Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Āl-‘Imrān   Ayah:
فَاسْتَجَابَ لَهُمْ رَبُّهُمْ اَنِّیْ لَاۤ اُضِیْعُ عَمَلَ عَامِلٍ مِّنْكُمْ مِّنْ ذَكَرٍ اَوْ اُ ۚ— بَعْضُكُمْ مِّنْ بَعْضٍ ۚ— فَالَّذِیْنَ هَاجَرُوْا وَاُخْرِجُوْا مِنْ دِیَارِهِمْ وَاُوْذُوْا فِیْ سَبِیْلِیْ وَقٰتَلُوْا وَقُتِلُوْا لَاُكَفِّرَنَّ عَنْهُمْ سَیِّاٰتِهِمْ وَلَاُدْخِلَنَّهُمْ جَنّٰتٍ تَجْرِیْ مِنْ تَحْتِهَا الْاَنْهٰرُ ۚ— ثَوَابًا مِّنْ عِنْدِ اللّٰهِ ؕ— وَاللّٰهُ عِنْدَهٗ حُسْنُ الثَّوَابِ ۟
ಆಗ ಅವರ ಪ್ರಭು ಅವರ ಪ್ರಾರ್ಥನೆಗೆ ಓಗೊಟ್ಟನು ಅಂದರೆ ನಾನು ನಿಮ್ಮ ಪೈಕಿ ಕರ್ಮವೆಸಗುವ ಯಾವೊಬ್ಬನ ಕರ್ಮವನ್ನು ಅದು ಪುರುಷನದ್ದಾಗಲೀ, ಸ್ತಿçÃಯದ್ದಾಗಲೀ ಎಂದಿಗೂ ನಿಷ್ಫಲಗೊಳಿಸಲಾರೆನು. ನೀವು ಪರಸ್ಪರ ಸಮಾನ ವರ್ಗವಾಗಿದ್ದೀರಿ. ಆದ್ದರಿಂದ ಯಾರು (ನನಗಾಗಿ) ವಲಸೆ ಹೋದರೋ, ಸ್ವಂತ ಮನೆಗಳಿಂದ ಹೊರ ದಬ್ಬಲ್ಪಟ್ಟರೋ ನನ್ನ ಮಾರ್ಗದಲ್ಲಿ ಹಿಂಸೆಗೊಳಗಾದರೂ, ಯುದ್ಧ ಮಾಡಿದರೂ ಮತ್ತು ಹುತಾತ್ಮರಾದರೂ ಅವರಿಗೆ ನಿಶ್ಚಯವಾಗಿಯು ನಾನು ಅವರ ಕೆಡಕುಗಳನ್ನು ದೂರ ಮಾಡುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವಗೋದ್ಯಾನಗಳಲ್ಲಿ ಅವರನ್ನು ಪ್ರವೇಶಿಸುವೆನು. ಅದು ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಾಗಿದೆ.
Arabic explanations of the Qur’an:
لَا یَغُرَّنَّكَ تَقَلُّبُ الَّذِیْنَ كَفَرُوْا فِی الْبِلَادِ ۟ؕ
ನಾಡುಗಳಲ್ಲಿ ಸತ್ಯನಿಷೇಧಿಗಳ ಮೆರೆದಾಟವು ನಿಮ್ಮನ್ನು ವಂಚಿಸದಿರಲಿ.
Arabic explanations of the Qur’an:
مَتَاعٌ قَلِیْلٌ ۫— ثُمَّ مَاْوٰىهُمْ جَهَنَّمُ ؕ— وَبِئْسَ الْمِهَادُ ۟
ಅದು ಕ್ಷÄಲ್ಲಕ ಲಾಭವಾಗಿದೆ. ಅದರ ನಂತರ ಅವರ ನೆಲೆಯು ನರಕವಾಗಿದೆ ಮತ್ತು ಅದೆಷ್ಟು ಕೆಟ್ಟ ವಾಸಸ್ಥಳವಾಗಿದೆ!
Arabic explanations of the Qur’an:
لٰكِنِ الَّذِیْنَ اتَّقَوْا رَبَّهُمْ لَهُمْ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا نُزُلًا مِّنْ عِنْدِ اللّٰهِ ؕ— وَمَا عِنْدَ اللّٰهِ خَیْرٌ لِّلْاَبْرَارِ ۟
ಆದರೆ ಯಾರು ತಮ್ಮ ಪ್ರಭುವನ್ನು ಭಯಪಡುತ್ತಾರೋ ಅವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿರುವರು. ಇದು ಅಲ್ಲಾಹನ ಕಡೆಯ ಆತಿಥ್ಯವಾಗಿದೆ ಮತ್ತು ಸಜ್ಜನರ ಪಾಲಿಗೆ ಅಲ್ಲಾಹನ ಬಳಿಯಲ್ಲಿರುವುದೇ ಅತ್ಯುತ್ತಮವಾಗಿದೆ.
Arabic explanations of the Qur’an:
وَاِنَّ مِنْ اَهْلِ الْكِتٰبِ لَمَنْ یُّؤْمِنُ بِاللّٰهِ وَمَاۤ اُنْزِلَ اِلَیْكُمْ وَمَاۤ اُنْزِلَ اِلَیْهِمْ خٰشِعِیْنَ لِلّٰهِ ۙ— لَا یَشْتَرُوْنَ بِاٰیٰتِ اللّٰهِ ثَمَنًا قَلِیْلًا ؕ— اُولٰٓىِٕكَ لَهُمْ اَجْرُهُمْ عِنْدَ رَبِّهِمْ ؕ— اِنَّ اللّٰهَ سَرِیْعُ الْحِسَابِ ۟
ಖಂಡಿತವಾಗಿಯು ಗ್ರಂಥದವರಲ್ಲಿ ಕೆಲವರು ಅಲ್ಲಾಹನಲ್ಲೂ, ನಿಮ್ಮೆಡೆಗೆ ಅವತೀರ್ಣಗೊಳಿಸಲಾದುದರಲ್ಲೂ ಮತ್ತು ತಮ್ಮೆಡೆಗೆ ಅವತೀರ್ಣಗೊಳಿಸಲಾ- ದುದರಲ್ಲೂ ವಿಶ್ವಾಸವಿಡುವವರಿದ್ದಾರೆ. ಅವರು ಅಲ್ಲಾಹನನ್ನು ಭಯಪಡುತ್ತಾರೆ ಮತ್ತು ಅವರು ಅಲ್ಲಾಹನ ಸೂಕ್ತಿಗಳನ್ನು ಕ್ಷÄಲ್ಲಕ ಬೆಲೆಗೆ ಮಾರುವುದಿಲ್ಲ. ಅವರ ಪ್ರತಿಫಲವು ಅವರ ಪ್ರಭುವಿನ ಬಳಿಯಿರುವುದು. ಖಂಡಿತವಾಗಿಯು ಅಲ್ಲಾಹನು ಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
Arabic explanations of the Qur’an:
یٰۤاَیُّهَا الَّذِیْنَ اٰمَنُوا اصْبِرُوْا وَصَابِرُوْا وَرَابِطُوْا ۫— وَاتَّقُوا اللّٰهَ لَعَلَّكُمْ تُفْلِحُوْنَ ۟۠
ಓ ಸತ್ಯವಿಶ್ವಾಸಿಗಳೇ, ನೀವು ಸಹನೆ ಪಾಲಿಸಿರಿ, ಇತರರಲ್ಲಿ ಸ್ಥೆöÊರ್ಯ ತುಂಬಿರಿ, ಪ್ರತಿರೋಧಕ್ಕೆ ಸನ್ನದ್ಧರಾಗಿರಿ ಮತ್ತು ಸದಾ ಅಲ್ಲಾಹನನ್ನು ಭಯಪಡುತ್ತಿರಿ. ಪ್ರಾಯಶಃ ನೀವು ಜಯಶಾಲಿಗಳಾಗಬಹುದು.
Arabic explanations of the Qur’an:
 
Translation of the meanings Surah: Āl-‘Imrān
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close