Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: अल्-मुमिनून   आयत:
وَاَنْزَلْنَا مِنَ السَّمَآءِ مَآءً بِقَدَرٍ فَاَسْكَنّٰهُ فِی الْاَرْضِ ۖۗ— وَاِنَّا عَلٰی ذَهَابٍ بِهٖ لَقٰدِرُوْنَ ۟ۚ
ನಾವು ಆಕಾಶದಿಂದ ನೀರನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸುರಿಸಿದೆವು. ಮತ್ತು ಅದನ್ನು ಭೂಮಿಯಲ್ಲಿ ತಂಗಿಸಿದೆವು ಖಂಡಿತ ನಾವು ಅದನ್ನು ಬತ್ತಿಸಲು ಶಕ್ತರು.
अरबी तफ़सीरें:
فَاَنْشَاْنَا لَكُمْ بِهٖ جَنّٰتٍ مِّنْ نَّخِیْلٍ وَّاَعْنَابٍ ۘ— لَكُمْ فِیْهَا فَوَاكِهُ كَثِیْرَةٌ وَّمِنْهَا تَاْكُلُوْنَ ۟ۙ
ಆ ನೀರಿನ ಮೂಲಕ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷೆಗಳ ತೋಟಗಳನ್ನು ಉಂಟು ಮಾಡಿದೆವು. ಹಾಗೂ ನಿಮಗೋಸ್ಕರ ಅದರಲ್ಲಿ ಅನೇಕ ಹಣ್ಣು ಹಂಪಲುಗಳಿವೆ. ಮತ್ತು ಅವುಗಳಿಂದ ನೀವು ತಿನ್ನುತ್ತೀರಿ.
अरबी तफ़सीरें:
وَشَجَرَةً تَخْرُجُ مِنْ طُوْرِ سَیْنَآءَ تَنْۢبُتُ بِالدُّهْنِ وَصِبْغٍ لِّلْاٰكِلِیْنَ ۟
ತೂರೆಸೀನಾ ಪರ್ವತದಿಂದ ಒಂದು ಮರ ಬೆಳೆಯುತ್ತದೆ. ಅದು ಎಣ್ಣೆಯನ್ನು ಮತ್ತು ತಿನ್ನುವವರಿಗೆ ಪದಾರ್ಥವನ್ನು ಉತ್ಪಾದಿಸುತ್ತದೆ.
अरबी तफ़सीरें:
وَاِنَّ لَكُمْ فِی الْاَنْعَامِ لَعِبْرَةً ؕ— نُسْقِیْكُمْ مِّمَّا فِیْ بُطُوْنِهَا وَلَكُمْ فِیْهَا مَنَافِعُ كَثِیْرَةٌ وَّمِنْهَا تَاْكُلُوْنَ ۟ۙ
ಖಂಡಿತವಾಗಿಯು ಜಾನುವಾರುಗಳಲ್ಲಿ ನಿಮಗೊಂದು ಪಾಠವಿದೆ. ನಾವು ಅವುಗಳ ಹೊಟ್ಟೆಗಳಿಂದ ನಿಮಗೆ ಹಾಲನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಹಾಗೂ ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ.
अरबी तफ़सीरें:
وَعَلَیْهَا وَعَلَی الْفُلْكِ تُحْمَلُوْنَ ۟۠
ಮತ್ತು ಅವುಗಳ ಮೇಲೂ, ಹಡಗಿನ ಮೇಲೂ ನೀವು ಸವಾರಿ ಮಾಡುತ್ತೀರಿ.
अरबी तफ़सीरें:
وَلَقَدْ اَرْسَلْنَا نُوْحًا اِلٰی قَوْمِهٖ فَقَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اَفَلَا تَتَّقُوْنَ ۟
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮ್ಮ ಯಾವ ಆರಾಧ್ಯನಿಲ್ಲ ನೀವು (ಅವನನ್ನು) ಭಯಪಡುವುದಿಲ್ಲವೇ?
अरबी तफ़सीरें:
فَقَالَ الْمَلَؤُا الَّذِیْنَ كَفَرُوْا مِنْ قَوْمِهٖ مَا هٰذَاۤ اِلَّا بَشَرٌ مِّثْلُكُمْ ۙ— یُرِیْدُ اَنْ یَّتَفَضَّلَ عَلَیْكُمْ ؕ— وَلَوْ شَآءَ اللّٰهُ لَاَنْزَلَ مَلٰٓىِٕكَةً ۖۚ— مَّا سَمِعْنَا بِهٰذَا فِیْۤ اٰبَآىِٕنَا الْاَوَّلِیْنَ ۟ۚۖ
ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
अरबी तफ़सीरें:
اِنْ هُوَ اِلَّا رَجُلٌۢ بِهٖ جِنَّةٌ فَتَرَبَّصُوْا بِهٖ حَتّٰی حِیْنٍ ۟
ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
अरबी तफ़सीरें:
قَالَ رَبِّ انْصُرْنِیْ بِمَا كَذَّبُوْنِ ۟
ನೂಹರು ಪ್ರಾರ್ಥಿಸಿದರು: ನನ್ನ ಪ್ರಭು, ಇವರು ನನ್ನನು ಸುಳ್ಳಾಗಿಸಿರುವುದರಿಂದ ನೀನು ನನಗೆ ಸಹಾಯ ಮಾಡು.
अरबी तफ़सीरें:
فَاَوْحَیْنَاۤ اِلَیْهِ اَنِ اصْنَعِ الْفُلْكَ بِاَعْیُنِنَا وَوَحْیِنَا فَاِذَا جَآءَ اَمْرُنَا وَفَارَ التَّنُّوْرُ ۙ— فَاسْلُكْ فِیْهَا مِنْ كُلٍّ زَوْجَیْنِ اثْنَیْنِ وَاَهْلَكَ اِلَّا مَنْ سَبَقَ عَلَیْهِ الْقَوْلُ مِنْهُمْ ۚ— وَلَا تُخَاطِبْنِیْ فِی الَّذِیْنَ ظَلَمُوْا ۚ— اِنَّهُمْ مُّغْرَقُوْنَ ۟
ನಾವು ಅವರೆಡೆಗೆ ದಿವ್ಯ ಸಂದೇಶ ಮಾಡಿದೆವು: “ನೀವು ನಮ್ಮ ಮೇಲ್ನೋಟದಲ್ಲಿ, ನಮ್ಮ ನಿರ್ದೇಶನದ ಪ್ರಕಾರ ಹಡಗೊಂದನ್ನು ನಿರ್ಮಿಸಿರಿ. ನಮ್ಮ ಆಜ್ಞೆಯು ಬಂದಾಗ ಹಾಗೂ ತಂದೂರಿ ಓಲೆಯು ಉಕ್ಕಿ ಹರಿದರೆ ನೀವು ಪ್ರತಿಯೊಂದು ಜಾತಿಯ ಒಂದೊAದು ಜೋಡಿಯನ್ನು (ಗಂಡು-ಹೆಣ್ಣನ್ನು) ಅದರಲ್ಲಿ ಹತ್ತಿಸಿರಿ. ಮತ್ತು ನಿಮ್ಮ ಕುಟುಂಬದವರನ್ನು ಸಹ. ಆದರೆ ಅವರ ಪೈಕಿ ಯಾರ ಮೇಲೆ ನಮ್ಮ ಶಿಕ್ಷೆಯು ನಿಶ್ಚಿತವಾಗಿದೆಯೋ ಅವರ ಹೊರತು. ಮತ್ತು ಅಕ್ರಮವೆಸಗಿದವರ ವಿಚಾರದಲ್ಲಿ ನೀವು ನನ್ನೊಂದಿಗೆ ಚಕಾರವೆತ್ತಬೇಡಿರಿ. ಏಕೆಂದರೆ, ಅವರು ಮುಳುಗಿ ಹೋಗುವವರಿದ್ದಾರೆ”.
अरबी तफ़सीरें:
 
अर्थों का अनुवाद सूरा: अल्-मुमिनून
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें