Check out the new design

Prijevod značenja časnog Kur'ana - Prijevod na kannada jezik (južno indijski jezik) - Bešir Misuri * - Sadržaj prijevodā


Prijevod značenja Sura: El-Bekara   Ajet:
وَلَا تَقُوْلُوْا لِمَنْ یُّقْتَلُ فِیْ سَبِیْلِ اللّٰهِ اَمْوَاتٌ ؕ— بَلْ اَحْیَآءٌ وَّلٰكِنْ لَّا تَشْعُرُوْنَ ۟
ನೀವು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು ಮೃತರೆಂದು ಹೇಳಬೇಡಿರಿ. ಅವರು ಜೀವಂತವಾಗಿದ್ದಾರೆ. ಆದರೆ ನೀವು (ಅವರ ಜೀವನವನ್ನು) ಗ್ರಹಿಸಲಾರಿರಿ.
Tefsiri na arapskom jeziku:
وَلَنَبْلُوَنَّكُمْ بِشَیْءٍ مِّنَ الْخَوْفِ وَالْجُوْعِ وَنَقْصٍ مِّنَ الْاَمْوَالِ وَالْاَنْفُسِ وَالثَّمَرٰتِ ؕ— وَبَشِّرِ الصّٰبِرِیْنَ ۟ۙ
ಒಂದಲ್ಲ ಒಂದು ಬಗೆಯ ಭಯ, ಶಂಕೆ, ಹಸಿವು ಮತ್ತು ಸೊತ್ತು ಸಂಪತ್ತುಗಳ ನಷ್ಟ ಹಾಗೂ ಪ್ರಾಣಹಾನಿಗಳ ಮೂಲಕವು ಹಾಗೂ ಫಲೊತ್ಪಾದನೆಗಳ ಕೊರತೆಯ ಮೂಲಕವೂ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸುತ್ತೇವೆ. ಮತ್ತು ಇಂತಹಾ ಪರಿಸ್ಥಿತಿಯಲ್ಲಿ ಸಹನಶೀಲರಾಗಿರುವವರಿಗೆ ನೀವು ಸುವಾರ್ತೆಯನ್ನೀಡಿರಿ.
Tefsiri na arapskom jeziku:
الَّذِیْنَ اِذَاۤ اَصَابَتْهُمْ مُّصِیْبَةٌ ۙ— قَالُوْۤا اِنَّا لِلّٰهِ وَاِنَّاۤ اِلَیْهِ رٰجِعُوْنَ ۟ؕ
ಇಂತಹವರೇ ತಮಗೆ ವಿಪತ್ತು ಬಾಧಿಸಿದಾಗ ನಾವು ಅಲ್ಲಾಹನ ಅಧೀನಕ್ಕೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳುವವರಿದ್ದೇವೆ ಎಂದು ಹೇಳುತ್ತಾರೆ.
Tefsiri na arapskom jeziku:
اُولٰٓىِٕكَ عَلَیْهِمْ صَلَوٰتٌ مِّنْ رَّبِّهِمْ وَرَحْمَةٌ ۫— وَاُولٰٓىِٕكَ هُمُ الْمُهْتَدُوْنَ ۟
ಇಂತವರ ಮೇಲೆ ತಮ್ಮ ಪ್ರಭುವಿನ ಅನುಗ್ರಹಗಳು ಮತ್ತು ಕಾರುಣ್ಯವು ಇರುವುದು. ಮತ್ತು ಇವರೇ ಸನ್ಮಾರ್ಗ ಪ್ರಾಪ್ತರಾಗಿದ್ದವರಾಗಿದ್ದಾರೆ.
Tefsiri na arapskom jeziku:
اِنَّ الصَّفَا وَالْمَرْوَةَ مِنْ شَعَآىِٕرِ اللّٰهِ ۚ— فَمَنْ حَجَّ الْبَیْتَ اَوِ اعْتَمَرَ فَلَا جُنَاحَ عَلَیْهِ اَنْ یَّطَّوَّفَ بِهِمَا ؕ— وَمَنْ تَطَوَّعَ خَیْرًا ۙ— فَاِنَّ اللّٰهَ شَاكِرٌ عَلِیْمٌ ۟
ನಿಶ್ಚಯವಾಗಿ ಸಫಾ ಮತ್ತು ಮರ್ವಾ ಅಲ್ಲಾಹನ ಲಾಂಛನಗಳಲ್ಲಿ ಸೇರಿವೆ ಆದ್ದರಿಂದ ಪವಿತ್ರ ಕಾಬಾ (ಕಾಬಾಭವನ) ದ ಹಜ್ಜ್ ಮತ್ತು ಉಮ್ರಾ ಕೈಗೊಳ್ಳುವವನ ಮೇಲೆ ಅವುಗಳ ಪ್ರದಕ್ಷಣೆ ಮಾಡುವುದರಿಂದ ಯಾವ ದೋಷವು ಇರುವುದಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡುವವರ ಪಾಲಿಗೆ ಅಲ್ಲಾಹನು ಮೆಚ್ಚುವವನೂ ಸರ್ವಜ್ಞನೂ ಆಗಿದ್ದಾನೆ.
Tefsiri na arapskom jeziku:
اِنَّ الَّذِیْنَ یَكْتُمُوْنَ مَاۤ اَنْزَلْنَا مِنَ الْبَیِّنٰتِ وَالْهُدٰی مِنْ بَعْدِ مَا بَیَّنّٰهُ لِلنَّاسِ فِی الْكِتٰبِ ۙ— اُولٰٓىِٕكَ یَلْعَنُهُمُ اللّٰهُ وَیَلْعَنُهُمُ اللّٰعِنُوْنَ ۟ۙ
ನಾವು ಅವತೀರ್ಣಗೊಳಿಸಿದಂತಹ ನಮ್ಮ ಸುಸ್ಪಷ್ಟ ಪುರಾವೆ ಹಾಗೂ ಮಾರ್ಗದರ್ಶನವನ್ನು ಜನರಿಗಾಗಿ ನಾವು ನಮ್ಮ ಗ್ರಂಥದಲ್ಲಿ ವಿವರಿಸಿಕೊಟ್ಟ ಬಳಿಕವೂ ಯಾರು ಮರೆಮಾಚುತ್ತಾರೋ, ಅವರ ಮೇಲೆ ಅಲ್ಲಾಹನು ಶಪಿಸುತ್ತಾನೆ. ಶಪಿಸುವವರೆಲ್ಲಾ ಶಪಿಸುತ್ತಾರೆ.
Tefsiri na arapskom jeziku:
اِلَّا الَّذِیْنَ تَابُوْا وَاَصْلَحُوْا وَبَیَّنُوْا فَاُولٰٓىِٕكَ اَتُوْبُ عَلَیْهِمْ ۚ— وَاَنَا التَّوَّابُ الرَّحِیْمُ ۟
ಆದರೆ ಪಶ್ಚಾತ್ತಾಪಪಟ್ಟು ಮರುಳುವವರ, ಹಾಗೂ ಸುಧಾರಣೆ ಮಾಡಿಕೊಳ್ಳುವವರ ಮತ್ತು ಬಚ್ಚಿಟ್ಟಿದ್ದನ್ನು ಸ್ಪಷ್ಟವಾಗಿ ವಿವರಿಸಿ ಕೊಡುವವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ ಮತ್ತು ನಾನು ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯು ಆಗಿರುವೆನು.
Tefsiri na arapskom jeziku:
اِنَّ الَّذِیْنَ كَفَرُوْا وَمَاتُوْا وَهُمْ كُفَّارٌ اُولٰٓىِٕكَ عَلَیْهِمْ لَعْنَةُ اللّٰهِ وَالْمَلٰٓىِٕكَةِ وَالنَّاسِ اَجْمَعِیْنَ ۟ۙ
ಖಂಡಿತವಾಗಿಯೂ ಸತ್ಯನಿಷೇಧಿಸಿದವರು ಮತ್ತು ಸತ್ಯನಿಷೇಧಿಗಳಾಗಿದ್ದ ಸ್ಥಿತಿಯಲ್ಲೇ ಮರಣ ಹೊಂದಿದವರ ಮೇಲೆ ಅಲ್ಲಾಹನ ಹಾಗೂ ದೂತರ, ಮತ್ತು ಸರ್ವ ಮನುಷ್ಯರ ಶಾಪವಿರುವುದು.
Tefsiri na arapskom jeziku:
خٰلِدِیْنَ فِیْهَا ۚ— لَا یُخَفَّفُ عَنْهُمُ الْعَذَابُ وَلَا هُمْ یُنْظَرُوْنَ ۟
ಅವರು ಅದರಲ್ಲಿ (ಆ ಶಾಪದಲ್ಲಿ) ಶಾಶ್ವತವಾಗಿರುವರು. ಅವರಿಂದ ಯಾತನೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನು ನೀಡಲಾಗದು.
Tefsiri na arapskom jeziku:
وَاِلٰهُكُمْ اِلٰهٌ وَّاحِدٌ ۚ— لَاۤ اِلٰهَ اِلَّا هُوَ الرَّحْمٰنُ الرَّحِیْمُ ۟۠
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನು ಆ ಪರಮ ದಯಾಮಯನು ಕರುಣಾನಿಧಿಯೂ ಆಗಿರುವವನ ಹೊರತು ಯಾವ ನೈಜ ಆರಾಧ್ಯನಿಲ್ಲ.
Tefsiri na arapskom jeziku:
 
Prijevod značenja Sura: El-Bekara
Indeks sura Broj stranice
 
Prijevod značenja časnog Kur'ana - Prijevod na kannada jezik (južno indijski jezik) - Bešir Misuri - Sadržaj prijevodā

Prijevod je uradio šejh Bešir Mejsuri. Pregledano od strane Prevodilačkog centra Ruvvad.

Zatvaranje