Check out the new design

Prijevod značenja časnog Kur'ana - Prijevod na kannada jezik (južno indijski jezik) - Bešir Misuri * - Sadržaj prijevodā


Prijevod značenja Sura: Et-Tur   Ajet:
اَمْ تَاْمُرُهُمْ اَحْلَامُهُمْ بِهٰذَاۤ اَمْ هُمْ قَوْمٌ طَاغُوْنَ ۟ۚ
ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
Tefsiri na arapskom jeziku:
اَمْ یَقُوْلُوْنَ تَقَوَّلَهٗ ۚ— بَلْ لَّا یُؤْمِنُوْنَ ۟ۚ
ಆ ಪೈಗಂಬರರು ಇದನ್ನು (ಕುರ್‌ಆನನ್ನು) ಸ್ವತಃ ರಚಿಸಿರುತ್ತಾನೆಂದು ಅವರು ಹೇಳುತ್ತಿದ್ದಾರೆಯೇ ? ವಾಸ್ತವವೇನೆಂದರೆ ಅವರು ವಿಶ್ವಾಸವಿರಿಸುತ್ತಿಲ್ಲ.
Tefsiri na arapskom jeziku:
فَلْیَاْتُوْا بِحَدِیْثٍ مِّثْلِهٖۤ اِنْ كَانُوْا صٰدِقِیْنَ ۟ؕ
ಸರಿ ಅವರು ಸತ್ಯವಂತರಾಗಿದ್ದರೆ ಇಂತಹದೇ ಒಂದು ವಚನವನ್ನು ತರಲಿ.
Tefsiri na arapskom jeziku:
اَمْ خُلِقُوْا مِنْ غَیْرِ شَیْءٍ اَمْ هُمُ الْخٰلِقُوْنَ ۟ؕ
ಅವರು ಒಬ್ಬ ಸೃಷ್ಟಿಕರ್ತನಿಲ್ಲದೇ ಸೃಷ್ಟಿಸಲಾಗಿರುವರೇ ? ಅಥವಾ ಅವರೇ ಸ್ವಯಂ ಸೃಷ್ಟಿಕರ್ತರೇ?
Tefsiri na arapskom jeziku:
اَمْ خَلَقُوا السَّمٰوٰتِ وَالْاَرْضَ ۚ— بَلْ لَّا یُوْقِنُوْنَ ۟ؕ
ಅಥವಾ ಅವರೇ ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದಾರೆಯೇ ? ಅಲ್ಲ ಅವರು ನಂಬಿಕೆಯಿಡದ ಜನರಾಗಿದ್ದಾರೆ.
Tefsiri na arapskom jeziku:
اَمْ عِنْدَهُمْ خَزَآىِٕنُ رَبِّكَ اَمْ هُمُ الْمُصَۜیْطِرُوْنَ ۟ؕ
ಅಥವ ನಿಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ ? ಅಥವಾ ಅವರು (ಆ ಭಂಡಾರಗಳ) ಸಂರಕ್ಷಕರೇ ?
Tefsiri na arapskom jeziku:
اَمْ لَهُمْ سُلَّمٌ یَّسْتَمِعُوْنَ فِیْهِ ۚ— فَلْیَاْتِ مُسْتَمِعُهُمْ بِسُلْطٰنٍ مُّبِیْنٍ ۟ؕ
ಅಥವಾ ಏರಿ ಹೋಗಿ ಆಕಾಶದ ರಹಸ್ಯ ಮಾತುಗಳನ್ನು ಆಲಿಸಲು ಅವರ ಬಳಿ ಯಾವುದಾದರೂ ಏಣಿ ಇದೆಯೇ ? ಹಾಗಿದ್ದರೆ ಆಲಿಸಿದವನು ಸ್ಪಷ್ಟವಾದ ಪುರಾವೆಯನ್ನು ತರಲಿ.
Tefsiri na arapskom jeziku:
اَمْ لَهُ الْبَنٰتُ وَلَكُمُ الْبَنُوْنَ ۟ؕ
ಏನು ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇ ?
Tefsiri na arapskom jeziku:
اَمْ تَسْـَٔلُهُمْ اَجْرًا فَهُمْ مِّنْ مَّغْرَمٍ مُّثْقَلُوْنَ ۟ؕ
ಅಥವಾ ಅವರು ಸಾಲದ ಭಾರವನ್ನು ಹೊರುವಂತಾಗಲು ನೀವು ಅವರಿಂದ ಪ್ರತಿಫಲವನ್ನೇನಾದರೂ ಕೇಳುತ್ತಿರುವಿರಾ ?
Tefsiri na arapskom jeziku:
اَمْ عِنْدَهُمُ الْغَیْبُ فَهُمْ یَكْتُبُوْنَ ۟ؕ
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?
Tefsiri na arapskom jeziku:
اَمْ یُرِیْدُوْنَ كَیْدًا ؕ— فَالَّذِیْنَ كَفَرُوْا هُمُ الْمَكِیْدُوْنَ ۟ؕ
ಅಥವಾ ಅವರು ಏನಾದರೂ ಕುತಂತ್ರ ಹೂಡಲು ಉದ್ದೇಶಿಸುತ್ತಾರೆಯೇ ? ಹಾಗಾದರೆ ಸತ್ಯನಿಷೇಧಿಗಳೇ ಕುತಂತ್ರಕ್ಕೆ ಬಲಿಯಾಗುವರು.
Tefsiri na arapskom jeziku:
اَمْ لَهُمْ اِلٰهٌ غَیْرُ اللّٰهِ ؕ— سُبْحٰنَ اللّٰهِ عَمَّا یُشْرِكُوْنَ ۟
ಅಥವಾ ಅವರಿಗೆ ಅಲ್ಲಾಹನ ಹೊರತು ಅನ್ಯಆರಾಧ್ಯನಿದ್ದಾನೆಯೇ ? ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅಲ್ಲಾಹನು ಪರಮಪಾವನನು.
Tefsiri na arapskom jeziku:
وَاِنْ یَّرَوْا كِسْفًا مِّنَ السَّمَآءِ سَاقِطًا یَّقُوْلُوْا سَحَابٌ مَّرْكُوْمٌ ۟
ಅವರು ಆಕಾಶದಿಂದ ಒಂದು ತುಂಡು ಬೀಳುತ್ತಿರುವುದಾಗಿ ಕಂಡರೂ ಅದು ದಟ್ಟವಾಗಿರುವ ಮೋಡವೆಂದು ಅವರು ಹೇಳುವರು.
Tefsiri na arapskom jeziku:
فَذَرْهُمْ حَتّٰی یُلٰقُوْا یَوْمَهُمُ الَّذِیْ فِیْهِ یُصْعَقُوْنَ ۟ۙ
ಆದ್ದರಿಂದ ಮೂರ್ಛೆಗೊಳಗಾಗುವಂತಹ ಅವರ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
Tefsiri na arapskom jeziku:
یَوْمَ لَا یُغْنِیْ عَنْهُمْ كَیْدُهُمْ شَیْـًٔا وَّلَا هُمْ یُنْصَرُوْنَ ۟ؕ
ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
Tefsiri na arapskom jeziku:
وَاِنَّ لِلَّذِیْنَ ظَلَمُوْا عَذَابًا دُوْنَ ذٰلِكَ وَلٰكِنَّ اَكْثَرَهُمْ لَا یَعْلَمُوْنَ ۟
ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಇದರ ಹೊರತು ಇಹಲೋಕದಲ್ಲೂ ಯಾತನೆ ಇದೆ, ಆದರೆ ಅವರಲ್ಲಿ ಅಧಿಕ ಮಂದಿ ತಿಳಿಯುವುದಿಲ್ಲ.
Tefsiri na arapskom jeziku:
وَاصْبِرْ لِحُكْمِ رَبِّكَ فَاِنَّكَ بِاَعْیُنِنَا وَسَبِّحْ بِحَمْدِ رَبِّكَ حِیْنَ تَقُوْمُ ۟ۙ
ನೀವು ನಿಮ್ಮ ಪ್ರಭುವಿನ ತೀರ್ಪು ಬರುವವರೆಗೆ ಸಹನೆವಹಿಸಿರಿ, ನಿಸ್ಸಂಶಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂದಿರುವಿರಿ, ನೀವು ಎದ್ದೇಳುವಾಗ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
Tefsiri na arapskom jeziku:
وَمِنَ الَّیْلِ فَسَبِّحْهُ وَاِدْبَارَ النُّجُوْمِ ۟۠
ರಾತ್ರಿಯು ಸ್ವಲ್ಪ ಭಾಗ ಮತ್ತು ನಕ್ಷತ್ರಗಳು ಅಸ್ತಮಿಸುವ ವೇಳೆಯಲ್ಲೂ ಅವನ ಪಾವಿತ್ರö್ಯವನ್ನು ಸ್ತುತಿಸಿರಿ.
Tefsiri na arapskom jeziku:
 
Prijevod značenja Sura: Et-Tur
Indeks sura Broj stranice
 
Prijevod značenja časnog Kur'ana - Prijevod na kannada jezik (južno indijski jezik) - Bešir Misuri - Sadržaj prijevodā

Prijevod je uradio šejh Bešir Mejsuri. Pregledano od strane Prevodilačkog centra Ruvvad.

Zatvaranje