Check out the new design

Terjemahan makna Alquran Alkarim - Terjemahan Berbahasa Kannada - Basir Maisuri * - Daftar isi terjemahan


Terjemahan makna Surah: Yūnus   Ayah:

ಯೂನುಸ್

الٓرٰ ۫— تِلْكَ اٰیٰتُ الْكِتٰبِ الْحَكِیْمِ ۟
ಅಲಿಫ್ ಲಾಮ್ ರಾ ಇವು ಯುಕ್ತಿಪೂರ್ಣ ಗ್ರಂಥದ ಸೂಕ್ತಿಗಳಾಗಿವೆ.
Tafsir berbahasa Arab:
اَكَانَ لِلنَّاسِ عَجَبًا اَنْ اَوْحَیْنَاۤ اِلٰی رَجُلٍ مِّنْهُمْ اَنْ اَنْذِرِ النَّاسَ وَبَشِّرِ الَّذِیْنَ اٰمَنُوْۤا اَنَّ لَهُمْ قَدَمَ صِدْقٍ عِنْدَ رَبِّهِمْ ؔؕ— قَالَ الْكٰفِرُوْنَ اِنَّ هٰذَا لَسٰحِرٌ مُّبِیْنٌ ۟
ಜನರಿಗೆ ಎಚ್ಚರಿಕೆ ನೀಡಲಿಕ್ಕೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಅವರ ಪ್ರಭುವಿನ ಬಳಿ ಸತ್ಯದ ಉನ್ನತ ಸ್ಥಾನವಿದೆಯೆಂದು, ಸುವಾರ್ತೆ ನೀಡಲಿಕ್ಕೆ ಅವರ ಪೈಕಿ ಒಬ್ಬ ವ್ಯಕ್ತಿಯ ಕಡೆಗೆ ನಾವು ದಿವ್ಯಸಂದೇಶ ಕಳುಹಿಸಿರುವುದು ಜನರಿಗೆ ಆಶ್ಚರ್ಯವಾಯಿತೇ? ಸತ್ಯನಿಷೇಧಿಗಳು ಹೇಳಿದರು : ನಿಶ್ಚಯವಾಗಿಯೂ ಈ ವ್ಯಕ್ತಿ ಸ್ಪಷ್ಟ ಜಾದೂಗಾರನಾಗಿದ್ದಾನೆ.
Tafsir berbahasa Arab:
اِنَّ رَبَّكُمُ اللّٰهُ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ یُدَبِّرُ الْاَمْرَ ؕ— مَا مِنْ شَفِیْعٍ اِلَّا مِنْ بَعْدِ اِذْنِهٖ ؕ— ذٰلِكُمُ اللّٰهُ رَبُّكُمْ فَاعْبُدُوْهُ ؕ— اَفَلَا تَذَكَّرُوْنَ ۟
ನಿಸ್ಸಂದೇಹವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿ ತರುವಾಯ ಸಿಂಹಾಸನದ ಮೇಲೆ ಆರೂಢನಾಗಿ ಸಕಲ ಕಾರ್ಯಗಳನ್ನು ನಿಯಂತ್ರಿಸುವ ನಿಮ್ಮ ಪ್ರಭು ಅಲ್ಲಾಹನೇ ಆಗಿದ್ದಾನೆ. ಅವನ ಅನುಮತಿಯ ಹೊರತು ಯಾವೊಬ್ಬನೂ ಅವನ ಬಳಿ ಶಿಫಾರಸ್ಸು ಮಾಡುವವನಿಲ್ಲ. ಅವನೇ ನಿಮ್ಮ ಪ್ರಭುವಾದ ಅಲ್ಲಾಹನು, ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ, ಹೀಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Tafsir berbahasa Arab:
اِلَیْهِ مَرْجِعُكُمْ جَمِیْعًا ؕ— وَعْدَ اللّٰهِ حَقًّا ؕ— اِنَّهٗ یَبْدَؤُا الْخَلْقَ ثُمَّ یُعِیْدُهٗ لِیَجْزِیَ الَّذِیْنَ اٰمَنُوْا وَعَمِلُوا الصّٰلِحٰتِ بِالْقِسْطِ ؕ— وَالَّذِیْنَ كَفَرُوْا لَهُمْ شَرَابٌ مِّنْ حَمِیْمٍ وَّعَذَابٌ اَلِیْمٌ بِمَا كَانُوْا یَكْفُرُوْنَ ۟
ನಿಮಗೆಲ್ಲರಿಗೂ ಅವನೆಡೆಗೇ ಮರಳಬೇಕಾಗಿದೆ, ಇದು ಅಲ್ಲಾಹನ ಸತ್ಯವಾಗ್ದಾನವಾಗಿದೆ, ನಿಸ್ಸಂಶಯವಾಗಿಯು ಅವನೇ ಸೃಷ್ಟಿಯನ್ನು ಆರಂಭಿಸುತ್ತಾನೆ, ಅನಂತರ ಅವನೇ ಪುನರಾವರ್ತಿಸುವನು, ಇದು ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ಕರ್ಮಗಳನ್ನೆಸಗಿದವರಿಗೆ ನ್ಯಾಯೋಚಿತ ಪ್ರತಿಫಲ ನೀಡಲೆಂದಾಗಿದೆ ಮತ್ತು ಸತ್ಯ ನಿಷೇಧಿಸಿದವರಿಗೆ ಅವರ ಸತ್ಯನಿಷೇಧದ ನಿಮಿತ್ತ ಅವರಿಗೆ ಕುಡಿಯಲು ಕುದಿಯುವ ನೀರು ಮತ್ತು ವೇದನಾಜನಕ ಯಾತನೆ ಇರುವುದು.
Tafsir berbahasa Arab:
هُوَ الَّذِیْ جَعَلَ الشَّمْسَ ضِیَآءً وَّالْقَمَرَ نُوْرًا وَّقَدَّرَهٗ مَنَازِلَ لِتَعْلَمُوْا عَدَدَ السِّنِیْنَ وَالْحِسَابَ ؕ— مَا خَلَقَ اللّٰهُ ذٰلِكَ اِلَّا بِالْحَقِّ ۚ— یُفَصِّلُ الْاٰیٰتِ لِقَوْمٍ یَّعْلَمُوْنَ ۟
ಅವನೇ ಸೂರ್ಯನನ್ನು ಪ್ರಜ್ವಲಿಸುವಂತೆಯೂ ಚಂದ್ರನನ್ನು ಪ್ರತಿಫಲಿಸುವಂತೆಯೂ ಮಾಡಿದನು ಮತ್ತು ಅದಕ್ಕೆ ಹಂತಗಳನ್ನು ನಿಶ್ಚಯಿಸಿದನು, ಇದು ನೀವು ವರ್ಷಗಳ ಗಣನೆ ಮತ್ತು ಲೆಕ್ಕವನ್ನು ಅರಿತುಕೊಳ್ಳಲೆಂದಾಗಿದೆ. ಅಲ್ಲಾಹನು ಇವುಗಳನ್ನು ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ಅವನು ಈ ಪುರಾವೆಗಳನ್ನೆಲ್ಲಾ ಬುದ್ಧಿಮತಿಯನ್ನು ಹೊಂದಿರುವವರಿಗೆ ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ.
Tafsir berbahasa Arab:
اِنَّ فِی اخْتِلَافِ الَّیْلِ وَالنَّهَارِ وَمَا خَلَقَ اللّٰهُ فِی السَّمٰوٰتِ وَالْاَرْضِ لَاٰیٰتٍ لِّقَوْمٍ یَّتَّقُوْنَ ۟
ನಿಸ್ಸಂದೇಹವಾಗಿಯೂ ರಾತ್ರಿ ಹಗಲುಗಳ ಒಂದರಹಿAದೆ ಇನ್ನೊಂದರ ಆಗಮನದಲ್ಲೂ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅಲ್ಲಾಹನು ಸೃಷ್ಟಿಸಿರುವ ವಸ್ತುಗಳಲ್ಲೂ, ಭಯಭಕ್ತಿ ಹೊಂದಿದವರಿಗೆ ನಿದರ್ಶನಗಳಿವೆ.
Tafsir berbahasa Arab:
اِنَّ الَّذِیْنَ لَا یَرْجُوْنَ لِقَآءَنَا وَرَضُوْا بِالْحَیٰوةِ الدُّنْیَا وَاطْمَاَنُّوْا بِهَا وَالَّذِیْنَ هُمْ عَنْ اٰیٰتِنَا غٰفِلُوْنَ ۟ۙ
ನಿಶ್ಚಯವಾಗಿಯೂ ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು, ಇಹಲೋಕದ ಜೀವನದಲ್ಲೇ ಸಂತುಷ್ಟರಾಗಿರುವÀರು ಮತ್ತು ಅದರಲ್ಲೇ ಸಮಾಧಾನ ಪಟ್ಟುಕೊಂಡಿರುವÀರು ಹಾಗು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷö್ಯರಾಗಿರುವರು
Tafsir berbahasa Arab:
اُولٰٓىِٕكَ مَاْوٰىهُمُ النَّارُ بِمَا كَانُوْا یَكْسِبُوْنَ ۟
ಇಂತಹವರ ನೆಲೆಯು ಅವರ ಕರ್ಮಗಳ ಕಾರಣದಿಂದ ನರಕಾಗ್ನಿಯಾಗಿರುತ್ತದೆ.
Tafsir berbahasa Arab:
اِنَّ الَّذِیْنَ اٰمَنُوْا وَعَمِلُوا الصّٰلِحٰتِ یَهْدِیْهِمْ رَبُّهُمْ بِاِیْمَانِهِمْ ۚ— تَجْرِیْ مِنْ تَحْتِهِمُ الْاَنْهٰرُ فِیْ جَنّٰتِ النَّعِیْمِ ۟
ನಿಶ್ಚಯವಾಗಿಯೂ ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನೆಸಗಿದವರಿಗೆ ಅವರ ಪ್ರಭುವು ಅವರ ಸತ್ಯವಿಶ್ವಾಸದ ನಿಮಿತ್ತ ಸನ್ಮಾರ್ಗದಲ್ಲಿ ನಡೆಸುವನು, ಅವರಿಗೆ ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ ವಾಸಸ್ಥಾನವಿರುವುದು, ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವವು.
Tafsir berbahasa Arab:
دَعْوٰىهُمْ فِیْهَا سُبْحٰنَكَ اللّٰهُمَّ وَتَحِیَّتُهُمْ فِیْهَا سَلٰمٌ ۚ— وَاٰخِرُ دَعْوٰىهُمْ اَنِ الْحَمْدُ لِلّٰهِ رَبِّ الْعٰلَمِیْنَ ۟۠
ಅಲ್ಲಿ ಅವರ ಪ್ರಾರ್ಥನೆಯು 'ಓ ಅಲ್ಲಾಹ್ ನೀನು ಪರಮ ಪಾವನನು' ಎಂಬುದಾಗಿರುವುದು, ಮತ್ತು ಅವರ ಪರಸ್ಪರರ ಅಭಿನಂದನೆಯು 'ಅಸ್ಸಲಾಮು ಅಲೈಕುಮ್' (ನಿಮ್ಮ ಮೇಲೆ ಶಾಂತಿ ವರ್ಷಿಸುತ್ತಿರಲಿ) ಎಂದಾಗಿರುವುದು, ಹಾಗು ಅವರ ಪ್ರಾರ್ಥನೆಯ ಕೊನೆಯ ನುಡಿ ಸರ್ವಸ್ತುತಿಯು ಸರ್ವ ಲೋಕಗಳ ಪ್ರಭುವಾದ ಅಲ್ಲಾಹನಿಗೇ ಎಂದಾಗಿರುವುದು.
Tafsir berbahasa Arab:
وَلَوْ یُعَجِّلُ اللّٰهُ لِلنَّاسِ الشَّرَّ اسْتِعْجَالَهُمْ بِالْخَیْرِ لَقُضِیَ اِلَیْهِمْ اَجَلُهُمْ ؕ— فَنَذَرُ الَّذِیْنَ لَا یَرْجُوْنَ لِقَآءَنَا فِیْ طُغْیَانِهِمْ یَعْمَهُوْنَ ۟
ಮತ್ತು ಜನರು ತಮ್ಮ ಹಿತಕ್ಕಾಗಿ ಆತುರಪಡುವ ಹಾಗೆಯೇ ಅವರಿಗೆ ಕೆಡುಕನ್ನುಂಟು ಮಾಡಲು ಅಲ್ಲಾಹನು ಆತುರ ಪಡುತ್ತಿದ್ದರೆ ಅವರ ಜೀವನಾವಧಿ ಎಂದೋ ಪೂರ್ಣಗೊಳಿಸಲಾಗುತ್ತಿತ್ತು. ಹಾಗೆಯೇ ನಾವು ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರನ್ನು, ಅವರ ಅತಿಕ್ರಮದಲ್ಲಿ ಅಲೆದಾಡುವಂತೆ ಅವರ ಪಾಡಿಗೆ ಬಿಟ್ಟುಬಿಡುವೆವು.
Tafsir berbahasa Arab:
وَاِذَا مَسَّ الْاِنْسَانَ الضُّرُّ دَعَانَا لِجَنْۢبِهٖۤ اَوْ قَاعِدًا اَوْ قَآىِٕمًا ۚ— فَلَمَّا كَشَفْنَا عَنْهُ ضُرَّهٗ مَرَّ كَاَنْ لَّمْ یَدْعُنَاۤ اِلٰی ضُرٍّ مَّسَّهٗ ؕ— كَذٰلِكَ زُیِّنَ لِلْمُسْرِفِیْنَ مَا كَانُوْا یَعْمَلُوْنَ ۟
ಮತ್ತು ಮನುಷ್ಯನಿಗೆ ಯಾವುದಾದರೂ ಸಂಕಷ್ಟ ಬಾಧಿಸಿದರೆ ಅವನು ತನ್ನ ಪಾರ್ಶ್ಚದಲ್ಲಿ ಮಲಗಿ ಅಥವ ಕುಳಿತೂ ಅಥವ ನಿಂತೂ ನಮ್ಮನ್ನು ಪ್ರಾರ್ಥಿಸುತ್ತಾನೆ, ಆಮೇಲೆ ನಾವು ಅವನ ಸಂಕಷ್ಟವನ್ನು ಅವನಿಂದ ದೂರ ಮಾಡಿದಾಗ ಅವನು ತನಗೆ ಬಾಧಿಸಿದ ಸಂಕಷ್ಟಕ್ಕೆ ನಮ್ಮಲ್ಲಿ ಬೇಡಿಯೇ ಇಲ್ಲವೆಂಬAತೆ ಆಗಿ ಬಿಡುತ್ತಾನೆ, ಇದೇ ಪ್ರಕಾರ ಮೇರೆ ಮೀರುವವರಿಗೆ ಅವರ ಕರ್ಮಗಳನ್ನು ಮನಮೋಹಕಗೊಳಿಸಲಾಗಿದೆ.
Tafsir berbahasa Arab:
وَلَقَدْ اَهْلَكْنَا الْقُرُوْنَ مِنْ قَبْلِكُمْ لَمَّا ظَلَمُوْا ۙ— وَجَآءَتْهُمْ رُسُلُهُمْ بِالْبَیِّنٰتِ وَمَا كَانُوْا لِیُؤْمِنُوْا ؕ— كَذٰلِكَ نَجْزِی الْقَوْمَ الْمُجْرِمِیْنَ ۟
ಮತ್ತು ನಾವು ನಿಮಗಿಂತ ಮುಂಚೆ ಅನೇಕ ಜನಾಂಗಗಳನ್ನು ಅವರು ಅಕ್ರಮವೆಸಗಿದಾಗ ನಾಶಗೊಳಿಸಿರುವೆವು. ವಸ್ತುತಃ ಅವರೆಡೆಗೆ ಪುರಾವೆಗಳೊಂದಿಗೆ ಅವರ ಸಂದೇಶವಾಹಕರು ಸಹ ಬಂದರು. ಆದರೆ ಅವರು ವಿಶ್ವಾಸವಿಡುವವರಾಗಿರಲಿಲ್ಲ, ಇದೇ ಪ್ರಕಾರ ನಾವು ಅಪರಾಧಿ ಜನಾಂಗಕ್ಕೆ ಶಿಕ್ಷೆಯನ್ನು ನೀಡುತ್ತೇವೆ.
Tafsir berbahasa Arab:
ثُمَّ جَعَلْنٰكُمْ خَلٰٓىِٕفَ فِی الْاَرْضِ مِنْ بَعْدِهِمْ لِنَنْظُرَ كَیْفَ تَعْمَلُوْنَ ۟
ಈಗ ನೀವು ಹೇಗೆ ವರ್ತಿಸುತ್ತೀರೆಂದು ನೋಡಲಿಕ್ಕಾಗಿ ನಾವು ನಿಮ್ಮನ್ನು ಅವರ ನಂತರ ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು.
Tafsir berbahasa Arab:
وَاِذَا تُتْلٰی عَلَیْهِمْ اٰیَاتُنَا بَیِّنٰتٍ ۙ— قَالَ الَّذِیْنَ لَا یَرْجُوْنَ لِقَآءَنَا ائْتِ بِقُرْاٰنٍ غَیْرِ هٰذَاۤ اَوْ بَدِّلْهُ ؕ— قُلْ مَا یَكُوْنُ لِیْۤ اَنْ اُبَدِّلَهٗ مِنْ تِلْقَآئِ نَفْسِیْ ۚ— اِنْ اَتَّبِعُ اِلَّا مَا یُوْحٰۤی اِلَیَّ ۚ— اِنِّیْۤ اَخَافُ اِنْ عَصَیْتُ رَبِّیْ عَذَابَ یَوْمٍ عَظِیْمٍ ۟
ಮತ್ತು ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಇದರ ಹೊರತು ಬೇರಾವುದಾದರೂ ಖುರ್‌ಆನನ್ನು ತನ್ನಿರಿ ಇಲ್ಲವೇ ಇದರಲ್ಲಿ ಸ್ವಲ್ಪ ತಿದ್ದುಪಡಿಯನ್ನು ಮಾಡಿರೆಂದು ಹೇಳುತ್ತಾರೆ (ಓ ಪೈಗಂಬರರೇ) ನೀವು ಹೇಳಿರಿ : ನನ್ನ ಕಡೆಯಿಂದ ಇದರಲ್ಲಿ ತಿದ್ದುಪಡಿ ಮಾಡಲು ನನಗೆ ಯಾವುದೇ ಹಕ್ಕಿರುವುದಿಲ್ಲ, ನಾನಂತೂ ಕೇವಲ ನನ್ನೆಡೆಗೆ ದಿವ್ಯವಾಣಿಯ ಮೂಲಕ ಬರುವುದನ್ನೇ ಅನುಸರಿಸುತ್ತೇನೆ, ನಾನು ನನ್ನ ಪ್ರಭುವಿಗೆ ಧಿಕ್ಕಾರವೆಸಗುವುದಾದರೆ ಖಂಡಿತವಾಗಿಯೂ ನಾನು ಆ ಒಂದು ಮಹಾ ದಿನದ ಯಾತನೆಯಿಂದ ಭಯಪಡುತ್ತೇನೆ.
Tafsir berbahasa Arab:
قُلْ لَّوْ شَآءَ اللّٰهُ مَا تَلَوْتُهٗ عَلَیْكُمْ وَلَاۤ اَدْرٰىكُمْ بِهٖ ۖؗۗ— فَقَدْ لَبِثْتُ فِیْكُمْ عُمُرًا مِّنْ قَبْلِهٖ ؕ— اَفَلَا تَعْقِلُوْنَ ۟
ಹೇಳಿರಿ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾನು ಇದನ್ನು ನಿಮ್ಮ ಮುಂದೆ ಓದಿ ಹೇಳುತ್ತಿರಲಿಲ್ಲ, ಮತ್ತು ಅವನು ನಿಮಗೆ ಇದರ ಅರಿವನ್ನು ನೀಡುತ್ತಿರಲಿಲ್ಲ, ಇದೇಕೆಂದರೆ ನಾನು ಇದಕ್ಕೆ ಮುಂಚೆ ಒಂದು ದೀರ್ಘ ಕಾಲವನ್ನು ನಿಮ್ಮ ನಡುವೆ ಕಳೆದಿರುವೆನು, ಹೀಗಿರುವಾಗ ನೀವು ಚಿಂತಿಸುವುದಿಲ್ಲವೇ ?
Tafsir berbahasa Arab:
فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اِنَّهٗ لَا یُفْلِحُ الْمُجْرِمُوْنَ ۟
ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸಿದವನಿಗಿಂತ ಅತಿದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳು ಯಶಸ್ಸು ಹೊಂದಲಾರರು.
Tafsir berbahasa Arab:
وَیَعْبُدُوْنَ مِنْ دُوْنِ اللّٰهِ مَا لَا یَضُرُّهُمْ وَلَا یَنْفَعُهُمْ وَیَقُوْلُوْنَ هٰۤؤُلَآءِ شُفَعَآؤُنَا عِنْدَ اللّٰهِ ؕ— قُلْ اَتُنَبِّـُٔوْنَ اللّٰهَ بِمَا لَا یَعْلَمُ فِی السَّمٰوٰتِ وَلَا فِی الْاَرْضِ ؕ— سُبْحٰنَهٗ وَتَعٰلٰی عَمَّا یُشْرِكُوْنَ ۟
ಅವರು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲಿ ಪ್ರಯೋಜನವನ್ನಾಗಲಿ ಉಂಟುಮಾಡಲಾಗದAತಹ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಹೇಳುತ್ತಾರೆ, ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರಾಗಿದ್ದಾರೆ, ಹೇಳಿರಿ ಅಲ್ಲಾಹನಿಗೆ ಅವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ತಿಳಿಯದಂಥ ಸುದ್ದಿಗಳನ್ನು ಹೇಳುತ್ತಿರುವಿರಾ ? ಅವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಅದೆಷ್ಟೋ ಪವಿತ್ರನು, ಉನ್ನತನು ಆಗಿರುವನು.
Tafsir berbahasa Arab:
وَمَا كَانَ النَّاسُ اِلَّاۤ اُمَّةً وَّاحِدَةً فَاخْتَلَفُوْا ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ فِیْمَا فِیْهِ یَخْتَلِفُوْنَ ۟
ಆರಂಭದಲ್ಲಿ ಸಕಲ ಜನರು ಒಂದೇ ಸಮುದಾಯದವರಾಗಿದ್ದರು, ಆನಂತರ ಅವರು ಭಿನ್ನತೆಯನ್ನು ತೋರಿದರು, ನಿಮ್ಮ ಪ್ರಭುವಿನಿಂದ ಇದಕ್ಕೆ ಮೊದಲೇ ನಿರ್ಣಯಿಸಲ್ಪಟ್ಟ ವಚನವು ಇಲ್ಲದಿರುತ್ತಿದ್ದರೆ ಅವರು ಭಿನ್ನತೆ ಹೊಂದಿದ್ದ ವಿಚಾರಗಳಲ್ಲಿ ತೀರ್ಮಾನ ಮಾಡಿಬಿಡಲಾಗುತ್ತಿತ್ತು.
Tafsir berbahasa Arab:
وَیَقُوْلُوْنَ لَوْلَاۤ اُنْزِلَ عَلَیْهِ اٰیَةٌ مِّنْ رَّبِّهٖ ۚ— فَقُلْ اِنَّمَا الْغَیْبُ لِلّٰهِ فَانْتَظِرُوْا ۚ— اِنِّیْ مَعَكُمْ مِّنَ الْمُنْتَظِرِیْنَ ۟۠
ಈ ಪೈಗಂಬರರ ಮೇಲೆ ಅವರ ಪ್ರಭುವಿನ ಕಡೆಯಿಂದ ಯಾವುದಾದರು ದೃಷ್ಟಾಂತವು ಏಕೆ ಅವತೀರ್ಣಗೊಳಿಸಲಾಗಿಲ್ಲ ? ಎಂದು ಅವರು ಹೇಳುತ್ತಾರೆ, ಉತ್ತರಿಸಿರಿ; ಅಗೋಚರ ಜ್ಞಾನವು ಕೇವಲ ಅಲ್ಲಾಹನಿಗೆ ಮಾತ್ರವಿದೆ, ಆದುದರಿಂದ ಇನ್ನು ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನು ಸಹ ನಿಮ್ಮ ಜೊತೆ ಕಾಯುತ್ತಿರುವೆನು.
Tafsir berbahasa Arab:
وَاِذَاۤ اَذَقْنَا النَّاسَ رَحْمَةً مِّنْ بَعْدِ ضَرَّآءَ مَسَّتْهُمْ اِذَا لَهُمْ مَّكْرٌ فِیْۤ اٰیَاتِنَا ؕ— قُلِ اللّٰهُ اَسْرَعُ مَكْرًا ؕ— اِنَّ رُسُلَنَا یَكْتُبُوْنَ مَا تَمْكُرُوْنَ ۟
ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ.
Tafsir berbahasa Arab:
هُوَ الَّذِیْ یُسَیِّرُكُمْ فِی الْبَرِّ وَالْبَحْرِ ؕ— حَتّٰۤی اِذَا كُنْتُمْ فِی الْفُلْكِ ۚ— وَجَرَیْنَ بِهِمْ بِرِیْحٍ طَیِّبَةٍ وَّفَرِحُوْا بِهَا جَآءَتْهَا رِیْحٌ عَاصِفٌ وَّجَآءَهُمُ الْمَوْجُ مِنْ كُلِّ مَكَانٍ وَّظَنُّوْۤا اَنَّهُمْ اُحِیْطَ بِهِمْ ۙ— دَعَوُا اللّٰهَ مُخْلِصِیْنَ لَهُ الدِّیْنَ ۚ۬— لَىِٕنْ اَنْجَیْتَنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟
ನಿಮ್ಮನ್ನು ನೆಲ ಜಲಗಳಲ್ಲಿ ಸಾಗಿಸುವವನು ಅಲ್ಲಾಹನೇ ಆಗಿರುವನು. ನೀವು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಆ ಹಡಗು ಜನರನ್ನು ಹೊತ್ತುಕೊಂಡು ಅನುಕೂಲಕರ ಮಾರುತದ ಮೂಲಕ ಸಂಚರಿಸುತ್ತಿರುವಾಗ ಅವರು ಇದರಿಂದ ಸಂತಸದಿAದಿರುವಾಗ ಹಠಾತ್ತನೆ ಅವರ ಮೇಲೆ ಭಾರಿ ಬಿರುಗಾಳಿಯು ಬಂದು ಎಲ್ಲಾ ಕಡೆಯಿಂದಲೂ ಅಲೆಗಳು ಅಪ್ಪಳಿಸುತ್ತಿರುವಾಗ ಮತ್ತು ನಾವು ಆವರಿಸಲ್ಪಟ್ಟಿವೆಂದು ಅವರು ಮನಗಾಣುತ್ತಾರೆ. (ಆ ಸಂದರ್ಭದಲ್ಲಿ) ಎಲ್ಲರೂ ನಿಷ್ಕಳಂಕ ವಿಶ್ವಾಸದೊಂದಿಗೆ “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯು ನಾವು ಕೃತಜ್ಞರಲ್ಲಾಗಿಬಿಡುವೆವು ಎಂದು ಅಲ್ಲಾಹನನ್ನೇ ಪ್ರಾರ್ಥಿಸುತ್ತಾರೆ”
Tafsir berbahasa Arab:
فَلَمَّاۤ اَنْجٰىهُمْ اِذَا هُمْ یَبْغُوْنَ فِی الْاَرْضِ بِغَیْرِ الْحَقِّ ؕ— یٰۤاَیُّهَا النَّاسُ اِنَّمَا بَغْیُكُمْ عَلٰۤی اَنْفُسِكُمْ ۙ— مَّتَاعَ الْحَیٰوةِ الدُّنْیَا ؗ— ثُمَّ اِلَیْنَا مَرْجِعُكُمْ فَنُنَبِّئُكُمْ بِمَا كُنْتُمْ تَعْمَلُوْنَ ۟
ಅನಂತರ ಅಲ್ಲಾಹನು ಅವರನ್ನು ಪಾರುಮಾಡಿದಾಗ ಕೂಡಲೇ ಅವರು ಭೂಮಿಯಲ್ಲಿ ಅನ್ಯಾಯವಾಗಿ ಬಂಡಾಯ ವೆಸಗತೊಡಗುತ್ತಾರೆ. ಓ ಜನರೇ ! ನಿಮ್ಮ ಬಂಡಾಯವು ನಿಮಗೆ ಆಪತ್ತಾಗಿಬಿಡಲಿದೆ. ಇದು ಇಹಲೋಕ ಜೀವನದ ತಾತ್ಕಾಲಿಕ ಸುಖಸೌಕರ್ಯ ಮಾತ್ರ. ಅನಂತರ ನಿಮಗೆ ನಮ್ಮ ಬಳಿಗೆ ಮರಳಲಿಕ್ಕಿರುವುದು. ಆಮೇಲೆ ನಾವು ನಿಮಗೆ ನಿಮ್ಮ ಕೃತ್ಯಗಳನ್ನೆಲ್ಲಾ ತಿಳಿಸಿಕೊಡುವೆವು.
Tafsir berbahasa Arab:
اِنَّمَا مَثَلُ الْحَیٰوةِ الدُّنْیَا كَمَآءٍ اَنْزَلْنٰهُ مِنَ السَّمَآءِ فَاخْتَلَطَ بِهٖ نَبَاتُ الْاَرْضِ مِمَّا یَاْكُلُ النَّاسُ وَالْاَنْعَامُ ؕ— حَتّٰۤی اِذَاۤ اَخَذَتِ الْاَرْضُ زُخْرُفَهَا وَازَّیَّنَتْ وَظَنَّ اَهْلُهَاۤ اَنَّهُمْ قٰدِرُوْنَ عَلَیْهَاۤ ۙ— اَتٰىهَاۤ اَمْرُنَا لَیْلًا اَوْ نَهَارًا فَجَعَلْنٰهَا حَصِیْدًا كَاَنْ لَّمْ تَغْنَ بِالْاَمْسِ ؕ— كَذٰلِكَ نُفَصِّلُ الْاٰیٰتِ لِقَوْمٍ یَّتَفَكَّرُوْنَ ۟
ವಾಸ್ತವದಲ್ಲಿ ಐಹಿಕ ಜೀವನದ ಉದಾಹರಣೆಯು ಆಕಾಶದಿಂದ ನಾವು ಸುರಿಸಿರುವಂತಹಾ ಮಳೆಯಂತಿದೆ. ಬಳಿಕ ಅದರೊಂದಿಗೆ ಮನುಷ್ಯರು ಮತ್ತು ಪ್ರಾಣಿಗಳು ತಿನ್ನುವ ಭೂಮಿಯ ಬೆಳೆಗಳು ಮಿಶ್ರಿತಗೊಂಡು ಹುಲುಸಾಗಿ ಬೆಳೆದವು. ಕೊನೆಗೆ ಭೂಮಿಯು ತನ್ನ ಸಂಪೂರ್ಣ ಶೋಭಾಲಂಕಾರವನ್ನು ಪಡೆದಾಗ ಹಾಗು ಸುಂದರವಾಗಿ ಕಂಗೊಳಿಸಿದಾಗ ಮತ್ತು ಅದರ ಮೇಲೆ ನಾವು ಸಾಮರ್ಥ್ಯವುಳ್ಳವರೆಂದು ಅದರ ಮಾಲೀಕರು ಭಾವಿಸಿಕೊಂಡಾಗ ನಮ್ಮ ಕಡೆಯಿಂದ ಒಂದು ಆಜ್ಞೆಯು(ಶಿಕ್ಷೆಯು) ರಾತ್ರಿ ಅಥವ ಹಗಲಿನ ವೇಳೆಯಲ್ಲಿ ಬಂದುಬಿಟ್ಟಿತು. ಕೊನೆಗೆ ನಾವದನ್ನು ನಿನ್ನೆಯ ದಿನ ಇರಲೇ ಇಲ್ಲವೆಂಬAತೆ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟೆವು, ಇದೇ ಪ್ರಕಾರ ನಾವು ಚಿಂತಿಸುವ ಜನರಿಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
Tafsir berbahasa Arab:
وَاللّٰهُ یَدْعُوْۤا اِلٰی دَارِ السَّلٰمِ ؕ— وَیَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ಅಲ್ಲಾಹನು ಶಾಂತಿಧಾಮದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅವನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
Tafsir berbahasa Arab:
لِلَّذِیْنَ اَحْسَنُوا الْحُسْنٰی وَزِیَادَةٌ ؕ— وَلَا یَرْهَقُ وُجُوْهَهُمْ قَتَرٌ وَّلَا ذِلَّةٌ ؕ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟
ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ ಮುಖಗಳಿಗೆ ಕಪ್ಪು ಛಾಯೆಯಾಗಲಿ ನಿಂದ್ಯತೆಯಾಗಲಿ ಆವರಿಸದು. ಅವರು ಸ್ವರ್ಗವಾಸಿಗಳಾಗಿರುವರು, ಅದರಲ್ಲವರು ಶಾಶ್ವತರಾಗಿರುತ್ತಾರೆ.
Tafsir berbahasa Arab:
وَالَّذِیْنَ كَسَبُوا السَّیِّاٰتِ جَزَآءُ سَیِّئَةٍ بِمِثْلِهَا ۙ— وَتَرْهَقُهُمْ ذِلَّةٌ ؕ— مَا لَهُمْ مِّنَ اللّٰهِ مِنْ عَاصِمٍ ۚ— كَاَنَّمَاۤ اُغْشِیَتْ وُجُوْهُهُمْ قِطَعًا مِّنَ الَّیْلِ مُظْلِمًا ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಮತ್ತು ದುಷ್ಕೃತ್ಯಗಳನ್ನು ಮಾಡಿದವರಿಗೆ ದುಷ್ಕೃತ್ಯಗಳ ಪ್ರತಿಫಲವು ಅದಕ್ಕೆ ಸಮಾನವಾಗಿಯೇ ಇರುವುದು ಮತ್ತು ಅವರನ್ನು ನಿಂದ್ಯತೆಯು ಆವರಿಸುವುದು ಅವರನ್ನು ಅಲ್ಲಾಹನಿಂದ ಯಾವೊಬ್ಬನೂ ರಕ್ಷಿಸಲಾರನು. ಅವರ ಮುಖಗಳ ಮೇಲೆ ಅಂಧಕಾರದ ರಾತ್ರಿಯ ತುಣುಕುಗಳು ಆವರಿಸಿದಂತಿವೆ. ಅವರು ನರಕವಾಸಿಗಳಾಗಿರುವರು. ಅದರಲ್ಲವರು ಶಾಶ್ವತವಾಗಿರುವರು.
Tafsir berbahasa Arab:
وَیَوْمَ نَحْشُرُهُمْ جَمِیْعًا ثُمَّ نَقُوْلُ لِلَّذِیْنَ اَشْرَكُوْا مَكَانَكُمْ اَنْتُمْ وَشُرَكَآؤُكُمْ ۚ— فَزَیَّلْنَا بَیْنَهُمْ وَقَالَ شُرَكَآؤُهُمْ مَّا كُنْتُمْ اِیَّانَا تَعْبُدُوْنَ ۟
ಅವರೆಲ್ಲರನ್ನು ಒಟ್ಟುಗೂಡಿಸುವ ದಿನದಂದು ನಾವು ನಮ್ಮ ಜೊತೆ ಸಹಭಾಗಿಗಳನ್ನು ನಿಶ್ಚಯಿಸಿದವರೊಂದಿಗೆ ಹೇಳುವೆವು; “ನೀವು ಮತ್ತು ನಿಮ್ಮ ಸಹಭಾಗಿ ದೇವರುಗಳು ನಿಂತಲ್ಲೇ ನಿಲ್ಲಿರಿ. ಅನಂತರ ನಾವು ಅವರನ್ನು ಪರಸ್ಪರ ಬೇರ್ಪಡಿಸಿಬಿಡುವೆವು ಮತ್ತು (ಅವರೊಂದಿಗೆ) ಅವರ ಸಹಭಾಗಿ ದೇವರುಗಳೆನ್ನುವರು; ನೀವು ನಮ್ಮನ್ನಂತು ಆರಾಧಿಸುತ್ತಿರಲಿಲ್ಲ”
Tafsir berbahasa Arab:
فَكَفٰی بِاللّٰهِ شَهِیْدًا بَیْنَنَا وَبَیْنَكُمْ اِنْ كُنَّا عَنْ عِبَادَتِكُمْ لَغٰفِلِیْنَ ۟
ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಾವು ನಿಮ್ಮ ಆರಾಧನೆಯ ಕುರಿತು ಸಂಪೂರ್ಣ ಅಲಕ್ಷö್ಯರಲ್ಲಾಗಿದ್ದೆವು.
Tafsir berbahasa Arab:
هُنَالِكَ تَبْلُوْا كُلُّ نَفْسٍ مَّاۤ اَسْلَفَتْ وَرُدُّوْۤا اِلَی اللّٰهِ مَوْلٰىهُمُ الْحَقِّ وَضَلَّ عَنْهُمْ مَّا كَانُوْا یَفْتَرُوْنَ ۟۠
ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಮೊದಲು ಮಾಡಿದ ಕರ್ಮಗಳನ್ನು ತಿಳಿದುಕೊಳ್ಳುವನು ಮತ್ತು ಅವರು ತಮ್ಮ ನೈಜ ಪ್ರಭುವಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಮತ್ತು ಅವರು ಸುಳ್ಳಾಗಿ ಸೃಷ್ಟಿಸಿದ್ದೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುದು.
Tafsir berbahasa Arab:
قُلْ مَنْ یَّرْزُقُكُمْ مِّنَ السَّمَآءِ وَالْاَرْضِ اَمَّنْ یَّمْلِكُ السَّمْعَ وَالْاَبْصَارَ وَمَنْ یُّخْرِجُ الْحَیَّ مِنَ الْمَیِّتِ وَیُخْرِجُ الْمَیِّتَ مِنَ الْحَیِّ وَمَنْ یُّدَبِّرُ الْاَمْرَ ؕ— فَسَیَقُوْلُوْنَ اللّٰهُ ۚ— فَقُلْ اَفَلَا تَتَّقُوْنَ ۟
ನಿಮಗೆ ಆಕಾಶ ಮತ್ತು ಭೂಮಿಯಿಂದ ಜೀವನಾಧಾರ ನೀಡುವವನು ಯಾರು? ಅಥವಾ ಕಿವಿಗಳ ಮತ್ತು ಕಣ್ಣುಗಳ ಒಡೆಯನಾರು ? ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನಾರು? ಮತ್ತು ಸಕಲ ಕಾರ್ಯಗಳನ್ನು ನಿಯೋಜಿಸುವವನಾರು ? ಎಂದು ಅವರೊಡನೆ ಕೇಳಿರಿ. ಅವರು ಹೇಳುವರು; ಅಲ್ಲಾಹ್ ಆಗ ನೀವು ಅವರೊಂದಿಗೆ ಹೇಳಿರಿ. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವುದಿಲ್ಲವೇ ?
Tafsir berbahasa Arab:
فَذٰلِكُمُ اللّٰهُ رَبُّكُمُ الْحَقُّ ۚ— فَمَاذَا بَعْدَ الْحَقِّ اِلَّا الضَّلٰلُ ۚ— فَاَنّٰی تُصْرَفُوْنَ ۟
ಅವನೇ ನಿಮ್ಮ ನೈಜ ಪ್ರಭು ಅಲ್ಲಾಹನಾಗಿದ್ದಾನೆ. ಇನ್ನು ಸತ್ಯವನ್ನು ಬಿಟ್ಟರೆ ಪಥಭ್ರಷ್ಟತೆಯಲ್ಲದೆ ಇನ್ನೇನು ಉಳಿದಿದೆ? ಹೀಗಿರುವಾಗ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ ?
Tafsir berbahasa Arab:
كَذٰلِكَ حَقَّتْ كَلِمَتُ رَبِّكَ عَلَی الَّذِیْنَ فَسَقُوْۤا اَنَّهُمْ لَا یُؤْمِنُوْنَ ۟
ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ.
Tafsir berbahasa Arab:
قُلْ هَلْ مِنْ شُرَكَآىِٕكُمْ مَّنْ یَّبْدَؤُا الْخَلْقَ ثُمَّ یُعِیْدُهٗ ؕ— قُلِ اللّٰهُ یَبْدَؤُا الْخَلْقَ ثُمَّ یُعِیْدُهٗ فَاَنّٰی تُؤْفَكُوْنَ ۟
ಹೇಳಿರಿ; ಸೃಷ್ಟಿಯ ಆರಂಭ ಮಾಡಿ ಆನಂತರ ಪುನಾರಾವರ್ತಿಸುವವನು ಯಾರಾದರೂ ನಿಮ್ಮ ಸಹಭಾಗಿ ದೇವರುಗಳಲ್ಲಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಆನಂತರ ಅವನೇ ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ?
Tafsir berbahasa Arab:
قُلْ هَلْ مِنْ شُرَكَآىِٕكُمْ مَّنْ یَّهْدِیْۤ اِلَی الْحَقِّ ؕ— قُلِ اللّٰهُ یَهْدِیْ لِلْحَقِّ ؕ— اَفَمَنْ یَّهْدِیْۤ اِلَی الْحَقِّ اَحَقُّ اَنْ یُّتَّبَعَ اَمَّنْ لَّا یَهِدِّیْۤ اِلَّاۤ اَنْ یُّهْدٰی ۚ— فَمَا لَكُمْ ۫— كَیْفَ تَحْكُمُوْنَ ۟
ಹೇಳಿರಿ ನಿಮ್ಮ ಸಹಭಾಗಿ ದೇವರುಗಳಲ್ಲಿ ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ: ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಇನ್ನು ಸತ್ಯದೆಡೆಗೆ ಮುನ್ನಡೆಸುವವನು ಅನುಸರಿಸ್ಪಡಲು ಯೋಗ್ಯನೇ ಅಥವಾ ಮಾರ್ಗದರ್ಶನ ಮಾಡದ ವಿನಃ ಮಾರ್ಗ ಪಡೆಯದವನೇ? ಹಾಗಿದ್ದೂ ನಿಮಗೇನಾಗಿಬಿಟ್ಟಿದೆ? ನೀವು ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ?
Tafsir berbahasa Arab:
وَمَا یَتَّبِعُ اَكْثَرُهُمْ اِلَّا ظَنًّا ؕ— اِنَّ الظَّنَّ لَا یُغْنِیْ مِنَ الْحَقِّ شَیْـًٔا ؕ— اِنَّ اللّٰهَ عَلِیْمٌۢ بِمَا یَفْعَلُوْنَ ۟
ಮತ್ತು ಬಹುದೇವಾರಾಧಕರ ಪೈಕಿ ಅಧಿಕ ಜನರು ಊಹೆಯನ್ನೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಸತ್ಯದ ಎದುರು ಊಹೆಯು ಒಂದಿಷ್ಟೂ ಪ್ರಯೋಜನಕ್ಕೆ ಬಾರದು. ನಿಶ್ಚಯವಾಗಿಯು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನು ಚೆನ್ನಾಗಿ ಅರಿಯುತ್ತಾನೆ.
Tafsir berbahasa Arab:
وَمَا كَانَ هٰذَا الْقُرْاٰنُ اَنْ یُّفْتَرٰی مِنْ دُوْنِ اللّٰهِ وَلٰكِنْ تَصْدِیْقَ الَّذِیْ بَیْنَ یَدَیْهِ وَتَفْصِیْلَ الْكِتٰبِ لَا رَیْبَ فِیْهِ مِنْ رَّبِّ الْعٰلَمِیْنَ ۟۫
ಮತ್ತು ಈ ಕುರ್‌ಆನ್ ಅಲ್ಲಾಹನ ಹೊರತು ಇತರರಿಂದ ರಚಿಸಿ ತಂದA- ತಹದ್ದಲ್ಲ. ಆದರೆ ಇದಂತು ತನಗಿಂತ ಮುಂಚೆ ಅವತೀರ್ಣಗೊಳಿಸಿರುವಂತಹ ಗ್ರಂಥಗಳನ್ನು ಸತ್ಯವೆಂದು ಪ್ರಾಮಾಣೀಕರಿಸುವ, ಮತ್ತು ದೈವಿಕ ನಿಯಮಗಳನ್ನು ವಿವರಿಸುವಂತಹ ಗ್ರಂಥವಾಗಿದೆ. ಇದು ಸರ್ವಲೋಕಗಳ ಪ್ರಭುವಿನವತಿಯಿಂದ ಅವತೀರ್ಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
Tafsir berbahasa Arab:
اَمْ یَقُوْلُوْنَ افْتَرٰىهُ ؕ— قُلْ فَاْتُوْا بِسُوْرَةٍ مِّثْلِهٖ وَادْعُوْا مَنِ اسْتَطَعْتُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟
ಅವರು ಮುಹಮ್ಮದ್‌ರವರು ಸ್ವತಃ ಅದನ್ನು ರಚಿಸಿರುವರೆಂದು ಹೇಳುತ್ತಿದ್ದಾರೆಯೇ ? ಉತ್ತರಿಸಿರಿ ; ಹಾಗಿದ್ದರೆ ಅದರಂತಹಾ ಒಂದೇ ಒಂದು ಅಧ್ಯಾಯವನ್ನು ಪ್ರಸ್ತುತ ಪಡಿಸಿರಿ ಹಾಗು ನೀವು ಸತ್ಯವಾದಿಗಳಾಗಿದ್ದರೆ. ಅಲ್ಲಾಹನ ಹೊರತು ನಿಮ್ಮ (ಸಹಾಯಕ್ಕಾಗಿ) ಸಾಧ್ಯವಿದ್ದವರನ್ನೆಲ್ಲಾ ಕರೆದುಕೊಳ್ಳಿರಿ.
Tafsir berbahasa Arab:
بَلْ كَذَّبُوْا بِمَا لَمْ یُحِیْطُوْا بِعِلْمِهٖ وَلَمَّا یَاْتِهِمْ تَاْوِیْلُهٗ ؕ— كَذٰلِكَ كَذَّبَ الَّذِیْنَ مِنْ قَبْلِهِمْ فَانْظُرْ كَیْفَ كَانَ عَاقِبَةُ الظّٰلِمِیْنَ ۟
ಅವರ ಜ್ಞಾನದ ಹಿಡಿತಕ್ಕೆ ಬಾರದ ಮತ್ತು ಅದರ ಪರಿಣಾಮವು ಅವರಿಗೆ ಸ್ಪಷ್ಟವಾಗದಂತಹದ್ದನ್ನು ಅವರು ಸುಳ್ಳಾಗಿಸುತ್ತಾರೆ. ಇದೇ ಪ್ರಕಾರ ಅವರ ಪೂರ್ವಿಕರೂ ಸಹ ಸುಳ್ಳಾಗಿಸಿದ್ದರು. ಕೊನೆಗೆ ಅಕ್ರಮಿಗಳ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.
Tafsir berbahasa Arab:
وَمِنْهُمْ مَّنْ یُّؤْمِنُ بِهٖ وَمِنْهُمْ مَّنْ لَّا یُؤْمِنُ بِهٖ ؕ— وَرَبُّكَ اَعْلَمُ بِالْمُفْسِدِیْنَ ۟۠
ಮತ್ತು ಅವರ ಪೈಕಿ ಕೆಲವರು ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಕೆಲವರು ಇದರಲ್ಲಿ ವಿಶ್ವಾಸವಿಡುವುದಿಲ್ಲ ಮತ್ತು ನಿಮ್ಮ ಪ್ರಭುವು ಕ್ಷೆÆÃಭೆ ಹರಡುವವರನ್ನು ಚೆನ್ನಾಗಿ ಅರಿಯುತ್ತಾನೆ.
Tafsir berbahasa Arab:
وَاِنْ كَذَّبُوْكَ فَقُلْ لِّیْ عَمَلِیْ وَلَكُمْ عَمَلُكُمْ ۚ— اَنْتُمْ بَرِیْٓـُٔوْنَ مِمَّاۤ اَعْمَلُ وَاَنَا بَرِیْٓءٌ مِّمَّا تَعْمَلُوْنَ ۟
ಮತ್ತು ಅವರು ನಿಮ್ಮನ್ನು ಸುಳ್ಳಾಗಿಸಿದರೆ, ಹೇಳಿರಿ; ನನಗೆ ನನ್ನ ಕರ್ಮ ನಿಮಗೆ ನಿಮ್ಮ ಕರ್ಮ, ನನ್ನ ಕರ್ಮಗಳಿಂದ ನೀವು ಹೊಣೆಮುಕ್ತರಾಗಿದ್ದೀರಿ, ಮತ್ತು ನಾನು ನಿಮ್ಮ ಕರ್ಮಗಳಿಂದ ಹೊಣೆ ಮುಕ್ತನಾಗಿದ್ದೇನೆ.
Tafsir berbahasa Arab:
وَمِنْهُمْ مَّنْ یَّسْتَمِعُوْنَ اِلَیْكَ ؕ— اَفَاَنْتَ تُسْمِعُ الصُّمَّ وَلَوْ كَانُوْا لَا یَعْقِلُوْنَ ۟
ಮತ್ತು ಅವರ ಪೈಕಿ ಕೆಲವರು ನಿಮ್ಮೆಡೆಗೆ ಕಿವಿಗೊಡುವವರೂ ಇದ್ದಾರೆ. ಏನು ನೀವು ಕಿವುಡರಿಗೆ ತಿಳಿಯದಿದ್ದರೂ ಕೇಳಿಸುವಿರಾ ?
Tafsir berbahasa Arab:
وَمِنْهُمْ مَّنْ یَّنْظُرُ اِلَیْكَ ؕ— اَفَاَنْتَ تَهْدِی الْعُمْیَ وَلَوْ كَانُوْا لَا یُبْصِرُوْنَ ۟
ಮತ್ತು ಅವರ ಪೈಕಿ ನಿಮ್ಮನ್ನು ನೋಡುವ ಕೆಲವರಿದ್ದಾರೆ, ಏನು ನೀವು ಕುರುಡರಿಗೆ ಕಾಣದಿದ್ದರೂ ಮಾರ್ಗ ತೋರಿಸುವಿರಾ?
Tafsir berbahasa Arab:
اِنَّ اللّٰهَ لَا یَظْلِمُ النَّاسَ شَیْـًٔا وَّلٰكِنَّ النَّاسَ اَنْفُسَهُمْ یَظْلِمُوْنَ ۟
ನಿಶ್ಚಯವಾಗಿಯೂ ಅಲ್ಲಾಹನು ಜನರಿಗೆ ಒಂದಿಷ್ಟೂ ಅನ್ಯಾಯ ಮಾಡುವುದಿಲ್ಲ. ಆದರೆ ಜನರು ಸ್ವತಃ ತಮ್ಮ ಮೇಲೆ ತಾವೇ ಅನ್ಯಾಯವೆಸಗುತ್ತಾರೆ.
Tafsir berbahasa Arab:
وَیَوْمَ یَحْشُرُهُمْ كَاَنْ لَّمْ یَلْبَثُوْۤا اِلَّا سَاعَةً مِّنَ النَّهَارِ یَتَعَارَفُوْنَ بَیْنَهُمْ ؕ— قَدْ خَسِرَ الَّذِیْنَ كَذَّبُوْا بِلِقَآءِ اللّٰهِ وَمَا كَانُوْا مُهْتَدِیْنَ ۟
ಮತ್ತು ಅಲ್ಲಾಹನು ಒಟ್ಟುಗೂಡಿಸುವ ದಿನದಂದು ಅವರಿಗೆ ತಾವು (ಭೂಲೋಕದಲ್ಲಿ) ದಿನದ ಒಂದು ಗಳಿಗೆ ಮಾತ್ರ ವಾಸಿಸಿದ್ದೆವು ಎಂಬAತೆ ಭಾಸವಾಗುವುದು, ಅವರು ಪರಸ್ಪರ ಒಬ್ಬರನ್ನೊಬ್ಬರು ಪರಿಚಯಿಸಿ ಕೊಳ್ಳುತ್ತಿರುವರು. ನಿಜವಾಗಿಯೂ ಅಲ್ಲಾಹನ ಭೇಟಿಯನ್ನು ಸುಳ್ಳಾಗಿಸಿದವರು ನಷ್ಟ ಹೊಂದಿದರು ಮತ್ತು ಅವರು ಸನ್ಮಾರ್ಗ ಪಡೆಯುವವರಾಗಿರಲಿಲ್ಲ.
Tafsir berbahasa Arab:
وَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا مَرْجِعُهُمْ ثُمَّ اللّٰهُ شَهِیْدٌ عَلٰی مَا یَفْعَلُوْنَ ۟
ಮತ್ತು ಅವರಿಗೆ ನಾವು ವಾಗ್ದಾನ ಮಾಡಿರುವಂತಹ ಕೆಲವು ಶಿಕ್ಷೆಗಳನ್ನು ನಿಮಗೆ ತೋರಿಸಬಹುದು ಅಥವ (ಅದರ ಪ್ರಕಟಣೆಗೆ ಮುನ್ನ) ನಿಮಗೆ ಮರಣ ನೀಡಬಹುದು. ಹೇಗಿದ್ದರೂ ನಮ್ಮ ಬಳಿಗೆ ಅವರಿಗೆ ಮರಳಲಿಕ್ಕಿದೆ. ಅನಂತರ ಅಲ್ಲಾಹನು ಅವರ ಎಲ್ಲ ಕೃತ್ಯಗಳ ಮೇಲೆ ಸಾಕ್ಷಿಯಾಗಿರುವನು.
Tafsir berbahasa Arab:
وَلِكُلِّ اُمَّةٍ رَّسُوْلٌ ۚ— فَاِذَا جَآءَ رَسُوْلُهُمْ قُضِیَ بَیْنَهُمْ بِالْقِسْطِ وَهُمْ لَا یُظْلَمُوْنَ ۟
ಪ್ರತಿಯೊಂದು ಸಮುದಾಯಕ್ಕೂ ಒಬ್ಬ ಸಂದೇಶವಾಹಕನಿದ್ದಾನೆ. ಅವರ ಬಳಿಗೆ ಸಂದೇಶವಾಹಕನು ಬಂದಾಗ ಅವರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಮಾಡಲಾಗುವುದು ಮತ್ತು ಅವರ ಮೇಲೆ ಅನ್ಯಾಯ ಮಾಡಲಾಗುವುದಿಲ್ಲ.
Tafsir berbahasa Arab:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ಮತ್ತು ನೀವು ಸತ್ಯವಂತರಾಗಿದ್ದರೆ, ಈ ವಾಗ್ದಾನವು ಯಾವಾಗ ಪೂರ್ಣಗೊಳ್ಳುವುದು? ಎಂದು ಅವರು ಕೇಳುತ್ತಾರೆ
Tafsir berbahasa Arab:
قُلْ لَّاۤ اَمْلِكُ لِنَفْسِیْ ضَرًّا وَّلَا نَفْعًا اِلَّا مَا شَآءَ اللّٰهُ ؕ— لِكُلِّ اُمَّةٍ اَجَلٌ ؕ— اِذَا جَآءَ اَجَلُهُمْ فَلَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟
ಉತ್ತರಿಸಿರಿ; ಸ್ವತಃ ನನ್ನ ಹಾನಿ ಮತ್ತು ಲಾಭದ ಅಧಿಕಾರವು ನನ್ನ ಕೈಯಲ್ಲಿಲ್ಲ. ಆದರೆ ಅಲ್ಲಾಹನು ಇಚ್ಛಿಸಿದಷ್ಟು ಮಾತ್ರ ಪ್ರತಿಯೊಂದು ಸಮುದಾಯಕ್ಕೂ ಒಂದು ನಿಶ್ಚಿತಾವಧಿಯಿದೆ. ಅವರ ಆ ನಿಶ್ಚಿತಾವಧಿಯು ಬಂದು ಬಿಟ್ಟರೆ ಅವರು ಒಂದು ಕ್ಷಣವೂ ಹಿಂದೆ ಮುಂದೆ ಆಗಲಾರರು.
Tafsir berbahasa Arab:
قُلْ اَرَءَیْتُمْ اِنْ اَتٰىكُمْ عَذَابُهٗ بَیَاتًا اَوْ نَهَارًا مَّاذَا یَسْتَعْجِلُ مِنْهُ الْمُجْرِمُوْنَ ۟
ಓ ಪೈಗಂಬರರೇ ಇವರೊಡನೆ ಹೇಳಿರಿ; ಅಲ್ಲಾಹನ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಿನ ವೇಳೆ ನಿಮ್ಮ ಮೇಲೆ ಬಂದೆರಗಿದರೆ ಇದರಲ್ಲಿ ಯಾವ ಒಳಿತಿದೆಯೆಂದು ಅಪರಾಧಿಗಳು ಇದಕ್ಕಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ ?
Tafsir berbahasa Arab:
اَثُمَّ اِذَا مَا وَقَعَ اٰمَنْتُمْ بِهٖ ؕ— آٰلْـٰٔنَ وَقَدْ كُنْتُمْ بِهٖ تَسْتَعْجِلُوْنَ ۟
ಅದು (ಯಾತನೆ) ಸಂಭವಿಸಿದ ನಂತರವೇ ನೀವು ಅದರಲ್ಲಿ ವಿಶ್ವಾಸವಿಡುತ್ತೀರಾ, ವಸ್ತುತಃ ನೀವು ಅದರ ಬಗ್ಗೆ ಆತುರಪಟ್ಟುಕೊಳ್ಳುತ್ತಿದ್ದೀರಿ!
Tafsir berbahasa Arab:
ثُمَّ قِیْلَ لِلَّذِیْنَ ظَلَمُوْا ذُوْقُوْا عَذَابَ الْخُلْدِ ۚ— هَلْ تُجْزَوْنَ اِلَّا بِمَا كُنْتُمْ تَكْسِبُوْنَ ۟
ಅನಂತರ ಅಕ್ರಮಿಗಳೊಂದಿಗೆ ಹೇಳಲಾಗುವುದು ನೀವು ಚಿರಯಾತನೆಯ ಸವಿಯನ್ನುಣ್ಣಿರಿ. ನಿಮಗಂತು ನಿಮ್ಮ ಆ ಕೃತ್ಯಗಳ ಪ್ರತಿಫಲವೇ ನೀಡಲಾಗುತ್ತಿದೆ.
Tafsir berbahasa Arab:
وَیَسْتَنْۢبِـُٔوْنَكَ اَحَقٌّ هُوَ ؔؕ— قُلْ اِیْ وَرَبِّیْۤ اِنَّهٗ لَحَقٌّ ؔؕ— وَمَاۤ اَنْتُمْ بِمُعْجِزِیْنَ ۟۠
ಮತ್ತು ಅವರು ನಿಮ್ಮೊಂದಿಗೆ ಅದು (ಯಾತನೆ) ನಿಜಕ್ಕೂ ಸತ್ಯವಾಗಿದೆಯೇ ಎಂದು ವಿಚಾರಿಸುತ್ತಾರೆ. ನೀವು ಅಲ್ಲಾಹನನ್ನು ಸೋಲಿಸಲಾರಿರಿ.
Tafsir berbahasa Arab:
وَلَوْ اَنَّ لِكُلِّ نَفْسٍ ظَلَمَتْ مَا فِی الْاَرْضِ لَافْتَدَتْ بِهٖ ؕ— وَاَسَرُّوا النَّدَامَةَ لَمَّا رَاَوُا الْعَذَابَ ۚ— وَقُضِیَ بَیْنَهُمْ بِالْقِسْطِ وَهُمْ لَا یُظْلَمُوْنَ ۟
ಅಕ್ರಮ (ಶಿರ್ಕ್)ವೆಸಗಿದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಇಡೀ ಭೂಮಿಯ ಸಕಲ ಸಂಪತ್ತಿದ್ದರೂ (ಯಾತನೆಯಿಂದ ರಕ್ಷಣೆಗಾಗಿ) ಅವನು ಅದನ್ನೆಲ್ಲಾ ಪ್ರಾಯಶ್ಚಿತವಾಗಿ ಕೊಡುತ್ತಿದ್ದನು. ಅವರು ಯಾತನೆಯನ್ನು ಕಾಣುವಾಗ ಮನದೊಳಗೆ ಮರುಗುವರು ಆದರೆ ಅವರ ನಡುವೆ ತೀರ್ಪು ನ್ಯಾಯೋಚಿತವಾಗಿ ಮಾಡಲಾಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾಗದು.
Tafsir berbahasa Arab:
اَلَاۤ اِنَّ لِلّٰهِ مَا فِی السَّمٰوٰتِ وَالْاَرْضِ ؕ— اَلَاۤ اِنَّ وَعْدَ اللّٰهِ حَقٌّ وَّلٰكِنَّ اَكْثَرَهُمْ لَا یَعْلَمُوْنَ ۟
ತಿಳಿದುಕೊಳ್ಳಿರಿ ! ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ. ತಿಳಿದುಕೊಳ್ಳಿರಿ! ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದರೆ ಬಹುದೇವಾರಾಧಕರಲ್ಲಿ ಹೆಚ್ಚಿನವರು ಅದನ್ನು ಅರಿಯುವುದಿಲ್ಲ.
Tafsir berbahasa Arab:
هُوَ یُحْیٖ وَیُمِیْتُ وَاِلَیْهِ تُرْجَعُوْنَ ۟
ಅವನೇ ಜೀವಂತಗೊಳಿಸುತ್ತಾನೆ ಹಾಗೂ ಮರಣ ಕೊಡುತ್ತಾನೆ ಮತ್ತು ನೀವೆಲ್ಲರು ಅವನೆಡೆಗೇ ಮರಳಿಸಲಾಗುವಿರಿ.
Tafsir berbahasa Arab:
یٰۤاَیُّهَا النَّاسُ قَدْ جَآءَتْكُمْ مَّوْعِظَةٌ مِّنْ رَّبِّكُمْ وَشِفَآءٌ لِّمَا فِی الصُّدُوْرِ ۙ۬— وَهُدًی وَّرَحْمَةٌ لِّلْمُؤْمِنِیْنَ ۟
ಓ ಜನರೇ, ನಿಸ್ಸಂದೇಹವಾಗಿಯೂ ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಸದುಪದೇಶವೂ, ಹೃದಯಗಳಲ್ಲಿರುವ ರೋಗಗಳಿಗೆ ಉಪಶಮನವೂ ಬಂದಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವೂ, ಕಾರುಣ್ಯವೂ ಆಗಿರುತ್ತದೆ.
Tafsir berbahasa Arab:
قُلْ بِفَضْلِ اللّٰهِ وَبِرَحْمَتِهٖ فَبِذٰلِكَ فَلْیَفْرَحُوْا ؕ— هُوَ خَیْرٌ مِّمَّا یَجْمَعُوْنَ ۟
ನೀವು ಹೇಳಿರಿ; ಜನರು ಅಲ್ಲಾಹನ ಈ ಅನುಗ್ರಹ ಮತ್ತು ಕಾರುಣ್ಯದ ನಿಮಿತ್ತ ಸಂತಸಗೊಳ್ಳಲಿ. ಇದು ಅವರು ಶೇಖರಿಸುತ್ತಿರುವುದಕ್ಕಿಂತಲೂ ಅದೆಷ್ಟೋ ಉತ್ತಮವಾಗಿದೆ.
Tafsir berbahasa Arab:
قُلْ اَرَءَیْتُمْ مَّاۤ اَنْزَلَ اللّٰهُ لَكُمْ مِّنْ رِّزْقٍ فَجَعَلْتُمْ مِّنْهُ حَرَامًا وَّحَلٰلًا ؕ— قُلْ آٰللّٰهُ اَذِنَ لَكُمْ اَمْ عَلَی اللّٰهِ تَفْتَرُوْنَ ۟
ಹೇಳಿರಿ; ಅಲ್ಲಾಹನು ನಿಮಗಾಗಿ ದಯಪಾಲಿಸಿದ ಆಹಾರದ ಬಗ್ಗೆ ನೀವು ಯೋಚಿಸಿದ್ದೀರಾ ? ನೀವು ಅದರಲ್ಲಿ ಕೆಲವು ಅಂಶವನ್ನು ನಿಷಿದ್ಧವನ್ನಾಗಿಯೂ, ಇನ್ನು ಕೆಲವು ಅಂಶವನ್ನು ಧರ್ಮಬದ್ಧವನ್ನಾಗಿಯೂ ಮಾಡಿಕೊಂಡಿರುವಿರಿ. ಹೇಳಿರಿ; ನಿಮಗೆ ಅಲ್ಲಾಹನು ಅನುಮತಿಸಿರುವನೇ ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುತ್ತಿರುವಿರಾ ?
Tafsir berbahasa Arab:
وَمَا ظَنُّ الَّذِیْنَ یَفْتَرُوْنَ عَلَی اللّٰهِ الْكَذِبَ یَوْمَ الْقِیٰمَةِ ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَهُمْ لَا یَشْكُرُوْنَ ۟۠
ಮತ್ತು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುತ್ತಿರುವವರ ಭಾವನೆಯು ಪುನರುತ್ಥಾನ ದಿನದ ಕುರಿತು ಏನಾಗಿರಬಹುದು ? ನಿಜವಾಗಿಯೂ ಜನರ ಮೇಲೆ ಅಲ್ಲಾಹನ ಮಹಾ ಅನುಗ್ರವಿದೆ. ಆದರೆ ಅವರಲ್ಲಿ ಅಧಿಕಜನರು ಕೃತಜ್ಞತೆಯನ್ನು ಸಲ್ಲಿಸುವುದಿಲ್ಲ.
Tafsir berbahasa Arab:
وَمَا تَكُوْنُ فِیْ شَاْنٍ وَّمَا تَتْلُوْا مِنْهُ مِنْ قُرْاٰنٍ وَّلَا تَعْمَلُوْنَ مِنْ عَمَلٍ اِلَّا كُنَّا عَلَیْكُمْ شُهُوْدًا اِذْ تُفِیْضُوْنَ فِیْهِ ؕ— وَمَا یَعْزُبُ عَنْ رَّبِّكَ مِنْ مِّثْقَالِ ذَرَّةٍ فِی الْاَرْضِ وَلَا فِی السَّمَآءِ وَلَاۤ اَصْغَرَ مِنْ ذٰلِكَ وَلَاۤ اَكْبَرَ اِلَّا فِیْ كِتٰبٍ مُّبِیْنٍ ۟
ಓ ಪೈಗಂಬರರೇ ನೀವು ಯಾವ ಸ್ಥಿತಿಯಲ್ಲಿದ್ದರೂ, ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನಿನಿಂದ ನೀವು ಓದಿ ಕೇಳಿಸುತ್ತಿದ್ದರೂ ಮತ್ತು ಓ ಜನರೇ ನೀವು ಯಾವುದೇ ಕೆಲಸ ಮಾಡುತ್ತಿದ್ದು ಅದರಲ್ಲಿ ಮಗ್ನರಾಗಿದ್ದರೂ ನಿಮ್ಮನ್ನು ನಾವು ನೋಡುತ್ತಿರುತ್ತೇವೆ, ಮತ್ತು ನಿಮ್ಮ ಪ್ರಭುವಿನಿಂದ ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅಣು ತೂಕದಷ್ಟು ವಸ್ತುವೂ ಅಡಗಿರುವುದಿಲ್ಲ, ಅಥವಾ ಅದಕ್ಕಿಂತ ಚಿಕ್ಕದಿರಲಿ, ದೊಡ್ಡದಿರಲಿ ಎಲ್ಲವೂ ಒಂದು ಸುಸ್ಪಷ್ಟ ದಾಖಲೆಯಲ್ಲಿರುತ್ತದೆ.
Tafsir berbahasa Arab:
اَلَاۤ اِنَّ اَوْلِیَآءَ اللّٰهِ لَا خَوْفٌ عَلَیْهِمْ وَلَا هُمْ یَحْزَنُوْنَ ۟ۚ
ಎಚ್ಚರಿಕೆ ಖಂಡಿತವಾಗಿಯೂ ಅಲ್ಲಾಹನ ಆಪ್ತಮಿತ್ರರಿಗೆ ಭಯವಾಗಲಿ, ದುಖಃವಾಗಲಿ ಸಂಭವಿಸುವುದಿಲ್ಲ.
Tafsir berbahasa Arab:
الَّذِیْنَ اٰمَنُوْا وَكَانُوْا یَتَّقُوْنَ ۟ؕ
ಅವರು ಸತ್ಯ ವಿಶ್ವಾಸವನ್ನಿರಿಸಿ ಭಯವನ್ನಿರಿಸಿಕೊಂಡವರು ಆಗಿದ್ದಾರೆ.
Tafsir berbahasa Arab:
لَهُمُ الْبُشْرٰی فِی الْحَیٰوةِ الدُّنْیَا وَفِی الْاٰخِرَةِ ؕ— لَا تَبْدِیْلَ لِكَلِمٰتِ اللّٰهِ ؕ— ذٰلِكَ هُوَ الْفَوْزُ الْعَظِیْمُ ۟ؕ
ಅವರಿಗೆ ಈ ಇಹಲೋಕ ಜೀವನದಲ್ಲೂ, ಪರಲೋಕದಲ್ಲೂ ಶುಭವಾರ್ತೆಯಿದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಇದು ಮಹಾ ಯಶಸ್ಸಾಗಿರುತ್ತದೆ.
Tafsir berbahasa Arab:
وَلَا یَحْزُنْكَ قَوْلُهُمْ ۘ— اِنَّ الْعِزَّةَ لِلّٰهِ جَمِیْعًا ؕ— هُوَ السَّمِیْعُ الْعَلِیْمُ ۟
ಮತ್ತು (ಓ ಪೈಗಂಬರರೇ) ನಿಮಗೆ ಅವರ ಮಾತುಗಳು ದುಖಃಕ್ಕೀಡು ಮಾಡದಿರಲಿ. ನಿಶ್ಚಯವಾಗಿಯೂ ಸಕಲ ವಿಧದ ಪ್ರತಾಪವೂ, (ಗೌರವವೂ) ಅಲ್ಲಾಹನಿಗೆ ಇರುವುದು, ಅವನು ಚೆನ್ನಾಗಿ ಆಲಿಸುವವನು, ಸರ್ವವನ್ನು ಅರಿಯುವವನು ಆಗಿದ್ದಾನೆ.
Tafsir berbahasa Arab:
اَلَاۤ اِنَّ لِلّٰهِ مَنْ فِی السَّمٰوٰتِ وَمَنْ فِی الْاَرْضِ ؕ— وَمَا یَتَّبِعُ الَّذِیْنَ یَدْعُوْنَ مِنْ دُوْنِ اللّٰهِ شُرَكَآءَ ؕ— اِنْ یَّتَّبِعُوْنَ اِلَّا الظَّنَّ وَاِنْ هُمْ اِلَّا یَخْرُصُوْنَ ۟
ತಿಳಿದುಕೊಳ್ಳಿರಿ. ನಿಸ್ಸಂಶಯವಾಗಿಯು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ, ಮತ್ತು ಅಲ್ಲಾಹನ ಹೊರತು ಇತರ ಸಹಭಾಗಿ ದೇವರುಗಳನ್ನು ಆರಾಧಿಸುತ್ತಿರುವವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ.
Tafsir berbahasa Arab:
هُوَ الَّذِیْ جَعَلَ لَكُمُ الَّیْلَ لِتَسْكُنُوْا فِیْهِ وَالنَّهَارَ مُبْصِرًا ؕ— اِنَّ فِیْ ذٰلِكَ لَاٰیٰتٍ لِّقَوْمٍ یَّسْمَعُوْنَ ۟
ಮತ್ತು ಅವನೇ ರಾತ್ರಿಯನ್ನು ನಿಮಗಾಗಿ ವಿಶ್ರಾಂತಿ ಪಡೆಯಲೆಂದು ಮತ್ತು ಹಗಲನ್ನು (ಕೆಲಸ ಕಾರ್ಯಗಳಿಗಾಗಿ) ಪ್ರಕಾಶಮಾನವಾಗಿಯು ಮಾಡಿರುವನು. ನಿಶ್ಚಯವಾಗಿಯು ಇದರಲ್ಲಿ ಆಲಿಸುವ ಜನರಿಗೆ ನಿದರ್ಶನಗಳಿವೆ.
Tafsir berbahasa Arab:
قَالُوا اتَّخَذَ اللّٰهُ وَلَدًا سُبْحٰنَهٗ ؕ— هُوَ الْغَنِیُّ ؕ— لَهٗ مَا فِی السَّمٰوٰتِ وَمَا فِی الْاَرْضِ ؕ— اِنْ عِنْدَكُمْ مِّنْ سُلْطٰنٍ بِهٰذَا ؕ— اَتَقُوْلُوْنَ عَلَی اللّٰهِ مَا لَا تَعْلَمُوْنَ ۟
ಅಲ್ಲಾಹನು ಸಂತಾನವನ್ನು ಹೊಂದಿರುತ್ತಾನೆAದು ಅವರು ಆರೋಪಿಸುತ್ತಾರೆ. ಅವನಾದರೂ ಅದೆಷ್ಟೋ ಪರಮ ಪಾವನನು ನಿರಪೇಕ್ಷಕನು ಆಗಿರುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಅಧಿಪತ್ಯದಲ್ಲಿದೆ. ಈ ವಿಚಾರದಲ್ಲಿ ನಿಮ್ಮ ಬಳಿ ಆಧಾರವೇನೂ ಇಲ್ಲ. ನೀವು ಅರಿಯದಿದ್ದನ್ನು ಅಲ್ಲಾಹನ ಮೇಲೆ ಹೇಳುತ್ತಿರುವಿರಾ ?
Tafsir berbahasa Arab:
قُلْ اِنَّ الَّذِیْنَ یَفْتَرُوْنَ عَلَی اللّٰهِ الْكَذِبَ لَا یُفْلِحُوْنَ ۟ؕ
ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೇಳುತ್ತಿರುವವರು ಯಶಸ್ವಿಯಾಗಲಾರರು.
Tafsir berbahasa Arab:
مَتَاعٌ فِی الدُّنْیَا ثُمَّ اِلَیْنَا مَرْجِعُهُمْ ثُمَّ نُذِیْقُهُمُ الْعَذَابَ الشَّدِیْدَ بِمَا كَانُوْا یَكْفُرُوْنَ ۟۠
ಇಹಲೋಕದಲ್ಲಿ ಅತ್ಯಲ್ಪ ಸುಖ ಭೋಗವಿರುವುದು. ಅನಂತರ ಅವರಿಗೆ ನಮ್ಮೆಡೆಗೇ ಮರಳಬೇಕಾಗಿದೆ. ತರುವಾಯ ನಾವು ಅವರ ಸತ್ಯನಿಷೇಧದ ನಿಮಿತ್ತ ಕಠಿಣ ಯಾತನೆಯ ಸವಿಯನ್ನುಣಿಸುವೆವು.
Tafsir berbahasa Arab:
وَاتْلُ عَلَیْهِمْ نَبَاَ نُوْحٍ ۘ— اِذْ قَالَ لِقَوْمِهٖ یٰقَوْمِ اِنْ كَانَ كَبُرَ عَلَیْكُمْ مَّقَامِیْ وَتَذْكِیْرِیْ بِاٰیٰتِ اللّٰهِ فَعَلَی اللّٰهِ تَوَكَّلْتُ فَاَجْمِعُوْۤا اَمْرَكُمْ وَشُرَكَآءَكُمْ ثُمَّ لَا یَكُنْ اَمْرُكُمْ عَلَیْكُمْ غُمَّةً ثُمَّ اقْضُوْۤا اِلَیَّ وَلَا تُنْظِرُوْنِ ۟
(ಓ ಪೈಗಂಬರರೇ) ತಾವು ಅವರಿಗೆ ನೂಹ್‌ರವರ ವೃತ್ತಾಂತವನ್ನು ಓದಿ ಹೇಳಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ; ಓ ನನ್ನ ಜನಾಂಗವೇ, ನಿಮ್ಮ ನಡುವೆ ನನ್ನ ಇರುವಿಕೆಯು ಮತ್ತು ಅಲ್ಲಾಹನ ಸೂಕ್ತಿಗಳ ಮೂಲಕ ನಿಮ್ಮನ್ನು ಎಚ್ಚರಗೊಳಿಸುವುದು ನಿಮಗೆ ಭಾರವೆನಿಸುವುದಾದರೆ ನಾನಂತು ಅಲ್ಲಾಹನ ಮೇಲೆ ಭರವಸೆಯಿಟ್ಟಿದ್ದೇನೆ. ನೀವು ನಿಮ್ಮ ಸಹಭಾಗಿ ದೇವರುಗಳೊಂದಿಗೆ ನಿಮ್ಮ ಯೋಜನೆಯನ್ನು ದೃಢಪಡಿಸಿರಿ. ಆಮೇಲೆ ನಿಮ್ಮ ಆ ಯೋಜನೆಯ ಯಾವ ಅಂಶವು ನಿಮ್ಮಿಂದ ಅಡಗಿರದಿರಲಿ. ಅನಂತರ ನನ್ನ ವಿರುದ್ಧ ಕಾರ್ಯಾಚರಣೆಗಿಳಿಯಿರಿ ಹಾಗು ನನಗೆ ಕಾಲಾವಕಾಶವನ್ನೂ ನೀಡಬೇಡಿರಿ.
Tafsir berbahasa Arab:
فَاِنْ تَوَلَّیْتُمْ فَمَا سَاَلْتُكُمْ مِّنْ اَجْرٍ ؕ— اِنْ اَجْرِیَ اِلَّا عَلَی اللّٰهِ ۙ— وَاُمِرْتُ اَنْ اَكُوْنَ مِنَ الْمُسْلِمِیْنَ ۟
ಅನಂತರವೂ ನೀವು ವಿಮುಖರಾಗುವುದಾದರೆ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನಂತು ಬೇಡಿರುವುದಿಲ್ಲ. ನನ್ನ ಪ್ರತಿಫಲವಂತು ಅಲ್ಲಾಹನ ಹೊಣೆಯಲ್ಲಿದೆ ಮತ್ತು (ಅಲ್ಲಾಹನಿಗೆ) ವಿಧೇಯರಾದವರಲ್ಲಿ ಸೇರಲು ನನಗೆ ಆಜ್ಞಾಪಿಸಲಾಗಿದೆ.
Tafsir berbahasa Arab:
فَكَذَّبُوْهُ فَنَجَّیْنٰهُ وَمَنْ مَّعَهٗ فِی الْفُلْكِ وَجَعَلْنٰهُمْ خَلٰٓىِٕفَ وَاَغْرَقْنَا الَّذِیْنَ كَذَّبُوْا بِاٰیٰتِنَا ۚ— فَانْظُرْ كَیْفَ كَانَ عَاقِبَةُ الْمُنْذَرِیْنَ ۟
ಆದರೆ ಅವರು (ಅವರ ಜನಾಂಗ) ನೂಹ್‌ರವರನ್ನು ಸುಳ್ಳಾಗಿಸಿದರು. ಅನಂತರ ನಾವು ಅವರನ್ನು, ಅವರ ಜೊತೆ ಹಡಗಿನಲ್ಲಿದ್ದವರನ್ನೂ ರಕ್ಷಿಸಿದೆವು ಮತ್ತು ಅವರನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿದ್ದವರನ್ನು ಮುಳುಗಿಸಿಬಿಟ್ಟೆವು. ಆದ್ದರಿಂದ ನೀವು ಮುನ್ನೆಚ್ಚರಿಕೆ ನೀಡಲ್ಪಟ್ಟವರ ಗತಿ ಏನಾಯಿತೆಂಬುದನ್ನು ನೋಡಿರಿ.
Tafsir berbahasa Arab:
ثُمَّ بَعَثْنَا مِنْ بَعْدِهٖ رُسُلًا اِلٰی قَوْمِهِمْ فَجَآءُوْهُمْ بِالْبَیِّنٰتِ فَمَا كَانُوْا لِیُؤْمِنُوْا بِمَا كَذَّبُوْا بِهٖ مِنْ قَبْلُ ؕ— كَذٰلِكَ نَطْبَعُ عَلٰی قُلُوْبِ الْمُعْتَدِیْنَ ۟
ತರುವಾಯ ನಾವು ನೂಹ್‌ರವರ ನಂತರ ಇತರ ಸಂದೇಶವಾಹಕರನ್ನು ತಮ್ಮತಮ್ಮ ಜನಾಂಗದೆಡೆಗೆ ನಿಯೋಗಿಸಿದೆವು. ಅವರೆಲ್ಲ ಸುಸ್ಪಷ್ಟ ಪುರಾವೆಗಳೊಂದಿಗೆ ಅವರೆಡೆಗೆ ಆಗಮಿಸಿದರು. ಆದರೆ ಅವರು ಈ ಮುಂಚೆ ಸುಳ್ಳಾಗಿಸಿದ್ದನ್ನು ವಿಶ್ವಾಸವಿಡುವವರಾಗಿರಲಿಲ್ಲ. ಇದೇ ಪ್ರಕಾರ ನಾವು ಮೇರೆ ಮೀರುವವರ ಹೃದಯಗಳ ಮೇಲೆ ಮುದ್ರೆಯೊತ್ತಿಬಿಡುವೆವು.
Tafsir berbahasa Arab:
ثُمَّ بَعَثْنَا مِنْ بَعْدِهِمْ مُّوْسٰی وَهٰرُوْنَ اِلٰی فِرْعَوْنَ وَمَلَاۡىِٕهٖ بِاٰیٰتِنَا فَاسْتَكْبَرُوْا وَكَانُوْا قَوْمًا مُّجْرِمِیْنَ ۟
. ತರುವಾಯ ನಾವು ಆ ಸಂದೇಶವಾಹಕರ ನಂತರ ಮೂಸಾ ಮತ್ತು ಹಾರೂನರವರನ್ನು ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ನಮ್ಮ ದೃಷ್ಟಾಂತಗಳೊAದಿಗೆ ನಿಯೋಗಿಸಿದೆವು. ಆದರೆ ಅವರು ಅಹಂಕಾರ ತೋರಿದರು ಮತ್ತು ಅವರು ಅಪರಾಧಿ ಜನಾಂಗವಾಗಿದ್ದರು.
Tafsir berbahasa Arab:
فَلَمَّا جَآءَهُمُ الْحَقُّ مِنْ عِنْدِنَا قَالُوْۤا اِنَّ هٰذَا لَسِحْرٌ مُّبِیْنٌ ۟
ಅನಂತರ ಅವರ ಬಳಿಗೆ ನಮ್ಮ ಕಡೆಯಿಂದ ಸತ್ಯವು ಬಂದಾಗ ಖಂಡಿತವಾಗಿಯೂ ಇದು ಸ್ಪಷ್ಟ ಜಾದೂವಾಗಿದೆ ಎಂದರು.
Tafsir berbahasa Arab:
قَالَ مُوْسٰۤی اَتَقُوْلُوْنَ لِلْحَقِّ لَمَّا جَآءَكُمْ ؕ— اَسِحْرٌ هٰذَا ؕ— وَلَا یُفْلِحُ السّٰحِرُوْنَ ۟
ಮೂಸಾ ಉತ್ತರಿಸಿದರು. ಸತ್ಯವು ನಿಮ್ಮೆಡೆಗೆ ಬಂದಾಗ ನೀವು ಇಂತಹ ಮಾತನ್ನು ಹೇಳುತ್ತಿರುವಿರಾ ? ಇದು ಜಾದುವೇ ? ವಸ್ತುತಃ ಜಾದೂಗಾರರು ಯಶಸ್ಸು ಪಡೆಯಲಾರರು.
Tafsir berbahasa Arab:
قَالُوْۤا اَجِئْتَنَا لِتَلْفِتَنَا عَمَّا وَجَدْنَا عَلَیْهِ اٰبَآءَنَا وَتَكُوْنَ لَكُمَا الْكِبْرِیَآءُ فِی الْاَرْضِ ؕ— وَمَا نَحْنُ لَكُمَا بِمُؤْمِنِیْنَ ۟
ಅವರು ಹೇಳಿದರು; ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೇವೆಯೋ ಅದರಿಂದ ನೀವು ನಮ್ಮನ್ನು ಸರಿಸಿಬಿಡಲೆಂದೂ, ಭೂಮಿಯಲ್ಲಿ ನಿಮಗಿಬ್ಬರಿಗೂ ಹಿರಿಮೆ ಸಿಗಲೆಂದೂ ನೀವು ನಮ್ಮ ಬಳಿಗೆ ಬಂದಿರುವಿರಾ? ನಾವು ನಿಮ್ಮಿಬ್ಬರನ್ನು ಎಂದಿಗೂ ನಂಬುವವರಲ್ಲ.
Tafsir berbahasa Arab:
وَقَالَ فِرْعَوْنُ ائْتُوْنِیْ بِكُلِّ سٰحِرٍ عَلِیْمٍ ۟
ಮತ್ತು ಫಿರ್‌ಔನನು ಆಜ್ಞಾಪಿಸಿದನು ನೀವು ನನ್ನ ಬಳಿಗೆ ಪ್ರತಿಯೊಬ್ಬ ನಿಪುಣ ಜಾದೂಗಾರನನ್ನು ಹಾಜರುಪಡಿಸಿರಿ.
Tafsir berbahasa Arab:
فَلَمَّا جَآءَ السَّحَرَةُ قَالَ لَهُمْ مُّوْسٰۤی اَلْقُوْا مَاۤ اَنْتُمْ مُّلْقُوْنَ ۟
ಅನಂತರ ಜಾದೂಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು; ನಿಮಗೆ ಹಾಕಲಿರುವ ಮೊಡಿಯನ್ನು ಹಾಕಿಬಿಡಿರಿ.
Tafsir berbahasa Arab:
فَلَمَّاۤ اَلْقَوْا قَالَ مُوْسٰی مَا جِئْتُمْ بِهِ ۙ— السِّحْرُ ؕ— اِنَّ اللّٰهَ سَیُبْطِلُهٗ ؕ— اِنَّ اللّٰهَ لَا یُصْلِحُ عَمَلَ الْمُفْسِدِیْنَ ۟
ಅವರು ಮೊಡಿ ಹಾಕಿದಾಗ ಮೂಸಾ ಹೇಳಿದರು; ನೀವು ತಂದಿರುವುದು ಜಾದೂವಾಗಿದೆ. ನಿಶ್ಚಯವಾಗಿಯೂ ಅಲ್ಲಾಹನು ಸಧ್ಯದಲ್ಲೇ ಅದನ್ನು ನಿಶ್ಫಲಗೊಳಿಸುವನು. ಅಲ್ಲಾಹನು ಕಿಡಿಗೇಡಿಗಳ ಕಾರ್ಯವನ್ನು ಕೈಗೂಡಿಸುವುದಿಲ್ಲ.
Tafsir berbahasa Arab:
وَیُحِقُّ اللّٰهُ الْحَقَّ بِكَلِمٰتِهٖ وَلَوْ كَرِهَ الْمُجْرِمُوْنَ ۟۠
ಮತ್ತು ಅಲ್ಲಾಹನು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತು ಮಾಡಿ ತೋರಿಸುವನು, ಅದು ಅಪರಾಧಿಗಳಿಗೆ ಇಷ್ಟವಿರದಿದ್ದರೂ ಸರಿಯೇ.
Tafsir berbahasa Arab:
فَمَاۤ اٰمَنَ لِمُوْسٰۤی اِلَّا ذُرِّیَّةٌ مِّنْ قَوْمِهٖ عَلٰی خَوْفٍ مِّنْ فِرْعَوْنَ وَمَلَاۡىِٕهِمْ اَنْ یَّفْتِنَهُمْ ؕ— وَاِنَّ فِرْعَوْنَ لَعَالٍ فِی الْاَرْضِ ۚ— وَاِنَّهٗ لَمِنَ الْمُسْرِفِیْنَ ۟
ಫಿರ್‌ಔನ್ ಮತ್ತು ಅವನ ಮುಖಂಡರು ತಮ್ಮನ್ನು ಹಿಂಸೆಗೊಳಪಡಿಸಬಹುದೆAದು ಹೆದರಿ ಮೂಸಾರವರ ಮೇಲೆ ಅವರ ಜನಾಂಗದ ಅತ್ಯಲ್ಪ ಮಂದಿ ಯುವಕರ ಹೊರತು ಇನ್ನಾರು ವಿಶ್ವಾಸವಿರಿಸಲಿಲ್ಲ. ಮತ್ತು ನಿಜವಾಗಿಯೂ ಫಿರ್‌ಔನನು ಭೂಮಿಯಲ್ಲಿ ಪ್ರಾಬಲ್ಯ ಹೊಂದಿದ್ದನು. ಮಾತ್ರವಲ್ಲದೆ ಅವನು ಹದ್ದು ಮೀರಿದವರಲ್ಲಾಗಿದ್ದನು.
Tafsir berbahasa Arab:
وَقَالَ مُوْسٰی یٰقَوْمِ اِنْ كُنْتُمْ اٰمَنْتُمْ بِاللّٰهِ فَعَلَیْهِ تَوَكَّلُوْۤا اِنْ كُنْتُمْ مُّسْلِمِیْنَ ۟
ಮತ್ತು ಮೂಸಾ ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸಿದವರಾಗಿದ್ದರೆ ಅವನ ಮೇಲೆಯೇ ಭರವಸೆಯನ್ನಿರಿಸಿರಿ, ನೀವು ಶರಣಾದವರಾಗಿದ್ದರೆ.
Tafsir berbahasa Arab:
فَقَالُوْا عَلَی اللّٰهِ تَوَكَّلْنَا ۚ— رَبَّنَا لَا تَجْعَلْنَا فِتْنَةً لِّلْقَوْمِ الظّٰلِمِیْنَ ۟ۙ
ಅವರೆಂದರು; ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಿದೆವು. ಓ ನಮ್ಮ ಪ್ರಭುವೇ ! ನಮ್ಮನ್ನು ಅಕ್ರಮಿ ಜನಾಂಗಕ್ಕೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು.
Tafsir berbahasa Arab:
وَنَجِّنَا بِرَحْمَتِكَ مِنَ الْقَوْمِ الْكٰفِرِیْنَ ۟
ಮತ್ತು ನಮ್ಮನ್ನು ನಿನ್ನ ಕೃಪೆಯ ಮೂಲಕ ಸತ್ಯನಿಷೇಧಿ ಜನಾಂಗದಿAದ ರಕ್ಷಿಸು.
Tafsir berbahasa Arab:
وَاَوْحَیْنَاۤ اِلٰی مُوْسٰی وَاَخِیْهِ اَنْ تَبَوَّاٰ لِقَوْمِكُمَا بِمِصْرَ بُیُوْتًا وَّاجْعَلُوْا بُیُوْتَكُمْ قِبْلَةً وَّاَقِیْمُوا الصَّلٰوةَ ؕ— وَبَشِّرِ الْمُؤْمِنِیْنَ ۟
ಮತ್ತು ನಾವು ಮೂಸಾ ಹಾಗೂ ಅವರ ಸಹೋದರನೆಡೆಗೆ ಸಂದೇಶ ಕಳುಹಿಸಿದೆವು; “ನೀವಿಬ್ಬರೂ ನಿಮ್ಮ ಜನಾಂಗದವರಿಗೆ ಈಜಿಪ್ಟಿನಲ್ಲಿ ವಸತಿಗಳ ವ್ಯವಸ್ಥೆ ಮಾಡಿರಿ ಮತ್ತು ನೀವೆಲ್ಲರೂ ನಿಮ್ಮ ಅದೇ ವಸತಿಗಳನ್ನು ನಮಾಜಿ಼ನ ಸ್ಥಳವನ್ನಾಗಿ ನಿಶ್ಚಯಿಸಿರಿ ಹಾಗು ನಮಾಜ಼್ ಸಂಸ್ಥಾಪಿಸಿರಿ ಮತ್ತು ನೀವು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ನೀಡಿರಿ.
Tafsir berbahasa Arab:
وَقَالَ مُوْسٰی رَبَّنَاۤ اِنَّكَ اٰتَیْتَ فِرْعَوْنَ وَمَلَاَهٗ زِیْنَةً وَّاَمْوَالًا فِی الْحَیٰوةِ الدُّنْیَا ۙ— رَبَّنَا لِیُضِلُّوْا عَنْ سَبِیْلِكَ ۚ— رَبَّنَا اطْمِسْ عَلٰۤی اَمْوَالِهِمْ وَاشْدُدْ عَلٰی قُلُوْبِهِمْ فَلَا یُؤْمِنُوْا حَتّٰی یَرَوُا الْعَذَابَ الْاَلِیْمَ ۟
ಮತ್ತು ಮೂಸಾ ಪ್ರಾರ್ಥಿಸಿದರು, ನಮ್ಮ ಪ್ರಭುವೇ, ನೀನು ಫಿರ್‌ಔನನಿಗೂ, ಅವನ ಮುಖಂಡರಿಗೂ ಈ ಇಹಲೋಕ ಜೀವನದಲ್ಲಿ ವೈಭವ ಹಾಗೂ ವಿವಿಧ ಸಿರಿ ಸಂಪತ್ತನ್ನು ನೀಡಿರುವೆ. ಓ ನಮ್ಮ ಪ್ರಭುವೇ, ಇದು ಅವರು ನಿನ್ನ ಮಾರ್ಗದಿಂದ ಜನರನ್ನು ಭ್ರಷ್ಟಗೊಳಿಸಲಿಕ್ಕಾಗಿಯೇ ? ಓ ನಮ್ಮ ಪ್ರಭುವೇ, ಅವರ ಸಂಪತ್ತನ್ನು ನೀನು ನಾಶಗೊಳಿಸು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಹಾಗೆಯೇ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವ ತನಕ ವಿಶ್ವಾಸವಿಡದಂತಾಗಲಿ.
Tafsir berbahasa Arab:
قَالَ قَدْ اُجِیْبَتْ دَّعْوَتُكُمَا فَاسْتَقِیْمَا وَلَا تَتَّبِعٰٓنِّ سَبِیْلَ الَّذِیْنَ لَا یَعْلَمُوْنَ ۟
ಅಲ್ಲಾಹನು ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ಆದುದರಿಂದ ನೀವಿಬ್ಬರೂ ಸ್ಥಿರತೆಯಿಂದಿರಿ ಹಾಗೂ ಅಜ್ಞಾನಿಗಳ ಮಾರ್ಗವನ್ನು ಅನುಸರಿಸಬೇಡಿರಿ.
Tafsir berbahasa Arab:
وَجٰوَزْنَا بِبَنِیْۤ اِسْرَآءِیْلَ الْبَحْرَ فَاَتْبَعَهُمْ فِرْعَوْنُ وَجُنُوْدُهٗ بَغْیًا وَّعَدْوًا ؕ— حَتّٰۤی اِذَاۤ اَدْرَكَهُ الْغَرَقُ قَالَ اٰمَنْتُ اَنَّهٗ لَاۤ اِلٰهَ اِلَّا الَّذِیْۤ اٰمَنَتْ بِهٖ بَنُوْۤا اِسْرَآءِیْلَ وَاَنَا مِنَ الْمُسْلِمِیْنَ ۟
ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿದೆವು. ನಂತರ ಫಿರ್‌ಔನ್ ಮತ್ತು ಅವನ ಸೈನ್ಯವು ಧಿಕ್ಕಾರ ಹಾಗು ವಿದ್ವೇಷದಿಂದ ಅವರನ್ನು ಬೆನ್ನಟ್ಟಿದರು, ಕೊನೆಗೆ ಅವನು ಮುಳುಗತೊಡಗಿದಾಗ ಹೇಳಿದನು : ಇಸ್ರಾಯೀಲ್ ಸಂತತಿಗಳು ವಿಶ್ವಾಸವಿರಿಸಿದವನ ಮೇಲೆ ನಾನೂ ವಿಶ್ವಾಸವಿರಿಸಿದೆನು. ಅವನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ನಾನು ಶರಣಾಗುವರಲ್ಲಾಗುವೆನು,
Tafsir berbahasa Arab:
آٰلْـٰٔنَ وَقَدْ عَصَیْتَ قَبْلُ وَكُنْتَ مِنَ الْمُفْسِدِیْنَ ۟
(ಹೇಳಲಾಯಿತು) ಈಗ ನೀನು ವಿಶ್ವಾಸವಿಡುವೆಯಾ? ಇದಕ್ಕಿಂತ ಮೊದಲು ನೀನು ಧಿಕ್ಕಾರ ತೋರಿಸುತ್ತಿದ್ದೆ ಮತ್ತು ನೀನು ಕ್ಷೆÆÃಭೆ ಹರಡುವವರಲ್ಲಿ ಸೇರಿದ್ದೆ?
Tafsir berbahasa Arab:
فَالْیَوْمَ نُنَجِّیْكَ بِبَدَنِكَ لِتَكُوْنَ لِمَنْ خَلْفَكَ اٰیَةً ؕ— وَاِنَّ كَثِیْرًا مِّنَ النَّاسِ عَنْ اٰیٰتِنَا لَغٰفِلُوْنَ ۟۠
ನಾವು ಇಂದು ನೀನು ನಿನ್ನ ನಂತರದವರಿಗೆ ಪಾಠವಾಗಲೆಂದು ನಿನ್ನ ಶವವನ್ನು (ಮಾತ್ರ) ರಕ್ಷಿಸುವೆವು, ವಾಸ್ತವವೇನೆಂದರೆ ಹೆಚ್ಚಿನ ಜನರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷö್ಯರಾಗಿದ್ದಾರೆ.
Tafsir berbahasa Arab:
وَلَقَدْ بَوَّاْنَا بَنِیْۤ اِسْرَآءِیْلَ مُبَوَّاَ صِدْقٍ وَّرَزَقْنٰهُمْ مِّنَ الطَّیِّبٰتِ ۚ— فَمَا اخْتَلَفُوْا حَتّٰی جَآءَهُمُ الْعِلْمُ ؕ— اِنَّ رَبَّكَ یَقْضِیْ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಮತ್ತು ನಿಸ್ಸಂದೇಹವಾಗಿಯೂ ನಾವು ಇಸ್ರಾಯೀಲ್ ಸಂತತಿಗಳಿಗೆ ಯೋಗ್ಯವಾದ ನೆಲೆಯನ್ನು ವಾಸಿಸಲು ನೀಡಿದೆವು ಮತ್ತು ಪರಿಶುದ್ಧ ವಸ್ತುಗಳಿಂದ ಆಹಾರ ಕೊಟ್ಟೆವು. ಆದರೆ ಅವರು ತಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಭಿನ್ನಾಭಿಪ್ರಾಯಕ್ಕೆ ತುತ್ತಾದರು. ಖಂಡಿತವಾಗಿಯೂ ನಿಮ್ಮ ಪ್ರಭುವು ಪುನರುತ್ಥಾನ ದಿನದಂದು ಅವರು ಭಿನ್ನತೆ ಹೊಂದಿರುವ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡಲಿರುವನು.
Tafsir berbahasa Arab:
فَاِنْ كُنْتَ فِیْ شَكٍّ مِّمَّاۤ اَنْزَلْنَاۤ اِلَیْكَ فَسْـَٔلِ الَّذِیْنَ یَقْرَءُوْنَ الْكِتٰبَ مِنْ قَبْلِكَ ۚ— لَقَدْ جَآءَكَ الْحَقُّ مِنْ رَّبِّكَ فَلَا تَكُوْنَنَّ مِنَ الْمُمْتَرِیْنَ ۟ۙ
ಆದ್ದರಿಂದ ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ ನಿಮಗೆ ಸಂದೇಹವಿದ್ದರೆ ನಿಮಗಿಂತ ಮುಂಚೆ ಗ್ರಂಥ ಓದುತ್ತಿದ್ದವರೊಡನೆ ವಿಚಾರಿಸಿನೋಡಿರಿ; ನಿಶ್ಚಯವಾಗಿಯು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ. ಆದ್ದರಿಂದ ನೀವು ಎಂದಿಗೂ ಸಂಶಯಗ್ರಸ್ಥರಲ್ಲಾಗಬಾರದು.
Tafsir berbahasa Arab:
وَلَا تَكُوْنَنَّ مِنَ الَّذِیْنَ كَذَّبُوْا بِاٰیٰتِ اللّٰهِ فَتَكُوْنَ مِنَ الْخٰسِرِیْنَ ۟
ಮತ್ತು ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳಾಗಿಸಿದವರೊಂದಿಗೆ ಸೇರಬೇಡಿರಿ. ಅನ್ಯಥಾ ನೀವು ನಷ್ಟಹೊಂದಿದವರಲ್ಲಾಗುವಿರಿ.
Tafsir berbahasa Arab:
اِنَّ الَّذِیْنَ حَقَّتْ عَلَیْهِمْ كَلِمَتُ رَبِّكَ لَا یُؤْمِنُوْنَ ۟ۙ
ಖಂಡಿತವಾಗಿಯೂ ಯಾರ ಮೇಲೆ ನಿಮ್ಮ ಪ್ರಭುವಿನ ವಚನವೂ ನಿಜವಾಗಿಬಿಟ್ಟಿತೊ ಅವರು ವಿಶ್ವಾಸವಿರಿಸಲಾರರು,
Tafsir berbahasa Arab:
وَلَوْ جَآءَتْهُمْ كُلُّ اٰیَةٍ حَتّٰی یَرَوُا الْعَذَابَ الْاَلِیْمَ ۟
ಮತ್ತು ಅವರೆಡೆಗೆ ಸಕಲ ದೃಷ್ಟಾಂತವೂ ಬಂದುಬಿಟ್ಟರೂ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೂ (ವಿಶ್ವಾಸವಿಡಲಾರರು).
Tafsir berbahasa Arab:
فَلَوْلَا كَانَتْ قَرْیَةٌ اٰمَنَتْ فَنَفَعَهَاۤ اِیْمَانُهَاۤ اِلَّا قَوْمَ یُوْنُسَ ۚؕ— لَمَّاۤ اٰمَنُوْا كَشَفْنَا عَنْهُمْ عَذَابَ الْخِزْیِ فِی الْحَیٰوةِ الدُّنْیَا وَمَتَّعْنٰهُمْ اِلٰی حِیْنٍ ۟
ಯೂನುಸ್‌ರವರ ಜನಾಂಗದ ಹೊರತು ಯಾವುದೇ ನಾಡು ಯಾತನೆಯನ್ನು ಕಣ್ಣಾರೆ ಕಂಡ ಬಳಿಕ ವಿಶ್ವಾಸವಿರಿಸಿ ಅವರ ಆ ವಿಶ್ವಾಸವು ಅವರಿಗೆ ಪ್ರಯೋಜನಕಾರಿಯಾಗಿಲ್ಲ. ಆದರೆ ಯೂನುಸ್‌ರವರ ಜನಾಂಗದವರು ವಿಶ್ವಾಸವಿರಿಸಿದಾಗ ನಾವು ಅವರಿಂದ ನಿಂದ್ಯತೆಯ ಯಾತನೆಯನ್ನು ಇಹಲೋಕ ಜೀವನದಲ್ಲಿ ಸರಿಸಿಬಿಟ್ಟೆವು ಮತ್ತು ಅವರನ್ನು ಒಂದು ನಿರ್ದಿಷ್ಟ ಅವಧಿಯ ತನಕ ಜೀವನಾನುಕೂಲತೆಯನ್ನು ಅನುಭವಿಸಲು ಅವಕಾಶಕೊಟ್ಟೆವು.
Tafsir berbahasa Arab:
وَلَوْ شَآءَ رَبُّكَ لَاٰمَنَ مَنْ فِی الْاَرْضِ كُلُّهُمْ جَمِیْعًا ؕ— اَفَاَنْتَ تُكْرِهُ النَّاسَ حَتّٰی یَكُوْنُوْا مُؤْمِنِیْنَ ۟
ನಿಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿರುವವರೆಲ್ಲರೂ ವಿಶ್ವಾಸವಿಡುತ್ತಿದ್ದರು. (ಅವನು ಹೀಗೆ ಮಾಡಿಲ್ಲ) ಹೀಗಿರುವಾಗ ನೀವು ಜನರನ್ನು ಸತ್ಯವಿಶ್ವಾಸಿಗಳಾಗಬೇಕೆಂದು ಒತ್ತಾಯಪಡಿಸುತ್ತಿರುವಿರಾ?
Tafsir berbahasa Arab:
وَمَا كَانَ لِنَفْسٍ اَنْ تُؤْمِنَ اِلَّا بِاِذْنِ اللّٰهِ ؕ— وَیَجْعَلُ الرِّجْسَ عَلَی الَّذِیْنَ لَا یَعْقِلُوْنَ ۟
ಯಾವೊಬ್ಬ ವ್ಯಕ್ತಿಯು ಅಲ್ಲಾಹನ ಅನುಮತಿಯ ವಿನಃ ಸ್ವತಃ ವಿಶ್ವಾಸವಿರಿಸಲಾರನು, ಬುದ್ಧಿ ಪ್ರಯೋಗಿಸದೆ ಇರುವವರ ಮೇಲೆ ಅಲ್ಲಾಹನು ಸತ್ಯ ನಿಷೇಧದ ಮಾಲಿನ್ಯವನ್ನು ಹಾಕಿಬಿಡುತ್ತಾನೆ.
Tafsir berbahasa Arab:
قُلِ انْظُرُوْا مَاذَا فِی السَّمٰوٰتِ وَالْاَرْضِ ؕ— وَمَا تُغْنِی الْاٰیٰتُ وَالنُّذُرُ عَنْ قَوْمٍ لَّا یُؤْمِنُوْنَ ۟
ಹೇಳಿರಿ; ನೀವು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದರ ಬಗ್ಗೆ ಚಿಂತಿಸಿ ನೋಡಿರಿ ; ವಿಶ್ವಾಸವಿಡದ ಜನಾಂಗಕ್ಕೆ ದೃಷ್ಟಾಂತಗಳಾಗಲಿ, ಮುನ್ನೆಚ್ಚರಿಕೆಗಳಾಗಲಿ ಯಾವುದೇ ಪ್ರಯೋಜನವನ್ನು ನೀಡಲಾರವು.
Tafsir berbahasa Arab:
فَهَلْ یَنْتَظِرُوْنَ اِلَّا مِثْلَ اَیَّامِ الَّذِیْنَ خَلَوْا مِنْ قَبْلِهِمْ ؕ— قُلْ فَانْتَظِرُوْۤا اِنِّیْ مَعَكُمْ مِّنَ الْمُنْتَظِرِیْنَ ۟
ಈ ಜನರು ಅವರಿಗಿಂತ ಮುಂಚಿನವರು ಕಂಡಿದ್ದ ದುರ್ದಿನಗಳ ನಿರೀಕ್ಷೆಯಲ್ಲಿದ್ದಾರೆಯೇ? ಹೇಳಿರಿ ಹಾಗಿದ್ದರೆ ನೀವು ನಿರೀಕ್ಷಿಸುತ್ತಿರಿ, ನಾನೂ ನಿಮ್ಮ ಜೊತೆ ನಿರೀಕ್ಷಿಸುತ್ತೇನೆ.
Tafsir berbahasa Arab:
ثُمَّ نُنَجِّیْ رُسُلَنَا وَالَّذِیْنَ اٰمَنُوْا كَذٰلِكَ ۚ— حَقًّا عَلَیْنَا نُنْجِ الْمُؤْمِنِیْنَ ۟۠
ಅನಂತರ ನಾವು ನಮ್ಮ ಸಂದೇಶವಾಹಕರನ್ನೂ ಸತ್ಯವಿಶ್ವಾಸವಿರಿಸಿದವರನ್ನೂ ರಕ್ಷಿಸುತ್ತೇವೆ. ಇದೇ ಪ್ರಕಾರ ಸತ್ಯವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಹೊಣೆಯಾಗಿರುತ್ತದೆ.
Tafsir berbahasa Arab:
قُلْ یٰۤاَیُّهَا النَّاسُ اِنْ كُنْتُمْ فِیْ شَكٍّ مِّنْ دِیْنِیْ فَلَاۤ اَعْبُدُ الَّذِیْنَ تَعْبُدُوْنَ مِنْ دُوْنِ اللّٰهِ وَلٰكِنْ اَعْبُدُ اللّٰهَ الَّذِیْ یَتَوَفّٰىكُمْ ۖۚ— وَاُمِرْتُ اَنْ اَكُوْنَ مِنَ الْمُؤْمِنِیْنَ ۟ۙ
ಹೇಳಿರಿ; ಓ ಜನರೇ ನೀವು ಇದುವರೆಗೆ ನನ್ನ ಧರ್ಮದ ಬಗ್ಗೆ ಸಂದೇಹಕ್ಕೊಳಗಾಗಿದ್ದರೆ ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ಆರಾಧ್ಯರನ್ನು ಖಂಡಿತವಾಗಿ ನಾನು ಅರಾಧಿಸುವುದಿಲ್ಲ, ಆದರೆ ನಿಮಗೆ ಮರಣ ಕೊಡುವ ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ. ಮತ್ತು ನಾನು ಸತ್ಯವಿಶ್ವಾಸಿಗಳಲ್ಲಾಗಬೇಕೆಂದು ಆಜ್ಞಾಪಿಸಲ್ಪಟ್ಟಿದ್ದೇನೆ.
Tafsir berbahasa Arab:
وَاَنْ اَقِمْ وَجْهَكَ لِلدِّیْنِ حَنِیْفًا ۚ— وَلَا تَكُوْنَنَّ مِنَ الْمُشْرِكِیْنَ ۟
ಮತ್ತು ಏಕಾಗ್ರಚಿತ್ತನಾಗಿ ನೀವು ನಿಮ್ಮ ಮುಖವನ್ನು ಧರ್ಮದೆಡೆಗೆ ಸ್ಥಿರವಾಗಿ ಕೇಂದ್ರೀಕರಿಸಬೇಕೆAದು ಹಾಗು ಬಹುದೇವಾರಾಧಕರಲ್ಲಿ ಸೇರಬೇಡಿರೆಂದು ನನಗೆ ಆಜ್ಞಾಪಿಸಲಾಗಿದೆ.
Tafsir berbahasa Arab:
وَلَا تَدْعُ مِنْ دُوْنِ اللّٰهِ مَا لَا یَنْفَعُكَ وَلَا یَضُرُّكَ ۚ— فَاِنْ فَعَلْتَ فَاِنَّكَ اِذًا مِّنَ الظّٰلِمِیْنَ ۟
ಅಲ್ಲಾಹನ ಹೊರತು ನಿಮಗೆ ಯಾವುದೇ ಪ್ರಯೋಜನವನ್ನಾಗಲಿ ಮತ್ತು ಹಾನಿಯನ್ನಾಗಲಿ ಉಂಟುಮಾಡದ ವಸ್ತುಗಳನ್ನು ನೀವು ಪ್ರಾರ್ಥಿಸಬೇಡಿರಿ. ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನೀವು ಅಕ್ರಮಿಗಳಲ್ಲಾಗುವಿರಿ.
Tafsir berbahasa Arab:
وَاِنْ یَّمْسَسْكَ اللّٰهُ بِضُرٍّ فَلَا كَاشِفَ لَهٗۤ اِلَّا هُوَ ۚ— وَاِنْ یُّرِدْكَ بِخَیْرٍ فَلَا رَآدَّ لِفَضْلِهٖ ؕ— یُصِیْبُ بِهٖ مَنْ یَّشَآءُ مِنْ عِبَادِهٖ ؕ— وَهُوَ الْغَفُوْرُ الرَّحِیْمُ ۟
ಅಲ್ಲಾಹನು ನಿಮಗೇನಾದರೂ ಸಂಕಷ್ಟಕ್ಕೆ ಗುರಿಪಡಿಸಿದರೆ ಅವನ ಹೊರತು ಅದನ್ನು ನೀಗಿಸುವವನಾರಿಲ್ಲ ಮತ್ತು ಅವನು ನಿಮಗೇನಾದರೂ ಒಳಿತನ್ನು ನೀಡಿದರೆ ಅವನ ಅನುಗ್ರಹವನ್ನು ತಡೆಯುವವನಾರಿಲ್ಲ. ಅವನು ಅದನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ತಲುಪಿಸುತ್ತಾನೆ ಮತ್ತು ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
Tafsir berbahasa Arab:
قُلْ یٰۤاَیُّهَا النَّاسُ قَدْ جَآءَكُمُ الْحَقُّ مِنْ رَّبِّكُمْ ۚ— فَمَنِ اهْتَدٰی فَاِنَّمَا یَهْتَدِیْ لِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ؕ— وَمَاۤ اَنَا عَلَیْكُمْ بِوَكِیْلٍ ۟ؕ
ಹೇಳಿರಿ. ಓ ಜನರೇ ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ ಆದುದರಿಂದ ಯಾರು ಸನ್ಮಾರ್ಗ ಪಡೆಯುವನೋ ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗ ಪಡೆಯುವನು ಮತ್ತು ಯಾರು ಮಾರ್ಗಭ್ರಷ್ಟನಾಗುವನೋ ಅದು ಅವನಿಗೆ ಹಾನಿಕಾರಕವಾಗಿರುತ್ತದೆ ಮತ್ತು ನಾನು ನಿಮ್ಮ ಮೇಲ್ವಿಚಾರಕನಲ್ಲ.
Tafsir berbahasa Arab:
وَاتَّبِعْ مَا یُوْحٰۤی اِلَیْكَ وَاصْبِرْ حَتّٰی یَحْكُمَ اللّٰهُ ۚ— وَهُوَ خَیْرُ الْحٰكِمِیْنَ ۟۠
ನೀವು ನಿಮ್ಮೆಡೆಗೆ ಅವತೀರ್ಣಗೊಳಿಸಲಾದ ಅಲ್ಲಾಹನ ಮಾರ್ಗದರ್ಶನವನ್ನು ಅನುಸರಿಸುತ್ತಿರಿ ಹಾಗೂ ಅಲ್ಲಾಹನು ತೀರ್ಮಾನ ಮಾಡುವವರೆಗೆ (ದುಷ್ಟರ ಪೀಡನೆಗಳಿಂದ) ಸಹನೆವಹಿಸಿರಿ. ಅವನು ನ್ಯಾಯಾಧಿಪತಿಗಳಲ್ಲಿ ಅತ್ತುö್ಯತ್ತಮನಾಗಿರುವನು.
Tafsir berbahasa Arab:
 
Terjemahan makna Surah: Yūnus
Daftar surah Nomor Halaman
 
Terjemahan makna Alquran Alkarim - Terjemahan Berbahasa Kannada - Basir Maisuri - Daftar isi terjemahan

Terjemahan oleh Syekh Bashīr Maisūrī. Sudah dikembangkan oleh Markaz Ruwād Terjemah.

Tutup