Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: अल्-ब-क़-रा   आयत:
سَلْ بَنِیْۤ اِسْرَآءِیْلَ كَمْ اٰتَیْنٰهُمْ مِّنْ اٰیَةٍ بَیِّنَةٍ ؕ— وَمَنْ یُّبَدِّلْ نِعْمَةَ اللّٰهِ مِنْ بَعْدِ مَا جَآءَتْهُ فَاِنَّ اللّٰهَ شَدِیْدُ الْعِقَابِ ۟
ಇಸ್ರಾಯೀಲ್ ಸಂತತಿಗಳಲ್ಲಿ ವಿಚಾರಿಸಿರಿ, ನಾವು ಎಷ್ಟೆಲ್ಲಾ ಸುಸ್ಪಷ್ಟ ದೃಷ್ಟಾಂತಗಳನ್ನು ದಯಪಾಲಿಸಿದ್ದೇವೆ. ಮತ್ತು ಯಾರು ಅಲ್ಲಾಹನ ಅನುಗ್ರಹಗಳನ್ನು ತನ್ನ ಬಳಿಗೆ ಬಂದ ಬಳಿಕವು ಬದಲಾಯಿಸುತ್ತಾನೋ (ತಿಳಿದುಕೊಳ್ಳಲಿ) ಖಂಡಿತವಾಗಿಯು ಅಲ್ಲಾಹನು ಅತ್ಯುಗ್ರ ಶಿಕ್ಷೆಗಳನ್ನು ನೀಡುವವನಾಗಿದ್ದಾನೆ.
अरबी तफ़सीरें:
زُیِّنَ لِلَّذِیْنَ كَفَرُوا الْحَیٰوةُ الدُّنْیَا وَیَسْخَرُوْنَ مِنَ الَّذِیْنَ اٰمَنُوْا ۘ— وَالَّذِیْنَ اتَّقَوْا فَوْقَهُمْ یَوْمَ الْقِیٰمَةِ ؕ— وَاللّٰهُ یَرْزُقُ مَنْ یَّشَآءُ بِغَیْرِ حِسَابٍ ۟
ಸತ್ಯನಿಷೇಧಿಗಳಿಗೆ ಇಹಲೋಕ ಜೀವನವನ್ನು ಅಲಂಕೃತಗೊಳಿಸಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ಅಪಹಾಸ್ಯ ಮಾಡುತ್ತಾರೆ. ವಸ್ತುತಃ ಭಯಭಕ್ತಿ ಹೊಂದಿದವರು ಪುನರುತ್ಥಾನ ದಿನದಂದು ಅತ್ಯುನ್ನತ ಸ್ಥಾನದಲ್ಲಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತವಾಗಿ ಜೀವನಾಧಾರ ನೀಡುತ್ತಾನೆ.
अरबी तफ़सीरें:
كَانَ النَّاسُ اُمَّةً وَّاحِدَةً ۫— فَبَعَثَ اللّٰهُ النَّبِیّٖنَ مُبَشِّرِیْنَ وَمُنْذِرِیْنَ ۪— وَاَنْزَلَ مَعَهُمُ الْكِتٰبَ بِالْحَقِّ لِیَحْكُمَ بَیْنَ النَّاسِ فِیْمَا اخْتَلَفُوْا فِیْهِ ؕ— وَمَا اخْتَلَفَ فِیْهِ اِلَّا الَّذِیْنَ اُوْتُوْهُ مِنْ بَعْدِ مَا جَآءَتْهُمُ الْبَیِّنٰتُ بَغْیًا بَیْنَهُمْ ۚ— فَهَدَی اللّٰهُ الَّذِیْنَ اٰمَنُوْا لِمَا اخْتَلَفُوْا فِیْهِ مِنَ الْحَقِّ بِاِذْنِهٖ ؕ— وَاللّٰهُ یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ಮನುಷ್ಯರು ಒಂದೇ ಸಮುದಾಯವಾಗಿದ್ದರು(ಕಾಲಕ್ರಮೇಣ ಅವರಲ್ಲಿ ಭಿನ್ನಭಿಪ್ರಾಯ ಉಂಟಾದಾಗ) ಅಲ್ಲಾಹನು ಸುವಾರ್ತೆ ನೀಡುವವರನ್ನಾಗಿಯು ಎಚ್ಚರಿಕೆ ಕೊಡುವವರನ್ನಾಗಿಯು ಪೈಗಂಬರರÀನ್ನು ನಿಯೋಗಿಸಿದನು ಮತ್ತು ಜನರು ನಡುವಿನ ಭಿನ್ನತೆಯ ವಿಷಯಗಳಲ್ಲಿ ತೀರ್ಪುನೀಡಲೆಂದು ಅವರ ಜೊತೆ ಸತ್ಯದೊಂದಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಆದರೆ ಗ್ರಂಥ ನೀಡಲಾದವರು ತಮ್ಮಲ್ಲಿಗೆ ಸುಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಪರಸ್ಪರ ಹಟ ಹಾಗು ಹಗೆತನದ ಕಾರಣದಿಂದ ಅದರಲ್ಲಿ ಭಿನ್ನತೆಯನ್ನುಂಟು ಮಾಡಿದ್ದರು. ಆದ್ದರಿಂದ ಅಲ್ಲಾಹನು ಅವರು ಯಾವ ಸತ್ಯದಲ್ಲಿ ಭಿನ್ನತೆ ಹೊಂದಿದ್ದರೋ ಆ ಸತ್ಯದೆಡೆಗೆ ತನ್ನ ಇಚ್ಛೆ ಪ್ರಕಾರ ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಮಾಡಿದನು ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
अरबी तफ़सीरें:
اَمْ حَسِبْتُمْ اَنْ تَدْخُلُوا الْجَنَّةَ وَلَمَّا یَاْتِكُمْ مَّثَلُ الَّذِیْنَ خَلَوْا مِنْ قَبْلِكُمْ ؕ— مَسَّتْهُمُ الْبَاْسَآءُ وَالضَّرَّآءُ وَزُلْزِلُوْا حَتّٰی یَقُوْلَ الرَّسُوْلُ وَالَّذِیْنَ اٰمَنُوْا مَعَهٗ مَتٰی نَصْرُ اللّٰهِ ؕ— اَلَاۤ اِنَّ نَصْرَ اللّٰهِ قَرِیْبٌ ۟
(ಓ ಸತ್ಯವಿಶ್ವಾಸಿಗಳೇ) ನಿಮ್ಮ ಪೂರ್ವಿಕರಿಗೆ ಬಂದAತಹಾ ಸ್ಥಿತಿಯು (ಪರೀಕ್ಷೆ) ನಿಮಗೂ ಬರದೆ ಸ್ವರ್ಗವನ್ನು ಪ್ರವೇಶಿಸಬಿಡಬಹುದೆಂದು ನೀವು ಭಾವಿಸಿಕೊಂಡಿದ್ದೀರಾ? ವಸ್ತುತಃ ಅವರನ್ನು, ದಟ್ಟ ದಾರಿದ್ರö್ಯವೂ, ರೋಗರುಜಿನವೂ ಬಾಧಿಸಿಬಿಟ್ಟಿದ್ದವು. ಮತ್ತು ಸಂದೇಶವಾಹಕರು ಹಾಗೂ ಅವರ ಜೊತೆಯಿದ್ದಂತಹ ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯವು ಯಾವಾಗ ಬರುತ್ತದೆ? ಎಂದು ಹೇಳುವಷ್ಟರ ಮಟ್ಟಿಗೆ ಅವರು ಕಂಪಿಸಲ್ಪಟ್ಟರು. ತಿಳಿದುಕೊಳ್ಳಿರಿ! ನಿಶ್ಚಯವಾಗಿಯು ಅಲ್ಲಾಹನ ಸಹಾಯವು ಸಮೀಪದಲ್ಲೇ ಇದೆ.
अरबी तफ़सीरें:
یَسْـَٔلُوْنَكَ مَاذَا یُنْفِقُوْنَ ؕ— قُلْ مَاۤ اَنْفَقْتُمْ مِّنْ خَیْرٍ فَلِلْوَالِدَیْنِ وَالْاَقْرَبِیْنَ وَالْیَتٰمٰی وَالْمَسٰكِیْنِ وَابْنِ السَّبِیْلِ ؕ— وَمَا تَفْعَلُوْا مِنْ خَیْرٍ فَاِنَّ اللّٰهَ بِهٖ عَلِیْمٌ ۟
ಓ ಪೈಗಂಬರರೇ, ಏನನ್ನು ಖರ್ಚು ಮಾಡಬೇಕೆಂದು ಜನರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ; ನೀವು ಖರ್ಚು ಮಾಡಿದಂತಹ ಸಂಪತ್ತು (ದಾನಧರ್ಮ) ಮಾತಾಪಿತರಿಗೂ, ಆಪ್ತಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ವಿಪ್ಪತ್ತಿಗೀಡಾದ ಪ್ರಯಾಣಿಕರಿಗೂ, ತಲುಪಲಿ ಮತ್ತು ನೀವು ಯಾವುದೇ ಒಳಿತನ್ನು ಮಾಡಿರಲಿ, ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಅರಿಯುಳ್ಳವನಾಗಿದ್ದಾನೆ.
अरबी तफ़सीरें:
 
अर्थों का अनुवाद सूरा: अल्-ब-क़-रा
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें