Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: अन्-नह़्ल   आयत:
وَاللّٰهُ اَنْزَلَ مِنَ السَّمَآءِ مَآءً فَاَحْیَا بِهِ الْاَرْضَ بَعْدَ مَوْتِهَا ؕ— اِنَّ فِیْ ذٰلِكَ لَاٰیَةً لِّقَوْمٍ یَّسْمَعُوْنَ ۟۠
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ ನಿರ್ಜೀವವಾಗಿದ್ದ ಭೂಮಿಯನ್ನು ಅದರ ಮೂಲಕ ಜೀವಂತಗೊಳಿಸಿದನು. ನಿಜವಾಗಿಯೂ ಗಮನವಿಟ್ಟು ಕೇಳುವವರಿಗೆ ಇದರಲ್ಲೊಂದು ದೃಷ್ಟಾಂತವಿದೆ.
अरबी तफ़सीरें:
وَاِنَّ لَكُمْ فِی الْاَنْعَامِ لَعِبْرَةً ؕ— نُسْقِیْكُمْ مِّمَّا فِیْ بُطُوْنِهٖ مِنْ بَیْنِ فَرْثٍ وَّدَمٍ لَّبَنًا خَالِصًا سَآىِٕغًا لِّلشّٰرِبِیْنَ ۟
ಖಂಡಿತವಾಗಿಯು ನಿಮಗೆ ಜಾನುವಾರುಗಳಲ್ಲೊಂದು ಪಾಠವಿದೆ. ಅದರ ಹೊಟ್ಟೆಯೊಳಗಿನ ಸಗಣಿ ಹಾಗೂ ರಕ್ತದ ಮಧ್ಯದಿಂದ ಶುದ್ಧವಾದ ಹಾಲನ್ನು ನಾವು ನಿಮಗೆ ಕುಡಿಸುತ್ತೇವೆ. ಅದು ಕುಡಿಯುವವರಿಗೆ ಸ್ವಾಧಿಷ್ಟಕರವಾಗಿದೆ.
अरबी तफ़सीरें:
وَمِنْ ثَمَرٰتِ النَّخِیْلِ وَالْاَعْنَابِ تَتَّخِذُوْنَ مِنْهُ سَكَرًا وَّرِزْقًا حَسَنًا ؕ— اِنَّ فِیْ ذٰلِكَ لَاٰیَةً لِّقَوْمٍ یَّعْقِلُوْنَ ۟
ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು ಮದ್ಯಪಾನೀಯಗಳನ್ನು ಮತ್ತು ಉತ್ತಮವಾದ ಆಹಾರವನ್ನು ಸಿದ್ಧಪಡಿಸುತ್ತೀರಿ. ನಿಶ್ಚಯವಾಗಿಯು ಬುದ್ಧಿವಂತ ಜನರಿಗೆ ಇದರಲ್ಲಿ ನಿದರ್ಶನವಿದೆ.
अरबी तफ़सीरें:
وَاَوْحٰی رَبُّكَ اِلَی النَّحْلِ اَنِ اتَّخِذِیْ مِنَ الْجِبَالِ بُیُوْتًا وَّمِنَ الشَّجَرِ وَمِمَّا یَعْرِشُوْنَ ۟ۙ
ನಿಮ್ಮ ಪ್ರಭುವು ಜೇನು ನೊಣಕ್ಕೆ ನೀನು ಪರ್ವತಗಳಲ್ಲೂ, ಮರಗಳಲ್ಲೂ ಹಾಗೂ ಜನರಿಂದ ನಿರ್ಮಿಸಲಾದ ಎತ್ತರದ ಕಟ್ಟಡಗಳಲ್ಲೂ ನಿನ್ನ ಗೂಡುಗಳನ್ನು ನಿರ್ಮಿಸು ಎಂದು ಸಂದೇಶ ನೀಡಿದನು .
अरबी तफ़सीरें:
ثُمَّ كُلِیْ مِنْ كُلِّ الثَّمَرٰتِ فَاسْلُكِیْ سُبُلَ رَبِّكِ ذُلُلًا ؕ— یَخْرُجُ مِنْ بُطُوْنِهَا شَرَابٌ مُّخْتَلِفٌ اَلْوَانُهٗ فِیْهِ شِفَآءٌ لِّلنَّاسِ ؕ— اِنَّ فِیْ ذٰلِكَ لَاٰیَةً لِّقَوْمٍ یَّتَفَكَّرُوْنَ ۟
ನೀನು ಎಲ್ಲಾ ವಿಧದ ಫಲಪುಷ್ಪಗಳ ರಸವನ್ನು ಹೀರು ಮತ್ತು ನಿನ್ನ ಪ್ರಭುವಿನ ಸರಳವಾದ ಮಾರ್ಗಗಳಲ್ಲಿ ಸಂಚರಿಸುತ್ತಿರು. ಅವುಗಳ ಹೊಟ್ಟೆಗಳಿಂದ ವಿಭನ್ನ ಬಣ್ಣಗಳ ಪಾನೀಯವು ಹೊರ ಬರುತ್ತದೆ. ಅದರಲ್ಲಿ ಜನರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಚಿಂತಕರಿಗೆ ಇದರಲ್ಲೊಂದು ನಿದರ್ಶನವಿದೆ.
अरबी तफ़सीरें:
وَاللّٰهُ خَلَقَكُمْ ثُمَّ یَتَوَفّٰىكُمْ وَمِنْكُمْ مَّنْ یُّرَدُّ اِلٰۤی اَرْذَلِ الْعُمُرِ لِكَیْ لَا یَعْلَمَ بَعْدَ عِلْمٍ شَیْـًٔا ؕ— اِنَّ اللّٰهَ عَلِیْمٌ قَدِیْرٌ ۟۠
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿರುವನು. ನಂತರ ನಿಮಗೆ ಮರಣ ನೀಡುವನು. ನಿಮ್ಮ ಪೈಕಿ ಕೆಲವರು ಅರಿವನ್ನು ಹೊಂದಿದ ಬಳಿಕವೂ ಏನೂ ಅರಿಯದವರಂತೆ ಅತೀ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಸರ್ವ ಸಮರ್ಥನೂ ಆಗಿದ್ದಾನೆ.
अरबी तफ़सीरें:
وَاللّٰهُ فَضَّلَ بَعْضَكُمْ عَلٰی بَعْضٍ فِی الرِّزْقِ ۚ— فَمَا الَّذِیْنَ فُضِّلُوْا بِرَآدِّیْ رِزْقِهِمْ عَلٰی مَا مَلَكَتْ اَیْمَانُهُمْ فَهُمْ فِیْهِ سَوَآءٌ ؕ— اَفَبِنِعْمَةِ اللّٰهِ یَجْحَدُوْنَ ۟
ಅಲ್ಲಾಹನು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೇಲೆ ಜೀವನಾಧಾರದಲ್ಲಿ ಶ್ರೇಷ್ಠಗೊಳಿಸಿರುವನು. ಶ್ರೇಷ್ಠತೆ ನೀಡಲ್ಪಟ್ಟವರು ತಮ್ಮ ಸಂಪತ್ತನ್ನು ತಮ್ಮ ಗುಲಾಮರಿಗೆ ಅವರು ಅದರಲ್ಲಿ ಸಮಾನರಾಗಲು ಒಪ್ಪಿಸಲಾರರು. (ನೀವು ಅಲ್ಲಾಹನ ದಾಸರನ್ನು ಅವನ ಸರಿಮಾನರನ್ನಾಗಿ ಹೇಗೆ ನಿಶ್ಚಯಿಸುವಿರಿ) ಹೀಗಿರುವಾಗ ಅವರು ಅಲ್ಲಾಹನ ಅನುಗ್ರಹಗಳನ್ನು ನಿರಾಕರಿಸುತ್ತಿದ್ದಾರೆಯೇ?
अरबी तफ़सीरें:
وَاللّٰهُ جَعَلَ لَكُمْ مِّنْ اَنْفُسِكُمْ اَزْوَاجًا وَّجَعَلَ لَكُمْ مِّنْ اَزْوَاجِكُمْ بَنِیْنَ وَحَفَدَةً وَّرَزَقَكُمْ مِّنَ الطَّیِّبٰتِ ؕ— اَفَبِالْبَاطِلِ یُؤْمِنُوْنَ وَبِنِعْمَتِ اللّٰهِ هُمْ یَكْفُرُوْنَ ۟ۙ
ಅಲ್ಲಾಹನು ನಿಮಗಾಗಿ ನಿಮ್ಮ ವರ್ಗದಿಂದಲೇ ನಿಮ್ಮ ಜೋಡಿಗಳನ್ನುಂಟು ಮಾಡಿದನು ಮತ್ತು ನಿಮ್ಮ ಪತ್ನಿಯರಿಂದ ನಿಮಗಾಗಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ದಯಪಾಲಿಸಿದನು ಹಾಗೂ ನಿಮಗೆ ಶುದ್ಧವಾದ ವಸ್ತುಗಳಿಂದ ಆಹಾರವನ್ನು ನೀಡಿದನು. ಹಾಗಿದ್ದೂ ಜನರು ಸತ್ಯವನ್ನು ಬಿಟ್ಟು, ಮಿಥ್ಯದಲ್ಲಿ ವಿಶ್ವಾಸವಿಡುತ್ತಿದ್ದಾರೆಯೇ? ಮತ್ತು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆಯನ್ನು ತೋರುತ್ತಿದ್ದಾರೆಯೇ?
अरबी तफ़सीरें:
 
अर्थों का अनुवाद सूरा: अन्-नह़्ल
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें