Check out the new design

Terjemahan makna Alquran Alkarim - Terjemahan Berbahasa Kannada - Basir Maisuri * - Daftar isi terjemahan


Terjemahan makna Surah: Al-Kahf   Ayah:
وَلَقَدْ صَرَّفْنَا فِیْ هٰذَا الْقُرْاٰنِ لِلنَّاسِ مِنْ كُلِّ مَثَلٍ ؕ— وَكَانَ الْاِنْسَانُ اَكْثَرَ شَیْءٍ جَدَلًا ۟
ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ಪ್ರತಿಯೊಂದು ತರಹದ ಉಪಮೆಗಳನ್ನು ವಿವರಿಸಿಕೊಟ್ಟಿದ್ದೇವೆ ಮತ್ತು ಮನುಷ್ಯನು ಬಹಳ ಜಗಳಗಂಟನಾಗಿದ್ದಾನೆ.
Tafsir berbahasa Arab:
وَمَا مَنَعَ النَّاسَ اَنْ یُّؤْمِنُوْۤا اِذْ جَآءَهُمُ الْهُدٰی وَیَسْتَغْفِرُوْا رَبَّهُمْ اِلَّاۤ اَنْ تَاْتِیَهُمْ سُنَّةُ الْاَوَّلِیْنَ اَوْ یَاْتِیَهُمُ الْعَذَابُ قُبُلًا ۟
ಜನರ ಬಳಿಗೆ ಸನ್ಮಾರ್ಗ ಬಂದ ಬಳಿಕ ವಿಶ್ವಾಸವಿಡುವುದರಿಂದ ಮತ್ತು ಅವರ ಪ್ರಭುವಿನಿಂದ ಕ್ಷಮೆ ಯಾಚನೆ ಮಾಡುವುದರಿಂದ ಅವರನ್ನು ತಡೆದದ್ದು, ಪೂರ್ವಜರಿಗೆ ಸಂಭವಿಸಿದ್ದು, ತಮಗೂ ಸಂಭವಿಸಲಿ ಅಥವಾ ಶಿಕ್ಷೆಯು ಅವರ ಮುಂದೆಯೇ ಬಂದೆರಗಲಿ ಎಂಬುದೇ ಆಗಿತ್ತು.
Tafsir berbahasa Arab:
وَمَا نُرْسِلُ الْمُرْسَلِیْنَ اِلَّا مُبَشِّرِیْنَ وَمُنْذِرِیْنَ ۚ— وَیُجَادِلُ الَّذِیْنَ كَفَرُوْا بِالْبَاطِلِ لِیُدْحِضُوْا بِهِ الْحَقَّ وَاتَّخَذُوْۤا اٰیٰتِیْ وَمَاۤ اُنْذِرُوْا هُزُوًا ۟
ನಾವು ಸಂದೇಶವಾಹಕರನ್ನು ಕೇವಲ ಸುವಾರ್ತೆ ನೀಡುವವರಾಗಿಯೂ, ಎಚ್ಚರಿಕೆ ಕೊಡುವವರಾಗಿಯೂ ಕಳುಹಿಸಿರುತ್ತೇವೆ. ಸತ್ಯ ನಿಷೇಧಿಗಳು ಮಿಥ್ಯದ ಬಲದಲ್ಲಿ ವಾಗ್ವಾದ ಮಾಡುತ್ತಾರೆ ಮತ್ತು ತನ್ಮೂಲಕ ಸತ್ಯವನ್ನು ಅಳಿಸಿ ಹಾಕಲು (ಇಚ್ಛಿಸುತ್ತಾರೆ) ಮಾತ್ರವಲ್ಲದೆ ಅವರು ನನ್ನ ದೃಷ್ಟಾಂತಗಳನ್ನು, ನೀವು ಎಚ್ಚರಿಕೆ ನೀಡಲಾಗಿರುವುದನ್ನು ತಮಾಷೆಯ ವಸ್ತುವನ್ನಾಗಿ ಮಾಡಿಕೊಂಡರು.
Tafsir berbahasa Arab:
وَمَنْ اَظْلَمُ مِمَّنْ ذُكِّرَ بِاٰیٰتِ رَبِّهٖ فَاَعْرَضَ عَنْهَا وَنَسِیَ مَا قَدَّمَتْ یَدٰهُ ؕ— اِنَّا جَعَلْنَا عَلٰی قُلُوْبِهِمْ اَكِنَّةً اَنْ یَّفْقَهُوْهُ وَفِیْۤ اٰذَانِهِمْ وَقْرًا ؕ— وَاِنْ تَدْعُهُمْ اِلَی الْهُدٰی فَلَنْ یَّهْتَدُوْۤا اِذًا اَبَدًا ۟
ತನ್ನ ಪ್ರÀಭುವಿನ ಸೂಕ್ತಿಗಳ ಮೂಲಕ ಉಪದೇಶ ನೀಡಲಾದಾಗಲೂ ಅದರಿಂದ ವಿಮುಖನಾಗಿ ತನ್ನ ಕೈಗಳು ಗೈದ ಕರ್ಮಗಳನ್ನು ಮರೆತು ಬಿಟ್ಟವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ ನಿಸ್ಸಂಶಯವಾಗಿಯು ಅವರು ಅದನ್ನು ಗ್ರಹಿಸಲು (ಸಾಧ್ಯವಾಗದಂತೆ) ನಾವು ಅವರ ಹೃದಯಗಳ ಮೇಲೆ ಪರದೆಯನ್ನು ಹಾಕಿಬಿಟ್ಟರುತ್ತೇವೆ ಮತ್ತು ಅವರ ಕಿವಿಗಳೊಳಗೆ ಕಿವುಡುತನವಿದೆ. ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೂ ಅವರು ಎಂದಿಗೂ ಸನ್ಮಾರ್ಗ ಪಡೆಯಲಾರರು.
Tafsir berbahasa Arab:
وَرَبُّكَ الْغَفُوْرُ ذُو الرَّحْمَةِ ؕ— لَوْ یُؤَاخِذُهُمْ بِمَا كَسَبُوْا لَعَجَّلَ لَهُمُ الْعَذَابَ ؕ— بَلْ لَّهُمْ مَّوْعِدٌ لَّنْ یَّجِدُوْا مِنْ دُوْنِهٖ مَوْىِٕلًا ۟
ನಿಮ್ಮ ಪ್ರಭುವು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. ಅವನೇನಾದರೂ ಅವರನ್ನು ಅವರ ಕರ್ಮಗಳ ನಿಮಿತ್ತ ಹಿಡಿದಿದ್ದರೆ ನಿಸ್ಸಂದೇಹವಾಗಿಯು ಅವರಿಗೆ ಶೀಘ್ರವೇ ಶಿಕ್ಷೆಯನ್ನು ನೀಡಿ ಬಿಡುತ್ತಿದ್ದನು. ಆದರೆ ಅವರಿಗೆ ವಾಗ್ದಾತ್ತ ಸಮಯವೊಂದು ನಿಶ್ಚಿತವಿದೆ. ಅದನ್ನು ತಪ್ಪಿಸಿ ಪಾರಾಗುವ ಯಾವುದೇ ಮಾರ್ಗವನ್ನು ಅವರು ಪಡೆಯಲಾರರು.
Tafsir berbahasa Arab:
وَتِلْكَ الْقُرٰۤی اَهْلَكْنٰهُمْ لَمَّا ظَلَمُوْا وَجَعَلْنَا لِمَهْلِكِهِمْ مَّوْعِدًا ۟۠
ಆ ನಾಡಿನವರು ಅಕ್ರಮವೆಸಗಿದಾಗ ನಾವು ಅವರನ್ನು ನಾಶಗೊಳಿಸಿರುವೆವು ಮತ್ತು ಅವರ ನಾಶಕ್ಕೆಂದು ಒಂದು ನಿರ್ದಿಷ್ಟ ಸಮಯವನ್ನು ನಿಶ್ಚಯಿಸಿದ್ದೆವು.
Tafsir berbahasa Arab:
وَاِذْ قَالَ مُوْسٰی لِفَتٰىهُ لَاۤ اَبْرَحُ حَتّٰۤی اَبْلُغَ مَجْمَعَ الْبَحْرَیْنِ اَوْ اَمْضِیَ حُقُبًا ۟
ಮೂಸ ತನ್ನ ಯುವಕನೊಡನೆ (ಯುಷಾ ಬಿನ್ ನೂನ್) ಹೇಳಿದ ಸಂದರ್ಭ: ನಾನು ಎರಡು ಸಮುದ್ರಗಳ ಸಂಗಮ ಸ್ಥಾನವನ್ನು ತಲುಪುವವರೆಗೆ ಸಂಚರಿಸುತ್ತಲೇ ಇರುವೆನು; ಅನ್ಯಥಾ ನಾನು ದೀರ್ಘ ಕಾಲದವರೆಗೆ ನಡೆಯುತ್ತಲೇ ಇರುವೆನು.
Tafsir berbahasa Arab:
فَلَمَّا بَلَغَا مَجْمَعَ بَیْنِهِمَا نَسِیَا حُوْتَهُمَا فَاتَّخَذَ سَبِیْلَهٗ فِی الْبَحْرِ سَرَبًا ۟
ಅವರಿಬ್ಬರೂ ಆ ಸಮುದ್ರಗಳ ಸಂಗಮ ಸ್ಥಾನವನ್ನು ತಲುಪಿದಾಗ ತಮ್ಮ ಮೀನನ್ನು ಮರೆತು ಬಿಟ್ಟರು. ಅದು ಸಮುದ್ರದಲ್ಲಿ ಸುರಂಗದAತೆ ತನ್ನ ಮಾರ್ಗವನ್ನು ಮಾಡಿಕೊಂಡಿತು.
Tafsir berbahasa Arab:
 
Terjemahan makna Surah: Al-Kahf
Daftar surah Nomor Halaman
 
Terjemahan makna Alquran Alkarim - Terjemahan Berbahasa Kannada - Basir Maisuri - Daftar isi terjemahan

Terjemahan oleh Syekh Bashīr Maisūrī. Sudah dikembangkan oleh Markaz Ruwād Terjemah.

Tutup