Check out the new design

Prijevod značenja časnog Kur'ana - Prijevod na kannada jezik (južno indijski jezik) - Bešir Misuri * - Sadržaj prijevodā


Prijevod značenja Sura: El-A'araf   Ajet:
اِنَّ وَلِیِّ اللّٰهُ الَّذِیْ نَزَّلَ الْكِتٰبَ ۖؗ— وَهُوَ یَتَوَلَّی الصّٰلِحِیْنَ ۟
ಖಂಡಿತವಾಗಿಯು ನನ್ನ ಸಹಾಯಕ ಈ ಗ್ರಂಥವನ್ನು ಅವತೀರ್ಣಗೊಳಿಸಿದವನು ಅಲ್ಲಾಹನಾಗಿದ್ದಾನೆ ಮತ್ತು ಅವನೇ ಸಜ್ಜನ ದಾಸರಿಗೆ ನೆರವು ನೀಡುತ್ತಾನೆ.
Tefsiri na arapskom jeziku:
وَالَّذِیْنَ تَدْعُوْنَ مِنْ دُوْنِهٖ لَا یَسْتَطِیْعُوْنَ نَصْرَكُمْ وَلَاۤ اَنْفُسَهُمْ یَنْصُرُوْنَ ۟
ನೀವು ಅಲ್ಲಾಹನ ಹೊರತು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರಿಗೆ (ಆ ವಿಗ್ರಹಗಳಿಗೆ) ನಿಮ್ಮ ಸಹಾಯ ಮಾಡಲು ಸಾಧ್ಯವಾಗದು ಮತ್ತು ಸ್ವತಃ ತಮಗೂ ಅವರು ಸಹಾಯ ಮಾಡಿಕೊಳ್ಳಲಾರರು.
Tefsiri na arapskom jeziku:
وَاِنْ تَدْعُوْهُمْ اِلَی الْهُدٰی لَا یَسْمَعُوْا ؕ— وَتَرٰىهُمْ یَنْظُرُوْنَ اِلَیْكَ وَهُمْ لَا یُبْصِرُوْنَ ۟
ಮತ್ತು ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ ಅವರು ಆಲಿಸಲಾರರು. ಅವರು ನಿಮ್ಮೆಡೆಗೆ ನೋಡುತ್ತಿರುವುದಾಗಿ ನಿಮಗೆ ಕಾಣಬಹುದು ಆದರೆ ಅವರು ಏನನ್ನೂ ಕಾಣಲಾರರು.
Tefsiri na arapskom jeziku:
خُذِ الْعَفْوَ وَاْمُرْ بِالْعُرْفِ وَاَعْرِضْ عَنِ الْجٰهِلِیْنَ ۟
(ಪೈಗಂಬರರೇ) ನೀವು ಕ್ಷಮೆಯನ್ನು ಕೈಗೊಳ್ಳಿರಿ, ಒಳಿತಿನ ಆದೇಶವನ್ನು ನೀಡಿರಿ ಮತ್ತು ಅವಿವೇಕಿಗಳಿಂದ ವಿಮುಖರಾಗಿರಿ.
Tefsiri na arapskom jeziku:
وَاِمَّا یَنْزَغَنَّكَ مِنَ الشَّیْطٰنِ نَزْغٌ فَاسْتَعِذْ بِاللّٰهِ ؕ— اِنَّهٗ سَمِیْعٌ عَلِیْمٌ ۟
ನಿಮಗೆ ಶೈತಾನನ ಕಡೆಯಿಂದ ದುಷ್ಪೆçÃರಣೆಯೇನಾದರು ಉಂಟಾದರೆ ನೀವು ಅಲ್ಲಾಹನ ಅಭಯವನ್ನು ಯಾಚಿಸಿರಿ. ನಿಸ್ಸಂಶಯವಾಗಿಯೂ ಅವನು ಚೆನ್ನಾಗಿ ಆಲಿಸುವವನೂ, ಸರ್ವವನ್ನು ಅರಿಯುವವನೂ ಆಗಿದ್ದಾನೆ.
Tefsiri na arapskom jeziku:
اِنَّ الَّذِیْنَ اتَّقَوْا اِذَا مَسَّهُمْ طٰٓىِٕفٌ مِّنَ الشَّیْطٰنِ تَذَكَّرُوْا فَاِذَا هُمْ مُّبْصِرُوْنَ ۟ۚ
ಖಂಡಿತವಾಗಿಯು ಭಯಭಕ್ತಿ ಪಾಲಿಸುವವರಿಗೆ ಶೈತಾನನ ಕಡೆಯಿಂದ ಯಾವುದಾದರೂ ದುಷ್ಪೆçÃರಣೆ ಉಂಟಾದರೆ ಅವರು ಅಲ್ಲಾಹನನ್ನು ಸ್ಮರಿಸಿಕೊಳ್ಳುವರು. ತಕ್ಷಣ ಅವರು ಅಂತರ್‌ದೃಷ್ಟಿಯುಳ್ಳವರಾಗುವರು.
Tefsiri na arapskom jeziku:
وَاِخْوَانُهُمْ یَمُدُّوْنَهُمْ فِی الْغَیِّ ثُمَّ لَا یُقْصِرُوْنَ ۟
ಶೈತಾನರು ತಮ್ಮ ಸಹೋದರರನ್ನು ದುರ್ಮಾಗಕ್ಕೆ ತಳ್ಳಿಬಿಡುವರು. ಹಾಗೆಯೇ ಅವರು ಅದರಲ್ಲಿ ಯಾವುದೇ ಲೋಪ ಮಾಡುವುದಿಲ್ಲ.
Tefsiri na arapskom jeziku:
وَاِذَا لَمْ تَاْتِهِمْ بِاٰیَةٍ قَالُوْا لَوْلَا اجْتَبَیْتَهَا ؕ— قُلْ اِنَّمَاۤ اَتَّبِعُ مَا یُوْحٰۤی اِلَیَّ مِنْ رَّبِّیْ ۚ— هٰذَا بَصَآىِٕرُ مِنْ رَّبِّكُمْ وَهُدًی وَّرَحْمَةٌ لِّقَوْمٍ یُّؤْمِنُوْنَ ۟
ನೀವು ಅವರ ಬೇಡಿಕೆಯ ಪ್ರಕಾರ ಯಾವುದೇ ದೃಷ್ಟಾಂತಗಳನ್ನು ಅವರ ಮುಂದೆ ಪ್ರಕಟಗೊಳಿಸದಿದ್ದರೆ. ಅವರು (ಹಾಸ್ಯದೊಂದಿಗೆ) ಹೇಳುವರು: ನೀವು ಈ ದೃಷ್ಟಾಂತವನ್ನೇಕೆ ಸ್ವತಃ ರಚಿಸಿ ತರಲಿಲ್ಲ? ಹೇಳಿರಿ: ನನ್ನ ಪ್ರಭುವಿನ ವತಿಯಿಂದ ನನ್ನ ಮೇಲೆ ಕಳುಹಿಸಲಾಗುವ ಆದೇಶವನ್ನು ನಾನು ಅನುಸರಿಸುತ್ತಿದ್ದೇನೆ. ಇವು ನಿಮ್ಮ ಪ್ರಭುವಿನ ಕಡೆಯ ಸಾಕಷ್ಟು ಪುರಾವೆಗಳಾಗಿವೆ ಮತ್ತು ವಿಶ್ವಾಸವಿಡುವ ಜನತೆಗೆ ಮಾರ್ಗದರ್ಶನವೂ, ಕಾರುಣ್ಯವೂ ಆಗಿದೆ.
Tefsiri na arapskom jeziku:
وَاِذَا قُرِئَ الْقُرْاٰنُ فَاسْتَمِعُوْا لَهٗ وَاَنْصِتُوْا لَعَلَّكُمْ تُرْحَمُوْنَ ۟
ಮತ್ತು ಖುರ್‌ಆನ್ ಪರಾಯಣ ಮಾಡಲಾದರೆ ನೀವದರೆಡೆಗೆ ಗಮನವಿಟ್ಟು ಆಲಿಸಿರಿ ಮತ್ತು ಮೌನ ಪಾಲಿಸಿರಿ. ನಿಮ್ಮ ಮೇಲೆ ಕಾರುಣ್ಯ ತೋರಬಹುದು.
Tefsiri na arapskom jeziku:
وَاذْكُرْ رَّبَّكَ فِیْ نَفْسِكَ تَضَرُّعًا وَّخِیْفَةً وَّدُوْنَ الْجَهْرِ مِنَ الْقَوْلِ بِالْغُدُوِّ وَالْاٰصَالِ وَلَا تَكُنْ مِّنَ الْغٰفِلِیْنَ ۟
ವಿನಮ್ರತೆ ಹಾಗೂ ಭಯದೊಂದಿಗೆ, ಉಚ್ಛ ಸ್ವರ ರಹಿತವಾಗಿ ಸಂಜೆ, ಮುಂಜಾನೆಯಲ್ಲಿ ನಿಮ್ಮ ಪ್ರಭುವನ್ನು ಮನಸ್ಸಿನಲ್ಲಿ ಸ್ಮರಿಸಿರಿ. ಮತ್ತು ಅಲಕ್ಷö್ಯರಲ್ಲಿ ಸೇರಬೇಡಿರಿ.
Tefsiri na arapskom jeziku:
اِنَّ الَّذِیْنَ عِنْدَ رَبِّكَ لَا یَسْتَكْبِرُوْنَ عَنْ عِبَادَتِهٖ وَیُسَبِّحُوْنَهٗ وَلَهٗ یَسْجُدُوْنَ ۟
ಖಂಡಿತವಾಗಿಯು ನಿಮ್ಮ ಪ್ರಭುವಿನ ಬಳಿಯಿರುವವರು (ದೇವಚರರು) ಅವನ ಆರಾಧನೆ ಮಾಡುವುದರಿಂದ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವನತೆಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗವೆರಗುತ್ತಾರೆ.
Tefsiri na arapskom jeziku:
 
Prijevod značenja Sura: El-A'araf
Indeks sura Broj stranice
 
Prijevod značenja časnog Kur'ana - Prijevod na kannada jezik (južno indijski jezik) - Bešir Misuri - Sadržaj prijevodā

Prijevod je uradio šejh Bešir Mejsuri. Pregledano od strane Prevodilačkog centra Ruvvad.

Zatvaranje