Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 洞窟章   節:
قَالَ هٰذَا رَحْمَةٌ مِّنْ رَّبِّیْ ۚ— فَاِذَا جَآءَ وَعْدُ رَبِّیْ جَعَلَهٗ دَكَّآءَ ۚ— وَكَانَ وَعْدُ رَبِّیْ حَقًّا ۟ؕ
ಜುಲ್ಖರ್‌ನೈನ್ ಹೇಳಿದರು: ಈ ತಡೆ ನನ್ನ ಪ್ರಭುವಿನ ಕಾರುಣ್ಯವಾಗಿದೆ. ಆದರೆ ನನ್ನ ಪ್ರಭುವಿನ ವಾಗ್ದಾನವು ಬಂದು ಬಿಟ್ಟರೆ ಅದನ್ನು ಅವನು ಪುಡಿಗಟ್ಟಿಬಿಡುವನು ಮತ್ತು ನನ್ನ ಪ್ರಭುವಿನ ವಾಗ್ದಾನವು ಸತ್ಯವಾಗಿದೆ.
アラビア語 クルアーン注釈:
وَتَرَكْنَا بَعْضَهُمْ یَوْمَىِٕذٍ یَّمُوْجُ فِیْ بَعْضٍ وَّنُفِخَ فِی الصُّوْرِ فَجَمَعْنٰهُمْ جَمْعًا ۟ۙ
ನಾವು ಆ ದಿನ ಅವರನ್ನು ಅಲೆಗಳಂತೆ ಪರಸ್ಪರ ಕೆಲವರು ಇನ್ನು ಕೆಲವರಲ್ಲಿ ಬೆರೆತುಕೊಳ್ಳಲು ಬಿಟ್ಟು ಬಿಡುವೆವು ಮತ್ತು ಕಹಳೆ ಊದಲಾಗವುದು. ಆಗ ನಾವು ಅವರೆಲ್ಲರನ್ನು ಒಟ್ಟುಗೂಡಿಸುವೆವು.
アラビア語 クルアーン注釈:
وَّعَرَضْنَا جَهَنَّمَ یَوْمَىِٕذٍ لِّلْكٰفِرِیْنَ عَرْضَا ۟ۙ
ಆ ದಿನ ನಾವು ನರಕವನ್ನು ಸತ್ಯನಿಷೇಧಿಗಳ ಕಣ್ಣೆದುರಿಗೆ ತಂದು ನಿಲ್ಲಿಸುವೆವು.
アラビア語 クルアーン注釈:
١لَّذِیْنَ كَانَتْ اَعْیُنُهُمْ فِیْ غِطَآءٍ عَنْ ذِكْرِیْ وَكَانُوْا لَا یَسْتَطِیْعُوْنَ سَمْعًا ۟۠
ಅವರ ಕಣ್ಣುಗಳ ಮೇಲೆ ಇಹಲೋಕದಲ್ಲಿ ನನ್ನ ಸ್ಮರಣೆಯಿಂದ ಅಲಕ್ಷö್ಯತೆಯ ಪರದೆ ಬಿದ್ದಿತ್ತು ಮತ್ತು ಅವರು ಆಲಿಸಲಿಕ್ಕೂ ಅಸಮರ್ಥರಾಗಿದ್ದರು.
アラビア語 クルアーン注釈:
اَفَحَسِبَ الَّذِیْنَ كَفَرُوْۤا اَنْ یَّتَّخِذُوْا عِبَادِیْ مِنْ دُوْنِیْۤ اَوْلِیَآءَ ؕ— اِنَّاۤ اَعْتَدْنَا جَهَنَّمَ لِلْكٰفِرِیْنَ نُزُلًا ۟
ಸತ್ಯನಿಷೇಧಿಗಳು ನನ್ನನ್ನು ಬಿಟ್ಟು ನನ್ನ ದಾಸರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳಬಹುದೆಂದು ಭಾವಿಸಿದ್ದಾರೆಯೇ? ಖಂಡಿತವಾಗಿಯೂ ನಾವು ಆ ಸತ್ಯನಿಷೇಧಿಗಳ ಅತಿಥ್ಯಕ್ಕಾಗಿ ನರಕವನ್ನು ಸಿದ್ಧಗೊಳಿಸಿದ್ದೇವೆ.
アラビア語 クルアーン注釈:
قُلْ هَلْ نُنَبِّئُكُمْ بِالْاَخْسَرِیْنَ اَعْمَالًا ۟ؕ
(ಓ ಪೈಗಂಬರರೇ) ಹೇಳಿರಿ: ನಾನು ನಿಮಗೆ ಕರ್ಮ ಫಲಗಳಲ್ಲಿ ಅತ್ಯಧಿಕ ನಷ್ಟ ಹೊಂದಿದವರಾರೆAದು ತಿಳಿಸಿ ಕೊಡಲೇ?
アラビア語 クルアーン注釈:
اَلَّذِیْنَ ضَلَّ سَعْیُهُمْ فِی الْحَیٰوةِ الدُّنْیَا وَهُمْ یَحْسَبُوْنَ اَنَّهُمْ یُحْسِنُوْنَ صُنْعًا ۟
ಇಹಲೋಕ ಜೀವನದಲ್ಲಿ ಅವರ ಪರಿಶ್ರಮವೆಲ್ಲಾ ವ್ಯರ್ಥವಾಯಿತು. ವಸ್ತುತಃ ಅವರು ತಾವು ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದರು.
アラビア語 クルアーン注釈:
اُولٰٓىِٕكَ الَّذِیْنَ كَفَرُوْا بِاٰیٰتِ رَبِّهِمْ وَلِقَآىِٕهٖ فَحَبِطَتْ اَعْمَالُهُمْ فَلَا نُقِیْمُ لَهُمْ یَوْمَ الْقِیٰمَةِ وَزْنًا ۟
ಅವರೇ ತಮ್ಮ ಪ್ರಭುವಿನ ದೃಷ್ಟಾಂತಗಳನ್ನು, ಅವನ ಭೇಟಿಯನ್ನು ನಿರಾಕರಿಸಿದವರು ಆದ್ದರಿಂದ ಅವರ ಕರ್ಮಗಳು ನಿಷ್ಫಲವಾದವು. ಹಾಗೆಯೇ ನಾವು ಪ್ರಳಯದಿನದಂದು ಅವರಿಗೆ ಯಾವುದೇ ತೂಕವನ್ನು ಕೊಡುವುದಿಲ್ಲ.
アラビア語 クルアーン注釈:
ذٰلِكَ جَزَآؤُهُمْ جَهَنَّمُ بِمَا كَفَرُوْا وَاتَّخَذُوْۤا اٰیٰتِیْ وَرُسُلِیْ هُزُوًا ۟
ಇದು ಅವರು ಸತ್ಯನಿಷೇಧಿಸಿದ್ದಕ್ಕಾಗಿ ಹಾಗೂ ನನ್ನ ದೃಷ್ಟಾಂತಗಳನ್ನು, ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ್ದಕ್ಕಾಗಿ ಅವರ ಪ್ರತಿಫಲ ನರಕವಾಗಿದೆ.
アラビア語 クルアーン注釈:
اِنَّ الَّذِیْنَ اٰمَنُوْا وَعَمِلُوا الصّٰلِحٰتِ كَانَتْ لَهُمْ جَنّٰتُ الْفِرْدَوْسِ نُزُلًا ۟ۙ
ನಿಶ್ಚಯವಾಗಿಯು ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ಫಿರ್‌ದೌಸ್ ಸ್ವರ್ಗೋದ್ಯಾನಗಳ ಅತಿಥ್ಯವಿರುವುದು.
アラビア語 クルアーン注釈:
خٰلِدِیْنَ فِیْهَا لَا یَبْغُوْنَ عَنْهَا حِوَلًا ۟
ಅಲ್ಲವರು ಶಾಶ್ವತವಾಗಿರುವರು. ಅದನ್ನು ಬಿಟ್ಟು ಬೇರೆಡೆಗೆ ಹೋಗಲು ಅವರೆಂದು ಬಯಸಲಾರರು.
アラビア語 クルアーン注釈:
قُلْ لَّوْ كَانَ الْبَحْرُ مِدَادًا لِّكَلِمٰتِ رَبِّیْ لَنَفِدَ الْبَحْرُ قَبْلَ اَنْ تَنْفَدَ كَلِمٰتُ رَبِّیْ وَلَوْ جِئْنَا بِمِثْلِهٖ مَدَدًا ۟
ಹೇಳಿರಿ: ನನ್ನ ಪ್ರಭುವಿನ ವಚನಗಳನ್ನು ಬರೆಯಲು ಸಮುದ್ರವು ಶಾಯಿಯಾದರೂ ನನ್ನ ಪ್ರಭುವಿನ ವಚನಗಳು ಮುಗಿಯುವ ಮೊದಲೇ ಅದು ಮುಗಿದು ಬಿಡುವುದು ಮಾತ್ರವಲ್ಲ ಮತ್ತಷ್ಟೇ ಸಮುದ್ರವನ್ನು ತಂದರು ಅದೂ ಸಾಕಾಗದು.
アラビア語 クルアーン注釈:
قُلْ اِنَّمَاۤ اَنَا بَشَرٌ مِّثْلُكُمْ یُوْحٰۤی اِلَیَّ اَنَّمَاۤ اِلٰهُكُمْ اِلٰهٌ وَّاحِدٌ ۚ— فَمَنْ كَانَ یَرْجُوْا لِقَآءَ رَبِّهٖ فَلْیَعْمَلْ عَمَلًا صَالِحًا وَّلَا یُشْرِكْ بِعِبَادَةِ رَبِّهٖۤ اَحَدًا ۟۠
ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮೆಲ್ಲರ ಆರಾಧ್ಯನು ಕೇವಲ ಏಕೈಕ ಆರಾಧ್ಯನಾಗಿದ್ದಾನೆ ಎಂದು ನನ್ನೆಡೆಗೆ ಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಿಗೆ ತನ್ನ ಪ್ರಭುವಿನ ಭೇಟಿಯ ನಿರೀಕ್ಷೆಯಿದೆಯೋ ಅವನು ಸತ್ಕರ್ಮಗಳನ್ನು ಮಾಡಲಿ ಹಾಗೂ ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸದಿರಲಿ.
アラビア語 クルアーン注釈:
 
対訳 章: 洞窟章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる