Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: अल्-अम्बिया   आयत:
وَاِذَا رَاٰكَ الَّذِیْنَ كَفَرُوْۤا اِنْ یَّتَّخِذُوْنَكَ اِلَّا هُزُوًا ؕ— اَهٰذَا الَّذِیْ یَذْكُرُ اٰلِهَتَكُمْ ۚ— وَهُمْ بِذِكْرِ الرَّحْمٰنِ هُمْ كٰفِرُوْنَ ۟
ಸತ್ಯ ನಿಷೇಧಿಗಳು ನಿಮ್ಮನ್ನು ಕಂಡಾಗ ನಿಮ್ಮ ದೇವರುಗಳ ಖಂಡನಾತ್ಮಕ ಪ್ರಸ್ತಾಪ ಮಾಡುವವನು ಇವನೇ ಎನು? ಎಂದು ಪರಿಹಾಸ್ಯ ಮಾಡುತ್ತಾರೆ ಮತ್ತು ಅವರಾದರೂ ಪರಮ ದಯಾಮಯನ ಸ್ಮರಣೆಯನ್ನು ನಿರಾಕರಿಸುತ್ತಾರೆ.
अरबी तफ़सीरें:
خُلِقَ الْاِنْسَانُ مِنْ عَجَلٍ ؕ— سَاُورِیْكُمْ اٰیٰتِیْ فَلَا تَسْتَعْجِلُوْنِ ۟
ಮನುಷ್ಯನನ್ನು ದುಡುಕು ಸ್ವಭಾವದವನಾಗಿ ಸೃಷ್ಟಿಸಲಾಗಿದೆ. ಸಧ್ಯದಲ್ಲೇ ನಾನು ನಿಮಗೆ ನನ್ನ ದೃಷ್ಟಾಂತಗಳನ್ನು ತೋರಿಸಿ ಕೊಡಲಿದ್ದೇನೆ. ನೀವು ನನ್ನಲ್ಲಿ (ಯಾತನೆಗಾಗಿ) ಆತುರ ಪಡಬೇಡಿರಿ.
अरबी तफ़सीरें:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಈಡೇರುವುದು ಯಾವಾಗ ಎಂದು ಇವರು ಕೇಳುತ್ತಾರೆ.
अरबी तफ़सीरें:
لَوْ یَعْلَمُ الَّذِیْنَ كَفَرُوْا حِیْنَ لَا یَكُفُّوْنَ عَنْ وُّجُوْهِهِمُ النَّارَ وَلَا عَنْ ظُهُوْرِهِمْ وَلَا هُمْ یُنْصَرُوْنَ ۟
ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲೀ, ತಮ್ಮ ಬೆನ್ನುಗಳಿಂದಾಗಲೀ ನರಕಾಗ್ನಿಯನ್ನು ತಡೆಯಲಾಗದ ಮತ್ತು ಸಹಾಯವನ್ನೂ ನೀಡಲಾಗದ ಸಂದರ್ಭವನ್ನು ಅರಿಯುತ್ತಿದ್ದರೆ!
अरबी तफ़सीरें:
بَلْ تَاْتِیْهِمْ بَغْتَةً فَتَبْهَتُهُمْ فَلَا یَسْتَطِیْعُوْنَ رَدَّهَا وَلَا هُمْ یُنْظَرُوْنَ ۟
ಪ್ರಳಯ ಸಮಯವು ಹಠಾತ್ತನೆ ಅವರ ಬಳಿಗೆ ಬಂದೆರಗುವುದು ಮತ್ತು ಅವರನ್ನು ದಿಗ್ಭಾçಂತಗೊಳಿಸುವುದು. ಅನಂತರ ಅವರು ಅದನ್ನು ತಡೆಯಲಾರರು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.
अरबी तफ़सीरें:
وَلَقَدِ اسْتُهْزِئَ بِرُسُلٍ مِّنْ قَبْلِكَ فَحَاقَ بِالَّذِیْنَ سَخِرُوْا مِنْهُمْ مَّا كَانُوْا بِهٖ یَسْتَهْزِءُوْنَ ۟۠
ಓ ಪ್ರವಾದಿ ನಿಮಗಿಂತ ಮುಂಚಿನ ಸಂದೇಶವಾಹಕರೊAದಿಗೂ ಪರಿಹಾಸ್ಯ ಮಾಡಲಾಗಿತ್ತು. ಆದರೆ ಅವರಿಗೆ ಪರಿಹಾಸ್ಯ ಮಾಡುತ್ತಿದ್ದುದ್ದೇ ಆವರಿಸಿ ಬಿಟ್ಟಿತು.
अरबी तफ़सीरें:
قُلْ مَنْ یَّكْلَؤُكُمْ بِالَّیْلِ وَالنَّهَارِ مِنَ الرَّحْمٰنِ ؕ— بَلْ هُمْ عَنْ ذِكْرِ رَبِّهِمْ مُّعْرِضُوْنَ ۟
ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
अरबी तफ़सीरें:
اَمْ لَهُمْ اٰلِهَةٌ تَمْنَعُهُمْ مِّنْ دُوْنِنَا ؕ— لَا یَسْتَطِیْعُوْنَ نَصْرَ اَنْفُسِهِمْ وَلَا هُمْ مِّنَّا یُصْحَبُوْنَ ۟
ಏನು! ಅವರಿಗೆ ನಮ್ಮ ಹೊರತು ವಿಪತ್ತುಗಳಿಂದ ತಡೆಯುವಂತಹ ಇತರೆ ದೇವರುಗಳಿದ್ದಾರೆಯೇ? ಅವರು ಸ್ವತಃ ತಮಗೂ ಸಹಾಯ ಮಡಲಾರರು ಮತ್ತು ಅವರಿಗೆ ನಮ್ಮ ಕಡೆಯಿಂದ ಸಹಾಯವು ನೀಡಲಾಗದು.
अरबी तफ़सीरें:
بَلْ مَتَّعْنَا هٰۤؤُلَآءِ وَاٰبَآءَهُمْ حَتّٰی طَالَ عَلَیْهِمُ الْعُمُرُ ؕ— اَفَلَا یَرَوْنَ اَنَّا نَاْتِی الْاَرْضَ نَنْقُصُهَا مِنْ اَطْرَافِهَا ؕ— اَفَهُمُ الْغٰلِبُوْنَ ۟
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?
अरबी तफ़सीरें:
 
अर्थों का अनुवाद सूरा: अल्-अम्बिया
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें