Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 家畜章   節:
اِنَّ اللّٰهَ فَالِقُ الْحَبِّ وَالنَّوٰی ؕ— یُخْرِجُ الْحَیَّ مِنَ الْمَیِّتِ وَمُخْرِجُ الْمَیِّتِ مِنَ الْحَیِّ ؕ— ذٰلِكُمُ اللّٰهُ فَاَنّٰی تُؤْفَكُوْنَ ۟
ನಿಸ್ಸಂಶಯವಾಗಿಯು ಅಲ್ಲಾಹನೇ ಧಾನ್ಯ ಮತ್ತು ಬೀಜವನ್ನು ಮೊಳಕೆಯೊ ಡೆಸುವವನಾಗಿದ್ದಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ನಿರ್ಜೀವಿಯನ್ನು ಜೀವಿಯಿಂದ ಹೊರತರುವವನಾಗಿದ್ದಾನೆ. ಅವನೇ ಅಲ್ಲಾಹನಾಗಿದ್ದಾನೆ. ಹಾಗಿದ್ದೂ ನೀವು ಎಲ್ಲಿ ಅಲೆದಾಡುತ್ತಿರುವಿರಿ?
アラビア語 クルアーン注釈:
فَالِقُ الْاِصْبَاحِ ۚ— وَجَعَلَ الَّیْلَ سَكَنًا وَّالشَّمْسَ وَالْقَمَرَ حُسْبَانًا ؕ— ذٰلِكَ تَقْدِیْرُ الْعَزِیْزِ الْعَلِیْمِ ۟
ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು ಕಾಲಗಣನೆಗಾಗಿ ನಿಶ್ಚಯಿಸಿರುವನು. ಇದು ಪ್ರತಾಪಶಾಲಿಯು, ಮಹಾಜ್ಞಾನಿಯು ಆದವನ ವ್ಯವಸ್ಥೆಯಾಗಿದೆ.
アラビア語 クルアーン注釈:
وَهُوَ الَّذِیْ جَعَلَ لَكُمُ النُّجُوْمَ لِتَهْتَدُوْا بِهَا فِیْ ظُلُمٰتِ الْبَرِّ وَالْبَحْرِ ؕ— قَدْ فَصَّلْنَا الْاٰیٰتِ لِقَوْمٍ یَّعْلَمُوْنَ ۟
ಅವನೇ ನಿಮಗೆ ನಕ್ಷತ್ರಗಳನ್ನು ನೀವು ಅವುಗಳ ಮೂಲಕ ನೆಲ, ಜಲದ ಅಂಧಕಾರಗಳಲ್ಲಿ, ದಾರಿಯನ್ನು ಕಂಡುಕೊಳ್ಳಲೆAದು ಉಂಟು ಮಾಡಿದನು. ನಿಸ್ಸಂಶಯವಾಗಿಯು ಅರಿವುಳ್ಳಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
アラビア語 クルアーン注釈:
وَهُوَ الَّذِیْۤ اَنْشَاَكُمْ مِّنْ نَّفْسٍ وَّاحِدَةٍ فَمُسْتَقَرٌّ وَّمُسْتَوْدَعٌ ؕ— قَدْ فَصَّلْنَا الْاٰیٰتِ لِقَوْمٍ یَّفْقَهُوْنَ ۟
ಮತ್ತು ಅವನು ನಿಮ್ಮನ್ನು ಒಂದೇ ಜೀವÀದಿಂದ ಸೃಷ್ಟಿಸಿದವನಾಗಿದ್ದಾನೆ. ನಂತರ ಒಂದು ವಾಸಸ್ಥಳವು, ಇನ್ನೊಂದು ಒಪ್ಪಿಸಲ್ಪಡದ ಸ್ಥಳವಿದೆ. ನಿಸ್ಸಂಶಯವಾಗಿಯು ಗ್ರಹಿಸುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.
アラビア語 クルアーン注釈:
وَهُوَ الَّذِیْۤ اَنْزَلَ مِنَ السَّمَآءِ مَآءً ۚ— فَاَخْرَجْنَا بِهٖ نَبَاتَ كُلِّ شَیْءٍ فَاَخْرَجْنَا مِنْهُ خَضِرًا نُّخْرِجُ مِنْهُ حَبًّا مُّتَرَاكِبًا ۚ— وَمِنَ النَّخْلِ مِنْ طَلْعِهَا قِنْوَانٌ دَانِیَةٌ ۙ— وَّجَنّٰتٍ مِّنْ اَعْنَابٍ وَّالزَّیْتُوْنَ وَالرُّمَّانَ مُشْتَبِهًا وَّغَیْرَ مُتَشَابِهٍ ؕ— اُنْظُرُوْۤا اِلٰی ثَمَرِهٖۤ اِذَاۤ اَثْمَرَ وَیَنْعِهٖ ؕ— اِنَّ فِیْ ذٰلِكُمْ لَاٰیٰتٍ لِّقَوْمٍ یُّؤْمِنُوْنَ ۟
ಅವನೇ (ಅಲ್ಲಾಹನೇ) ಆಕಾಶದಿಂದ ನೀರನ್ನು ಸುರಿಸಿದವನು. ನಂತರ ನಾವು ಆ ನೀರಿನಿಂದ ಸಕಲ ವಿಧದ ವನಸ್ಪತಿ ಮೊಳಕೆಗಳನ್ನು ಹೊರತರುತ್ತೇವೆ. ಆ ಬಳಿಕ ಅದರಿಂದ ಹಸಿರಾದ ಸಸ್ಯಗಳನ್ನು ಹೊರತರುತ್ತೇವೆ. ಮತ್ತು ಅದರಿಂದ ಹುಲುಸಾಗಿ ತುಂಬಿ ತುಳುಕುವ ಧಾನ್ಯಗಳನ್ನು ಹೊರತರುತ್ತೇವೆ, ಮತ್ತು ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗಿ ನಿಲ್ಲುವ ಗೊನೆಗಳು ಹೊರಬರುತ್ತವೆ. ದ್ರಾಕ್ಷೆ ತೋಟಗಳನ್ನು ಝೈತೂನ್ (ಆಲಿವ್) ಅನ್ನು, ದಾಳಿಂಬೆಗಳನ್ನು ಸಾದೃಶ್ಯವಿರುವ ಮತ್ತು ಪರಸ್ಪರ ಸಾದೃಶ್ಯವಿರದಂತವುಗಳನ್ನು ಉಂಟು ಮಾಡುತ್ತೇವೆ. ಅವು ಫಲಭರಿತವಾಗುವಾಗ ಮತ್ತು ಪಕ್ವವಾಗುವಾಗ ಅವುಗಳ ಕಡೆಗೆ ನೋಡಿರಿ. ಅವುಗಳಲ್ಲಿ ಸತ್ಯವಿಶ್ವಾಸಗಳಿಗೆ ದೃಷ್ಟಾಂತಗಳಿವೆ.
アラビア語 クルアーン注釈:
وَجَعَلُوْا لِلّٰهِ شُرَكَآءَ الْجِنَّ وَخَلَقَهُمْ وَخَرَقُوْا لَهٗ بَنِیْنَ وَبَنٰتٍ بِغَیْرِ عِلْمٍ ؕ— سُبْحٰنَهٗ وَتَعٰلٰی عَمَّا یَصِفُوْنَ ۟۠
ಮತ್ತು ಜನರು ಯಕ್ಷಗಳನ್ನು ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿ ಕೊಂಡಿದ್ದಾರೆ. ವಸ್ತುತಃ ಅವರನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ ಮತ್ತು ಅವರು ಅಲ್ಲಾಹನಿಗೆ ಯಾವುದೇ ಆಧಾರವಿಲ್ಲದೆ ಪುತ್ರರು ಮತ್ತು ಪುತ್ರಿಯರಿದ್ದಾರೆಂದು ಆರೋಪಿಸಿದ್ದಾರೆ ಹಾಗೂ ಅವನು ಅವರು ಹೇಳುತ್ತಿರುವ ಮಾತುಗಳಿಂದ ಅದೆಷ್ಟೋ ಪಾವನನೂ ಉನ್ನತನೂ ಆಗಿದ್ದಾನೆ.
アラビア語 クルアーン注釈:
بَدِیْعُ السَّمٰوٰتِ وَالْاَرْضِ ؕ— اَنّٰی یَكُوْنُ لَهٗ وَلَدٌ وَّلَمْ تَكُنْ لَّهٗ صَاحِبَةٌ ؕ— وَخَلَقَ كُلَّ شَیْءٍ ۚ— وَهُوَ بِكُلِّ شَیْءٍ عَلِیْمٌ ۟
ಅವನು (ಪೂರ್ವ ಮಾದರಿಯಿಲ್ಲದೆ) ಆಕಾಶಗಳ ಮತ್ತು ಭೂಮಿಯ ಕರ್ತನಾಗಿದ್ದಾನೆ. ಅವನಿಗೆ ಸಂಗಾತಿಯೇ ಇಲ್ಲದಿರುವಾಗ ಅವನಿಗೆ ಸಂತಾನವುAಟಾಗುವುದಾದರು ಹೇಗೆ? ಅವನು ಸಕಲ ವಸ್ತುಗಳನ್ನು ಸೃಷ್ಟಿಸಿದ್ದಾನೆ. ಅವನು ಎಲ್ಲಾ ವಿಷಯಗಳ ಕುರಿತು ಅರಿವುಳ್ಳವನಾಗಿದ್ದಾನೆ.
アラビア語 クルアーン注釈:
 
対訳 章: 家畜章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる