Check out the new design

क़ुरआन के अर्थों का अनुवाद - कन्नड़ अनुवाद - हमज़ा बतूर * - अनुवादों की सूची

PDF XML CSV Excel API
Please review the Terms and Policies

अर्थों का अनुवाद सूरा: अज़्-ज़ुख़रुफ़   आयत:
وَمَا نُرِیْهِمْ مِّنْ اٰیَةٍ اِلَّا هِیَ اَكْبَرُ مِنْ اُخْتِهَا ؗ— وَاَخَذْنٰهُمْ بِالْعَذَابِ لَعَلَّهُمْ یَرْجِعُوْنَ ۟
ನಾವು ಅವರಿಗೆ ತೋರಿಸುತ್ತಿದ್ದ ಒಂದೊಂದು ದೃಷ್ಟಾಂತವು ಇನ್ನೊಂದು ದೃಷ್ಟಾಂತಕ್ಕಿಂತ ದೊಡ್ಡದಾಗಿತ್ತು. ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದೆವು. ಅವರು ಮರಳಿ ಬರುವುದಕ್ಕಾಗಿ.
अरबी तफ़सीरें:
وَقَالُوْا یٰۤاَیُّهَ السّٰحِرُ ادْعُ لَنَا رَبَّكَ بِمَا عَهِدَ عِنْدَكَ ۚ— اِنَّنَا لَمُهْتَدُوْنَ ۟
ಅವರು ಹೇಳಿದರು: “ಓ ಮಾಟಗಾರನೇ! ನಿನ್ನ ಪರಿಪಾಲಕನು (ಅಲ್ಲಾಹು) ನಿನಗೆ ಏನು ವಾಗ್ದಾನ ಮಾಡಿದ್ದಾನೋ ಅದರ ಮೂಲಕ ಅವನನ್ನು ಕರೆದು ನಮಗೋಸ್ಕರ ಪ್ರಾರ್ಥಿಸು. ನಿಶ್ಚಯವಾಗಿಯೂ ನಾವು ಸನ್ಮಾರ್ಗದಲ್ಲಾಗುವೆವು.”
अरबी तफ़सीरें:
فَلَمَّا كَشَفْنَا عَنْهُمُ الْعَذَابَ اِذَا هُمْ یَنْكُثُوْنَ ۟
ಆದರೆ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ ಅಗೋ! ಅವರು ಮಾತು ತಪ್ಪುತ್ತಿದ್ದಾರೆ.
अरबी तफ़सीरें:
وَنَادٰی فِرْعَوْنُ فِیْ قَوْمِهٖ قَالَ یٰقَوْمِ اَلَیْسَ لِیْ مُلْكُ مِصْرَ وَهٰذِهِ الْاَنْهٰرُ تَجْرِیْ مِنْ تَحْتِیْ ۚ— اَفَلَا تُبْصِرُوْنَ ۟ؕ
ಫರೋಹ ತನ್ನ ಜನರನ್ನು ಕರೆದು ಘೋಷಿಸಿದನು: “ಓ ನನ್ನ ಜನರೇ! ಈಜಿಪ್ಟಿನ ಸಾಮ್ರಾಜ್ಯವು ನನ್ನದಲ್ಲವೇ? ಈ ನದಿಗಳು ನನ್ನ (ಅರಮನೆಯ) ತಳಭಾಗದಿಂದ ಹರಿಯುತ್ತಿವೆ. ನೀವು ನೋಡುವುದಿಲ್ಲವೇ?
अरबी तफ़सीरें:
اَمْ اَنَا خَیْرٌ مِّنْ هٰذَا الَّذِیْ هُوَ مَهِیْنٌ ۙ۬— وَّلَا یَكَادُ یُبِیْنُ ۟
ಮಾತನಾಡಲು ಕೂಡ ಸರಿಯಾಗಿ ಬರದ ಈ ಅಲ್ಪನಿಗಿಂತ ನಾನು ಶ್ರೇಷ್ಠನಲ್ಲವೇ?
अरबी तफ़सीरें:
فَلَوْلَاۤ اُلْقِیَ عَلَیْهِ اَسْوِرَةٌ مِّنْ ذَهَبٍ اَوْ جَآءَ مَعَهُ الْمَلٰٓىِٕكَةُ مُقْتَرِنِیْنَ ۟
ಈತನಿಗೆ ಸ್ವರ್ಣ ಕಡಗಗಳನ್ನು ಏಕೆ ತೊಡಿಸಲಾಗಿಲ್ಲ? ಅಥವಾ ಈತನಿಗೆ ಸಹಾಯಕರಾಗಿ ದೇವದೂತರು‍ಗಳು ಏಕೆ ಬಂದಿಲ್ಲ?”
अरबी तफ़सीरें:
فَاسْتَخَفَّ قَوْمَهٗ فَاَطَاعُوْهُ ؕ— اِنَّهُمْ كَانُوْا قَوْمًا فٰسِقِیْنَ ۟
ಅವನು ತನ್ನ ಜನರನ್ನು ಮರುಳುಗೊಳಿಸಿದನು. ಅವರು ಅವನ ಮಾತನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು.
अरबी तफ़सीरें:
فَلَمَّاۤ اٰسَفُوْنَا انْتَقَمْنَا مِنْهُمْ فَاَغْرَقْنٰهُمْ اَجْمَعِیْنَ ۟ۙ
ಅವರು ನಮ್ಮನ್ನು ರೇಗಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.
अरबी तफ़सीरें:
فَجَعَلْنٰهُمْ سَلَفًا وَّمَثَلًا لِّلْاٰخِرِیْنَ ۟۠
ಹೀಗೆ ನಾವು ಅವರನ್ನು ಒಂದು ಪೂರ್ವ ಮಾದರಿಯಾಗಿ ಮತ್ತು ನಂತರದವರಿಗೆ ಒಂದು ಉದಾಹರಣೆಯಾಗಿ ಮಾಡಿದೆವು.
अरबी तफ़सीरें:
وَلَمَّا ضُرِبَ ابْنُ مَرْیَمَ مَثَلًا اِذَا قَوْمُكَ مِنْهُ یَصِدُّوْنَ ۟
ಮರ್ಯಮರ ಪುತ್ರನನ್ನು (ಈಸಾರನ್ನು) ಉದಾಹರಣೆಯಾಗಿ ತೋರಿಸಲಾದಾಗ ಅಗೋ! ನಿಮ್ಮ ಜನರು ಅಟ್ಟಹಾಸದಿಂದ ನಗುತ್ತಿದ್ದಾರೆ.
अरबी तफ़सीरें:
وَقَالُوْۤا ءَاٰلِهَتُنَا خَیْرٌ اَمْ هُوَ ؕ— مَا ضَرَبُوْهُ لَكَ اِلَّا جَدَلًا ؕ— بَلْ هُمْ قَوْمٌ خَصِمُوْنَ ۟
ಅವರು ಕೇಳಿದರು: “ನಮ್ಮ ದೇವರುಗಳು ಶ್ರೇಷ್ಠರೋ ಅಥವಾ ಅವನೋ?”[1] ಅವರು ಕೇವಲ ತರ್ಕಕ್ಕಾಗಿ ನಿಮ್ಮ ಮುಂದೆ ಅದನ್ನು ಹೇಳಿದ್ದರು. ವಾಸ್ತವವಾಗಿ, ಅವರು ಜಗಳಗಂಟಿ ಜನರಾಗಿದ್ದಾರೆ.
[1] “ನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ.” [21:98] ಎಂಬ ವಚನವು ಅವತೀರ್ಣವಾದಾಗ, ಈ ವಚನದ ಪ್ರಕಾರ ಕ್ರೈಸ್ತರು ಆರಾಧಿಸುತ್ತಿರುವ ಪ್ರವಾದಿ ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ಕೂಡ ನರಕದ ಇಂಧನವಾಗುತ್ತಾರೆಂದು ಅವರು ವಾದಿಸಿದರು. ಪ್ರವಾದಿಗಳು, ಮಹಾಪುರುಷರು ಮತ್ತು ದೇವದೂತರುಗಳನ್ನು ಜನರು ಆರಾಧಿಸುತ್ತಾರೆ ಎಂಬುದು ನಿಜ. ಆದರೆ ಅವರು ತಮ್ಮನ್ನು ಆರಾಧಿಸಬೇಕೆಂದು ಹೇಳಿಲ್ಲ ಮತ್ತು ಆ ಆರಾಧನೆಯ ಬಗ್ಗೆ ಅವರು ಸಂಪ್ರೀತರೂ ಅಲ್ಲ. ಆದ್ದರಿಂದ ಅವರು ನರಕಕ್ಕೆ ಇಂಧನವಾಗುವುದಿಲ್ಲ.
अरबी तफ़सीरें:
اِنْ هُوَ اِلَّا عَبْدٌ اَنْعَمْنَا عَلَیْهِ وَجَعَلْنٰهُ مَثَلًا لِّبَنِیْۤ اِسْرَآءِیْلَ ۟ؕ
ಅವರು (ಈಸಾ) ಕೇವಲ ಒಬ್ಬ ದಾಸ. ನಾವು ಅವರಿಗೆ ಅನುಗ್ರಹವನ್ನು ನೀಡಿ ಅವರನ್ನು ಇಸ್ರಾಯೇಲ್ ಮಕ್ಕಳಿಗೆ ಮಾದರಿಯಾಗಿ ಮಾಡಿದೆವು.
अरबी तफ़सीरें:
وَلَوْ نَشَآءُ لَجَعَلْنَا مِنْكُمْ مَّلٰٓىِٕكَةً فِی الْاَرْضِ یَخْلُفُوْنَ ۟
ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಬದಲಿಗೆ (ಒಬ್ಬರ ನಂತರ ಒಬ್ಬರು) ಉತ್ತರಾಧಿಕಾರಿಗಳಾಗಿ ಬರುವ ದೇವದೂತರು‍ಗಳನ್ನು ಉಂಟುಮಾಡುತ್ತಿದ್ದೆವು.
अरबी तफ़सीरें:
 
अर्थों का अनुवाद सूरा: अज़्-ज़ुख़रुफ़
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - हमज़ा बतूर - अनुवादों की सूची

इसका अनुवाद मोहम्मद हमज़ा बेतूर द्वारा किया गया। इसे अनुवाद अग्रदूत केंद्र की निगरानी में विकसित किया गया है।

बंद करें