್ತನೆ ನಾವು ಅವರನ್ನು ಹಿಡಿದು ಬಿಟ್ಟವು. ನಂತರ ಅವರು ನಿರಾಶರಾದರು.
আৰবী তাফছীৰসমূহ:
 
অৰ্থানুবাদ ছুৰা: আল-আনআম
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ