Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: イムラーン家章   節:
وَاِذْ اَخَذَ اللّٰهُ مِیْثَاقَ الَّذِیْنَ اُوْتُوا الْكِتٰبَ لَتُبَیِّنُنَّهٗ لِلنَّاسِ وَلَا تَكْتُمُوْنَهٗ ؗۗ— فَنَبَذُوْهُ وَرَآءَ ظُهُوْرِهِمْ وَاشْتَرَوْا بِهٖ ثَمَنًا قَلِیْلًا ؕ— فَبِئْسَ مَا یَشْتَرُوْنَ ۟
ಮತ್ತು ಗ್ರಂಥ ನೀಡಲಾದವರೊಂದಿಗೆ: ನೀವದನ್ನು ಎಲ್ಲ ಜನರಿಗೆ ವಿವರಿಸಿಕೊಡಬೇಕು, ಮತ್ತು ಅದನ್ನು ಬಚ್ಚಿಡಬಾರದೆಂದು ಅಲ್ಲಾಹನು ಕರಾರು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಅದಾಗ್ಯೂ ಅವರು ಆ ಕರಾರನ್ನು ತಮ್ಮ ಬೆನ್ನ ಹಿಂದೆ ಎಸೆದರು ಮತ್ತು ಅದನ್ನು ತುಚ್ಛ ಬೆಲೆಗೆ ಮಾರಿಬಿಟ್ಟರು. ಅವರ ಈ ಕ್ರಯವಿಕ್ರಯವು ಅದೆಷ್ಟು ನಿಕೃಷ್ಟವಾಗಿದೆ.
アラビア語 クルアーン注釈:
لَا تَحْسَبَنَّ الَّذِیْنَ یَفْرَحُوْنَ بِمَاۤ اَتَوْا وَّیُحِبُّوْنَ اَنْ یُّحْمَدُوْا بِمَا لَمْ یَفْعَلُوْا فَلَا تَحْسَبَنَّهُمْ بِمَفَازَةٍ مِّنَ الْعَذَابِ ۚ— وَلَهُمْ عَذَابٌ اَلِیْمٌ ۟
ಅವರು ತಮ್ಮ ಕೃತ್ಯಗಳ ಮೇಲೆ ಸಂತುಷ್ಟರಾಗಿದ್ದಾರೆ ಮತ್ತು ತಾವು ಮಾಡದಿರುವ ಸಂಗತಿಗಳ ಕುರಿತು ಪ್ರಶಂಸೆ ಗಿಟ್ಟಿಸಲು ಬಯಸುತ್ತಾರೆ. ಅವರು ಶಿಕ್ಷೆಯಿಂದ ಪಾರಾಗುವವರೆಂದು ನೀವು ಖಂಡಿತ ಭಾವಿಸಬೇಡಿರಿ. ಅವರಿಗೆ ವೇದನಾಜನಕ ಶಿಕ್ಷೆಯಿರುವುದು.
アラビア語 クルアーン注釈:
وَلِلّٰهِ مُلْكُ السَّمٰوٰتِ وَالْاَرْضِ ؕ— وَاللّٰهُ عَلٰی كُلِّ شَیْءٍ قَدِیْرٌ ۟۠
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಮಾತ್ರವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
アラビア語 クルアーン注釈:
اِنَّ فِیْ خَلْقِ السَّمٰوٰتِ وَالْاَرْضِ وَاخْتِلَافِ الَّیْلِ وَالنَّهَارِ لَاٰیٰتٍ لِّاُولِی الْاَلْبَابِ ۟ۚۖ
ಭೂಮಿ, ಆಕಾಶಗಳ ಸೃಷ್ಟಿಯಲ್ಲೂ, ರಾತ್ರಿ ಹಗಲುಗಳ ಬದಲಾವಣೆಯಲ್ಲೂ ಖಂಡಿತವಾಗಿಯು ಬುದ್ಧಿವಂತರಿಗೆ ಅನೇಕ ದೃಷ್ಟಾಂತಗಳಿವೆ.
アラビア語 クルアーン注釈:
الَّذِیْنَ یَذْكُرُوْنَ اللّٰهَ قِیٰمًا وَّقُعُوْدًا وَّعَلٰی جُنُوْبِهِمْ وَیَتَفَكَّرُوْنَ فِیْ خَلْقِ السَّمٰوٰتِ وَالْاَرْضِ ۚ— رَبَّنَا مَا خَلَقْتَ هٰذَا بَاطِلًا ۚ— سُبْحٰنَكَ فَقِنَا عَذَابَ النَّارِ ۟
ಅವರು ನಿಂತುಕೊAಡೂ, ಕುಳಿತುಕೊಂಡೂ ಮತ್ತು ತಮ್ಮ ಪಾರ್ಶ್ವದಲ್ಲಿ ಮಲಗಿಕೊಂಡೂ ಅಲ್ಲಾಹನನ್ನು ಸ್ಮರಿಸುತ್ತಾರೆ.ಮತ್ತು ಭೂಮಿ ಆಕಾಶಗಳ ಸೃಷ್ಟಿಯ ಕುರಿತು ಚಿಂತನೆ ಮಾಡುತ್ತಾರೆ ಮತ್ತು ಹೇಳುತ್ತಾರೆ: ಓ ನಮ್ಮ ಪ್ರಭೂ, ಇದನ್ನು ನೀನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಮಪಾವನನು ಆದ್ದರಿಂದ ನೀನು ನಮ್ಮನ್ನು ನರಕ ಶಿಕ್ಷೆಯಿಂದ ಕಾಪಾಡು.(ಎಂದು ಪ್ರಾರ್ಥಿಸುತ್ತಾರೆ)
アラビア語 クルアーン注釈:
رَبَّنَاۤ اِنَّكَ مَنْ تُدْخِلِ النَّارَ فَقَدْ اَخْزَیْتَهٗ ؕ— وَمَا لِلظّٰلِمِیْنَ مِنْ اَنْصَارٍ ۟
ಓ ನಮ್ಮ ಪ್ರಭೂ, ನೀನು ಯಾರನ್ನಾದರೂ ನರಕಕ್ಕೆ ಪ್ರವೇಶಿಸಿದರೆ ನಿಶ್ಚಯವಾಗಿಯು ಅವನನ್ನು ನೀನು ನಿಂದ್ಯನಾಗಿ ಮಾಡಿರುವೆ ಮತ್ತು ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು.
アラビア語 クルアーン注釈:
رَبَّنَاۤ اِنَّنَا سَمِعْنَا مُنَادِیًا یُّنَادِیْ لِلْاِیْمَانِ اَنْ اٰمِنُوْا بِرَبِّكُمْ فَاٰمَنَّا ۖۗ— رَبَّنَا فَاغْفِرْ لَنَا ذُنُوْبَنَا وَكَفِّرْ عَنَّا سَیِّاٰتِنَا وَتَوَفَّنَا مَعَ الْاَبْرَارِ ۟ۚ
ನಮ್ಮ ಪ್ರಭೂ, ಓರ್ವ ಕರೆ ನೀಡುವಾತನು: 'ನೀವು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಡಿರಿ' ಎಂದು ಹೇಳುತ್ತಾ ಸತ್ಯವಿಶ್ವಾಸದೆಡೆಗೆ ಕರೆಯುವುದನ್ನು ನಾವು ಆಲಿಸಿದೆವು. ಆಗ ನಾವು ವಿಶ್ವಾಸವಿಟ್ಟೆವು. ಆದುದರಿಂದ ನಮ್ಮ ಪ್ರಭು, ನಮ್ಮ ಪಾಪಗಳನ್ನು ಕ್ಷಮಿಸಿಬಿಡು ಮತ್ತು ನಮ್ಮ ಕೆಡುಕುಗಳನ್ನು ನಮ್ಮಿಂದ ದೂರ ಮಾಡು ಮತ್ತು ಸಜ್ಜನರ ಜೊತೆ ನಮಗೆ ಮರಣವನ್ನು ಕೊಡು.
アラビア語 クルアーン注釈:
رَبَّنَا وَاٰتِنَا مَا وَعَدْتَّنَا عَلٰی رُسُلِكَ وَلَا تُخْزِنَا یَوْمَ الْقِیٰمَةِ ؕ— اِنَّكَ لَا تُخْلِفُ الْمِیْعَادَ ۟
ನಮ್ಮ ಪ್ರಭು, ನೀನು ನಿನ್ನ ಸಂದೇಶವಾಹಕರ ಮೂಲಕ ನಮ್ಮೊಂದಿಗೆ ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು ಮತ್ತು ನಮ್ಮನ್ನು ಪುನರುತ್ಥಾನ ದಿನದಂದು ಅಪಮಾನಿಸದಿರು. ಖಂಡಿತವಾಗಿಯು ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
アラビア語 クルアーン注釈:
 
対訳 章: イムラーン家章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる