Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: आले इम्रान   आयत:

ಆಲು ಇಮ್ರಾನ್

الٓمَّٓ ۟ۙۚ
ಅಲಿಫ್ ಲಾಮ್ ಮೀಮ್
अरबी तफ़सीरें:
اللّٰهُ لَاۤ اِلٰهَ اِلَّا هُوَ الْحَیُّ الْقَیُّوْمُ ۟ؕ
ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ ಅವನು ಚಿರಂತನನು, ಸರ್ವ ನಿಯಂತ್ರಕನಾಗಿದ್ದಾನೆ.
अरबी तफ़सीरें:
نَزَّلَ عَلَیْكَ الْكِتٰبَ بِالْحَقِّ مُصَدِّقًا لِّمَا بَیْنَ یَدَیْهِ وَاَنْزَلَ التَّوْرٰىةَ وَالْاِنْجِیْلَ ۟ۙ
ಅವನು ನಿಮ್ಮ ಮೇಲೆ ತನ್ನ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುವಂತಹ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುತ್ತಾನೆ.
अरबी तफ़सीरें:
مِنْ قَبْلُ هُدًی لِّلنَّاسِ وَاَنْزَلَ الْفُرْقَانَ ؕ۬— اِنَّ الَّذِیْنَ كَفَرُوْا بِاٰیٰتِ اللّٰهِ لَهُمْ عَذَابٌ شَدِیْدٌ ؕ— وَاللّٰهُ عَزِیْزٌ ذُو انْتِقَامٍ ۟ؕ
ಇದಕ್ಕಿಂತ ಮುಂಚೆ ಜನರ ಮಾರ್ಗದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲನ್ನು ಅವತೀರ್ಣಗೊಳಿಸಿದನು. ಮತ್ತು ಅವನೇ ಸತ್ಯಾಸತ್ಯತೆಯ ಮಾನದಂಡವಾಗಿ ಖುರ್‌ಆನನ್ನು ಅವತೀರ್ಣಗೊಳಿಸಿರುತ್ತಾನೆ. ಖಂಡಿತವಾಗಿಯು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸಿದವರಿಗೆ ಉಗ್ರ ಶಿಕ್ಷೆ ಇದೆ. ಮತ್ತು ಅಲ್ಲಾಹನು ಪ್ರತಾಪಶಾಲಿಯು, ಪ್ರತಿಕಾರ ತೀರಿಸಿಕೊಳ್ಳುವವನು ಆಗಿದ್ದಾನೆ.
अरबी तफ़सीरें:
اِنَّ اللّٰهَ لَا یَخْفٰی عَلَیْهِ شَیْءٌ فِی الْاَرْضِ وَلَا فِی السَّمَآءِ ۟ؕ
ಖಂಡಿತವಾಗಿಯೂ ಭೂಮಿ ಮತ್ತು ಆಕಾಶಗಳ ಯಾವ ವಸ್ತುವೂ ಅಲ್ಲಾಹನಿಂದ ಮರೆಯಾಗಿಲ್ಲ.
अरबी तफ़सीरें:
هُوَ الَّذِیْ یُصَوِّرُكُمْ فِی الْاَرْحَامِ كَیْفَ یَشَآءُ ؕ— لَاۤ اِلٰهَ اِلَّا هُوَ الْعَزِیْزُ الْحَكِیْمُ ۟
ಅವನೇ ತಾಯಿಯ ಗರ್ಭಾಶಯದಲ್ಲಿ ತಾನಿಚ್ಛಿಸುವ ರೀತಿಯಲ್ಲಿ ನಿಮಗೆ ರೂಪ ಕೊಡುತ್ತಾನೆ. ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಅವನು ಪ್ರತಾಪಶಾಲಿಯು, ಯುಕ್ತಿಪೂರ್ಣನು ಆಗಿದ್ದಾನೆ.
अरबी तफ़सीरें:
هُوَ الَّذِیْۤ اَنْزَلَ عَلَیْكَ الْكِتٰبَ مِنْهُ اٰیٰتٌ مُّحْكَمٰتٌ هُنَّ اُمُّ الْكِتٰبِ وَاُخَرُ مُتَشٰبِهٰتٌ ؕ— فَاَمَّا الَّذِیْنَ فِیْ قُلُوْبِهِمْ زَیْغٌ فَیَتَّبِعُوْنَ مَا تَشَابَهَ مِنْهُ ابْتِغَآءَ الْفِتْنَةِ وَابْتِغَآءَ تَاْوِیْلِهٖ ؔۚ— وَمَا یَعْلَمُ تَاْوِیْلَهٗۤ اِلَّا اللّٰهُ ۘؐ— وَالرّٰسِخُوْنَ فِی الْعِلْمِ یَقُوْلُوْنَ اٰمَنَّا بِهٖ ۙ— كُلٌّ مِّنْ عِنْدِ رَبِّنَا ۚ— وَمَا یَذَّكَّرُ اِلَّاۤ اُولُوا الْاَلْبَابِ ۟
ಓ ಪೈಗಂಬರರೇ ಅವನೇ ನಿಮ್ಮ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಸುಸ್ಪಷ್ಟವಾದ ಸದೃಢ ಸೂಕ್ತಿಗಳಿವೆ ಅವು ಗ್ರಂಥದ ಮೂಲವಾಗಿವೆ ಮತ್ತು ಕೆಲವು ಅಸ್ಪಷ್ಟ (ಬಹು ಅರ್ಥದ) ಸೂಕ್ತಿಗಳಿವೆ ಆದರೆ ಹೃದಯಗಳಲ್ಲಿ ವಕ್ರತೆ ಇರುವವರು ಗೊಂದಲವನ್ನುAಟು ಮಾಡಲು ಮತ್ತು ಅವುಗಳ ದುರ್ವ್ಯಾಖ್ಯಾನದ ಉದ್ದೇಶದಿಂದ ಪರಸ್ಪರ ಅಸ್ಪಷ್ಟವಿರುವ ಸೂಕ್ತಿಗಳನ್ನು ಅನುಸರಿಸುತ್ತಾರೆ. ವಸ್ತುತಃ ಅವುಗಳ ನೈಜ ವ್ಯಾಖ್ಯಾನವು ಅಲ್ಲಾಹನ ಹೊರತು ಇನ್ನಾರಿಗೂ ತಿಳಿದಿಲ್ಲ. ನಿಖರ ಹಾಗೂ ಸದೃಢ ಜ್ಞಾನವುಳ್ಳವರು, ನಾವು ಅವುಗಳಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವು ನಮ್ಮ ಪ್ರಭುವಿನ ಕಡೆಯಿಂದಾಗಿದೆ ಎಂದೇ ಹೇಳುತ್ತಾರೆ. ಮತ್ತು ಕೇವಲ ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.
अरबी तफ़सीरें:
رَبَّنَا لَا تُزِغْ قُلُوْبَنَا بَعْدَ اِذْ هَدَیْتَنَا وَهَبْ لَنَا مِنْ لَّدُنْكَ رَحْمَةً ۚ— اِنَّكَ اَنْتَ الْوَهَّابُ ۟
ನಮ್ಮ ಪ್ರಭುವೇ ನಮ್ಮನ್ನು ಸನ್ಮಾರ್ಗದಲ್ಲಿ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ ಮತ್ತು ನಿನ್ನ ವತಿಯಿಂದ ಕಾರುಣ್ಯವನ್ನು ನಮಗೆ ದಯಪಾಲಿಸು. ನಿಸ್ಸಂಶಯವಾಗಿಯೂ ನೀನು ಮಹಾ ಉದಾರಿಯಾಗಿರುವೆ.
अरबी तफ़सीरें:
رَبَّنَاۤ اِنَّكَ جَامِعُ النَّاسِ لِیَوْمٍ لَّا رَیْبَ فِیْهِ ؕ— اِنَّ اللّٰهَ لَا یُخْلِفُ الْمِیْعَادَ ۟۠
ಓ ನಮ್ಮ ಪ್ರಭುವೇ, ನಿಸ್ಸಂಶಯವಾಗಿಯು ನೀನು ಮನುಷ್ಯರನ್ನೆಲ್ಲ ಒಂದು ದಿನ ಒಟ್ಟುಗೂಡಿಸಲಿರುವೆ. ಆ ದಿನ ಬರುವುದರ ಬಗ್ಗೆ ಯಾವುದೇ ಸಂದೇಹÀವಿಲ್ಲ. ಖಂಡಿತವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
अरबी तफ़सीरें:
 
अर्थों का अनुवाद सूरा: आले इम्रान
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें