Check out the new design

Traduction des sens du Noble Coran - La traduction en Kannada - Bachîr Maisûrî * - Lexique des traductions


Traduction des sens Sourate: An Naml   Verset:
وَلَقَدْ اَرْسَلْنَاۤ اِلٰی ثَمُوْدَ اَخَاهُمْ صٰلِحًا اَنِ اعْبُدُوا اللّٰهَ فَاِذَا هُمْ فَرِیْقٰنِ یَخْتَصِمُوْنَ ۟
ನಿಶ್ಚಯವಾಗಿಯು ನಾವು ಸಮೂದರೆಡೆಗೆ ಅವರ ಸಹೋದರ ಸ್ವಾಲಿಹರನ್ನು “ನೀವು ಅಲ್ಲಾಹನನ್ನು ಆರಾಧಿಸಿರಿ” ಎಂಬ ಸಂದೇಶದೊAದಿಗೆ ಕಳುಹಿಸದೆವು. ಆಗ ಕೂಡಲೇ ಅವರು ಎರಡು ಗುಂಪುಗಳಾಗಿ ಪರಸ್ಪರ ಜಗಳವಾಡತೊಡಗಿದರು.
Les exégèses en arabe:
قَالَ یٰقَوْمِ لِمَ تَسْتَعْجِلُوْنَ بِالسَّیِّئَةِ قَبْلَ الْحَسَنَةِ ۚ— لَوْلَا تَسْتَغْفِرُوْنَ اللّٰهَ لَعَلَّكُمْ تُرْحَمُوْنَ ۟
ಅವರು ಹೇಳಿದರು: ಓ ನನ್ನ ಜನರೇ, ನೀವು ಒಳಿತಿಗೂ ಮುನ್ನ ಕೆಡುಕಿಗೇಕೆ ಆತುರಪಟ್ಟುಕೊಳ್ಳುತ್ತೀರಿ. ನೀವೇಕೆ ಅಲ್ಲಾಹನಲ್ಲಿ ಕ್ಷಮೆ ಬೇಡುವುದಿಲ್ಲ. ನಿಮ್ಮ ಮೇಲೆ ಕರುಣೆ ತೋರಲೂಬಹುದು.
Les exégèses en arabe:
قَالُوا اطَّیَّرْنَا بِكَ وَبِمَنْ مَّعَكَ ؕ— قَالَ طٰٓىِٕرُكُمْ عِنْدَ اللّٰهِ بَلْ اَنْتُمْ قَوْمٌ تُفْتَنُوْنَ ۟
ಆಗ ಅವರು (ಅವರ ಜನಾಂಗ) ಹೇಳಿದರು: ನಿನ್ನಿಂದ ಮತ್ತು ನಿನ್ನ ಜೊತೆಯಿರುವವರಿಂದ ನಾವು ಅಪಶಕುನವನ್ನು ಅನುಭವಿಸುತ್ತಿದ್ದೇವೆ. ಅವರು ಹೇಳಿದರು: ನಿಮ್ಮ ಶಕುನವು ಅಲ್ಲಾಹನ ಬಳಿಯಿದೆ. ಮಾತ್ರವಲ್ಲ, ನೀವು ಪರೀಕ್ಷೆಗೊಳಗಾದ ಜನಾಂಗವಾಗಿರುವಿರಿ.
Les exégèses en arabe:
وَكَانَ فِی الْمَدِیْنَةِ تِسْعَةُ رَهْطٍ یُّفْسِدُوْنَ فِی الْاَرْضِ وَلَا یُصْلِحُوْنَ ۟
ಆ ಪಟ್ಟಣದಲ್ಲಿ ಒಂಬತ್ತು ಮಂದಿ ಪ್ರಮುಖರಿದ್ದರು. ಅವರು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಿದ್ದರು ಮತ್ತು ಸುಧಾರಣೆ ಮಾಡುತ್ತಿರಲಿಲ್ಲ.
Les exégèses en arabe:
قَالُوْا تَقَاسَمُوْا بِاللّٰهِ لَنُبَیِّتَنَّهٗ وَاَهْلَهٗ ثُمَّ لَنَقُوْلَنَّ لِوَلِیِّهٖ مَا شَهِدْنَا مَهْلِكَ اَهْلِهٖ وَاِنَّا لَصٰدِقُوْنَ ۟
ಅವರು ಪರಸ್ಪರ ಹೀಗೆಂದರು: ಅವಶ್ಯವಾಗಿ ನಾವು ರಾತ್ರೋರಾತ್ರಿ ಸ್ವಾಲಿಹ್ ಮತ್ತು ಅವನ ಮನೆಯವರ ಮೇಲೆ ಆಕ್ರಮಣ ನಡೆಸೋಣ ಎಂದು ಅಲ್ಲಾಹನ ಮೇಲೆ ಆಣೆ ಹಾಕಿರಿ ಮತ್ತು ಅವನ ವಾರೀಸುದಾರರಿಗೆ ಅವನ ಮನೆಯವರ ನಾಶದ ಸಂದರ್ಭದಲ್ಲಿ ನಾವು ಹಾಜರಿರಲಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಡೋಣ. ಮತ್ತು ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.
Les exégèses en arabe:
وَمَكَرُوْا مَكْرًا وَّمَكَرْنَا مَكْرًا وَّهُمْ لَا یَشْعُرُوْنَ ۟
ಅವರೊಂದು ತಂತ್ರವನ್ನು ಹೂಡಿದರು ಮತ್ತು ನಾವೂ ಸಹ ಅವರು ಅರಿಯದಂತೆ ಪ್ರತಿತಂತ್ರವನ್ನು ಹೂಡಿದೆವು.
Les exégèses en arabe:
فَانْظُرْ كَیْفَ كَانَ عَاقِبَةُ مَكْرِهِمْ ۙ— اَنَّا دَمَّرْنٰهُمْ وَقَوْمَهُمْ اَجْمَعِیْنَ ۟
ನೀವು ಅವರ ಕುತಂತ್ರದ ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ. ನಾವು ಅವರನ್ನೂ, ಅವರ ಸಕಲ ಜನರನ್ನೂ, ನಾಶ ಮಾಡಿಬಿಟ್ಟೆವು.
Les exégèses en arabe:
فَتِلْكَ بُیُوْتُهُمْ خَاوِیَةً بِمَا ظَلَمُوْا ؕ— اِنَّ فِیْ ذٰلِكَ لَاٰیَةً لِّقَوْمٍ یَّعْلَمُوْنَ ۟
ಇವು ಅವರ ನಿವಾಸಗಳು ಅವರು ಅಕ್ರಮವೆಸಗಿದ್ದ ನಿಮಿತ್ತ ಕುಸಿದು ಬಿದ್ದಿವೆ. ಇದರಲ್ಲಿ ಅರಿವುಳ್ಳವರಿಗೆ ಮಹಾ ನಿದರ್ಶನವಿದೆ.
Les exégèses en arabe:
وَاَنْجَیْنَا الَّذِیْنَ اٰمَنُوْا وَكَانُوْا یَتَّقُوْنَ ۟
ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.
Les exégèses en arabe:
وَلُوْطًا اِذْ قَالَ لِقَوْمِهٖۤ اَتَاْتُوْنَ الْفَاحِشَةَ وَاَنْتُمْ تُبْصِرُوْنَ ۟
ಮತ್ತು ಲೂತರನ್ನು ಸ್ಮರಿಸಿರಿ ಅವರು ತನ್ನ ಜನರಿಗೆ ಹೇಳಿದ ಸಂದರ್ಭ: ನೀವು ತಿಳಿದೂ ತಿಳಿದೂ ನೀಚಕೃತ್ಯವನ್ನು ಎಸಗುತ್ತಿದ್ದೀರಾ?
Les exégèses en arabe:
اَىِٕنَّكُمْ لَتَاْتُوْنَ الرِّجَالَ شَهْوَةً مِّنْ دُوْنِ النِّسَآءِ ؕ— بَلْ اَنْتُمْ قَوْمٌ تَجْهَلُوْنَ ۟
ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು ಮಹಾ ಅವಿವೇಕವನ್ನು ತೋರಿಸುತ್ತಿರುವಿರಿ.
Les exégèses en arabe:
 
Traduction des sens Sourate: An Naml
Lexique des sourates Numéro de la page
 
Traduction des sens du Noble Coran - La traduction en Kannada - Bachîr Maisûrî - Lexique des traductions

Traduction réalisée par Cheikh Bachir Maissouri. Développement achevé sous la supervision du Centre Rawwâd At-Tarjamah (Les Pionniers de la Traduction).

Fermeture