Check out the new design

Terjemahan makna Alquran Alkarim - Terjemahan Berbahasa Kannada - Basir Maisuri * - Daftar isi terjemahan


Terjemahan makna Surah: Al-Kahf   Ayah:
وَاصْبِرْ نَفْسَكَ مَعَ الَّذِیْنَ یَدْعُوْنَ رَبَّهُمْ بِالْغَدٰوةِ وَالْعَشِیِّ یُرِیْدُوْنَ وَجْهَهٗ وَلَا تَعْدُ عَیْنٰكَ عَنْهُمْ ۚ— تُرِیْدُ زِیْنَةَ الْحَیٰوةِ الدُّنْیَا ۚ— وَلَا تُطِعْ مَنْ اَغْفَلْنَا قَلْبَهٗ عَنْ ذِكْرِنَا وَاتَّبَعَ هَوٰىهُ وَكَانَ اَمْرُهٗ فُرُطًا ۟
ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಸಂಜೆ, ಮುಂಜಾನೆಗಳಲ್ಲಿ ಪ್ರಾರ್ಥಿಸುವವರೊಂದಿಗೆ ನೀವು ಸಹವಾಸವನ್ನಿರಿಸಿರಿ. ಜಾಗ್ರತೆ! ನೀವು ಐಹಿಕ ಜೀವನದ ವೈಭವವನ್ನು ಆಶಿಸುತ್ತಾ ಅವರಿಂದ ನಿಮ್ಮ ಕಣ್ಣುಗಳನ್ನು ತಿರುಗಿಸದಿರಿ. ನೋಡಿ! ನಾವು ಯಾರ ಹೃದಯವನ್ನು ನಮ್ಮ ಸ್ಮರಣೆಯಿಂದ ಅಲಕ್ಷö್ಯಗೊಳಿಸಿದ್ದೇವೆಯೋ, ಯಾರು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುತ್ತಿರುವನೋ ಯಾರ ಕಾರ್ಯವು ಮಿತಿಮೀರಿ ಬಿಟ್ಟಿದೆಯೋ ಅಂತಹವನನ್ನು ನೀವು ಅನುಸರಿಸದಿರಿ.
Tafsir berbahasa Arab:
وَقُلِ الْحَقُّ مِنْ رَّبِّكُمْ ۫— فَمَنْ شَآءَ فَلْیُؤْمِنْ وَّمَنْ شَآءَ فَلْیَكْفُرْ ۚ— اِنَّاۤ اَعْتَدْنَا لِلظّٰلِمِیْنَ نَارًا اَحَاطَ بِهِمْ سُرَادِقُهَا ؕ— وَاِنْ یَّسْتَغِیْثُوْا یُغَاثُوْا بِمَآءٍ كَالْمُهْلِ یَشْوِی الْوُجُوْهَ ؕ— بِئْسَ الشَّرَابُ ؕ— وَسَآءَتْ مُرْتَفَقًا ۟
ಹೇಳಿರಿ: ಇದು ನಿಮ್ಮ ಪ್ರಭುವಿನ ಕಡೆಯಿಂದಾಗಿರುವ ಸತ್ಯವಾಗಿರುತ್ತದೆ ಇನ್ನು ಬಯಸಿದವರು ವಿಶ್ವಾಸವಿಡಲಿ ಮತ್ತು ಬೇಡದವರು ನಿಷೇಧಿಸಲಿ. ನಿಜವಾಗಿಯು ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಪಡಿಸಿದ್ದೇವೆ ಅದರ ಗುಡಾರಗಳು ಅವರನ್ನು ಆವರಿಸುವುದು. ಇನ್ನು ಅವರು ನೀರಿನ ಸಹಾಯ ಬೇಡಿದರೆ ಕರಗಿಸಿದ ಲೋಹದಂತಿರುವ ನೀರನ್ನು ಅವರಿಗೆ ಕುಡಿಸಲಾಗುವುದು. ಅದು ಮುಖವನ್ನು ಸುಟ್ಟು ಬಿಡುವುದು. ಆ ಪಾನೀಯ ಅದೆಷ್ಟು ಕೆಟ್ಟದು! ಮತ್ತು ಆ ವಿಶ್ರಾಂತಿಯ ತಾಣ (ನರಕ) ಎಷ್ಟು ಕೆಟ್ಟದು!
Tafsir berbahasa Arab:
اِنَّ الَّذِیْنَ اٰمَنُوْا وَعَمِلُوا الصّٰلِحٰتِ اِنَّا لَا نُضِیْعُ اَجْرَ مَنْ اَحْسَنَ عَمَلًا ۟ۚ
ನಿಶ್ಚಯವಾಗಿಯು ಯಾರು ಸತ್ಯವಿಶ್ವಾಸವನ್ನಿರಿಸಿ, ಸತ್ಕರ್ಮಗಳನ್ನೆಸಗಿದರೋ ಖಂಡಿತವಾಗಿಯು ನಾವು ಆ ಸತ್ಕರ್ಮಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
Tafsir berbahasa Arab:
اُولٰٓىِٕكَ لَهُمْ جَنّٰتُ عَدْنٍ تَجْرِیْ مِنْ تَحْتِهِمُ الْاَنْهٰرُ یُحَلَّوْنَ فِیْهَا مِنْ اَسَاوِرَ مِنْ ذَهَبٍ وَّیَلْبَسُوْنَ ثِیَابًا خُضْرًا مِّنْ سُنْدُسٍ وَّاِسْتَبْرَقٍ مُّتَّكِـِٕیْنَ فِیْهَا عَلَی الْاَرَآىِٕكِ ؕ— نِعْمَ الثَّوَابُ ؕ— وَحَسُنَتْ مُرْتَفَقًا ۟۠
ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿರುವುವು. ಅವರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು ಅವರು ಅಲ್ಲಿ ಚಿನ್ನದ ಕಂಕಣಗಳನ್ನು ತೊಡಿಸಲಾಗುವರು ಮತ್ತು ಅವರು ಹಸಿರು ಬಣ್ಣದ ತೆಳು ರೇಷ್ಮೆಯ ಹಾಗೂ ದಪ್ಪ ರೇಷ್ಮೆಯ ಉಡುಪುಗಳನ್ನು ಧರಿಸುವರು. ಅಲ್ಲಿ ಅವರು ಪೀಠಗಳ ಮೇಲೆ ದಿಂಬುಗಳನ್ನಿಟ್ಟು ಒರಗಿರುವರು. ಅದೆಷ್ಟು ಉತ್ತಮ ಪ್ರತಿಫಲವು! ಮತ್ತು ಅದೆಷ್ಟು ಉತ್ತಮ ವಿಶ್ರಾಂತಿ ಧಾಮ!
Tafsir berbahasa Arab:
وَاضْرِبْ لَهُمْ مَّثَلًا رَّجُلَیْنِ جَعَلْنَا لِاَحَدِهِمَا جَنَّتَیْنِ مِنْ اَعْنَابٍ وَّحَفَفْنٰهُمَا بِنَخْلٍ وَّجَعَلْنَا بَیْنَهُمَا زَرْعًا ۟ؕ
ಅವರಿಗೆ ಆ ಇಬ್ಬರು ವ್ಯಕ್ತಿಗಳ ಉಪಮೆಯನ್ನು ಹೇಳಿರಿ: ಅವರಲ್ಲೊಬ್ಬನಿಗೆ ನಾವು ದ್ರಾಕ್ಷೆಗಳ ಎರಡು ತೋಟಗಳನ್ನು ಕೊಟ್ಟಿದ್ದೆವು ಮತ್ತು ಅವುಗಳನ್ನು ಖರ್ಜೂರ ಮರಗಳಿಂದ ಸುತ್ತುವರಿದಿದ್ದೆವು ಹಾಗೂ ಅವುಗಳರೆಡರ ನಡುವೆ ಕೃಷಿಯನ್ನು ಉಂಟು ಮಾಡಿದ್ದೆವು.
Tafsir berbahasa Arab:
كِلْتَا الْجَنَّتَیْنِ اٰتَتْ اُكُلَهَا وَلَمْ تَظْلِمْ مِّنْهُ شَیْـًٔا ۙ— وَّفَجَّرْنَا خِلٰلَهُمَا نَهَرًا ۟ۙ
ಆ ಎರಡು ತೋಟಗಳೂ ಹೇರಳ ಫಲ ನೀಡಿದವು ಮತ್ತು ಅದರಲ್ಲಿ ಯಾವುದೇ ರೀತಿಯ ಕೊರತೆಯನ್ನು ಮಾಡಲಿಲ್ಲ ಆ ತೊಟಗಳ ಮಧ್ಯೆ ನಾವು ಕಾಲುವೆಯೊಂದನ್ನು ಹರಿಸಿದೆವು.
Tafsir berbahasa Arab:
وَّكَانَ لَهٗ ثَمَرٌ ۚ— فَقَالَ لِصَاحِبِهٖ وَهُوَ یُحَاوِرُهٗۤ اَنَا اَكْثَرُ مِنْكَ مَالًا وَّاَعَزُّ نَفَرًا ۟
ಅವನಿಗೆ ತುಂಬಾ ಫಲ ಸಿಕ್ಕಿತು. ಒಂದು ದಿನ ಅವನು ಮಾತಿಗಿಳಿಯುತ್ತಾ ತನ್ನ ಸಂಗಡಿಗನೊAದಿಗೆ ಹೇಳಿದನು: ನಾನು ನಿನಗಿಂತಲೂ ಅಧಿಕ ಸಿರಿವಂತನು ಮತ್ತು ಜನ ಬಲದಲ್ಲೂ ಹೆಚ್ಚು ಸದೃಢನು.
Tafsir berbahasa Arab:
 
Terjemahan makna Surah: Al-Kahf
Daftar surah Nomor Halaman
 
Terjemahan makna Alquran Alkarim - Terjemahan Berbahasa Kannada - Basir Maisuri - Daftar isi terjemahan

Terjemahan oleh Syekh Bashīr Maisūrī. Sudah dikembangkan oleh Markaz Ruwād Terjemah.

Tutup