Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 巡礼章   節:
حُنَفَآءَ لِلّٰهِ غَیْرَ مُشْرِكِیْنَ بِهٖ ؕ— وَمَنْ یُّشْرِكْ بِاللّٰهِ فَكَاَنَّمَا خَرَّ مِنَ السَّمَآءِ فَتَخْطَفُهُ الطَّیْرُ اَوْ تَهْوِیْ بِهِ الرِّیْحُ فِیْ مَكَانٍ سَحِیْقٍ ۟
ಅಲ್ಲಾಹನಿಗೆ ಏಕನಿಷ್ಠರಾಗಿ ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ. ಅಲ್ಲಾಹನೊಂದಿಗೆ ಸಹಭಬಾಗಿಯನ್ನು ನಿಶ್ಚಯಿಸುವವನು ಆಕಾಶದಿಂದ ಕೆಳಗೆ ಬಿದ್ದಂತಿರುವನು. ಅವನನ್ನು ಪಕ್ಷಿಗಳು ಹೆಕ್ಕಿಕೊಂಡು ಹೋಗುವುವು. ಇಲ್ಲವೇ ಬೀಸುಗಾಳಿಯು ಅವನನ್ನು ದೂರ ಸ್ಥಳಕ್ಕೆ ಎಸೆದು ಬಿಡುವುದು.
アラビア語 クルアーン注釈:
ذٰلِكَ ۗ— وَمَنْ یُّعَظِّمْ شَعَآىِٕرَ اللّٰهِ فَاِنَّهَا مِنْ تَقْوَی الْقُلُوْبِ ۟
ಇದು ವಾಸ್ತವಿಕತೆಯಾಗಿದೆ. ಇನ್ನು ಯಾರು ಅಲ್ಲಾಹನ ಲಾಂಛನಗಳಿಗೆ ಗೌರವ ನೀಡುತ್ತಾನೋ ಖಂಡಿತವಾಗಿಯೂ ಅದು ಅವನ ಹೃದಯದ ಭಯಭಕ್ತಿಯಿಂದಾಗಿರುತ್ತದೆ.
アラビア語 クルアーン注釈:
لَكُمْ فِیْهَا مَنَافِعُ اِلٰۤی اَجَلٍ مُّسَمًّی ثُمَّ مَحِلُّهَاۤ اِلَی الْبَیْتِ الْعَتِیْقِ ۟۠
ನಿಮಗೆ ಆ ಜಾನುವಾರುಗಳಲ್ಲಿ ಒಂದು ನಿಶ್ಚಿತಾವಧಿಯವರೆಗೆ ಪ್ರಯೋಜನಗಳಿವೆ. ಅನಂತರ ಅವುಗಳ ಬಲಿದಾನದ ಸ್ಥಳವು ಪುರಾತನ ಭವನವಾಗಿದೆ.
アラビア語 クルアーン注釈:
وَلِكُلِّ اُمَّةٍ جَعَلْنَا مَنْسَكًا لِّیَذْكُرُوا اسْمَ اللّٰهِ عَلٰی مَا رَزَقَهُمْ مِّنْ بَهِیْمَةِ الْاَنْعَامِ ؕ— فَاِلٰهُكُمْ اِلٰهٌ وَّاحِدٌ فَلَهٗۤ اَسْلِمُوْا ؕ— وَبَشِّرِ الْمُخْبِتِیْنَ ۟ۙ
ಪ್ರತಿಯೊಂದು ಜನಾಂಗಕ್ಕೂ ನಾವು ಬಲಿ ಕರ್ಮವನ್ನು ನಿಶ್ಚಯಿಸಿಕೊಟ್ಟಿರುತ್ತೇವೆ. ಇದು ಅವರು ತಮಗೆ ಅಲ್ಲಾಹನು ದಯಪಾಲಿಸಿದ ಜಾನುವಾರುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಲೆಂದಾಗಿದೆ. ನಿಮ್ಮೆಲ್ಲರ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ. ಆದ್ದರಿಂದ ನೀವು ಅವನಿಗೇ ವಿಧೇಯರಾಗಿರಿ ಮತ್ತು ದೈನ್ಯರಾದವರಿಗೆ (ಓ ಪೈಗಂಬರರೇ) ನೀವು ಶುಭವಾರ್ತೆಯನ್ನೀಡಿರಿ.
アラビア語 クルアーン注釈:
الَّذِیْنَ اِذَا ذُكِرَ اللّٰهُ وَجِلَتْ قُلُوْبُهُمْ وَالصّٰبِرِیْنَ عَلٰی مَاۤ اَصَابَهُمْ وَالْمُقِیْمِی الصَّلٰوةِ ۙ— وَمِمَّا رَزَقْنٰهُمْ یُنْفِقُوْنَ ۟
ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ ಬಾಧಿಸಿದ ಸಂಕಷ್ಟಗಳ ಮೇಲೆ ಸಹನೆ ವಹಿಸುತ್ತಾರೆ ಮತ್ತು ನಮಾಝನ್ನು ಸಂಸ್ಥಾಪಿಸುತ್ತಾರೆ. ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿAದ ಖರ್ಚು ಮಾಡುವವರೂ ಆಗಿದ್ದಾರೆ.
アラビア語 クルアーン注釈:
وَالْبُدْنَ جَعَلْنٰهَا لَكُمْ مِّنْ شَعَآىِٕرِ اللّٰهِ لَكُمْ فِیْهَا خَیْرٌ ۖۗ— فَاذْكُرُوا اسْمَ اللّٰهِ عَلَیْهَا صَوَآفَّ ۚ— فَاِذَا وَجَبَتْ جُنُوْبُهَا فَكُلُوْا مِنْهَا وَاَطْعِمُوا الْقَانِعَ وَالْمُعْتَرَّ ؕ— كَذٰلِكَ سَخَّرْنٰهَا لَكُمْ لَعَلَّكُمْ تَشْكُرُوْنَ ۟
ಬಲಿದಾನದ ಒಂಟೆಗಳನ್ನು ನಾವು ನಿಮಗೆ ಅಲ್ಲಾಹನ ಲಾಂಛನಗಳಾಗಿ ಮಾಡಿರುತ್ತೇವೆ. ಅವುಗಳಲ್ಲಿ ನಿಮಗೆ ಒಳಿತಿದೆ. ಆದ್ದರಿಂದ ನೀವು ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನುಚ್ಛರಿಸಿರಿ ಹಾಗೆಯೇ ಅವುಗಳ ಪಾರ್ಶ್ವಗಳು ನೆಲಕ್ಕೊರಗಿದರೆ ಅವುಗಳನ್ನು ತಿನ್ನಿರಿ ಮತ್ತು ಯಾಚಿಸುವವನಿಗೂ, ಯಾಚಿಸದ ಬಡವನಿಗೂ, ತಿನ್ನಿಸಿರಿ.ಇದೇ ಪ್ರಕಾರ ನಾವು ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತೇವೆ. ಇದು ನೀವು ಕೃತಜ್ಞತೆ ತೋರಲೆಂದಾಗಿದೆ.
アラビア語 クルアーン注釈:
لَنْ یَّنَالَ اللّٰهَ لُحُوْمُهَا وَلَا دِمَآؤُهَا وَلٰكِنْ یَّنَالُهُ التَّقْوٰی مِنْكُمْ ؕ— كَذٰلِكَ سَخَّرَهَا لَكُمْ لِتُكَبِّرُوا اللّٰهَ عَلٰی مَا هَدٰىكُمْ ؕ— وَبَشِّرِ الْمُحْسِنِیْنَ ۟
ಅವುಗಳ ಮಾಂಸವಾಗಲೀ, ರಕ್ತವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ನಿಮ್ಮ ಹೃದಯದ ಭಯಭಕ್ತಿಯು ತಲುಪುವುದು. ಇದೇ ಪ್ರಕಾರ ಅಲ್ಲಾಹನು ಆ ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತಾನೆ. ಇದು ನಿಮ್ಮನ್ನು ಅವನು ಸನ್ಮಾರ್ಗದಲ್ಲಿ ಮುನ್ನಡೆಸಿರುವುದಕ್ಕೋಸ್ಕರ ನೀವು ಅವನ ಮಹಾನತೆಯನ್ನು ಕೊಂಡಾಡಲೆAದಾಗಿದೆ ಮತ್ತು ಒಳಿತಿನ ಪಾಲಕರಿಗೆ ನೀವು ಸುವಾರ್ತೆಯನ್ನು ನೀಡಿರಿ.
アラビア語 クルアーン注釈:
اِنَّ اللّٰهَ یُدٰفِعُ عَنِ الَّذِیْنَ اٰمَنُوْا ؕ— اِنَّ اللّٰهَ لَا یُحِبُّ كُلَّ خَوَّانٍ كَفُوْرٍ ۟۠
ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಶತ್ರುಗಳಿಂದ ರಕ್ಷಿಸುತ್ತಾನೆ ಮತ್ತು ವಿಶ್ವಾಸಘಾತುಕ ಅವಿಶ್ವಾಸಿಯನ್ನು ಅಲ್ಲಾಹನು ಎಂದಿಗೂ ಮೆಚ್ಚಲಾರನು.
アラビア語 クルアーン注釈:
 
対訳 章: 巡礼章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる