Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 高壁章   節:
قَالَ الْمَلَاُ الَّذِیْنَ اسْتَكْبَرُوْا مِنْ قَوْمِهٖ لَنُخْرِجَنَّكَ یٰشُعَیْبُ وَالَّذِیْنَ اٰمَنُوْا مَعَكَ مِنْ قَرْیَتِنَاۤ اَوْ لَتَعُوْدُنَّ فِیْ مِلَّتِنَا ؕ— قَالَ اَوَلَوْ كُنَّا كٰرِهِیْنَ ۟ۚ
ಅವರ ಜನಾಂಗದ ಅಹಂಕಾರಿಗಳಾದ ಪ್ರಮುಖರು ಹೇಳಿದರು: 'ಓ ಶುಐಬ್, ನಾವು ನಿಮ್ಮನ್ನು ಮತ್ತು ನಿಮ್ಮ ಜೊತೆಯಲ್ಲಿರುವ ವಿಶ್ವಾಸಿಗಳನ್ನು ನಮ್ಮ ಊರಿನಿಂದ ಖಂಡಿತ ಹೊರಗಟ್ಟುವೆವು. ಇಲ್ಲವೇ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು. ಶುಐಬ್ ಉತ್ತರಿಸಿದರು: 'ನಾವು ನಿಮ್ಮ ಧರ್ಮವನ್ನು ಇಷ್ಟಪಡದಿದ್ದರೂ ಮರಳಬೇಕೆ?'.
アラビア語 クルアーン注釈:
قَدِ افْتَرَیْنَا عَلَی اللّٰهِ كَذِبًا اِنْ عُدْنَا فِیْ مِلَّتِكُمْ بَعْدَ اِذْ نَجّٰىنَا اللّٰهُ مِنْهَا ؕ— وَمَا یَكُوْنُ لَنَاۤ اَنْ نَّعُوْدَ فِیْهَاۤ اِلَّاۤ اَنْ یَّشَآءَ اللّٰهُ رَبُّنَا ؕ— وَسِعَ رَبُّنَا كُلَّ شَیْءٍ عِلْمًا ؕ— عَلَی اللّٰهِ تَوَكَّلْنَا ؕ— رَبَّنَا افْتَحْ بَیْنَنَا وَبَیْنَ قَوْمِنَا بِالْحَقِّ وَاَنْتَ خَیْرُ الْفٰتِحِیْنَ ۟
ನಿಮ್ಮ ಧÀರ್ಮದಿಂದ ಅಲ್ಲಾಹನು ನಮ್ಮನ್ನು ರಕ್ಷಿಸಿದ ನಂತರ ಅದರೆಡೆಗೆ ನಾವು ಮರಳುವುದಾದರೆ ನಾವು ಅಲ್ಲಾಹನ ಮೇಲೆ ಸುಳ್ಳಾರೋಪವನ್ನು ಹೊರಿಸಿದವರಾಗುವೆವು. ನಿಮ್ಮ ಧರ್ಮದೆಡೆಗೆ ಪುನಃ ಮರಳುವುದು ನಮ್ಮಿಂದ ಸಾಧ್ಯವಿಲ್ಲ ಆದರೆ ನಮ್ಮ ಪ್ರಭುವಾದ ಅಲ್ಲಾಹನು ಬಯಸಿದರೆ ಹೊರತು ನಮ್ಮ ಪ್ರಭು ತನ್ನ ಜ್ಞಾನದಿಂದ ಸರ್ವ ವಸ್ತುಗಳನ್ನೂ ಆವರಿಸಿರುವನು. ನಾವು ಅಲ್ಲಾಹನ ಮೇಲೆಯೇ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ನೀನು ನ್ಯಾಯಕ್ಕನುಸಾರ ತೀರ್ಪನ್ನು ನೀಡು ಮತ್ತು ನೀನು ಎಲ್ಲರಿಗಿಂತಲೂ ಉತ್ತಮ ತೀರ್ಪುಗಾರನಾಗಿರುವೆ.
アラビア語 クルアーン注釈:
وَقَالَ الْمَلَاُ الَّذِیْنَ كَفَرُوْا مِنْ قَوْمِهٖ لَىِٕنِ اتَّبَعْتُمْ شُعَیْبًا اِنَّكُمْ اِذًا لَّخٰسِرُوْنَ ۟
ಅವರ ಜನಾಂಗದ ಸತ್ಯನಿಷೇಧಿಗಳಾದ ಪ್ರಮುಖರು ಹೇಳಿದರು: 'ನೀವು ಶುಐಬ್‌ರವರನ್ನು ಅನುಸರಿಸುವುದಾದರೆ ನಿಸ್ಸಂಶಯವಾಗಿಯು ನಷ್ಟಕ್ಕೊಳಗಾಗುವಿರಿ.
アラビア語 クルアーン注釈:
فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟
ತರುವಾಯ ಅವರನ್ನು ಭೂಕಂಪವು ಹಿಡಿದು ಬಿಟ್ಟಿತು. ಆಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
アラビア語 クルアーン注釈:
الَّذِیْنَ كَذَّبُوْا شُعَیْبًا كَاَنْ لَّمْ یَغْنَوْا فِیْهَا ۛۚ— اَلَّذِیْنَ كَذَّبُوْا شُعَیْبًا كَانُوْا هُمُ الْخٰسِرِیْنَ ۟
ಶುಐಬ್‌ರವರನ್ನು ಧಿಕ್ಕರಿಸುತ್ತಿದ್ದವರ ಸ್ಥಿತಿಯು ಅವರು ಅಲ್ಲಿ ವಾಸಿಸಿರಲಿಲ್ಲವೆಂಬAತೆ ಆಯಿತು ಶುಐಬ್‌ರವರನ್ನು, ಧಿಕ್ಕರಿಸುತ್ತಿದ್ದವರು ನಷ್ಟಕ್ಕೊಳಗಾಗಿಬಿಟ್ಟರು.
アラビア語 クルアーン注釈:
فَتَوَلّٰی عَنْهُمْ وَقَالَ یٰقَوْمِ لَقَدْ اَبْلَغْتُكُمْ رِسٰلٰتِ رَبِّیْ وَنَصَحْتُ لَكُمْ ۚ— فَكَیْفَ اٰسٰی عَلٰی قَوْمٍ كٰفِرِیْنَ ۟۠
ತರುವಾಯ ಶುಐಬ್ ಅವರಿಂದ ದೂರ ಸರಿದರು ಮತ್ತು ಹೇಳಿದರು: 'ಓ ನನ್ನ ಜನತೆಯೇ, ನಾನು ನನ್ನ ಪ್ರಭುವಿನ ಸಂದೇಶಗಳನ್ನು ನಿಮಗೆ ತಲುಪಿಸಿಕೊಟ್ಟಿದ್ದೆನು ಮತ್ತು ನಿಮ್ಮ ಹಿತಚಿಂತನೆಯನ್ನು ನಡೆಸಿದೆನು. ಹೀಗಿರುವಾಗ ಸತ್ಯನಿಷೇಧಿಗಳಾದ ಜನತೆಯ ಬಗ್ಗೆ ನಾನೇಕೆ ದುಃಖಿಸಬೇಕು?’
アラビア語 クルアーン注釈:
وَمَاۤ اَرْسَلْنَا فِیْ قَرْیَةٍ مِّنْ نَّبِیٍّ اِلَّاۤ اَخَذْنَاۤ اَهْلَهَا بِالْبَاْسَآءِ وَالضَّرَّآءِ لَعَلَّهُمْ یَضَّرَّعُوْنَ ۟
ಯಾವುದೇ ನಾಡಿಗೂ ನಾವು ಪೈಗಂಬರರನ್ನು ಕಳುಹಿಸಿದಾಗಲೆಲ್ಲಾ ಅಲ್ಲಿನ ನಿವಾಸಿಗಳಿಗೆ ನಾವು ಬಡತನ ಮತ್ತು ಸಂಕಷ್ಟಕ್ಕೆ ಗುರಿಪಡಿಸದೆ ಬಿಡಲಿಲ್ಲ. ಅದು ಅವರು ವಿನಯವಂತರಾಗಲೆAದಾಗಿತ್ತು.
アラビア語 クルアーン注釈:
ثُمَّ بَدَّلْنَا مَكَانَ السَّیِّئَةِ الْحَسَنَةَ حَتّٰی عَفَوْا وَّقَالُوْا قَدْ مَسَّ اٰبَآءَنَا الضَّرَّآءُ وَالسَّرَّآءُ فَاَخَذْنٰهُمْ بَغْتَةً وَّهُمْ لَا یَشْعُرُوْنَ ۟
ಅನಂತರ ನಾವು ಕಷ್ಟದ ಬದಲಿಗೆ ಸುಖವನ್ನು ನೀಡಿದೆವು. ಆಗ ಅವರು ತುಂಬಾ ಅಭಿವೃದ್ಧಿಯನ್ನು ಹೊಂದಿದರು ಮತ್ತು ಹೇಳಿದರು. ನಮ್ಮ ಪೂರ್ವಿಕರಿಗೂ ಸಂಕಷ್ಟ ಮತ್ತು ಸಂತಸಗಳು ಬಂದಿದ್ದವು. ಆಗ ನಾವು ಅವರಿಗೆ ಅರಿವಾಗದಂತೆ ಅವರನ್ನು ಹಠಾತ್ತನೆ ಹಿಡಿದುಬಿಟ್ಟೆವು.
アラビア語 クルアーン注釈:
 
対訳 章: 高壁章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる