Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-আনআম   আয়াত:
هَلْ یَنْظُرُوْنَ اِلَّاۤ اَنْ تَاْتِیَهُمُ الْمَلٰٓىِٕكَةُ اَوْ یَاْتِیَ رَبُّكَ اَوْ یَاْتِیَ بَعْضُ اٰیٰتِ رَبِّكَ ؕ— یَوْمَ یَاْتِیْ بَعْضُ اٰیٰتِ رَبِّكَ لَا یَنْفَعُ نَفْسًا اِیْمَانُهَا لَمْ تَكُنْ اٰمَنَتْ مِنْ قَبْلُ اَوْ كَسَبَتْ فِیْۤ اِیْمَانِهَا خَیْرًا ؕ— قُلِ انْتَظِرُوْۤا اِنَّا مُنْتَظِرُوْنَ ۟
ಅವರು ತಮ್ಮ ಬಳಿಗೆ ದೂತರು ಬರುವುದನ್ನು ಅಥವಾ ತಮ್ಮ ಪ್ರಭು ಅವರ ಬಳಿಗೆ ಬರುವುದನ್ನು ಅಥವಾ ತಮ್ಮ ಪ್ರಭುವಿನ ಯಾವುದಾದರೂ (ದೊಡ್ಡ) ದೃಷ್ಟಾಂತವು ಬರುವುದನ್ನೇ ಕಾಯುತ್ತಿದ್ದಾರೆಯೇ? ತಮ್ಮ ಪ್ರಭುವಿನ ಯಾವುದಾದರೂ ಒಂದು ದೃಷ್ಟಾಂತವು ಬರುವ ದಿನದಂದು ಮೊದಲಿಂದಲೇ ವಿಶ್ವಾಸವಿದ್ದವನ ಅಥವ ತನ್ನ ವಿಶ್ವಾಸದೊಂದಿಗೆ ಯಾವ ಒಳಿತನ್ನು ಮಾಡಿಲ್ಲದವನ ವಿಶ್ವಾಸವು ಅವನಿಗೆ ಯಾವ ಪ್ರಯೋಜನಕ್ಕೂ ಬಾರದು. ಹೇಳಿರಿ: ನೀವು ಕಾಯುತ್ತಿರಿ. ನಾವೂ ಕಾಯುತ್ತಿದ್ದೇವೆ.
আৰবী তাফছীৰসমূহ:
اِنَّ الَّذِیْنَ فَرَّقُوْا دِیْنَهُمْ وَكَانُوْا شِیَعًا لَّسْتَ مِنْهُمْ فِیْ شَیْءٍ ؕ— اِنَّمَاۤ اَمْرُهُمْ اِلَی اللّٰهِ ثُمَّ یُنَبِّئُهُمْ بِمَا كَانُوْا یَفْعَلُوْنَ ۟
(ಓ ಪೈಗಂಬರರೇ) ನಿಸ್ಸಂಶಯವಾಗಿಯು ತಮ್ಮ ಧರ್ಮವನ್ನು ವಿಭಜಿಸಿ ವಿವಿಧ ಪಂಗಡಗಳಾಗಿ ಬೇರ್ಪಟ್ಟವರೊಡನೆ ನಿಮಗೆ ಯಾವುದೇ ಸಂಬAಧವಿಲ್ಲ. ಅವರ ಪ್ರಕರಣ ಅಲ್ಲಾಹನ ಬಳಿಯಲ್ಲಿದೆ. ಅನಂತರ ಅವನು ಅವರಿಗೆ ಅವರ ಕೃತ್ಯಗಳನ್ನು ತಿಳಿಸಿಕೊಡಲಿದ್ದಾನೆ.
আৰবী তাফছীৰসমূহ:
مَنْ جَآءَ بِالْحَسَنَةِ فَلَهٗ عَشْرُ اَمْثَالِهَا ۚ— وَمَنْ جَآءَ بِالسَّیِّئَةِ فَلَا یُجْزٰۤی اِلَّا مِثْلَهَا وَهُمْ لَا یُظْلَمُوْنَ ۟
ಯಾರು ಒಳಿತು ಮಾಡುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಕೆಡುಕನ್ನು ಮಾಡುತ್ತಾನೋ ಅವನಿಗೆ ಅದರಷ್ಟೇ ಶಿಕ್ಷೆಯು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾರದು.
আৰবী তাফছীৰসমূহ:
قُلْ اِنَّنِیْ هَدٰىنِیْ رَبِّیْۤ اِلٰی صِرَاطٍ مُّسْتَقِیْمٍ ۚ۬— دِیْنًا قِیَمًا مِّلَّةَ اِبْرٰهِیْمَ حَنِیْفًا ۚ— وَمَا كَانَ مِنَ الْمُشْرِكِیْنَ ۟
ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ. ಅಲ್ಲಾಹನಿಗೆ ಏಕನಿಷ್ಠನಾದ ಇಬ್ರಾಹೀಮರ ಧರ್ಮವಾಗಿದೆ ಮತ್ತು ಅವರು ದೇವಸಹಭಾಗಿತ್ವ ನಿಶ್ಚಯಿಸುವವರಲ್ಲಿ ಸೇರಿರಲಿಲ್ಲ.
আৰবী তাফছীৰসমূহ:
قُلْ اِنَّ صَلَاتِیْ وَنُسُكِیْ وَمَحْیَایَ وَمَمَاتِیْ لِلّٰهِ رَبِّ الْعٰلَمِیْنَ ۟ۙ
ಹೇಳಿರಿ: ಖಂಡಿತವಾಗಿಯು ನನ್ನ ನಮಾಝ್, ನನ್ನ ಸಕಲ ಆರಾಧನೆಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗಾಗಿದೆ.
আৰবী তাফছীৰসমূহ:
لَا شَرِیْكَ لَهٗ ۚ— وَبِذٰلِكَ اُمِرْتُ وَاَنَا اَوَّلُ الْمُسْلِمِیْنَ ۟
ಅವನಿಗೆ ಯಾರೂ ಸಹಭಾಗಿಗಳಿಲ್ಲ ಮತ್ತು ನನಗೆ ಇದನ್ನೇ ಆಜ್ಞಾಪಿಸಲಾಗಿದೆ ಮತ್ತು ವಿಧೇಯರಾಗುವವರ ಪೈಕಿ ನಾನು ಮೊದಲಿಗನಾಗಿರುವೆನು.
আৰবী তাফছীৰসমূহ:
قُلْ اَغَیْرَ اللّٰهِ اَبْغِیْ رَبًّا وَّهُوَ رَبُّ كُلِّ شَیْءٍ ؕ— وَلَا تَكْسِبُ كُلُّ نَفْسٍ اِلَّا عَلَیْهَا ۚ— وَلَا تَزِرُ وَازِرَةٌ وِّزْرَ اُخْرٰی ۚ— ثُمَّ اِلٰی رَبِّكُمْ مَّرْجِعُكُمْ فَیُنَبِّئُكُمْ بِمَا كُنْتُمْ فِیْهِ تَخْتَلِفُوْنَ ۟
ಹೇಳಿರಿ: ಅಲ್ಲಾಹನೇ, ಸರ್ವ ವಸ್ತುಗಳ ಒಡೆಯನಾಗಿರುವಾಗ ಅವನ ಹೊರತು ಇತರರನ್ನು ನಾನು ಪ್ರಭುವನ್ನಾಗಿ ಅರಸುವುದೇ? ಪ್ರತಿಯೊಬ್ಬನೂ ತಾನು ಮಾಡಿರುವುದಕ್ಕೆ ತಾನೇ ಹೊಣೆಗಾರನಾಗಿದ್ದಾನೆ. ಮತ್ತು ಯಾವೊಬ್ಬ ಭಾರ ಹೊರುವವನು ಇನ್ನೊಬ್ಬನ ಭಾರವನ್ನು ಹೊರಲಾರನು. ಅನಂತರ ನಿಮೆಲ್ಲರಿಗೂ ನಿಮ್ಮ ಪ್ರಭುವಿನೆಡೆಗೆ ಮರಳಲಿಕ್ಕಿದೆ. ತರುವಾಯ ಅವನು ನೀವು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು.
আৰবী তাফছীৰসমূহ:
وَهُوَ الَّذِیْ جَعَلَكُمْ خَلٰٓىِٕفَ الْاَرْضِ وَرَفَعَ بَعْضَكُمْ فَوْقَ بَعْضٍ دَرَجٰتٍ لِّیَبْلُوَكُمْ فِیْ مَاۤ اٰتٰىكُمْ ؕ— اِنَّ رَبَّكَ سَرِیْعُ الْعِقَابِ ۖؗۗ— وَاِنَّهٗ لَغَفُوْرٌ رَّحِیْمٌ ۟۠
ಮತ್ತು ಅವನೇ ನಿಮ್ಮನ್ನು ಭೂಮಿಯಲ್ಲಿ (ಪೂರ್ವಿಕರ) ಉತ್ತರಾಧಿಕಾರಿಗಳನ್ನಾಗಿ ಮಾಡಿದವನು ಮತ್ತು ಅವನು ನಿಮಗೆ ಅನುಗ್ರಹ (ಅರ್ಹತೆಗಳನ್ನು) ನೀಡುವುದರಲ್ಲಿ ಪರೀಕ್ಷಿಸಲೆಂದು ನಿಮ್ಮಲ್ಲಿ ಕೆಲವರಿಗೆ ಬೇರೆ ಕೆಲವರಿಗಿಂತ ಉನ್ನತ ಪದವಿಗಳನ್ನು ನೀಡಿದನು. ಖಂಡಿತವಾಗಿಯು ನಿಮ್ಮ ಪ್ರಭು ಶೀಘ್ರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಖಂಡಿತವಾಗಿಯು ಅವನು ಅತ್ಯಧಿಕವಾಗಿ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আল-আনআম
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ