Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Al-Mu’minūn   Ayah:
وَالَّذِیْنَ یُؤْتُوْنَ مَاۤ اٰتَوْا وَّقُلُوْبُهُمْ وَجِلَةٌ اَنَّهُمْ اِلٰی رَبِّهِمْ رٰجِعُوْنَ ۟ۙ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
Arabic explanations of the Qur’an:
اُولٰٓىِٕكَ یُسٰرِعُوْنَ فِی الْخَیْرٰتِ وَهُمْ لَهَا سٰبِقُوْنَ ۟
ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.
Arabic explanations of the Qur’an:
وَلَا نُكَلِّفُ نَفْسًا اِلَّا وُسْعَهَا وَلَدَیْنَا كِتٰبٌ یَّنْطِقُ بِالْحَقِّ وَهُمْ لَا یُظْلَمُوْنَ ۟
ನಾವು ಯಾವೊಬ್ಬ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ಹೊರೆಯನ್ನು ಹೇರುವುದಿಲ್ಲ. ನಮ್ಮ ಬಳಿ ಸತ್ಯದೊಂದಿಗೆ ಮಾತನಾಡುವ ಗ್ರಂಥವಿದೆ ಮತ್ತು ಜನರ ಮೇಲೆ ಅನ್ಯಾಯವೆಸಗಲಾಗದು.
Arabic explanations of the Qur’an:
بَلْ قُلُوْبُهُمْ فِیْ غَمْرَةٍ مِّنْ هٰذَا وَلَهُمْ اَعْمَالٌ مِّنْ دُوْنِ ذٰلِكَ هُمْ لَهَا عٰمِلُوْنَ ۟
ಆದರೆ! ಸತ್ಯನಿಷೇಧಿಗಳ ಹೃದಯಗಳು ಈ ವಿಷಯದ (ಕುರ್‌ಆನ್) ಬಗ್ಗೆ ಅಲಕ್ಷö್ಯತೆಯಲ್ಲಿವೆ ಮತ್ತು ಅವರಿಗೆ ಅದರ ಹೊರತು ಬೇರೆ (ಅನೇಕ ಕೆಟ್ಟ) ಕೆಲಸಗಳಿವೆ. ಅವುಗಳನ್ನು ಅವರು ಮಾಡಲಿರುವರು.
Arabic explanations of the Qur’an:
حَتّٰۤی اِذَاۤ اَخَذْنَا مُتْرَفِیْهِمْ بِالْعَذَابِ اِذَا هُمْ یَجْـَٔرُوْنَ ۟ؕ
ಕೊನೆಗೆ ಅವರ ಪೈಕಿ ಸುಖಲೋಲುಪರನ್ನು ನಾವು ಶಿಕ್ಷೆಗೆ ಗುರಿಪಡಿಸಿದಾಗ ಅವರು ಗೋಗರೆಯತೊಡಗುತ್ತಾರೆ.
Arabic explanations of the Qur’an:
لَا تَجْـَٔرُوا الْیَوْمَ ۫— اِنَّكُمْ مِّنَّا لَا تُنْصَرُوْنَ ۟
ನೀವಿಂದು ಗೋಗರೆಯ ಬೇಡಿರಿ. ಖಂಡಿತವಾಗಿಯು ನಮ್ಮಿಂದ ನಿಮಗೆ ಯಾವ ಸಹಾಯ ನೀಡಲಾಗದು.
Arabic explanations of the Qur’an:
قَدْ كَانَتْ اٰیٰتِیْ تُتْلٰی عَلَیْكُمْ فَكُنْتُمْ عَلٰۤی اَعْقَابِكُمْ تَنْكِصُوْنَ ۟ۙ
ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾದಾಗ. ನೀವು ಹಿಂದೆ ತಿರುಗಿ ಓಡುತ್ತಿದ್ದೀರಿ!
Arabic explanations of the Qur’an:
مُسْتَكْبِرِیْنَ ۖۚۗ— بِهٖ سٰمِرًا تَهْجُرُوْنَ ۟
ಅಹಂಕಾರ ತೋರುತ್ತಾ ಮತ್ತು ಕಾಲ್ಪನಿಕ ಕಥೆ ಎಂದು ಹೇಳುತ್ತಾ ಅದನ್ನು ತೊರೆದು ಬಿಡುತ್ತಿದ್ದಿರಿ.
Arabic explanations of the Qur’an:
اَفَلَمْ یَدَّبَّرُوا الْقَوْلَ اَمْ جَآءَهُمْ مَّا لَمْ یَاْتِ اٰبَآءَهُمُ الْاَوَّلِیْنَ ۟ؗ
ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
Arabic explanations of the Qur’an:
اَمْ لَمْ یَعْرِفُوْا رَسُوْلَهُمْ فَهُمْ لَهٗ مُنْكِرُوْنَ ۟ؗ
ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
Arabic explanations of the Qur’an:
اَمْ یَقُوْلُوْنَ بِهٖ جِنَّةٌ ؕ— بَلْ جَآءَهُمْ بِالْحَقِّ وَاَكْثَرُهُمْ لِلْحَقِّ كٰرِهُوْنَ ۟
ಅಥವಾ ಅವರು ಅವರಿಗೆ ಹುಚ್ಚು ಹಿಡಿದಿದೆಯೆಂದು ಹೇಳುತ್ತಿದ್ದಾರೆಯೇ? ಹಾಗಲ್ಲ ಅವರಂತು ಅವರ ಬಳಿ ಸತ್ಯವನ್ನು ತಂದಿದ್ದಾರೆ ಮತ್ತು ಅವರ ಪೈಕಿ ಅಧಿಕ ಜನರು ಸತ್ಯವನ್ನು ಅಸಹ್ಯಪಡುವವರಾಗಿದ್ದಾರೆ.
Arabic explanations of the Qur’an:
وَلَوِ اتَّبَعَ الْحَقُّ اَهْوَآءَهُمْ لَفَسَدَتِ السَّمٰوٰتُ وَالْاَرْضُ وَمَنْ فِیْهِنَّ ؕ— بَلْ اَتَیْنٰهُمْ بِذِكْرِهِمْ فَهُمْ عَنْ ذِكْرِهِمْ مُّعْرِضُوْنَ ۟ؕ
ಮತ್ತು ಸತ್ಯವೇ ಅವರ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದರೆ ಭೂಮಿ, ಆಕಾಶಗಳು ಮತ್ತು ಅವುಗಳಲ್ಲಿರುವುದೆಲ್ಲವೂ ಹದಗೆಡುತ್ತಿತ್ತು. ಹಾಗಲ್ಲ! ನಾವು ಅವರಿಗಾಗಿ ಅವರದೇ ಉದ್ಭೋಧೆಯನ್ನು ತಂದಿದ್ದೇವೆ ಆದರೆ ಅವರು ತಮ್ಮ ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ.
Arabic explanations of the Qur’an:
اَمْ تَسْـَٔلُهُمْ خَرْجًا فَخَرَاجُ رَبِّكَ خَیْرٌ ۖۗ— وَّهُوَ خَیْرُ الرّٰزِقِیْنَ ۟
ಏನು, ನೀವು ಅವರೊಡನೆ ಪ್ರತಿಫಲವನ್ನೇನಾದರು ಕೇಳುತ್ತಿರುವಿರಾ? ನಿಮಗೆ ನಿಮ್ಮ ಪ್ರಭುವಿನ ಪ್ರತಿಫಲವು ಅತ್ಯುತ್ತಮವಾಗಿದೆ ಮತ್ತು ಜೀವನಾಧಾರ ನೀಡುವವರಲ್ಲಿ ಅವನೇ ಅತ್ಯುತ್ತಮನಾಗಿದ್ದಾನೆ.
Arabic explanations of the Qur’an:
وَاِنَّكَ لَتَدْعُوْهُمْ اِلٰی صِرَاطٍ مُّسْتَقِیْمٍ ۟
ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.
Arabic explanations of the Qur’an:
وَاِنَّ الَّذِیْنَ لَا یُؤْمِنُوْنَ بِالْاٰخِرَةِ عَنِ الصِّرَاطِ لَنٰكِبُوْنَ ۟
ನಿಸ್ಸಂಶಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ.
Arabic explanations of the Qur’an:
 
Translation of the meanings Surah: Al-Mu’minūn
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close