Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Al-Mu’minūn   Ayah:
بَلْ اَتَیْنٰهُمْ بِالْحَقِّ وَاِنَّهُمْ لَكٰذِبُوْنَ ۟
ಹಾಗಲ್ಲ! ನಾವು ಅವರ ಬಳಿಗೆ ಸತ್ಯವನ್ನು ತಂದಿದ್ದೇವೆ ಮತ್ತು ನಿಸ್ಸಂದೇಹವಾಗಿಯೂ ಅವರು ಸುಳ್ಳರಾಗಿದ್ದಾರೆ.
Arabic explanations of the Qur’an:
مَا اتَّخَذَ اللّٰهُ مِنْ وَّلَدٍ وَّمَا كَانَ مَعَهٗ مِنْ اِلٰهٍ اِذًا لَّذَهَبَ كُلُّ اِلٰهٍ بِمَا خَلَقَ وَلَعَلَا بَعْضُهُمْ عَلٰی بَعْضٍ ؕ— سُبْحٰنَ اللّٰهِ عَمَّا یَصِفُوْنَ ۟ۙ
ಅಲ್ಲಾಹನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ, ಅವನೊಂದಿಗೆ ಬೇರೆ ದೇವನೂ ಇಲ್ಲ. ಅನ್ಯಥಾ ಪ್ರತಿಯೊಬ್ಬ ದೇವನೂ ತನ್ನ ಸೃಷ್ಟಿಯನ್ನು ತೆಗೆದುಕೊಂಡು ಬೇರ್ಪಡುತ್ತಿದ್ದನು. ಮತ್ತು ಪ್ರತಿಯೊಬ್ಬನೂ ಇನ್ನೊಬ್ಬನ ಮೇಲೆ ದಂಡೆತ್ತಿ ಹೋಗುತ್ತಿದ್ದನು. ಅವರು ಹೇಳುತ್ತಿರುವ ಮಾತುಗಳಿಂದ ಅಲ್ಲಾಹನು ಪರಮಪಾವನನು.
Arabic explanations of the Qur’an:
عٰلِمِ الْغَیْبِ وَالشَّهَادَةِ فَتَعٰلٰی عَمَّا یُشْرِكُوْنَ ۟۠
ಗೋಚರ ಹಾಗೂ ಅಗೋಚರಗಳ ಜ್ಞಾನಿಯವನು ಮತ್ತು ಅವರು ಕಲ್ಪಿಸುತ್ತಿರುವ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
Arabic explanations of the Qur’an:
قُلْ رَّبِّ اِمَّا تُرِیَنِّیْ مَا یُوْعَدُوْنَ ۟ۙ
(ಓ ಪೈಗಂಬರರೇ) ಹೀಗೆ ಪ್ರಾರ್ಥಿಸಿರಿ: ಓ ನನ್ನ ಪ್ರಭುವೇ, ಅವರಿಗೆ ಎಚ್ಚರಿಕೆ ನೀಡಲಾಗುತ್ತಿರುವುದನ್ನು ನೀನು ನನ್ನ ಉಪಸ್ಥಿತಿಯಲ್ಲಿ ತರುವುದಾದರೆ.
Arabic explanations of the Qur’an:
رَبِّ فَلَا تَجْعَلْنِیْ فِی الْقَوْمِ الظّٰلِمِیْنَ ۟
ನೀನು ನನ್ನನ್ನು ಅಕ್ರಮಿ ಜನರಲ್ಲಿ ಸೇರಿಸದಿರು. ಪ್ರಭುವೇ.
Arabic explanations of the Qur’an:
وَاِنَّا عَلٰۤی اَنْ نُّرِیَكَ مَا نَعِدُهُمْ لَقٰدِرُوْنَ ۟
ಖಂಡಿತ ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ನಿಮಗೆ ತೋರಿಸಿ ಕೊಡಲು ಶಕ್ತರಿದ್ದೇವೆ.
Arabic explanations of the Qur’an:
اِدْفَعْ بِالَّتِیْ هِیَ اَحْسَنُ السَّیِّئَةَ ؕ— نَحْنُ اَعْلَمُ بِمَا یَصِفُوْنَ ۟
(ಓ ಪೈಗಂಬರರೇ) ಕೆಡುಕನ್ನು ಅತ್ಯುತ್ತಮ ರೀತಿಯಲ್ಲಿ ನೀಗಿಸಿರಿ. ಅವರು ವರ್ಣಿಸಿ ಹೇಳುತ್ತಿರುವುದನ್ನು ನಾವು ಚೆನ್ನಾಗಿ ಬಲ್ಲೆವು.
Arabic explanations of the Qur’an:
وَقُلْ رَّبِّ اَعُوْذُ بِكَ مِنْ هَمَزٰتِ الشَّیٰطِیْنِ ۟ۙ
ಮತ್ತು ಹೀಗೆ ಪ್ರಾರ್ಥಿಸಿರಿ: ನನ್ನ ಪ್ರಭುವೇ, ನಾನು ಶೈತಾನರ ದುಷ್ಪೆçÃರಣೆಗಳಿಂದ ನಿನ್ನ ಅಭಯ ಯಾಚಿಸುತ್ತೇನೆ.
Arabic explanations of the Qur’an:
وَاَعُوْذُ بِكَ رَبِّ اَنْ یَّحْضُرُوْنِ ۟
ನನ್ನ ಪ್ರಭುವೇ, ಅವರು ನನ್ನ ಬಳಿಗೆ ಹಾಜರಾಗುವುದರಿಂದಲೂ ನಿನ್ನ ಅಭಯ ಯಾಚಿಸುತ್ತೇನೆ.
Arabic explanations of the Qur’an:
حَتّٰۤی اِذَا جَآءَ اَحَدَهُمُ الْمَوْتُ قَالَ رَبِّ ارْجِعُوْنِ ۟ۙ
ಕೊನೆಗೆ ಅವರಲ್ಲಿ ಯಾರಿಗಾದರೂ ಮರಣವು ಬಂದು ಬಿಟ್ಟರೆ ಹೇಳುತ್ತಾನೆ: ನನ್ನ ಪ್ರಭುವೇ, ನನ್ನನ್ನು ಮರಳಿಸಿ ಬಿಡು.
Arabic explanations of the Qur’an:
لَعَلِّیْۤ اَعْمَلُ صَالِحًا فِیْمَا تَرَكْتُ كَلَّا ؕ— اِنَّهَا كَلِمَةٌ هُوَ قَآىِٕلُهَا ؕ— وَمِنْ وَّرَآىِٕهِمْ بَرْزَخٌ اِلٰی یَوْمِ یُبْعَثُوْنَ ۟
ನಾನು ತೊರೆದಿರುವ ಸತ್ಕರ್ಮಗಳನ್ನು ಮಾಡಬಹುದಲ್ಲ, ಖಂಡಿತ ಇಲ್ಲ, ಇದು ಕೇವಲ ಅವನಾಡುವ ಮಾತು ಮಾತ್ರ. ಅವರು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವ ದಿನದವರೆಗೆ ಅವರ ಹಿಂದೆ ಒಂದು ತಡೆಯಿದೆ.
Arabic explanations of the Qur’an:
فَاِذَا نُفِخَ فِی الصُّوْرِ فَلَاۤ اَنْسَابَ بَیْنَهُمْ یَوْمَىِٕذٍ وَّلَا یَتَسَآءَلُوْنَ ۟
ಹಾಗೆಯೇ ಕಹಳೆಯು ಊದಲಾಗುವ ದಿನ ಅವರ ನಡುವೆ ಯಾವುದೇ ಸಂಬAಧವಿರದು. ಅವರು ಪರಸ್ಪರ ವಿಚಾರಿಸಿಕೊಳ್ಳುವುದೂ ಇಲ್ಲ.
Arabic explanations of the Qur’an:
فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟
ಇನ್ನು ಯಾರ ತುಲ ಭಾರವಾಗಿರುವುದೋ ಅವರು ವಿಜಯಶಾಲಿಗಳಾಗುವರು.
Arabic explanations of the Qur’an:
وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ فِیْ جَهَنَّمَ خٰلِدُوْنَ ۟ۚ
ಮತ್ತು ಯಾರ ತುಲ ಹಗುರವಾಗಿರುವುದೋ ಅವರೇ ತಮ್ಮನ್ನು ತಾವೇ ನಷ್ಟ ಮಾಡಿಕೊಂಡವರು. ಅವರು ನರಕದಲ್ಲಿ ಶಾಶ್ವತವಾಗಿರುವವರು.
Arabic explanations of the Qur’an:
تَلْفَحُ وُجُوْهَهُمُ النَّارُ وَهُمْ فِیْهَا كٰلِحُوْنَ ۟
ಅವರ ಮುಖಗಳನ್ನು ಅಗ್ನಿಯು ಸುಡುತ್ತಿರುವುದು ಮತ್ತು ಅವರು ಅದರಲ್ಲಿ ವಿಕಾರ ರೂಪಿಗಳಾಗಿರುವರು.
Arabic explanations of the Qur’an:
 
Translation of the meanings Surah: Al-Mu’minūn
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close