Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 婦人章   節:
وَالَّذِیْنَ یُنْفِقُوْنَ اَمْوَالَهُمْ رِئَآءَ النَّاسِ وَلَا یُؤْمِنُوْنَ بِاللّٰهِ وَلَا بِالْیَوْمِ الْاٰخِرِ ؕ— وَمَنْ یَّكُنِ الشَّیْطٰنُ لَهٗ قَرِیْنًا فَسَآءَ قَرِیْنًا ۟
ಅವರು ಜನರಿಗೆ ತೋರಿಸುವುದಕ್ಕಾಗಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರಾಗಿದ್ದಾರೆ ಮತ್ತು ಅಲ್ಲಾಹನಲ್ಲಿ, ಅಂತ್ಯ ದಿನದಲ್ಲಿ ವಿಶ್ವಾಸವಿಡದವರಾಗಿದ್ದಾರೆ. ಮತ್ತು ಯಾರ ಜೊತೆಗಾರನು ಶೈತಾನನಾಗಿರುವನೋ ಅವನು ಅದೆಷ್ಟೋ ನಿಕೃಷ್ಟ ಜೊತೆಗಾರನಾಗಿರುವನು!
アラビア語 クルアーン注釈:
وَمَاذَا عَلَیْهِمْ لَوْ اٰمَنُوْا بِاللّٰهِ وَالْیَوْمِ الْاٰخِرِ وَاَنْفَقُوْا مِمَّا رَزَقَهُمُ اللّٰهُ ؕ— وَكَانَ اللّٰهُ بِهِمْ عَلِیْمًا ۟
ಅವರು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರಾಗಿರುತ್ತಿದ್ದರೆ ಮತ್ತು ಅಲ್ಲಾಹನು ಅವರಿಗೆ ನೀಡಿದವುಗಳಿಂದ ಖರ್ಚು ಮಾಡುವವರಾಗಿದ್ದರೆ ಅವರಿಗೆ ಆಗುವ ನಷ್ಟವಾದರೂ ಏನು? ಅವರ ಬಗ್ಗೆ ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ.
アラビア語 クルアーン注釈:
اِنَّ اللّٰهَ لَا یَظْلِمُ مِثْقَالَ ذَرَّةٍ ۚ— وَاِنْ تَكُ حَسَنَةً یُّضٰعِفْهَا وَیُؤْتِ مِنْ لَّدُنْهُ اَجْرًا عَظِیْمًا ۟
ನಿಸ್ಸಂದೇಹವಾಗಿಯು ಅಲ್ಲಾಹನು ಒಂದು ಅಣು ಗಾತ್ರದಷ್ಟು ಅನ್ಯಾಯವನ್ನು ಮಾಡುವುದಿಲ್ಲ ಮತ್ತು ಒಳಿತೇನಾದರೂ ಇದ್ದರೆ ಅದನ್ನು ಅವನು ದುಪ್ಪಟ್ಟಾಗಿಸಿಕೊಡುವನು ಮತ್ತು ಅವನು ತನ್ನ ವತಿಯ ಮಹಾಪ್ರತಿಫಲವನ್ನು ನೀಡುವನು.
アラビア語 クルアーン注釈:
فَكَیْفَ اِذَا جِئْنَا مِنْ كُلِّ اُمَّةٍ بِشَهِیْدٍ وَّجِئْنَا بِكَ عَلٰی هٰۤؤُلَآءِ شَهِیْدًا ۟ؕؔ
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ತರುವಾಗ ಮತ್ತು ಓ ಪೈಗಂಬರರೇ ನಿಮ್ಮನ್ನು ಅವರ ಮೇಲೆ ಸಾಕ್ಷಿಯಾಗಿ ತರುವಾಗ ಅವರ ಪರಿಸ್ಥಿತಿ ಹೇಗಿರಬಹುದು?
アラビア語 クルアーン注釈:
یَوْمَىِٕذٍ یَّوَدُّ الَّذِیْنَ كَفَرُوْا وَعَصَوُا الرَّسُوْلَ لَوْ تُسَوّٰی بِهِمُ الْاَرْضُ ؕ— وَلَا یَكْتُمُوْنَ اللّٰهَ حَدِیْثًا ۟۠
ಅಂದು ಸತ್ಯನಿಷೇಧಿಗಳು ಮತ್ತು ಸಂದೇಶವಾಹಕರಿಗೆ ಧಿಕ್ಕಾರ ತೋರಿದವರು ತಮ್ಮನ್ನು ಭೂಮಿಯಲ್ಲಿ ಹೂತು ನೆಲಸಮಗೊಳಿಸಲಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಆಶಿಸುವರು ಮತ್ತು ಅಲ್ಲಾಹನಿಂದ ಯಾವೂಂದು ವಿಚಾರವನ್ನು ಬಚ್ಚಿಡಲು ಅವರಿಗೆ ಸಾಧ್ಯವಾಗದು.
アラビア語 クルアーン注釈:
یٰۤاَیُّهَا الَّذِیْنَ اٰمَنُوْا لَا تَقْرَبُوا الصَّلٰوةَ وَاَنْتُمْ سُكٰرٰی حَتّٰی تَعْلَمُوْا مَا تَقُوْلُوْنَ وَلَا جُنُبًا اِلَّا عَابِرِیْ سَبِیْلٍ حَتّٰی تَغْتَسِلُوْا ؕ— وَاِنْ كُنْتُمْ مَّرْضٰۤی اَوْ عَلٰی سَفَرٍ اَوْ جَآءَ اَحَدٌ مِّنْكُمْ مِّنَ الْغَآىِٕطِ اَوْ لٰمَسْتُمُ النِّسَآءَ فَلَمْ تَجِدُوْا مَآءً فَتَیَمَّمُوْا صَعِیْدًا طَیِّبًا فَامْسَحُوْا بِوُجُوْهِكُمْ وَاَیْدِیْكُمْ ؕ— اِنَّ اللّٰهَ كَانَ عَفُوًّا غَفُوْرًا ۟
ಓ ಸತ್ಯವಿಶ್ವಾಸಿಗಳೇ, ನೀವು ಅಮಲಿನಲ್ಲಿದ್ದರೆ ನೀವು ನಿಮ್ಮ ಮಾತನ್ನು ಗ್ರಹಿಸಿಕೊಳ್ಳುವ ತನಕ ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ ಮತ್ತು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿಕೊಳ್ಳುವ ತನಕ (ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ)ಆದರೆ ನೀವು ಮಸೀದಿಯಿಂದ ಹಾದು ಹೋಗುವವರಾಗಿದ್ದರೆ ಬೇರೆ ವಿಚಾರ. ಇನ್ನು ನೀವು ರೋಗಿಗಳಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೋರ್ವನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಪರ್ಕ ಮಾಡಿದರೆ ಮತ್ತು ನಿಮಗೆ ನೀರು ಲಭಿಸದಿದ್ದಲ್ಲಿ ನೀವು ಶುದ್ಧವಾಗಿರುವ ಮಣ್ಣಿನಿಂದ ತಯಮ್ಮುಮ್ ಮಾಡಿರಿ ಮತ್ತು ನಿಮ್ಮ ಮುಖಗಳನ್ನು ಕೈಗಳನ್ನು ಸವರಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಮನ್ನಿಸುವವನು, ಕ್ಷಮೆ ನೀಡುವವನು ಆಗಿದ್ದಾನೆ.
アラビア語 クルアーン注釈:
اَلَمْ تَرَ اِلَی الَّذِیْنَ اُوْتُوْا نَصِیْبًا مِّنَ الْكِتٰبِ یَشْتَرُوْنَ الضَّلٰلَةَ وَیُرِیْدُوْنَ اَنْ تَضِلُّوا السَّبِیْلَ ۟ؕ
ಗ್ರಂಥದ ಅಲ್ಪಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ದುರ್ಮಾರ್ಗವನ್ನು ಖರೀದಿಸುವವರು ಮತ್ತು ನೀವು ಸಹ ಮಾರ್ಗ ಭ್ರಷ್ಟರಾಗಬೇಕೆಂದು ಬಯಸುವವರಾಗಿದ್ದರೆ.
アラビア語 クルアーン注釈:
 
対訳 章: 婦人章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる