Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Āl-‘Imrān   Ayah:
یٰۤاَهْلَ الْكِتٰبِ لِمَ تَلْبِسُوْنَ الْحَقَّ بِالْبَاطِلِ وَتَكْتُمُوْنَ الْحَقَّ وَاَنْتُمْ تَعْلَمُوْنَ ۟۠
ಓ ಗ್ರಂಥದವರೇ, ನೀವು ಸತ್ಯವನ್ನು ಅಸತ್ಯದೊಂದಿಗೆ ಏಕೆ ಬೆರೆಸುತ್ತಿದ್ದೀರಿ ಮತ್ತು (ವಾಸ್ತವಿಕತೆಯನ್ನು) ತಿಳಿದಿದ್ದೂ ಸತ್ಯವನ್ನೇಕೆ ಮರೆಮಾಚುತ್ತೀರಿ?.
Arabic explanations of the Qur’an:
وَقَالَتْ طَّآىِٕفَةٌ مِّنْ اَهْلِ الْكِتٰبِ اٰمِنُوْا بِالَّذِیْۤ اُنْزِلَ عَلَی الَّذِیْنَ اٰمَنُوْا وَجْهَ النَّهَارِ وَاكْفُرُوْۤا اٰخِرَهٗ لَعَلَّهُمْ یَرْجِعُوْنَ ۟ۚۖ
ಗ್ರಂಥದವರ ಪೈಕಿ ಒಂದು ಪಂಗಡದವರು (ಪರಸ್ಪರ ಸಂಚು ಮಾಡುತ್ತಾ) ಹೇಳಿದರು: ನೀವು ಹಗಲಿನ ಆರಂಭದಲ್ಲಿ ಈ ವಿಶ್ವಾಸಿಗಳಿಗೆ ಅವತೀರ್ಣಗೊಂಡಿರುವುದರಲ್ಲಿ (ಕುರ್‌ಆನ್) ವಿಶ್ವಾಸವಿಡಿರಿ ಮತ್ತು ಸಾಯಂಕಾಲದಲ್ಲಿ ಅದನ್ನು ನಿಷೇಧಿಸಿರಿ. ಏಕೆಂದರೆ ಈ ಜನರು ಸಹ ವಿಮುಖರಾಗಿ ಬಿಡಬಹುದು.
Arabic explanations of the Qur’an:
وَلَا تُؤْمِنُوْۤا اِلَّا لِمَنْ تَبِعَ دِیْنَكُمْ ؕ— قُلْ اِنَّ الْهُدٰی هُدَی اللّٰهِ ۙ— اَنْ یُّؤْتٰۤی اَحَدٌ مِّثْلَ مَاۤ اُوْتِیْتُمْ اَوْ یُحَآجُّوْكُمْ عِنْدَ رَبِّكُمْ ؕ— قُلْ اِنَّ الْفَضْلَ بِیَدِ اللّٰهِ ۚ— یُؤْتِیْهِ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟ۚۙ
(ಯಹೂದರು ಹೇಳುತ್ತಾರೆ) ನೀವು ನಿಮ್ಮ ಧರ್ಮವನ್ನು ಅನುಸರಿಸುವವರನ್ನು ಬಿಟ್ಟು ಇನ್ನಾರನ್ನೂ ನಂಬಬೇಡಿರಿ. ನೀವು ಹೇಳಿರಿ: ನಿಸ್ಸಂಶಯವಾಗಿಯು ಸನ್ಮಾರ್ಗವು ಅಲ್ಲಾಹನ ಸನ್ಮಾರ್ಗವಾಗಿದೆ. (ಮತ್ತು ಅವರು ಹೀಗೂ ಹೇಳುತ್ತಾರೆ) ನಿಮಗೆ ನೀಡಲಾದಂತಹ ಧರ್ಮವನ್ನು ಇನ್ನಾರಿಗಾದರು ನೀಡಲ್ಪಡುವುದೆಂದು ಅಥವಾ ಅವರು ನಿಮ್ಮ ಪ್ರಭುವಿನ ಬಳಿ ನಿಮ್ಮ ವಿರುದ್ಧವಾದ ಮಾಡುವರೆಂದು (ನೀವು ನಂಬಬೇಡಿರಿ) (ಪೈಗಂಬರರೇ) ನೀವು ಹೇಳಿರಿ: ಖಂಡಿತವಾಗಿಯು ಅನುಗ್ರಹಗಳು ಅಲ್ಲಾಹನ ಕೈಯಲ್ಲಿವೆ. ಅವನು ತಾನಿಚ್ಛಿಸಿದವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹನು ವಿಶಾಲತೆಯುಳ್ಳವನೂ, ಅರಿಯುವವನೂ ಆಗಿದ್ದಾನೆ.
Arabic explanations of the Qur’an:
یَّخْتَصُّ بِرَحْمَتِهٖ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟
ತಾನಿಚ್ಛಿಸುವವರಿಗೆ ಅವನು ತನ್ನ ಕಾರುಣ್ಯಕ್ಕೆ (ಪ್ರವಾದಿತ್ವಕ್ಕೆ) ವಿಶೇಷವಾಗಿ ಕಾದಿರಿಸುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹ ದಾತನಾಗಿದ್ದಾನೆ.
Arabic explanations of the Qur’an:
وَمِنْ اَهْلِ الْكِتٰبِ مَنْ اِنْ تَاْمَنْهُ بِقِنْطَارٍ یُّؤَدِّهٖۤ اِلَیْكَ ۚ— وَمِنْهُمْ مَّنْ اِنْ تَاْمَنْهُ بِدِیْنَارٍ لَّا یُؤَدِّهٖۤ اِلَیْكَ اِلَّا مَا دُمْتَ عَلَیْهِ قَآىِٕمًا ؕ— ذٰلِكَ بِاَنَّهُمْ قَالُوْا لَیْسَ عَلَیْنَا فِی الْاُمِّیّٖنَ سَبِیْلٌ ۚ— وَیَقُوْلُوْنَ عَلَی اللّٰهِ الْكَذِبَ وَهُمْ یَعْلَمُوْنَ ۟
(ಗ್ರಂಥದವರಲ್ಲಿ ಇಂತಹ) ಕೆಲವು ಪ್ರಾಮಾಣಿಕರಾಗಿದ್ದಾರೆ. ಒಂದು ಚಿನ್ನದ ಭಂಡಾರವನ್ನು ನಂಬಿಕೆಯಿAದ ಒಪ್ಪಿಸಿದರೂ ಅದನ್ನು ನಿಮಗೆ ಮರಳಿಸುವರು ಮತ್ತು ಅವರಲ್ಲಿ ಇನ್ನು ಕೆಲವರು ವಂಚಕರಿದ್ದಾರೆ ಅವರಿಗೆ ಒಂದು ದೀನಾರನ್ನೂ (ಚಿನ್ನದ ನಾಣ್ಯ) ನಂಬಿಕೆಯಿAದ ಒಪ್ಪಿಸಿದರೂ, ಅವರು ಅದನ್ನು ಮರಳಿಸಲಾರರು. ಆದರೆ ನೀವು ಅವರ ಬೆನ್ನಹಿಂದೆಯೇ ಬಿದ್ದರೆ ಬೇರೆ ವಿಚಾರ. ಇದೇಕೆಂದರೆ ಯಹೂದೇತರ ಹಕ್ಕುಗಳ ವಿಷಯದಲ್ಲಿ ನಮಗೆ ಯಾವುದೇ ಪಾಪವಿಲ್ಲವೆಂದು ಅವರು ಹೇಳುವುದರಿಂದಾಗಿದೆ. ಅವರು ತಿಳಿದೂ ತಿಳಿದೂ ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಿದ್ದಾರೆ.
Arabic explanations of the Qur’an:
بَلٰی مَنْ اَوْفٰی بِعَهْدِهٖ وَاتَّقٰی فَاِنَّ اللّٰهَ یُحِبُّ الْمُتَّقِیْنَ ۟
ಏಕಿಲ್ಲ (ಖಂಡಿತ ಅಲ್ಲಾಹನು ಅವರ ವಿಚಾರಣೆ ನಡೆಸುತ್ತಾನೆ ಆದರೆ) ಯಾರು ತನ್ನ ಕರಾರನ್ನು ನೆರವೇರಿಸುತ್ತಾನೋ ಮತ್ತು ಭಯಭಕ್ತಿಯನ್ನು ಪಾಲಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಭಯಭಕ್ತಿಯುಳ್ಳವರನ್ನು ಪ್ರೀತಿಸುತ್ತಾನೆ.
Arabic explanations of the Qur’an:
اِنَّ الَّذِیْنَ یَشْتَرُوْنَ بِعَهْدِ اللّٰهِ وَاَیْمَانِهِمْ ثَمَنًا قَلِیْلًا اُولٰٓىِٕكَ لَا خَلَاقَ لَهُمْ فِی الْاٰخِرَةِ وَلَا یُكَلِّمُهُمُ اللّٰهُ وَلَا یَنْظُرُ اِلَیْهِمْ یَوْمَ الْقِیٰمَةِ وَلَا یُزَكِّیْهِمْ ۪— وَلَهُمْ عَذَابٌ اَلِیْمٌ ۟
ನಿಸ್ಸಂಶಯವಾಗಿಯು ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಶಪಥಗಳನ್ನು ತುಚ್ಛ ಬೆಲೆಗೆ ಮಾರುತ್ತಾರೋ ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹನು ಅವರೊಂದಿಗೆ ಮಾತನಾಡುವುದಿಲ್ಲ, ಅವರ ಕಡೆಗೆ ನೋಡುವುದಿಲ್ಲ, ಅವರನ್ನು ಶುದ್ಧೀಕರಿಸುವುದಿಲ್ಲ ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ.
Arabic explanations of the Qur’an:
 
Translation of the meanings Surah: Āl-‘Imrān
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close